Bengaluru Namma Metro: ಪ್ರಯಾಣಿಕರಿಗೆ ಸಿಹಿ ಸುದ್ದಿ, ಎಲ್ಲ 55 ನಿಲ್ದಾಣಗಳಲ್ಲಿ ವಾಣಿಜ್ಯ ಚಟುವಟಿಕೆ
ಬೆಂಗಳೂರು, ಅಕ್ಟೋಬರ್ 31: ಬೆಂಗಳೂರು ನಮ್ಮ ಮೆಟ್ರೊ ರೈಲು ನಿಗಮವು (BMRCL) ಹೊಸ ಯೋನೆಯೊಂದಕ್ಕೆ ಕೈ ಹಾಕಿದೆ. ನಮ್ಮ ಮೆಟ್ರೋ ಪ್ರಯಾಣಿಕರಿಗೆ ಹೊಸ ಶಾಪಿಂಗ್ ಮತ್ತು ಊಟದ ಅನುಭವ ನೀಡುವ ಹಾಗೂ ಆದಾಯ ಹೆಚ್ಚಿಸಿಕೊಳ್ಳಲು ಪ್ಲಾನ್ ಮಾಡಿಕೊಂಡಿದೆ. ಈ ಸಂಬಂಧ ರೂಪಿಸಿರುವ ಯೋಜನೆಗೆ ಶೀಘ್ರವೇ ಗ್ರೀನ್ ಸಿಗ್ನಲ್ ನೀಡಲಿದೆ ಎಂದು ಮೂಲಗಳು ಮಾಹಿತಿ ನೀಡಿವೆ.
ಬೆಂಗಳೂರು ಮೆಟ್ರೋ ರೈಲು ಅಧಿಕಾರಿಗಳು ಆದಾಯ ಹೆಚ್ಚಳ ಹಾಗೂ ಪ್ರಯಾಣಿಕರ ದೃಷ್ಟಿಯೊಂದ ಹೊಸ ಯೋಜನೆಗೆ ಕೈ ಹಾಕಿದೆ. ಬೆಂಗಳೂರು ಮೆಟ್ರೋ ರೈಲು ಕಾರ್ಪೊರೇಷನ್ ಲಿಮಿಟೆಡ್ (BMRCL) 73 ಕಿಲೋ ಮೀಟರ್ ಹಸಿರು ಹಾಗೂ ನೇರಳೆ ಮಾರ್ಗದ ವ್ಯಾಪ್ತಿಯಲ್ಲಿ 55 ಮೆಟ್ರೋ ನಿಲ್ದಾಣಗಳು ಇವೆ.

ಈ ಎಲ್ಲ ಮೆಟ್ರೋ ರೈಲು ನಿಲ್ದಾನಗಳಲ್ಲಿ ಚಿಲ್ಲರೆ ಮಾರಾಟ ಮಳಿಗೆಗಳು, ಅಂಗಡಿಗಳು ಮತ್ತು ಕೆಫೆಗಳನ್ನು ತರುವ ಯೋಜನೆಯನ್ನು ಬಿಎಂಆರ್‌ಸಿಎಲ್ ರೂಪಿಸಿದೆ. ಅದರ ಅನುಷ್ಠಾನಕ್ಕೆ ಮುಂದಾಗಿದೆ ಎಂದು 'ದಿ ಹಿಂದೂ' ವರದಿ ಮಾಡಿದೆ.
