Namma Metro: 14ವರ್ಷ ಪೂರೈಸಿದ ಮೆಟ್ರೋ, ಇದೇ ವರ್ಷ ಹೊಸ ಯೋಜನೆಗಳ ಆರಂಭ ನಿರೀಕ್ಷೆ..BMRCL

ಬೆಂಗಳೂರು, ಅಕ್ಟೋಬರ್‌ 20: ಬೆಂಗಳೂರು ನಮ್ಮ ಮೆಟ್ರೋಗೆ 14 ವರ್ಷಗಳು ಭರ್ತಿಯಾಗಿವೆ. ಅಕ್ಟೋಬರ್ 20ರಿಮದ ಹೊಸ ಸಂವತ್ಸರಕ್ಕೆ ಕಾಲಿಡುತ್ತಿರುವ ಮತ್ತು ಅದೇ ಹುರುಪು, ಪ್ರಯಾಣಿಕರ ಆದ್ಯತೆ ಗಮನದಲ್ಲಿಟ್ಟುಕೊಂಡು ಸಾರಿಗೆ ಸೇವೆ ನೀಡುತ್ತಿರುವ ಬೆಂಗಳೂರು ಮೆಟ್ರೋ ರೈಲು ನಿಗಮ (BMRCL) ಜಾಲ ವರ್ಷದಿಂದ ವರ್ಷಕ್ಕೆ ವಿಸ್ತರಣೆ ಆಗುತ್ತಾ ಬಂದಿದೆ. ಸದ್ಯ 96 ಕಿಲೋ ಮೀಟರ್ ಜಾಲ ಹೊಂದಿದೆ. ಹೊಸ ರೈಲುಗಳು ಆಗಮನ ಜೊತೆ ಜೊತೆಗೆ ನೂತನ ಮಾರ್ಗ ತೆರೆಯಲು ಸಜ್ಜಾಗುತ್ತಿದೆ.

ಬೆಂಗಳೂರಿನಲ್ಲಿ ಜನರು ಸಾರಿಗೆಗೆ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (BMTC) ಅವಲಂಬಿಸಿದ್ದರು. 2011 ಅಕ್ಟೋಬರ್ 20ರಂದು 6-ನಿಲ್ದಾಣಗಳ ಮಧ್ಯ ಮೊದಲ ಬಾರಿಗೆ ನಮ್ಮ ಮೆಟ್ರೋ ರೈಲು ಸೇವೆ ಶುರುವಾಯಿತು. ಬೆಂಗಳೂರು ಪೂರ್ವದಲ್ಲಿರುವ ಬೈಯಪ್ಪನಹಳ್ಳಿ ಮತ್ತು ಮಹಾತ್ಮ ಗಾಂಧಿ ರಸ್ತೆಯ ನಡುವೆ ನೇರಳೆ ಮಾರ್ಗ (ಮೊದಲ ಮಾರ್ಗ)ದಲ್ಲಿ ರೈಲು ವಾಣಿಜ್ಯ ಕಾರ್ಯಾಚರಣೆ ಆರಂಭಿಸಿತು. ಆರಂಭದಲ್ಲಿ 6.7-ಕಿಲೋಮೀಟರ್ (4.2 ಮೈಲಿ) ಇದ್ದ ರೈಲು ನೆಟ್ ವರ್ಕ್ ಇದೀಗ 96 ಕಿಲೋ ಮೀಟರ್‌ಗೆ ವಿಸ್ತರಣೆ ಆಗಿದೆ. ಸುಮಾರು 60 ಮೆಟ್ರೋ ರೈಲುಗಳು ಓಡಾಡುತ್ತಿವೆ.

Bengaluru Namma Metro Completed 14 Year Service Know New Line Project Expand Network

ನಂತರ ಇದೇ ನೇರಳೆ ಮಾರ್ಗ (Namma Metro Purple Line) ವಿಜಯನಗರ ಮಾರ್ಗವಾಗಿ ಮೈಸೂರು ರಸ್ತೆಯ ನಾಯಂಡಹಳ್ಳಿವರೆಗೆ ವಿಸ್ತರಣೆ ಆಯಿತು. ಬಳಿಕ ನಾಗಸಂದ್ರ-ರೆಷ್ಮೆ ಸಂಸ್ಥೆವರೆಗೆ ತೆರಯಲಾದ ಹಸಿರು ಮಾರ್ಗ (Namma Metro Green Line) ಮಾದಾವರವರೆಗೆ ವಿಸ್ತರಣೆ ಆಯಿತು. ನೇರಳೆ ಮಾರ್ಗವು ಬೈಯಪ್ಪನಹಳ್ಳಿಯಿಂದ ವೈಟ್‌ ಫಿಲ್ಡ್ ಹಾಗೂ ನಾಯಂಡಹಳ್ಳಿಯಿಂದ ಚಲ್ಲಘಟ್ಟವರೆಗೆ ವಿಸ್ತರಣೆ ಆಯಿತು.

