Namma Metro QR Code Ticket: ಐದೇ ತಿಂಗಳಲ್ಲಿ ಕ್ಯೂಆರ್‌ಕೋಡ್ ಟಿಕೆಟ್ ಬಳಕೆದಾರರ ಸಂಖ್ಯೆಯಲ್ಲಿ ಭಾರೀ ಏರಿಕೆ

ಬೆಂಗಳೂರು, ಏಪ್ರಿಲ್ 19: ಬೆಂಗಳೂರು ಮೆಟ್ರೋ ರೈಲು ನಿಗಮದ (BMTCL) ಕ್ಯೂಆರ್ ಕೋಡ್ ಟಿಕೆಟಿಂಗ್ ಬಳಕೆಯು ಹೆಚ್ಚು ಜನಪ್ರೀಯತೆ ಪಡೆದುಕೊಂಡಿದೆ. ಕಳೆದ ವರ್ಷ 2022 ರ ನವೆಂಬರ್‌ ನಿಂದ 2023ರ ಮಾರ್ಚ್ ವರೆಗೆ ಕ್ಯೂಆರ್ ಕೋಡ್ ಟಿಕೆಟ್ ಬಳಕೆದಾರರ ಸಂಖ್ಯೆ ಮೂರು ಪಟ್ಟಿ ಹೆಚ್ಚಾಗಿದೆ.

ಬೆಂಗಳೂರು ಮೆಟ್ರೋ ರೈಲು ನಿಗಮವು 2022ರ ನವೆಂಬರ್‌ ತಿಂಗಳಲ್ಲಿ ರಾಜ್ಯೋತ್ಸವದಂದು ಪ್ರಯಾಣಿಕ ಸ್ನೇಹಿ QR-ಕೋಡ್ ಟಿಕೆಟ್ ವ್ಯವಸ್ಥೆಯನ್ನು ಜಾರಿಗೆ ತಂದಿದಿದೆ. QR-ಕೋಡ್ ಟಿಕೆಟ್ ಅನ್ನು ಇಂಟರ್‌ನೆಟ್‌ ಬಳಸಿ ಮೊಬೈಲ್ ಮೂಲಕವೇ ಮೆಟ್ರೋ ಪ್ರಯಾಣದ ಟಿಕೆಟ್ ಖರೀದಿಸಬಹುದಾದ ಉತ್ತಮ ಸೌಲಭ್ಯ ಇದಾಗಿದೆ.

Bengaluru Namma Metro QR Code Ticket Users Rise 2.17 Lakh November 2022 to 6.63 Lakh in March 2023

ನವೆಂಬರ್ ತಿಂಗಳಲ್ಲಿ 2.1ಲಕ್ಷದಷ್ಟಿದ್ದ QR-ಕೋಡ್ ಟಿಕೆಟ್ ಬಳಸುವ ಪ್ರಯಾಣಿಕರ ಸಂಖ್ಯೆ 2023ರ ಮಾರ್ಚ್‌ವರೆಗೆ ಕೇವಲ ಐದೇ ತಿಂಗಳಲ್ಲಿ 6.6 ಲಕ್ಷಕ್ಕೆ ಏರಿಕೆ ಆಗಿದೆ ಎಂದು ನಮ್ಮ ಮೆಟ್ರೋ ಅಧಿಕಾರಿಗಳು ತಿಳಿಸಿದ್ದಾರೆ. ಎಂದು ಮನಿಕಂಟ್ರೋಲ್ ವರದಿ ಮಾಡಿದೆ

