Bengaluru-Mysuru Expressway: ಮಾರ್ಚ್ 15 ರಿಂದ ಬೆಂಗಳೂರು ಮೈಸೂರು ಹೆದ್ದಾರಿಯಲ್ಲಿ ಟೋಲ್ ಸಂಗ್ರಹ ಪ್ರಾರಂಭ
ಬೆಂಗಳೂರು ನಿಡಘಟ್ಟ ಸೆಕ್ಷನ್‌ಗೆ ಟೋಲ್ ಸಂಗ್ರಹವನ್ನು 2023ರ ಮಾರ್ಚ್ 14ರವರೆಗೆ ಮುಂದೂಡಲಾಗಿದೆ ಎಂದು ಎನ್‌ಎಚ್‌ಎಐ ನೋಟಿಸ್‌ನಲ್ಲಿ ತಿಳಿಸಿದೆ.
ಬೆಂಗಳೂರು, ಫೆಬ್ರವರಿ. 28: ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (ಎನ್‌ಎಚ್‌ಎಐ) ಬಹು ನಿರೀಕ್ಷಿತ ಬೆಂಗಳೂರು - ಮೈಸೂರು ಎಕ್ಸ್‌ಪ್ರೆಸ್‌ವೇಯಲ್ಲಿ ಟೋಲ್ ಸಂಗ್ರಹವನ್ನು ಸ್ಥಗಿತಗೊಳಿಸಿದೆ. ಬೆಂಗಳೂರಿನಿಂದ ನಿಡಘಟ್ಟ ವರೆಗಿನ (55 ಕಿಮೀ) ಟೋಲ್ ಶುಲ್ಕವನ್ನು ಮಂಗಳವಾರ ಬೆಳಗ್ಗೆ 8 ಗಂಟೆಯಿಂದ 135 ರೂಪಾಯಿ ಎಂದು ನಿಗದಿಪಡಿಸಲಾಗಿತ್ತು.
ಅನಿವಾರ್ಯ ಕಾರಣಗಳಿಂದ ಟೋಲ್ ಸಂಗ್ರಹವನ್ನು ಮುಂದೂಡಲಾಗುವುದು ಎಂದು ಎನ್‌ಎಚ್‌ಎಐಯ ಹೊಸ ಸಾರ್ವಜನಿಕ ಮಾಹಿತಿ ಸೂಚನೆ ತಿಳಿಸಿದೆ. "ಮೇಲೆ ಉಲ್ಲೇಖಿಸಿದ ವಿಷಯಕ್ಕೆ ಸಂಬಂಧಿಸಿದೆ, 28.02.2023ರ ಬೆಳಗ್ಗೆ 8 ಗಂಟೆಯಿಂದ ಪ್ರಾರಂಭವಾಗಲಿದ್ದ ಟೋಲ್ ಸಂಗ್ರಹವು ಅನಿವಾರ್ಯ ಕಾರಣಗಳಿಂದ ನಿಲ್ಲಿಸಲಾಗಿದೆ. ಬೆಂಗಳೂರು ನಿಡಘಟ್ಟ ಸೆಕ್ಷನ್‌ಗೆ ಟೋಲ್ ಸಂಗ್ರಹವನ್ನು 2023ರ ಮಾರ್ಚ್ 14ರವರೆಗೆ ಮುಂದೂಡಲಾಗಿದೆ" ಎಂದು ನೋಟಿಸ್‌ನಲ್ಲಿ ತಿಳಿಸಲಾಗಿದೆ.

