NAMMA Code: ಬೆಂಗಳೂರು ಆಟೋ ರೀಕ್ಷಾ ಪ್ರಯಾಣ ಇನ್ನಷ್ಟು ಸುಲಭ...ಹೇಗೆ?

ಬೆಂಗಳೂರು, ನವೆಂಬರ್ 02: ರಾಜಧಾನಿ ಬೆಂಗಳೂರಿನಲ್ಲಿ ಸಾರಿಗೆ ಮತ್ತಷ್ಟು ಸುಧಾರಣೆ ಆಗುತ್ತಿದೆ. ಇದೀಗ ಅದರ ಸಾಲಿಗೆ ಆಟೋ ರೀಕ್ಷಾ ಸೇವೆಯು ಸೇರಿದೆ. 'ನಗರಾ ಮೀಟರ್ಡ್ ಆಟೋರಿಕ್ಷಾ ಅಪ್ಲಿಕೇಶನ್‌' ಮೂಲಕ ಶುರುವಾದ ಆಟೋ ಸೇವೆಯು ಸದ್ಯ ಹೊಸ 'ನಮ್ಮ ಕೋಡ್' ( Bengaluru NAMMA Code) ವ್ಯವಸ್ಥೆ ಪರಿಚಯಿಸಿದೆ. ಪ್ರಯಾಣಿಕರು ಒಂದೇ ಕೋಡ್‌ ಮೂಲಕ ದಿನವಿಡೀ ಪ್ರಯಾಣಿಸುವ ಅವಕಾಶ ಇದು ನೀಡುತ್ತಿದೆ. ನಮ್ಮ ಮೆಟ್ರೋ ಸಹಕಾರ ಸಹ ಕೇಳಲಾಗಿದೆ ಎಂಬ ಮಾಹಿತಿ ಸಿಕ್ಕಿದೆ.

ಬೆಂಗಳೂರಿನಲ್ಲಿ ಆಟೋರಿಕ್ಷಾ ಪ್ರಯಾಣ ಇನ್ನಷ್ಟು ಸುಲಭವಾಗಿಸುವ ಉದ್ದೇಶದಿಂದ ಕನ್ನಡ ರಾಜ್ಯೋತ್ಸವದಂದೆ ನ.1ರಂದು ಈ ಹೊಸ ವೈಶಿಷ್ಟ್ಯವನ್ನು ಘೋಷಿಸಲಾಗಿದೆ. ಮಲ್ಟಿ-ಟ್ರಿಪ್ ಆಟೋರಿಕ್ಷಾ ಸವಾರಿಗಳನ್ನು ಒಂದೇ ಕೋಡ್ ಮರು ಬಳಕೆ ಮಾಡುವ ಮುಖೇನ ಹೊಡೆಯಬಹುದ. ಪ್ರಯಾಣಿಕರು ಒಂದು ಆಟೋ ಹತ್ತುವಾಗಿ ಬಳಕೆ ಆಗುವ ಕೋಡ್ ಮೂಲಕವೇ ವಿವಿಧ ಬೇರೆ ಬೇರೆ ಆಟೋ ಸವಾರಿ ಮಾಡಬಹುದು.

Bengaluru NAMMA Code Enables Multiple Auto rikshaw Trips with One Code Collaborate with BMRCL

4 ಅಂಕಿಗಳ ಒಂದೇ ಕೋಡ್‌ನಿಂದ ಕೆಲವು ರೈಡ್

ಈ ಹಿಂದೆ ನಗರಾ ಆಪ್ ಮೂಲಕ ಪ್ರಯಾಣಿಸುವ ಪ್ರತಿ ಪ್ರಯಾಣಕ್ಕೂ ಒಂದೊಂದು ಹೊಸ ಕೋಡ್ ಕೊಡಲಾಗುತ್ತಿತ್ತು. ಆದರೆ ಈಗ ಈ 'ನಮ್ಮ ಕೋಡ್' ವೈಶಿಷ್ಯತೆಯಿಂದಾಗಿ 4 ಅಂಕಿಗಳ ಒಂದೇ ಕೋಡ್‌ನಿಂದ ಬಳಕೆದಾರರು ಹಲವು ರೈಡ್ ಮಾಡಬಹುದು. ಈ ನಮ್ಮ ಕೋಡ್ ಹಲವು ರೈಡ್‌ಗಳಿಗೆ ಅನುಮತಿ ನಡುತ್ತದೆ. ಒಂದೇ ಕೋಡ್ ಇದ್ದರೆ ಸಾಕು, ನೀವು ಹತ್ತುವ ಇಳಿಯವು ವಿವರ ನಮೂದಿಸಿ ಮಧ್ಯರಾತ್ರಿಯವರೆಗೆ ಓಡಾಡಬಹುದಾಗಿದೆ.

