Namma Metro: ನಮ್ಮ ಮೆಟ್ರೋ ಪ್ರಯಾಣಿಕರಿಗೆ ಗುಡ್‌ನ್ಯೂಸ್; ಮೆಟ್ರೋ ಸಂಚಾರ ಸಮಯ ಬದಲಾವಣೆ

ನಮ್ಮ ಮೆಟ್ರೋ ಪ್ರಯಾಣಿಕರಿಗೆ ಬಿಎಂಆರ್ ಸಿಎಲ್ ಸಿಹಿ ಸುದ್ದಿ ಕೊಟ್ಟಿದೆ. ವಾರಾಂತ್ಯದಲ್ಲಿ ರಜೆಗಾಗಿ ಊರಿಗೆ ಹೋಗುವ ಬೆಂಗಳೂರು ಮಂದಿ, ಸೋಮವಾರ ಮರಳಿ ಬರುವಾಗ ಟ್ರಾಫಿಕ್‌ನಲ್ಲಿ ಸಿಲುಕಿ ಹೈರಾಣಾಗುತ್ತಿದ್ದರೆ. ನಮ್ಮ ಮೆಟ್ರೋ ಕೂಡ ಬೆಳ್ಳಂಬೆಳಗ್ಗೆ ಭಾರಿ ಜನಸಂದಣಿಯಿಂದ ಜನ ಪ್ರಯಾಣ ಮಾಡಲು ಕೂಡ ಕಷ್ಟವಾಗುತ್ತಿತ್ತು. ಈಗ ಬೆಂಗಳೂರು ಜನತೆಗಾಗಿ ನಮ್ಮ ಮೆಟ್ರೋ ಸಂಚಾರ ಸಮಯದಲ್ಲಿ ಬದಲಾವಣೆ ಮಾಡಲು ಮುಂದಾಗಿದೆ.

ಇನ್ನು ಮುಂದೆ ಸೋಮವಾರ ಮೆಟ್ರೋ ಸಂಚಾರ ಬೆಳಗ್ಗೆ ಬೇಗನೆ ಆರಂಭಿಸಲು ಬಿಎಂಆರ್ ಸಿಎಲ್ ನಿರ್ಧರಿಸಿದೆ. ಈಗ 5 ಗಂಟೆಗೆ ಮೊದಲ ರೈಲು ಹೊರಡುತ್ತಿದ್ದು, ಇನ್ನು ಮುಂದೆ ಪ್ರತಿ ಸೋಮವಾರ ಮಾತ್ರ ಮೊದಲ ರೈಲು ಬೆಳಗಿನ ಜಾವ 4.15ಕ್ಕೆ ಹೊರಡಲಿದೆ.

Bengaluru namma metro early monday services for weekend arrivals

ಜನವರಿ 13ರಿಂದಲೇ ಜಾರಿಗೆ ಬರಲಿದೆ ಎಂದು ಬಿಎಂಆರ್ ಸಿಎಲ್ ತಿಳಿಸಿದೆ. ಸೋಮವಾರ ಮಾತ್ರ 4.15ಕ್ಕೆ ಮೊದಲ ರೈಲು ಹೊರಡಲಿದ್ದು ಉಳಿದ ದಿನಗಳಲ್ಲಿ ಎಂದಿನಂತೆ ಬೆಳಗ್ಗೆ 5 ಗಂಟೆಗೆ ಮೊದಲ ರೈಲು ಹೊರಡಲಿದೆ. ಸೋಮವಾರ ಬೆಳಗ್ಗೆ ಪ್ರಯಾಣಿಕರ ದಟ್ಟಣೆ ಕಡಿಮೆ ಮಾಡುವ ಉದ್ದೇಶದಿಂದ ಸಮಯ ಬದಲಾವಣೆ ಮಾಡಿದ್ದು ಪ್ರಯಾಣಿಕರು ಸ್ವಾಗತಿಸಿದ್ದಾರೆ.

ಸಂಚಾರ ದಟ್ಟಣೆಯಿಂದ ಹೈರಾಣು

ವಾರಾಂತ್ಯದ ರಜೆ ಮುಗಿದ ಬಳಿಕ ಸೋಮವಾರ ಬೆಳಗ್ಗೆ ಹೆಚ್ಚಿನ ಸಂಖ್ಯೆಯಲ್ಲಿ ಬೆಂಗಳೂರಿಗೆ ವಾಪಸಾಗುತ್ತಾರೆ. ಎಲ್ಲರಿಗೂ ಕಚೇರಿಗೆ ಹೋಗುವ ಧಾವಂತ ಇರುತ್ತದೆ. ಪ್ರತಿ ಸೋಮವಾರ ಬಂತಂದ್ರೆ ಸಾಕು ಮೆಟ್ರೋ ಬೆಳ್ಳಂಬೆಳಗ್ಗೆ ಭರ್ತಿಯಾಗುತ್ತದೆ. ಅದರಲ್ಲೂ ಎರಡು ಮೂರು ದಿನ ರಜೆ ಇದ್ದರೆ, ಹಬ್ಬಗಳು ಮುಗಿದ ಬಳಿಕ ಮೆಟ್ರೋ ತುಂಬಿ ತುಳುಕುತ್ತದೆ.

ಜನ ದಟ್ಟಣೆಯನ್ನು ಕಡಿಮೆ ಮಾಡಲು ರೈಲುಗಳ ಸಂಚಾರದ ನಡುವಿನ ಅಂತರವನ್ನು ಮತ್ತಷ್ಟು ಕಡಿಮೆ ಮಾಡಬೇಕು ಎಂದು ಒತ್ತಾಯ ಮಾಡಲಾಗುತ್ತಿದೆ. ಅದರ ಜೊತೆ ಪ್ರತಿ ಸೋಮವಾರ 45 ನಿಮಿಷ ಮೊದಲೇ ಮೆಟ್ರೋ ಸಂಚಾರ ಆರಂಭ ಮಾಡುತ್ತಿರುವುದು ಜನದಟ್ಟಣೆ ಕಡಿಮೆ ಮಾಡಲು ಸಹಾಯಕವಾಗಲಿದೆ ಎಂದು ನಿರೀಕ್ಷೆ ಮಾಡಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+