ವರ್ಷದಿಂದ ವರ್ಷ ಮೆಟ್ರೋ ಸಾರಿಗೆ ಅವಲಂಬನೆ ಹೆಚ್ಚಾಯಿತು. ಮೂರು ಲಕ್ಷ ದಿಂದ ಐದು ಲಕ್ಷವರೆಗೆ ಹೆಚ್ಚಾಗಿದ್ದ ದೈನಂದಿನ ಮೆಟ್ರೋ ಪ್ರಯಾಣಿಕ ಸಂಖ್ಯೆ ಬಹುಕಾಲ 7.5 ಆಸು ಪಾಸು ಕಂಡು ಬಂತು ವಿಶೇಷ ದಿನಗಳಲ್ಲಿ ದಾಖಲೆಯ ಪ್ರಯಾಣಿಕರ ಓಡಾಟಕ್ಕೆ ಮೆಟ್ರೋ ಸಾಕ್ಷಿಯಾಗಿದೆ. ಇತ್ತೀಚೆಗೆ 2025 ಆಗಸ್ಟ್ 10ರಂದು ಪ್ರಧಾನಿ ಮೋದಿಯವರು ಆರ್‌.ವಿ.ರಸ್ತೆ -ಬೊಮ್ಮಸಂದ್ರವರೆಗಿನ ಹಳದಿ ಮಾರ್ಗವನ್ನು (Namma Metro Yellow Line) ಲೋಕಾರ್ಪಣೆ ಮಾಡಿದ್ದಾರೆ.

ಸದ್ಯ ಈ ಹಳದಿ ಮಾರ್ಗದಲ್ಲಿ ನಿತ್ಯ ನಾಲ್ಕು ರೈಲುಗಳ ಸಂಚಾರ ಇದೆ. ನಿತ್ಯ 70 ಸಾವಿರದಷ್ಟು ಪ್ರಯಾಣಿಕರು ಓಡಾಡುತ್ತಿದ್ದಾರೆ. ಈಗಾಗಲೇ ಐದನೇ ರೈಲುಗಳ ಸೆಟ್ ಬೆಂಗಳೂರಿಗೆ ಬಂದಿವೆ. ಪ್ರಾಯೋಗಿಕ ಪರೀಕ್ಷೆ ನಡೆಯುತ್ತಿದ್ದ, ಇದೇ ತಿಂಗಳಾಂತ್ಯಕ್ಕೆ ಹೊಸ ಮಾರ್ಗದಲ್ಲಿ ಹೊಸ ರೈಲು ಸಂಚಾರ ಸೇವೆ ಆರಂಭಿಸಲಿದೆ ಎಂದು ಬಿಎಂಆರ್‌ಸಿಎಲ್ ಮೂಲಗಳು ತಿಳಿಸಿವೆ.

ಇದೇ ವರ್ಷ ಹೊಸ ಯೋಜನೆ ಆರಂಭ?

ಮುಂದಿನ ವರ್ಷ ನೀಲಿ ಮಾರ್ಗ (Namma Metro Blue Line), ಗುಲಾಬಿ ಮಾರ್ಗ (Namma Metro Pink Line) ಉದ್ಘಾಟನೆಗೊಳ್ಳುವ ಸಾಧ್ಯತೆ ಇದೆ. ಇದರೊಂದಿಗೆ ನಮ್ಮ ಮೆಟ್ರೋ ಮೂರನೇ ಹಂತದ ಯೋಜನೆ, ಹೆಬ್ಬಾಳ-ಸರ್ಜಾಪುರವರೆಗಿನ ಕೆಂಪು ಮಾರ್ಗದ ಯೋಜನೆ ಕಾಮಗಾರಿಗಳು ಇದೇ ವರ್ಷವೇ ಆರಂಭಗೊಳ್ಳುವ ನಿರೀಕ್ಷೆ ಇದೆ. ಹದಿನಾಲ್ಕು ಪೂರೈಸಿರುವ ಸಂದರ್ಭದಲ್ಲಿ BMRCL ಎಲ್ಲ ಪ್ರಯಾಣಿಕರಿಗೆ ಧನ್ಯವಾದ ತಿಳಿಸಿದೆ. ಜೊತೆಗೆ ಈವರೆಗೆ ಶ್ರಮಿಸಿದ ಸಿಬ್ಬಂದಿ, ಶ್ರಮಿಕರಿಗೆ ಅಭಿನಂದನೆ ತಿಳಿಸಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+