ಈ QR-ಕೋಡ್ ಟಿಕೆಟ್ ವ್ಯವಸ್ಥೆಯಿಂದಾಗಿ ಪ್ರಯಾಣಿಕರಿಗೆ ವಾಟ್ಸಾಪ್ ಮತ್ತು ನಮ್ಮ ಮೆಟ್ರೋ ಮೊಬೈಲ್ ಅಪ್ಲಿಕೇಶನ್ ಮೂಲಕ ಟಿಕೆಟ್ ಖರೀದಿಸಲು ಸಹಕಾರಿಯಾಗಿದೆ. ಇದರಿಂದ ಸರಿತಿ ಸಾಲಿನಲ್ಲಿ ನಿಂತು ಟಿಕೆಟ್ ಖರೀದಿ ಮಾಡುವ ಕಿರಿಕಿರಿ ತಪ್ಪಲಿದೆ. ಪ್ರಯಾಣಿಕರಿಗೆ ತುಸು ಸಮಯವು ಉಳಿತಾಯವಾಗಲಿದೆ. QR-ಕೋಡ್ ಟಿಕೆಟ್ ಜೊತೆಗೆ ಸ್ಮಾರ್ಟ್ ಬಳಕೆಯು ಹೆಚ್ಚಾಗಿದೆ ಎಂದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಸ್ಮಾರ್ಟ್‌ಕಾರ್ಡ್, ಟೋಕನ್, ಕ್ಯೂಆರ್‌ ಕೋಡ್‌ ಬಳಕೆ ವಿವರ

ಬೆಂಗಳೂರು ಮೆಟ್ರೋ ರೈಲು ನಿಗಮ (BMRCL) ತಿಳಿಸಿರುವ ಅಂಕಿ ಅಂಶಗಳನ್ನು ನೋಡುವುದಾದರೆ, ನಗರದಲ್ಲಿ ದಿನನಿತ್ಯ ಶೇಕಡಾ 60ರಷ್ಟು ಪ್ರಯಾಣಿಕರು ಸ್ಮಾರ್ಟ್ ಕಾರ್ಡ್‌ಗಳನ್ನು ಬಳಸುತ್ತಿದ್ದಾರೆ. ಮೆಟ್ರೋ ಟೋಕನ್‌ ಬಳಸಿ ಓಡಾಡುವವರ ಪ್ರಮಾಣ ಶೇಕಡಾ 35ರಷ್ಟಿದೆ.

Bengaluru Namma Metro QR Code Ticket Users Rise 2.17 Lakh November 2022 to 6.63 Lakh in March 2023

ಇದರೊಂದಿಗೆ QR ಕೋಡ್ ಬಳಸಿ ಓಡಾಡುವ ಪ್ರಯಾಣಿಕರ ಸಂಖ್ಯೆ 5 ಪ್ರತಿಶತದಷ್ಟಿದೆ. ನಗರದಲ್ಲಿ ಸ್ಮಾರ್ಟ್‌ ಕಾರ್ಡ್‌ ಬಳಸಿ ಸಂಚರಿಸುವ ಶೇಕಡಾ 81ರಷ್ಟು ಪ್ರಯಾಣಿಕರು ರೀಚಾರ್ಜ್ ಮಾಡಲು ಟಿಕೆಟ್ ಕೌಂಟರ್‌ಗಳನ್ನೇ ಅವಲಂಬಿಸಿದ್ದಾರೆ. ಅದರಲ್ಲಿ ಶೇಕಡಾ 10ರಷ್ಟು ನಮ್ಮ ಮೆಟ್ರೋ ಅಪ್ಲಿಕೇಶನ್ ಮೂಲಕ ರಿಚಾರ್ಜ್‌ ಮಾಡಿಕೊಳ್ಳುತ್ತಾರೆ. ಶೇಕಡಾ 5ರಷ್ಟು ಮಂದಿ ಪೇಟಿಎಂ (Paytm), ಶೇಕಡಾ 2ರಷ್ಟು ವಾಟ್ಸಪ್ (WhatsApp) ಹಾಗೂ ಅಮೆಜಾನ್ ಮತ್ತು ಬಿಎಂಆರ್‌ಸಿಎಲ್‌ ವೆಬ್‌ಸೈಟ್‌ ಮೂಲಕ ಶೇಕಡಾ ಒಂದರಷ್ಟು ಪ್ರಯಾಣಿಕರು ಸ್ಮಾರ್ಟ್ ಕಾರ್ಡ್‌ಗಳನ್ನು ರಿಚಾರ್ಜ್ ಮಾಡಿಕೊಳ್ಳುತ್ತಾರೆ ಎಂದು ತಿಳಿಸಿದೆ.