ಆಟೋ ಸೇವಾಗಿ ನೀವು ಆಪ್ ಮೂಲಕ ನೀವು ವಾಟ್ಸಾಪ್ ಚಾಟಾ ಬಾಟ್‌ಗೆ 9620020042 "ಹಾಯ್" ಎಂದು ಮಸೆಜ್ ಕಳುಹಿಸಿದರೆ, ಕೋಡ್ ರಚನೆ ಆಗುತ್ತದೆ. ಆಗ ಪಿಕ್ ಅಪ್ ವಿವರ ನಮೂದಿಸಿ ಬಳಕೆದಾರರು ಚಾಲಕ ಮತ್ತು ಆಟೋರಿಕ್ಷಾ ಮಾಹಿತಿ ಅಲ್ಲಿಯೇ ಪಡೆಯುತ್ತಾರೆ. ನಂತರ ಸಿಗುವ ಒಂದೇ ಕೋಡ್ ದಿನವಿಡಿ ಹಲುವ ಆಟೋ ರೈಡ್‌ಗೆ ಬಳಕೆ ಮಾಡಬಹುದು ಎಂದು 'ಇಂಡಿಯನ್ ಎಕ್ಸ್‌ಪ್ರೆಸ್' ವರದಿ ಮಾಡಿದೆ.

Bengaluru NAMMA Code Enables Multiple Auto rikshaw Trips with One Code Collaborate with BMRCL

ನಮ್ಮ ಮೆಟ್ರೋ ಸಹಕಾರ: ಪ್ರಯಾಣಿಕರಿಗೆ ಹೇಗೆ ಅನುಕೂಲ

ಸದ್ಯ ಈ ನಮ್ಮ ಕೋಡ್ (Bengaluru NAMMA Code) ವ್ಯವಸ್ಥೆಯ ಚಾಟಾ ಬಾಟ್‌ ವ್ಯವಸ್ಥೆಯನ್ನು ಬೆಂಗಳೂರು ನಮ್ಮ ಮೆಟ್ರೋ (Bengaluru Namma Metro) ಜೊತೆಗೆ ಸಂಯೋಜಿಸಲು ಮನವಿ ಮಾಡಲಾಗಿದೆ. ಈ ಬಗ್ಗೆ ಬೆಂಗಳೂರು ಮೆಟ್ರೋ ರೈಲು ನಿಗಮದ ಅಧಿಕಾರಿಗಳು ಕಂಪನಿ ಜೊತೆಗೆ ಮಾತುಕತಡೆ ನಡೆಸುವ ಸಾಧ್ಯತೆ ಇದೆ.

ಮೆಟ್ರೋ ಸಹಯೋಗದಲ್ಲಿ ಈ ಆಟೋ ವೈಶಿಷ್ಯ ಜಾರಿಯಾದರೆ, ಮೆಟ್ರೋ ಪ್ರಯಾಣಿಕರು ಟಿಕೆಟ್‌ಗಳನ್ನು ಖರೀದಿಸುವಾಗ NAMMA ಕೋಡ್ ಅನ್ನು ಬಳಸಬಹುದು. ಅಲ್ಲದೇ ನಮ್ಮ ಮೆಟ್ರೋ ನಿಲ್ದಾಣಗಳಿಂದ ನೇರವಾಗಿ ಯಾವ ಅಡೆತಡೆ ಇಲ್ಲದೇ ಆಟೋ ರೀಕ್ಷಾ ಬುಕ್ ಮಾಡಲು ಅವಕಾಶ ಕಲ್ಪಿಸುವಂತೆ ಮಾಡಲು ಪ್ಲಾನ್ ಮಾಡಿಕೊಳ್ಳಲಾಗಿದೆ.

ಹಾಲಿ ನಗರಾ ಅಪ್ಲಿಕೇಷನ್ 6,200 ಕ್ಕೂ ಹೆಚ್ಚು ಆಟೋ ಚಾಲಕರ ತನ್ನ ವ್ಯಾಪ್ತಿಯಲ್ಲಿ ನೋಂದಣಿ ಮಾಡಿಕೊಂಡಿದೆ. ಸರಾಸರಿ 4.61 ಕಿಮೀ ಉದ್ದದ ಪ್ರತಿ ಟ್ರಿಪ್‌ಗೆ ಸುಮಾರು ರೂ.118 ಪ್ರಯಾಣ ಶುಲ್ಕ ಆಗಬಹುದು. ಈವರೆಗೆ ನಗರದಲ್ಲಿ 7,238 ಟ್ರಿಪ್‌ ಪೂರ್ಣವಾಗಿದೆ ಎಂದು ತಿಳಿದು ಬಂದಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+