ಬೆಂಗಳೂರು: ಅಪಾರ್ಟ್ ಮೆಂಟ್‌ನಿಂದ ಜಿಗಿದು ಮಾಡೆಲ್ ಆತ್ಮಹತ್ಯೆ
ಬೆಂಗಳೂರು, ಆಗಸ್ಟ್. 31: ಅಪಾರ್ಟ್ ಮೆಂಟ್ ವೊಂದರಿಂದ ಜಿಗಿದ ರೂಪದರ್ಶಿ ಸೋಮವಾರ ಬೆಳಗ್ಗೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಶೋಭಾ ಅಪಾರ್ಟ್ ಮೆಂಟ್ ನ 13 ನೇ ಅಂತಸ್ತಿನಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಮಾಡೆಲ್ ಇಶಾ ಹೊಂಡಾ(25) ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಹಳೇ ಏರ್ ಪೋರ್ಟ್ ರಸ್ತೆಯ ಖಾಸಗಿ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದ ಇಶಾ ಆತ್ಮಹತ್ಯೆಗೆ ಪ್ರೇಮ ವೈಫಲ್ಯ ಕಾರಣ ಎಂದು ಹೇಳಲಾಗಿದೆ. ಪೊಲೀಸರು ಸ್ಥಳಕ್ಕೆ ಭೇಟಿ ನೋಡಿ ಪರಿಶೀಲನೆ ನಡೆಸಿದ್ದಾರೆ. ಎಚ್. ಎಸ್ ಆರ್ ಲೇಔಟ್ ಪೊಲೀಸರು ಪ್ರಕರಣವನ್ನು ದಾಖಲು ಮಾಡಿಕೊಂಡಿದ್ದಾರೆ.[ಮಾಧ್ಯಮಗಳು ರೈತರಿಗೆ ಏಕವಚನ ನೀಡುವುದು ಯಾಕೆ?]

ಬಸ್ ಡಿಕ್ಕಿ
ನಾಗಸಂದ್ರ ಮೆಟ್ರೊ ನಿಲ್ದಾಣದ ಬಳಿ ಮಂಗಳೂರಿನಿಂದ ಆಗಮಿಸುತ್ತಿದ್ದ ಬಸ್ ಡಿಕ್ಕಿಯಾಗಿ ಯುವತಿಯನಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಪೀಣ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣದ ದಾಖಲಾಗಿದೆ.
ಚಾಮರಾಜನಗರ ಜೊಲ್ಲ ಕೋಳಿಪಾಳ್ಯದಲ್ಲಿ ಲಾರು ಮತ್ತು ಕಾರಿನ ನಡುವೆ ಅಪಘಾತ ಸಂಭವಿಸಿದ್ದು ದಂಪತಿ ಮೃತಪಟ್ಟಿದ್ದಾಎರೆ. ಕಾರಿನಲ್ಲಿದ್ದ ಹಾಸನ ಜಿಲ್ಲೆಯ ಜಾವಗಲ್ ಮೂಲದ ದಂಪತಿ ದಾರುಣ ಸಾವಿಗೀಡಾಗಿದ್ದು ಗಂಭೀರ ಗಾಯಗೊಂಡ ಇನ್ನಿಬ್ಬರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.












Click it and Unblock the Notifications