ಒಂದೇ QR ಕೋಡ್ ಬಳಸಿ ಆರು ಮಂದಿ ಸಂಚರಿಸಿ

2022ರ ನವೆಂಬರ್‌ನಲ್ಲಿ ನಮ್ಮ ಮೆಟ್ರೋದ ಕ್ಯೂಆರ್‌ ಕೋಡ್‌ ಸ್ಕ್ಯಾನ ಮಾಡುವ ಮೂಲಕ ಟಿಕೆಟ್ ಖರೀದಿಸುವ ವ್ಯವಸ್ಥೆಯನ್ನು ಪರಿಚಯಿಸಿತು. ಕೆಲವು ದಿನಗಳ ನಂತರ ಒಂದೇ ಕ್ಯೂಆರ್ ಕೋಡ್‌ನಲ್ಲಿ ಆರು ಮಂದಿ ಪ್ರಯಾಣಿಸುವ ವ್ಯವಸ್ಥೆಯನ್ನು ಸಹ ಅಧಿಕಾರಿಗಳು ಜಾರಿಗೊಳಿಸಿ ಪ್ರಯಾಣಿಕರಿಗೆ ಸಿಹಿ ಸುದ್ದಿ ನೀಡಿದರು.

ಕುಟುಂಬದೊಂದಿಗೆ ಇಲ್ಲವೇ ಸ್ನೇಹಿತರೊಂದಿಗೆ ಒಟ್ಟಿಗೆ ಪ್ರಯಾಣಿಸುವವರು ಸ್ವಯಂಚಾಲಿತ ಶುಲ್ಕ ಸಂಗ್ರಹ ಗೇಟ್‌ಗಳಲ್ಲಿ ಸ್ಥಾಪಿಸಲಾದ QR ರೀಡರ್‌ನಲ್ಲಿ ಒಂದು ಮೊಬೈಲ್‌ನಲ್ಲಿ ಒಂದೇ ಬಾರಿಗೆ ಆರು ಮಂದಿಗೂ ಟಿಕೆಟ್ ಬುಕ್ ಮಾಡಬಹುದು.

ಮೆಟ್ರೋನ ಕ್ಯೂಆರ್ ಟಿಕೆಟಿಂಗ್ ವ್ಯವಸ್ಥೆಗೆ ಬೆಂಗಳೂರು ನಾಗರಿಕರಿಂದ ವ್ಯಾಪಕ ಸ್ಪಂದನೆ, ಉತ್ತಮ ಅಭಿಪ್ರಾಯ ಕೇಳಿ ಬಂದಿದೆ. ಇದು ವರೆಗೆ ಒಮ್ಮೆ ಮಾತ್ರ ದೋಷ ಕಂಡು ಬಂದಿದೆ. ಮಟ್ರೋ ಟಿಕೆಟ್‌ ಖರೀದಿಸಲು 'ನಮ್ಮ ಮೆಟ್ರೋ' ಅಪ್ಲಿಕೇಶನ್‌ಗೆ ಲಾಗ್ ಇನ್ ಆಗಬೇಕು. ಇಲ್ಲವೇ ವಾಟ್ಸಾಪ್‌ ಚಾಟ್‌ಬಾಟ್ ಸಂಖ್ಯೆಯನ್ನು (810 555 66 77) ಅನ್ನು ಬಳಸಬಹುದು. ನಮ್ಮ ಮೆಟ್ರೋ ಅಥವಾ ವಾಟ್ಸಾಪ್ ಬಳಸಿ ಹಣ ಪಾವತಿ ಮಾಡಬಹುದು ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+