ಮೆಟ್ರೋ ಆದಾಯ ಹೆಚ್ಚಳ ವಿಶ್ವಾಸ
ಪ್ರಯಾಣಿಕರ ಹಿತ ದೃಷ್ಟಿ ಜೊತೆಗೆ ನಿಗಮದ ಆದಾಯ ದ್ವಿಗುಣಗೊಳಿಸುವ ಪ್ಲಾನ್ ಮಾಡಲಾಗಿದೆ. ಪ್ರಯಾಣಿಕರಿಗೆ ಬೇಕಾಗುವ ಎಲ್ಲ ಬಗೆಯ ಅಂಗಡಿ ಮುಂಗಾಟ್ಟುಗಳು ಮುಂದಿನ ದಿನಗಳಲ್ಲಿ ನಮ್ಮ ಮೆಟ್ರೋ ರೈಲು ನಿಲ್ದಾಣಗಳಲ್ಲಿ ತಲೆ ಎತ್ತಲಿವೆ. ನಿಲ್ದಾಣಗಳಲ್ಲಿ ಆಹಾರ ಮಳಿಗೆಗಳು, ನಿತ್ಯ ಬಳಕೆ ವಸ್ತುಗಳು, ಶಾಪಿಂಗ್, ಮನೆ ಬಳಕೆಯ ಚಿಕ್ಕುಪುಟ್ಟ ವಸ್ತುಗಳು, ಗಿಫ್ಟ್ ಶಾಫ್ಸ್, ಫೋಟೋ ಸ್ಟುಡಿಯೋ, ಕೆಫೆ ಹೀಗೆ ಎಲ್ಲ ವಿಧದ ಅಂಗಡಿಗಳು ತೆರೆಯಲು ಜಾಗಗಳನ್ನು ಗುರುತಿಸಿದೆ. ಆ ಜಾಗ, ಮಳಿಗೆಗಳನ್ನು ಬಿಎಂಆರ್‌ಸಿಎಲ್ ಗುತ್ತಿಗೆ ನೀಡಲಿದೆ.

ಬೆಂಗಳೂರಿನ ಧಾವಂತದ ಬದುಕಿನಲ್ಲಿ ಪ್ರಯಾಣಿಕರು ತಮಗೆ ಬೇಕಾದ ವಸ್ತುಗಳು, ತಿನಿಸುಗಳನ್ನು ಕೆಲವೇ ನಿಮಿಷಗಳಲ್ಲಿ ನಿಲ್ದಾಣಗಳಲ್ಲಿ ಕೊಳ್ಳಬಹುದು. ತ್ವರಿತವಾಗಿ ತಾವಿದ್ದಲ್ಲಿಯೇ ವಸ್ತುಗಳನ್ನು ಕೊಂಡುಕೊಳ್ಳಲು ಸಹಾಕಾರಿಯಾಗುವಂತೆ ಬಿಎಂಆರ್‌ಸಿಎಲ್ ಪ್ಲಾನ್ ಮಾಡಿಕೊಂಡಿದೆ.
ಕಟ್ಟುನಿಟ್ಟಿನ ಮಾರ್ಗಸೂಚಿಗಳ ಪಾಲನೆ
ವಾಣಿಜ್ಯ ಚಟುವಟಿಕೆಗಾಗಿ ನಿಲ್ದಾಣಗಳಲ್ಲಿ ಸೂಕ್ತ ಮಾರ್ಗಸೂಚಿಗಳು, ನಿಯಮಗಳನ್ನು ಜಾರಿಗೆ ತೆರಲಾಗುತ್ತದೆ. ಅಂದರೆ, ಮೆಟ್ರೋ ರೈಲಿನಲ್ಲಿ ಸದ್ಯ ಊಟ, ತಿಂಡಿ ತಿನಿಸು ತಿನ್ನುವಂತಿಲ್ಲ ಎಂಬ ನಿಯಮ ಇದೆ. ಸ್ವಚ್ಛತೆಗೆ ಆದ್ಯತೆ ನೀಡಲಾಗುತ್ತದೆ. ಹೀಗಾಗಿ ಸೂಕ್ತ, ಕಟ್ಟುನಿಟ್ಟಾದ ಮಾರ್ಗಸೂಚಿಗಳನ್ನು ಅನುಸರಿಸಿ ಪ್ರಯಾಣಿಕರ ಅಗತ್ಯಗಳನ್ನು ಪೂರೈಸಬಹುದಾಗಿದೆ ಎಂದು BMRCL ಅಧಿಕಾರಿ ಮಾಹಿತಿ ನೀಡಿದ್ದಾರೆ.
