ಬೆಂಗಳೂರು ನಮ್ಮ ಮೆಟ್ರೋ ಪ್ರಯಾಣಿಕರಿಗೆ ಗುಡ್‌ ನ್ಯೂಸ್‌!

ಬೆಂಗಳೂರು, ಆಗಸ್ಟ್‌ 9: ಬೆಂಗಳೂರು ಮೆಟ್ರೋ ಪ್ರಯಾಣಿಕರು ತಮ್ಮ ಮನೆಯಿಂದ ನಿಲ್ದಾಣಕ್ಕೆ ತೆರಳಲು 5 ಕಿಮೀ ವ್ಯಾಪ್ತಿಯೊಳಗೆ ಆಟೋ ಸೇವೆ ನೀಡಲು ಬೆಂಗಳೂರಿನಲ್ಲಿ ಮತ್ತೊಂದು ಆಟೋ ಆಪ್‌ ಸೇವೆ ಆರಂಭವಾಗಲಿದೆ.

ಮೆಟ್ರೋ ಮಿತ್ರ ಎಂಬ ಆಪ್‌ ಮೂಲಕ ಮೆಟ್ರೋ ನಿಲ್ದಾಣಗಳಿಗೆ ಮತ್ತು ಅಲ್ಲಿಂದ ಕಡಿಮೆ ದೂರ (5 ಕಿಮೀ ವ್ಯಾಪ್ತಿ) ಆಟೋ ಸವಾರಿಗಳನ್ನು ಒದಗಿಸುವ ಯೋಜನೆಯಾಗಿದೆ. ಈ ಸೇವೆ ಒದಗಿಸಲು ಮಹಿಳೆಯರಿಗೆ ತರಬೇತಿ ನೀಡುತ್ತಿದೆ ಎಂದು ಡಿಎಚ್‌ ವರದಿ ಮಾಡಿದೆ.

Bengaluru Metro Mitra app service for Namma Metro passengers

ಈ ಯೋಜನೆ ಹಿಂದಿರುವ ಆಟೋ ರಿಕ್ಷಾ ಚಾಲಕರ ಒಕ್ಕೂಟ (ARDU), 14 ದಿನಗಳ ತರಬೇತಿಗಾಗಿ 25 ಮಹಿಳೆಯರನ್ನು ಗುರುತಿಸಿದೆ. ಅವರಲ್ಲಿ ಕೆಲವರು ಮೊದಲು ಹಾಲು ಮತ್ತು ತರಕಾರಿಗಳನ್ನು ಮಾರಾಟ ಮಾಡುತ್ತಿದ್ದವರು. ಈ ತರಬೇತಿಯ ನಂತರ ಆಟೋ ರಿಕ್ಷಾ ಖರೀದಿಸಲು ಅವರ ಡ್ರೈವಿಂಗ್ ಲೈಸೆನ್ಸ್ ಮತ್ತು ಬ್ಯಾಂಕ್ ಸಾಲವನ್ನು ಪಡೆಯಲು ನಾವು ಅವರಿಗೆ ಸಹಾಯ ಮಾಡುತ್ತೇವೆ ಎಂದು ARDUನ ಪದಾಧಿಕಾರಿಯೊಬ್ಬರು ಹೇಳಿದ್ದಾರೆ.

ಸದ್ಯ ಜಯನಗರ ಮತ್ತು ಆರ್ ವಿ ರಸ್ತೆ ನಿಲ್ದಾಣಗಳಲ್ಲಿ ಮೆಟ್ರೋ ಮಿತ್ರ ಪ್ರಯೋಗಿಕ ಪರೀಕ್ಷೆ ನಡೆಯುತ್ತಿದೆ. ಇದು ಆಗಸ್ಟ್ ಅಂತ್ಯದ ಮೊದಲು ಅಲ್ಲಿಗೆ ಸಾರ್ವಜನಿಕ ಬಳಕೆಗೆ ಸಂಪೂರ್ಣ ಚಾಲು ಆಗಲಿದೆ. ಬೇಡಿಕೆಗೆ ಅನುಗುಣವಾಗಿ ಪ್ರತಿ ತಿಂಗಳು ಎರಡು ಹೆಚ್ಚಿನ ಸಾಂದ್ರತೆಯ ಮೆಟ್ರೋ ನಿಲ್ದಾಣಗಳನ್ನು ಆರಂಭಿಸಲಾಗುತ್ತಿದೆ. ಮಹಿಳಾ ಚಾಲಕರು ತಮ್ಮ ನಿವಾಸಕ್ಕೆ ಸಮೀಪವಿರುವ ನಾಗಸಂದ್ರ ನಿಲ್ದಾಣದಲ್ಲಿ ಕಾರ್ಯನಿರ್ವಹಿಸಲಿದ್ದಾರೆ ಎಂದು ಅವರು ಹೇಳಿದ್ದಾರೆ.

