RV Road- Bommasandra Metro Line: 5ನೇ ರೈಲು ಸೆಟ್ ಆಗಮನದ ಅಪ್ಡೇಟ್, ಕಾಯವ ಸಮಯ ಇಳಿಕೆ

Bengaluru Namma Metro: ಬೆಂಗಳೂರು ಮೆಟ್ರೋ ಹಳದಿ ಮಾರ್ಗ ತೆರೆದು ಎರಡು ತಿಂಗಳು ಸಮೀಪಿಸುತ್ತಿದೆ. ಮೂರಿದ್ದ ರೈಲುಗಳ ಸಂಚಾರ ನಾಲ್ಕಕ್ಕೆ ಏರಿದ ಬೆನ್ನಲ್ಲೆ ಐದನೇ ರೈಲು ಬೆಂಗಳೂರಿಗೆ ಆಗಮಿಸಲು ದಿನಗಣನೆ ಶುರುವಾಗಿದೆ. ಹೊಸ ಡ್ರೈವರ್‌ಲೆಸ್ ರೈಲು ಬರುತ್ತಿದ್ದಂತೆ ಪರೀಕ್ಷೆಗಳು ಪೂರ್ಣಗೊಳಿಸಿ ಅಕ್ಟೋಬರ್ ತಿಂಗಳಲ್ಲಿ ಸೇವೆ ನಿಯೋಜನೆಗೊಳ್ಳಲಿದೆ. ಆಗ ಪ್ರಯಾಣಿಕರು ಮೆಟ್ರೋಗಾಗಿ ಕಾಯುವ ಸಮಯ 15 ನಿಮಿಷಕ್ಕೆ ಇಳಿಯಲಿದೆ.

ಕಳೆದ ಗುರುವಾರ ತಡರಾತ್ರಿ ಪಶ್ಚಿಮ ಬಂಗಾಳದ ಟಿಟಾಗಢ ರೈಲು ವ್ಯವಸ್ಥೆ ಲಿಮಿಟೆಡ್ (TRSL) ನಿಂದ ಆರು ಬೋಗಿಗಳ ಮತ್ತೊಂದು ಸೆಟ್ ರೈಲನ್ನು ಬೆಂಗಳೂರಿಗೆ ರವಾನಿಸಲಾಗಿದೆ. ಅಕ್ಟೋಬರ್ ತಿಂಗಳಿನಲ್ಲಿ ಈ ರೈಲು ಬರಲಿದೆ. ಅದೇ ತಿಂಗಳು ಆರ್‌.ವಿ.ರಸ್ತೆ-ಬೊಮ್ಮಸಂದ್ರ ಮಾರ್ಗದಲ್ಲಿ ಸೇವೆ ನಿಯೋಜನೆಗೊಳ್ಳುವ ನಿರೀಕ್ಷೆಗಳು ಇದೆ. ಇದು ಆದಲ್ಲಿ ಸದ್ಯ ರೈಲಿನ ಆವರ್ತನ 19 ನಿಮಿಗಳು ಇದ್ದು, ಅದನ್ನು 15-16 ನಿಮಿಷಗಳಿಗೆ ಇಳಿಯಲಿದೆ. ಮೂರು ರೈಲು ಇದ್ದಾಗ ಒಂದು ರೈಲಿನಿಂದ ಮತ್ತೊಂದು ರೈಲು ಪ್ಲಾಟ್‌ಫಾರ್ಮ್‌ಗೆ ಬರಲು 25ನಿಮಿಷ ಬೇಕಿತ್ತು.

Bengaluru Metro Yellow Line will Get 5th Driverless Train on October First Week Know more

ಲಾರಿ ಮೂಲಕ ರಸ್ತೆ ಮಾರ್ಗವಾಗಿ ಎಲ್ಲಾ ಆರು ಬೋಗಿಗಳು ಬೆಂಗಳೂರಿನ ಹೆಬ್ಬಗೋಡಿ ಡಿಪೋಗೆ ಬರಲಿವೆ. ಜಾಗತಿಕ ಸರಕು ಸಾಗಣೆ ಕಂಪನಿ ಟೋಟಲ್ ಮೂವ್‌ಮೆಂಟ್ಸ್‌ನಿಂದ ಸಾಗಿಸಲಾಗುತ್ತಿದೆ. ಅಕ್ಟೋಬರ ಮೊದಲ ವಾರ ಬೆಂಗಳೂರಿಗೆ ಬರಲಿವೆ ಎಂದು ಬೆಂಗಳೂರು ಮೆಟ್ರೋ ರೈಲು ನಿಗಮ (BMRCL) ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ರೈಲು ಸೆಟ್ ಬರುತ್ತಿದ್ದಂತೆ ಅವುಗಳನ್ನು ಜೋಡಿಸಿ ಟ್ರ್ಯಾಕ್‌ಗೆ ಇಳಿಸಲಾಗುತ್ತದೆ. ಅಲ್ಲಿಂದ ಸುಮಾರು ಒಂದು ವಾರಗಳ ಕಾಲ ವಿವಿಧ ಹಂತಗಳ ತಪಾಸಣೆ ನಡೆಸಲಾಗುತ್ತದೆ. ಬಳಿಕ ಅದನ್ನು ಸೇವೆಗೆ ನಿಯೋಜಿಸಲಾಗುತ್ತದೆ. ನಾಲ್ಕನೇ ರೈಲಿನಂತೆ ಈ ರೈಲನ್ನು ಭಾರತದಲ್ಲಿ ತಯಾರಿಸಲಾಗಿದೆ. ಅಕ್ಟೋಬರ್ ಎರಡು ಇಲ್ಲವೇ ಮೂರನೇ ವಾರ ಪ್ರಯಾಣಿಕರು ಇದರಲ್ಲಿ ಸಂಚರಿಸಬಹುದು.