ರಸ್ತೆ ಉದ್ಘಾಟನೆಯಾಗ್ಏ, ಸರ್ವಿಸ್ ರಸ್ತೆಗಳು ಕೂಡ ಇಲ್ಲ್ರ ಟೋಲ್ ಸಂಗ್ರಹ ಮಾಡುವುದಾಗಿ ತಿಳಿಸಿದ್ದಕ್ಕೆ ಸಾರ್ವಜನಿಕರಿಂದ ಆಕ್ರೋಶ ಉಂಟಾಗಿತ್ತು. ಇದಾದ ಬಳಿಕ ಪ್ರತಿಕ್ರಿಯಿಸಿರುವ ಮೈಸೂರು - ಕೊಡಗು ಸಂಸದ ಪ್ರತಾಪ ಸಿಂಹ, ಮೊದಲ ಹಂತದ ಟೋಲ್ ಕೇಂದ್ರಗಳಲ್ಲಿ ಶುಲ್ಕ ಸಂಗ್ರಹ ಕಾರ್ಯವನ್ನು ಮುಂದೂಡಲಾಗಿದೆ. ಸರ್ವಿಸ್ ರಸ್ತೆಗಳ ನಿರ್ಮಾಣ ಕಾಮಗಾರಿ ಬಾಕಿ ಇದೆ. ಅದು ಪೂರ್ಣಗೊಳ್ಳುವವರೆಗೂ ಟೋಲ್ ಶುಲ್ಕ ಸಂಗ್ರಹಿಸುವುದಿಲ್ಲ ಎಂದು ತಿಳಿಸಿದ್ದರು.
ಇನ್ನು, ಮಾರ್ಚ್ 11ಕ್ಕೆ ಪ್ರಧಾನಿ ನರೇಂದ್ರ ಮೋದಿ ಬೆಂಗಳೂರು- ಮೈಸೂರು ಹೆದ್ದಾರಿಯನ್ನು ಉದ್ಘಾಟಿಸಲಿದ್ದು, ಅಷ್ಟರಲ್ಲಿ ಎಲ್ಲ ಆಕಾಮಗಾರಿಯನ್ನು ಮುಗಿಸುವ ಸಾಧ್ಯತೆಯಿದೆ. ಇದೆ ಕಾರಣಕ್ಕೆ ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಕೂಡ ಮಾರ್ಚ್ 14ರವರೆಗೆ ಟೋಲ್ ಸಂಗ್ರಹ ಮುಂದೂಡಲಾಗಿದೆ ಎಂದು ತಿಳಿಸಿದೆ. ಹೀಗಾಗಿ ಮಾರ್ಚ್ 15 ರಿಂದ ಟೋಲ್ ಸಂಗ್ರಹ ನಡೆಯಲಿದೆ.
ಎನ್‌ಎಚ್‌ಎಐ ಪ್ರತಿ ಕಾರಿಗೆ 24 ಗಂಟೆಗಳ ಒಳಗೆ ಹಿಂದಿರುಗಲು 205 ರೂಪಾಯಿ ಟೋಲ್ ಶುಲ್ಕವನ್ನು ನಿಗದಿಪಡಿಸಿತ್ತು. ಆದರೆ ಮಿನಿ ಬಸ್‌ಗಳು ಮತ್ತು ಬಸ್‌ಗಳಿಗೆ 220 ರೂಪಾಯಿ ವಿಧಿಸಲಾಗಿತ್ತು. 118-ಕಿಮೀ ಎಕ್ಸ್‌ಪ್ರೆಸ್‌ವೇ ಎರಡು ಟೋಲ್ ಕಲೆಕ್ಷನ್ ಪಾಯಿಂಟ್‌ಗಳನ್ನು ಹೊಂದಿಸಲಿದೆ. ಇದು ಆರು ವರ್ಗದ ವಾಹನಗಳಿಗೆ ಟೋಲ್ ವಿಧಿಸುತ್ತದೆ.

ಬೆಂಗಳೂರಿನಿಂದ ಮದ್ದೂರಿಗೆ 135 ರೂಪಾಯಿ, ಮದ್ದೂರಿನಿಂದ ಮೈಸೂರಿಗೆ ಟೋಲ್ ದರ 120 ರೂಪಾಯಿ ಆಗಲಿದೆ. ಮಹತ್ವಾಕಾಂಕ್ಷೆಯ 10 ಪಥಗಳ ಎಕ್ಸ್‌ಪ್ರೆಸ್‌ವೇನಲ್ಲಿ ಒಟ್ಟು ಟೋಲ್ ಶುಲ್ಕವನ್ನು 255 ರೂಪಾಯಿ ಆಗಲಿದೆ. 118 ಕಿಲೋಮೀಟರ್ ಹೆದ್ದಾರಿ, ಕೇವಲ ಸಣ್ಣ ವಿಸ್ತರಣೆಗಳಲ್ಲಿ ಕೆಲಸಗಳು ಉಳಿದಿವೆ. ಮಾರ್ಚ್ 11 ರಂದು ಪ್ರಧಾನಿ ನರೇಂದ್ರ ಮೋದಿ ಅವರು ಎಕ್ಸ್‌ಪ್ರೆಸ್ ವೇಯನ್ನು ಉದ್ಘಾಟಿಸಲಿದ್ದು, ಮಾರ್ಚ್ 15 ರಿಂದ ಬೆಂಗಳೂರಿನಿಂದ ಮದ್ದೂರುವರೆಗೆ ಟೋಲ್ ಸಂಗ್ರಹ ಪ್ರಾರಂಭವಾಗಲಿದೆ.
ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಮಾರ್ಗಸೂಚಿಗಳ ಪ್ರಕಾರ ಪ್ರತಿ ಕಿ.ಮೀಗೆ 3 ರೂಪಾಯಿ ಟೋಲ್ ವಿಧಿಸಲಾಗುತ್ತದೆ. ಇದು ನೈಸ್ ರಸ್ತೆಯಲ್ಲಿ ಪ್ರತಿ ಕಿ.ಮೀ.ಗೆ 6 ರೂಪಾಯಿ ವಿಧಿಸಲಾಗುತ್ತದೆ. ಬೆಂಗಳೂರು - ಮೈಸೂರು ಹೆದ್ದಾರಿಯಲ್ಲಿ ಪ್ರತಿ ಕಿ.ಮೀ.ಗೆ 2.5 ರೂಪಾಯಿ ಶುಲ್ಕವಿದೆ ಎಂದಿದೆ.












Click it and Unblock the Notifications