ಜಯನಗರ ಮತ್ತು ಆರ್‌ವಿ ರಸ್ತೆಯ ಮೆಟ್ರೋ ನಿಲ್ದಾಣಗಳಲ್ಲಿ ದಿನಕ್ಕೆ 5,000-6,000 ಪ್ರಯಾಣಿಕರು ಆಟೋ ಬಳಸುತ್ತಾರೆ. ಈ ಪ್ರದೇಶದ ಸುತ್ತಲೂ ಟೆಕ್ ಪಾರ್ಕ್‌ಗಳು, ಕಾಲೇಜುಗಳು, ಆಸ್ಪತ್ರೆಗಳು ಮತ್ತು ವಿಶ್ವವಿದ್ಯಾನಿಲಯಗಳಿವೆ. ಆದ್ದರಿಂದ ಈ ನಿಲ್ದಾಣಗಳನ್ನು ಪ್ರಯೋಗಿಕ ಪರೀಕ್ಷೆಗೆ ಆರಿಸಿಳ್ಳಲಾಗಿದೆ.

ಮೊದಲ ಮತ್ತು ಕೊನೆಯ ಮೈಲಿ ಸಂಪರ್ಕವು ಬೆಂಗಳೂರಿನಲ್ಲಿ ತ್ರಾಸದಾಯಕವಾಗಿದೆ. ಒಂದೆಡೆ, ಹೆಚ್ಚಿನ ಇಂಧನ ವೆಚ್ಚ ಮತ್ತು ಭಾರೀ ಟ್ರಾಫಿಕ್‌ನಿಂದಾಗಿ ಆಟೋ ಚಾಲಕರು ಸವಾರಿ ನಿರಾಕರಿಸುತ್ತಾರೆ. ಮತ್ತೊಂದೆಡೆ, ಅಪ್ಲಿಕೇಶನ್ ಆಧಾರಿತ ಕ್ಯಾಬ್‌ಗಳ ದರವು ವಿಪರೀತವಾಗಿದೆ. ಇಪ್ಪತ್ತು ಆಟೋರಿಕ್ಷಾ ಚಾಲಕರು ಯೋಜನೆಯ ಭಾಗವಾಗಿದ್ದಾರೆ. ಅವರು ಮೂರು ಗಂಟೆಗಳ ತರಬೇತಿ ಕಾರ್ಯಾಗಾರಕ್ಕೆ ಭಾಗವಹಿಸುತ್ತಾರೆ.

ಈ ಆಟೋಗಳು QR ಕೋಡ್ ಅನ್ನು ಸಹ ಪ್ರದರ್ಶಿಸುತ್ತವೆ. ಚಾಲಕರ ವಿವರಗಳನ್ನು ಪಡೆಯಲು ಜನರು ಸ್ಕ್ಯಾನ್ ಮಾಡಬಹುದು. ಸಾರಿಗೆ ಸಂಬಂಧಿತ ಸಂಸ್ಥೆಗಳಾದ ಆದರ್ಶ ಆಟೋ ಮತ್ತು ಟ್ಯಾಕ್ಸಿ ಡ್ರೈವರ್ಸ್ ಯೂನಿಯನ್ ಈ ಯೋಜನೆಯನ್ನು ಬೆಂಬಲಿಸುತ್ತಿವೆ. ARDU ಸುಮಾರು 5,000 ಸದಸ್ಯರನ್ನು ಹೊಂದಿದೆ. ಇದು ಯಶಸ್ವಿ ನಮ್ಮ ಯಾತ್ರಿ ಅಪ್ಲಿಕೇಶನ್‌ನ ಹಿಂದಿನ ಒಕ್ಕೂಟವಾಗಿದೆ ಎಂದು ತಿಳಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+