ನಿತ್ಯ ಕನಿಷ್ಠ 70,000 ಪ್ರಯಾಣಿಕರ ಸಂಚಾರ

ಹಸಿರು ಮಾರ್ಗದ ಆರ್‌ವಿ ರಸ್ತೆ ನಿಲ್ದಾಣದಿಂದ ಸಿಲ್ಕ್ ಬೋರ್ಡ್ ಜಂಕ್ಷನ್ ಮಾರ್ಗವಾಗಿ ಒಟ್ಟು 19.15 ಕಿಮೀ ಕ್ರಮಿಸಿ ಕೊನೆಯ ನಿಲ್ದಾಣ ಬೊಮ್ಮಸಂದ್ರವರೆಗೆ ಹಳದಿ ಮಾರ್ಗದ ರೈಲುಗಳ ಸಂಚರಿಸುತ್ತವೆ. ಮೂರು ರೈಲುಗಳಿದ್ದಾಗ 25 ನಿಮಿಷಗಳ, ನಾಲ್ಕು ರೈಲುಗಳಾದ ಮೇಲೆ 19 ನಿಮಿಷಕ್ಕೆ ಒಂದರಂತೆ ಓಡಾಡುತ್ತವೆ. ಅಕ್ಟೋಬರ್ ತಿಂಗಳಿನಿಂದ ಪ್ರತಿ ತಿಂಗಳು ಎರಡು ರೈಲು ಸೆಟ್ ಕಳುಹಿಸುವುದಾಗಿ ಟಿಟಾಗಢ ತಿಳಿಸಿದೆ.ಶೀಘ್ರವೇ ರೈಲಿ ಆವರ್ತನ ಸಮಯ ತಗ್ಗಲಿದೆ. ನಿತ್ಯ ಈ ಮಾರ್ಗದಲ್ಲಿ ಕನಿಷ್ಠ 70 ಸಾವಿರ ಪ್ರಯಾಣಿಕರು ಸಂಚಾರ ಮಾಡುತ್ತಿದ್ದಾರೆ. ಮೂರು ಮಾರ್ಗಗಳಲ್ಲಿ ನಿತ್ಯ 9-10 ಲಕ್ಷ ಪ್ರಯಾಣಿಕರು ಸಂಚಾರ ಮಾಡುತ್ತಿದ್ದಾರೆ.

36 ರೈಲು ಸೆಟ್‌ ಒಪ್ಪಂದ, ಪೂರೈಕೆಗೆ ವೇಗ

ಟಿಆರ್‌ಎಸ್‌ಎಲ್ ಚೀನಾದ ಸಿಆರ್‌ಆರ್‌ಸಿ ನಾನ್‌ಜಿಂಗ್ ಪುಜೆನ್ ಕಂಪನಿ ಲಿಮಿಟೆಡ್‌ನೊಂದಿಗೆ ಉಪ-ಒಪ್ಪಂದದಡಿಯಲ್ಲಿ ರೈಲುಗಳನ್ನು ತಯಾರಿಸುತ್ತಿದೆ. ಇದು ನಮ್ಮ ಮೆಟ್ರೋಗೆ ಒಂದು ರೈಲಿಗೆ ಆರು ಬೋಗಿಗಳಂತೆ ಒಟ್ಟು 36 ರೈಲು ಸೆಟ್‌ಗಳನ್ನು ತಲುಪಿಸಲು ರೂ. 1,578 ಕೋಟಿ ಒಪ್ಪಂದಕ್ಕೆ ಸಹಿ ಹಾಕಿದೆ. ಕೊರೊನ ಕಾರಣದಿಂದ ತಡವಾಗಿದ್ದ ರೈಲು ಪೂರೈಕೆಗೆ ಇದೀಗ ವೇಗ ಸಿಕ್ಕಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+