Namma Metro: ಬೆಲೆ ಹೆಚ್ಚಳ ನಂತರವು BMRCL ದಾಖಲೆ: ಒಂದೇ ದಿನ 9ಕ್ಕೂ ಹೆಚ್ಚು ಮಂದಿ ಸಂಚಾರ..

ಬೆಂಗಳೂರು, ಏಪ್ರಿಲ್ 19: ಬೆಂಗಳೂರಿನಾದ್ಯಂತ ಜಾಲ ವಿಸ್ತರಣೆಯಲ್ಲಿ ತೊಡಗಿರುವ 'ಬೆಂಗಳೂರು ಮೆಟ್ರೋ ರೈಲು ನಿಗಮ ' (BMRCL) ಮತ್ತೊಂದು ಮೈಲಿಗಲ್ಲಿಗೆ ಸಾಕ್ಷಿಯಾಗಿದೆ. ಪ್ರಯಾಣದ ದರ ಹೆಚ್ಚಿಸಿದ್ದರಿಂದ ಸಾರ್ವಜನಿಕರ ಆಕ್ರೋಶ ಹೆಚ್ಚಾಗಿತ್ತು. ಈ ಮಧ್ಯೆಯು ಒಂದೇ ದಿನದಲ್ಲಿ ಅತ್ಯಧಿಕ ಪ್ರಯಾಣಿಕರು ಮೆಟ್ರೋದಲ್ಲಿ ಸಂಚರಿಸಿದ್ದಾರೆ ಎಂದಿರುವ ನಿಗಮ ಈ ಸಂಬಂಧ ಪ್ರಯಾಣಿಕರಿಗೆ ಅಭಿನಂದನೆ ತಿಳಿಸಿದೆ.

ಬೆಂಗಳೂರು ನಮ್ಮ ಮೆಟ್ರೋ ಮತ್ತೆ ಪ್ರಯಾಣಿಕರ ಸಂಖ್ಯೆ ಮತ್ತೆ ಎಂದಿನಂತಾಗಿದೆ. ಮೊನ್ನೆ ಏಪ್ರಿಲ್ 17ರಂದು ಒಂದೇ ದಿನ ನಮ್ಮ ಮೆಟ್ರೋ ಪ್ರಯಾಣಿಕರ ಸಂಖ್ಯೆ 9,08,153ಕ್ಕೆ ಹೆಚ್ಚಾಗಿದೆ. ಹಾಲಿ ಹಸಿರು ಮತ್ತು ನೇರಳೆ ಮಾರ್ಗದಲ್ಲಿ ಎರಡು ಮಾರ್ಗಗಳಲ್ಲಿ ಜನ ಸಂಚಾರ ಏರಿಕೆ ಆಗಿದೆ ಎಂದು 'ಬೆಂಗಳೂರು ಮೆಟ್ರೋ ರೈಲು ನಿಗಮ' (BMRCL) ಅಧಿಕಾರಿಗಳು ಶನಿವಾರ ಮಾಹಿತಿ ನೀಡಿದ್ದಾರೆ.

Bengaluru Namma Metro Recorded 9 8 Lakh Ridership in Single day on April 17 2025

ನೇರಳೆ ಮೆಟ್ರೋ ಮಾರ್ಗದಲ್ಲಿ ಆ ದಿನ 4 ಲಕ್ಷಕ್ಕೂ ಅತ್ಯಧಿಕ ಪ್ರಮಾಣಿಕರು ಸಂಚರಿಸಿದ್ದಾರೆ. 4,35,516 ಪ್ರಯಾಣಿಕರನ್ನು ನೇರಳೆ ಮಾರ್ಗ ದಾಖಲಿಸಿದೆ. ಹಸಿರುವ ಮಾರ್ಗವು 2,85,240 ಪ್ರಯಾಣಿಕರನ್ನು ದಾಖಲಿಸಿದೆ. ಇನ್ನು ಪ್ರಮುಖ ಇಂಟರ್‌ಚೇಂಜ್ ನಿಲ್ದಾಣ ಆಗಿರುವ ನಾಡಪ್ರಭು ಕೆಂಪೇಗೌಡ (ಮೆಜೆಸ್ಟಿಕ್) ಮೆಟ್ರೋ ನಿಲ್ದಾಣದಲ್ಲಿ ಅಂದು ಒಂದೇ ದಿನ 1,87,397 ಮಂದಿ ಮಾರ್ಗ ಬದಲಾವಣೆ ಮಾಡಿಕೊಂಡಿದ್ದಾರೆ ಎಂದು ಬಿಎಂಆರ್‌ಸಿಎಲ್ ಅಂಕಿ ಸಂಖ್ಯೆ ನೀಡಿದೆ.

ಪ್ರಯಾಣಿಕರ ಆಕ್ರೋಶ ಕಡಿಮೆ ಆಯ್ತಾ?