ಒಟ್ಟಾರೆ ಎಲ್ಲ ವಿಧದ ಪ್ರಯಾಣಿಕರನ್ನು ಮೆಟ್ರೋದತ್ತ ಸೆಳೆಯಲು, ಮೆಟ್ರೋ ಅನುಭವ ಜೊತೆಗೆ ಅಗತ್ಯ ಸೇವೆ ನೀಡಲು BMRCL ಸಜ್ಜಾಗಿದೆ. ನಾವು ಅನುಮತಿಸುತ್ತಿದ್ದೇವೆ. ಆದರೆ ಮೆಟ್ರೋವನ್ನು ಸುರಕ್ಷಿತವಾಗಿ ಮತ್ತು ಕುಟುಂಬ ಸ್ನೇಹಿಯಾಗಿಡಲು ಆಲ್ಕೋಹಾಲ್, ತಂಬಾಕು, ಜೂಜಿನ ಉತ್ಪನ್ನಗಳು ಮತ್ತು ಎಲ್‌ಪಿಜಿ ಅಥವಾ ಸೀಮೆಎಣ್ಣೆ ಬಳಕೆಯನ್ನು ನಿಷೇಧಿಸಲಾಗಿದೆ ಎಂದು ಅಧಿಕಾರಿ ವಿವರಿಸಿದರು.
55 ನಿಲ್ದಾಣಗಳಲ್ಲಿ 220 ಖಾಲಿ ಜಾಗ
ಎಲ್ಲ ಮೆಟ್ರೋ ನಿಲ್ದಾಣಗಳಲ್ಲಿ 220 ಖಾಲಿ ಜಾಗಗಳನ್ನು ಮಳಿಗೆ ತೆರೆಯಲು ಈಗಾಗಲೇ ಗುರುತಿಸಲಾಗಿದೆ. ವಿವಿಧ ರೀತಿಯ ಅಂಗಡಿಗಳಿಗೆ ಸರಿಹೊಂದುವ ಅಳತೆ, ಗಾತ್ರಗಳ ಆಧಾರದಲ್ಲಿ ಬಾಡಿಗೆ ನೀಡಲಿದೆ. ಆಸಕ್ತ ವ್ಯಾಪಾರಿಗಳು ಜಾಗದ ಲೇಔಟ್‌ಗಳು, ಮಾಸಿಕ ಬಾಡಿಗೆ ಲೆಕ್ಕಾಚಾರ, ನಿಯಮಗಳೇನು ಎಂಬುದನ್ನು ಪರಿಶೀಲಿಸಿಕೊಳ್ಳಬೇಕು.
ಈಗಾಗಲೇ ಎಂಜಿ ರಸ್ತೆ, ಇಂದಿರಾನಗರ ಸೇರಿದಂತೆ ವಿವಿಧ ಕೆಲವು ಮೆಟ್ರೋ ನಿಲ್ದಾಣಗಳಲ್ಲಿ ಇಂತಹ ಮಳಿಗೆ ಸ್ಥಾಪಿಸಿ ಅಲ್ಲಿ ವಾಣಿಜ್ಯ ಚಟುವಟಿಕೆ ನಡೆದಿವವೆ. ಸುಸೂತ್ರ ವ್ಯವಹಾರಗಳು ನಡೆದಿದ್ದು, ಕೊರೊನಾ ಸಮಯದಲ್ಲಿ ಕೊಂಚ ಸಮಸ್ಯೆ ಆಗಿದ್ದು, ಬಿಟ್ಟರೆ, ಆದಾಯ ಗಳಿಕೆಗೆ, ಪ್ರಯಾಣಿಕರಿಗೆ ಅಗತ್ಯ ವಸ್ತು ಪೂರೈಕೆಗೆ ಇದೊಂದು ಉತ್ತಮ ಮಾರ್ಗ ಎಂದು ನಮ್ಮ ಮೆಟ್ರೋ ನಂಬಿದೆ. ಹೀಗಾಗಿ ಎಲ್ಲ ಮೆಟ್ರೋ ನಿಲ್ದಾಣಗಳಿಗೆ ಈ ವಾಣಿಜ್ಯ ವ್ಯವಹಾರ ವಿಸ್ತರಣೆಗೆ ಮುಂದಾಗಿದೆ ಎಂದು ತಿಳಿದು ಬಂದಿದೆ.












Click it and Unblock the Notifications