Bengaluru-Mysuru Expressway: ಮತ್ತೆ ಟೋಲ್ ಹೆಚ್ಚಳದಿಂದ ಕಂಗಾಲಾದ ಪ್ರಯಾಣಿಕರು- ಅಂಕಿಅಂಶ, ಮಾಹಿತಿ
ಬೆಂಗಳೂರು, ಜೂನ್ 13: ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ವೇಯಲ್ಲಿ ಪ್ರಯಾಣಿಸುತ್ತಿರುವ ಸವಾರಿಗೆ ಮತ್ತೆ ಬರೆ ಬಿದ್ದಿದೆ. ತಮ್ಮ ಫಾಸ್ಟ್‌ಟ್ಯಾಗ್ ಖಾತೆಯಲ್ಲಿ ಈ ಹಿಂದೆ ಸಂಗ್ರಹಿಸಿದ್ದಕ್ಕಿಂತ ಹೆಚ್ಚು ಟೋಲ್ ಕಡಿತಗೊಂಡಿರುವುದನ್ನು ಕಂಡು ಅವರು ಕಂಗಾಲಾಗಿದ್ದಾರೆ.
ಕಾರುಗಳನ್ನು ಬಳಸುವ ಪ್ರಯಾಣಿಕರಿಂದ ಈ ಹಿಂದೆ ₹135 ಅನ್ನು ಸಂಗ್ರಹಿಸಿಲಾಗುತ್ತಿತ್ತು. ಇದರ ಬದಲಿಗೆ ₹165 ಅನ್ನು ಈಗ ಸಂಗ್ರಹಿಸಲಾಗುತ್ತಿದೆ. ಇದು ಏಕಮುಖ ಪ್ರಯಾಣಕ್ಕೆ ಕಡಿತಗೊಳಿಸಿರುವ ಟೋಲ್ ದರವಾಗಿದೆ. ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (ಎನ್‌ಎಚ್‌ಎಐ) ಟೋಲ್ ಅನ್ನು ಪರಿಷ್ಕರಿಸಿದ್ದು, ಜೂನ್ 1 ರಿಂದ ಶೇ 22 ರಷ್ಟು ಹೆಚ್ಚಿಸಿದೆ ಎಂದು ಮೂಲಗಳು ತಿಳಿಸಿವೆ.

ಕಾರುಗಳಿಗೆ ಎಕ್ಸ್‌ಪ್ರೆಸ್‌ವೇಯಲ್ಲಿ ಏಕಮುಖ ಪ್ರಯಾಣಕ್ಕೆ ₹135 ಇದ್ದ ಟೋಲ್ ಶುಲ್ಕ ₹165ಕ್ಕೆ ಏರಿಕೆಯಾಗಿದೆ. ಅದೇ ದಿನ ಹಿಂದಿರುಗುವ ಪ್ರಯಾಣಕ್ಕೆ ₹205 ರಿಂದ ₹250ಕ್ಕೆ ಏರಿಕೆಯಾಗಿದೆ.
ಅದೇ ರೀತಿ, ಲಘು ವಾಣಿಜ್ಯ ವಾಹನಗಳು ಮತ್ತು ಮಿನಿ ಬಸ್‌ಗಳು ಏಕಮುಖ ಪ್ರಯಾಣಕ್ಕೆ ₹ 220 ಬದಲಿಗೆ ₹ 270 ಮತ್ತು ಹಿಂದಿರುಗುವ ಪ್ರಯಾಣಕ್ಕೆ ₹ 405 (ಹಿಂದಿನ ₹ 330) ಪಾವತಿಸಬೇಕಾಗುತ್ತದೆ. ಬಸ್‌ಗಳು ಮತ್ತು ಟ್ರಕ್‌ಗಳು ₹ 565 ( ಏಕಮುಖ ) ₹850 ( ದ್ವಿಮುಖ ) ಪಾವತಿಸಬೇಕಾಗುತ್ತದೆ.

ಮೊದಲು, ದೇಶಾದ್ಯಂತ ಟೋಲ್ ಬೆಲೆಗಳ ವಾರ್ಷಿಕ ಪರಿಷ್ಕರಣೆ ಭಾಗವಾಗಿ, ಏಪ್ರಿಲ್ 1 ರಿಂದ ಪ್ರಾರಂಭವಾಗುವ ಟೋಲ್ ಶುಲ್ಕದಲ್ಲಿ ಹೆಚ್ಚಳವನ್ನು ಜಾರಿಗೊಳಿಸಲು ನಿರ್ಧರಿಸಲಾಗಿತ್ತು. ಆದರೆ ಸಾರ್ವಜನಿಕ ಆಕ್ರೋಶದ ನಂತರ, ಸಂಸ್ಥೆಯು ಇದನ್ನು ಹಿಂದಕ್ಕೆ ತೆಗೆದುಕೊಂಡಿತು.
ಜೂನ್ 2 ರಂದು ಬೆಂಗಳೂರಿನಿಂದ ಮೈಸೂರು ಕಡೆಗೆ ಪ್ರಯಾಣಿಸಿದಾಗ, ಸವಾರರ ಫಾಸ್ಟ್‌ಟ್ಯಾಗ್‌ಗೆ ₹165 ಶುಲ್ಕ ವಿಧಿಸಲಾಯಿತು. ಇದು ಹಿಂದಿನ ಶುಲ್ಕಕ್ಕಿಂತ ₹ 30 ಹೆಚ್ಚುವರಿ ಎಂದು ಶ್ರೀನಿವಾಸ್ ಕುಮಾರ್ ಎಂಬುವವರು 'ದಿ ಹಿಂದೂ' ಪತ್ರಿಕೆಗೆ ತಿಳಿಸಿದ್ದಾರೆ.
'ನಾನು ಎರಡು ದಿನಗಳ ಹಿಂದೆ ಸಂದೇಶವನ್ನು ಗಮನಿಸಿದ್ದೇನೆ ಮತ್ತು ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಟೋಲ್ ಅನ್ನು ಹೆಚ್ಚಿಸಿದೆ ಎಂದು ನನಗೆ ತಿಳಿಯಿತು. ಹೆಚ್ಚಿನ ಜನರು ಇದನ್ನು ಗಮನಿಸಲಿಲ್ಲ, "ಎಂದು ಅವರು ಹೇಳಿದರು.
ಸಾರ್ವಜನಿಕ ಮಾಹಿತಿಗಾಗಿ ಟೋಲ್ ಪ್ಲಾಜಾ ಬಳಿಯ ಹೆದ್ದಾರಿ ಟೋಲ್ ಪ್ಲಾಜಾ ಸೂಚನಾ ಫಲಕಗಳಲ್ಲಿ ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಶುಲ್ಕವನ್ನು ಸಹ ಹಾಕಿದೆ. ಮತ್ತೋರ್ವ ಪ್ರಯಾಣಿಕ ಪ್ರವೀಣ್ ರಾವ್, 'ಟೋಲ್ ಏಕೆ ಹೆಚ್ಚು ಎಂದು ನಾನು ಆಶ್ಚರ್ಯ ಪಡುತ್ತಿದ್ದೆ ಮತ್ತು ನಂತರವೇ ಅದು ಅರಿವಾಯಿತು. ಅಂತಹ ಬದಲಾವಣೆಗಳ ಬಗ್ಗೆ ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಸಾರ್ವಜನಿಕರಿಗೆ ತಿಳಿಸಬೇಕು ಎಂದು ಒತ್ತಾಯಿಸಿದ್ದಾರೆ.












Click it and Unblock the Notifications