ರಾಜ್ಯ ಸರ್ಕಾರ ಅಗತ್ಯ ವಸ್ತುಗಳ ಬೆಲೆ ಮೇಲಿಂದ ಮೇಲೆ ಹೆಚ್ಚಿಸಿ ಜನರಿಗೆ ಆರ್ಥಿಕ ಬರೆ ನೀಡುತ್ತಿದೆ ಎಂದು ಜನರು ದೂರಿದ್ದರು. ಇದಕ್ಕೆ ಸಾಲದೆಂಬಂತೆ ನಿರ್ವಹಣಾ ವೆಚ್ಚದ ನೆಪದಲ್ಲಿ ನಮ್ಮ ಮೆಟ್ರೋ ದರವನ್ನು ಏರಿಕೆ ಮಾಡಲಾಗಿತ್ತು. ಕನಿಷ್ಠ 60 ಹಾಗೂ ಗರಿಷ್ಠ 100 ರೂಪಾಯಿ ದರ ವಿಧಿಸಲಾಯಿತು. ಪ್ರಯಾಣಿಕರು ಆಕ್ರೋಶ, ಅಸಮಾಧಾನ ವ್ಯಕ್ತಪಡಿಸಿದ ನಂತರ ಸ್ಟೇಜ್ ಬೈ ಸ್ಟೇಜ್ ಮರ್ಜ್ ಮಾಡುವುದಾಗಿ ತಿಳಿಸಿದ್ದ ಅಧಿಕಾರಿಗಳು ಒಂದೆರಡು ಕಡಿಮೆ ದೂರದ ಮಾರ್ಗಗಳ ದರ ಇಳಿಕೆ ಮಾಡಿದರು. ಅದರ ಹೊರತಾಗಿ ಯಾವ ಬದಲಾವಣೆ ಆಗಲಿಲ್ಲ.

ಇದರಿಂದಾಗಿ ಅಭಿಯಾನ, ನಮ್ಮ ಮೆಟ್ರೋ ಬಹಿಷ್ಕಾರಗಳು ನಡೆದವು. ನಮ್ಮ ಮೆಟ್ರೋ ನಡೆಯನ್ನು ಖಂಡಿಸಲಾಯಿತು. ಬಳಿಕ ಜನರು ಅನಿವಾರ್ಯವಾಗಿ ಇದೇ ಮೆಟ್ರೋದಲ್ಲಿ ಓಡಾಡುವಂತಾಗಿದೆ. ಕಾರಣ ಬೆಂಗಳೂರಿನಂತಹ ಸಂಚಾರ ದಟ್ಟಣೆಯಲ್ಲಿ ಸ್ವಂತ ವಾಹನಗಳೊಂದಿಗಿನ ಸಂಚಾರ ಕಷ್ಟಕರವಾಗುತ್ತದೆ. ಇನ್ನೂ ಬಸ್ ದರವು ದುಬಾರಿಯಾಗಿದೆ. ಸಮಯ ವ್ಯರ್ಥವಾಗುತ್ತದೆ. ಸರಿಯಾದ ಸಮಯಕ್ಕೆ ಕ್ಷಿಪ್ರವಾಗಿ ಸಾಗುವುದು ನಮ್ಮ ಮೆಟ್ರೋ, ಈ ಕಾರಣದಿಂದ ಬೆಲೆ ಹೆಚ್ಚಾದರೂ ಅನಿವಾರ್ಯವಾಗಿ ಮೆಟ್ರೋ ಏರುವಂತಾಗಿದೆ.

Take a Poll

10 ಲಕ್ಷ ಪ್ರಯಾಣಿಕರ ಅಂದಾಜು

ಇನ್ನೂ ನಮ್ಮ ದರ ಏರಿಕೆ ಬಳಿಕ ದಿನದಿಂದ ದಿನಕ್ಕೆ ಮೆಟ್ರೋ ಪ್ರಯಾಣಿಕರ ಸಂಚಾರ ಕಡಿಮೆ ಆಗಿತ್ತು. ಸುಮಾರು ಒಂದರಿಂದ ಒಂದೂವರೆ ಲಕ್ಷದಷ್ಟು ಪ್ರಯಾಣಿಕರ ಸಂಖ್ಯೆಯಲ್ಲಿ ಕುಸಿಯಿತು. ಇದು ಹೀಗೆ ಮುಂದುವರಿದರೆ ಹೇಗೆ ಎನ್ನುವ ಸ್ಥಿತಿ ಇತ್ತು. ಪ್ರಯಾಣಿಕರ ಸಂಖ್ಯೆ ಕಡಿಮೆ ಆದರೂ ಸಹಿತ ನಮ್ಮ ಮೆಟ್ರೋ ತನ್ನ ಪ್ರಯಾಣ ಏರಿಕೆ ನಿರ್ಧಾರದಿಂದ ಹಿಂದೆ ಸರಿಯಲಿಲ್ಲ. ಇದೀಗ ಮೊದಲಿನಂತೆ ಪ್ರಯಾಣಿಕರು ಸಂಚಾರ ಮಾಡುತ್ತಿದ್ದಾರೆ. ಮುಂದಿನ ದಿನಗಳಲ್ಲಿ BMRCL 10 ಲಕ್ಷ ಪ್ರಯಾಣಿಕರನ್ನು ದಾಖಲಿಸಬಹುದು ಎಂದು ಅಂದಾಜಿಸಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+