BREAKING: ಅನಿಯಮಿತ ಸಂಚಾರದ ಪಾಸ್ ವ್ಯವಸ್ಥೆ ಪರಿಚಯಿಸಿದ ನಮ್ಮ ಮೆಟ್ರೋ, ಪ್ರಯಾಣಿಕರೇ ಗಮನಿಸಿ
ಬೆಂಗಳೂರು: ಮಕರ ಸಂಕ್ರಾಂತಿ ಹಬ್ಬದ ಹೊತ್ತಿನಲ್ಲಿ ಬೆಂಗಳೂರು ಮೆಟ್ರೋ ರೈಲು ಪ್ರಯಾಣಿಕರಿಗೆ ಗುಡ್ ನ್ಯೂಸ್ ನೀಡಿದೆ. ಒತ್ತಾಯ, ಮನವಿ ಬಳಿಕ ಬೆಂಗಳೂರು ಮೆಟ್ರೋ ರೈಲು ನಿಗಮ (BMRCL) ಕ್ಯೂಆರ್ ಕೋಡ್ ಆಧಾರಿತ (QR) ಮೆಟ್ರೋ ಅನಿಯಮಿತ ಸಂಚಾರದ ಪಾಸ್‌ಗಳನ್ನು ವಿತರಣೆ ವ್ಯವಸ್ಥೆ ಪರಿಚಯಿಸುತ್ತಿದೆ. ಪ್ರಯಾಣಿಕರು ಜನವರಿ 15ರಿಂದ ಪಾಸ್ ಪಡೆಯಬಹುದಾಗಿದೆ. ಮೆಟ್ರೋ ಪಾಸ್‌ಗಳನ್ನು ಪಡೆಯುವುದು ಹೇಗೆ, ಠೇವಣಿ ಇಡಬೇಕೆ? ಪಾಸ್ ಅವಧಿ, ಎಷ್ಟು ಹಣ? ಎಂಬ ಮಾಹಿತಿ ಮುಂದಿದೆ.
ಬೆಂಗಳೂರು ನಮ್ಮ ಮೆಟ್ರೋ ಮೊಬೈಲ್ ಕ್ಯೂಆರ್ (QR) ಆಧಾರಿತ 1 ದಿನ, 3 ದಿನ ಮತ್ತು 5 ದಿನಗಳ ಅನಿಯಮಿತ ಪ್ರಯಾಣ ಪಾಸ್‌ಗಳನ್ನು ಪರಿಚಯಿಸಿದೆ. ಜನವರಿ 15ರಿಂದ ಪ್ರಯಾಣಿಕರಿಗೆ ಖರೀದಿಸಬಹುದಾಗಿದೆ. ಪ್ರಯಾಣಿಕರ ಸೌಕರ್ಯವನ್ನು ಹೆಚ್ಚಿಸುವ ಹಾಗೂ ಡಿಜಿಟಲ್ ಟಿಕೆಟ್ ವ್ಯವಸ್ಥೆಯನ್ನು ಉತ್ತೇಜಿಸುವ ಉದ್ದೇಶದಿಂದ ಪಾಸ್ ವಿತರಿಸಲಾಗುತ್ತಿದೆ.

ಭದ್ರತಾ ಠೇವಣಿ ಪಾವತಿ ಅನಗತ್ಯ
ಇದುವರೆಗೆ ಅನಿಯಮಿತ ಪ್ರಯಾಣ ಪಾಸ್‌ಗಳು, ಕೇವಲ ಕಾಂಟ್ಯಾಕ್ಸ್ ಲೆಸ್ ಸ್ಮಾರ್ಟ್ ಕಾರ್ಡ್‌ಗಳ (CSC) ಮೂಲಕವೇ ಲಭ್ಯವಾಗುತ್ತಿದ್ದವು. ಅದಕ್ಕೆ 50 ರೂಪಾಯಿ ಭದ್ರತಾ ಠೇವಣಿ ಪಾವತಿಸುವುದು ಕಡ್ಡಾಯವಾಗಿತ್ತು. ಇದೀಗ ಮೊಬೈಲ್ QR ಪಾಸ್‌ಗಳ ಪರಿಚಯದೊಂದಿಗೆ, ಕ್ಯೂಆರ್ ಆಧಾರಿತ ಪಾಸ್‌ಗಳು ಮೊಬೈಲ್ ಫೋನ್ ಗಳಲ್ಲಿ ಡಿಜಿಟಲ್ ರೂಪದಲ್ಲಿ ಲಭ್ಯವಾಗುವುದರಿಂದ ಪ್ರಯಾಣಿಕರಿಗೆ ಯಾವುದೇ ಭದ್ರತಾ ಠೇವಣಿ ಪಾವತಿಸುವ ಅಗತ್ಯವಿರುವುದಿಲ್ಲ.
ಕ್ಯೂಆರ್ ಪಾಸ್‌ಗಳ ವೈಶಿಷ್ಟ್ಯಗಳು, ಪಡೆಯುವುದು ಹೇಗೆ?
* ಭದ್ರತಾ ಠೇವಣಿ ಅಗತ್ಯವಿಲ್ಲ: ಸ್ಮಾರ್ಟ್ ಕಾರ್ಡ್‌ಗಳಿಗೆ ಅಗತ್ಯವಿದ್ದ 50 ರೂಪಾಯಿ ಠೇವಣಿ ಡಿಜಿಟಲ್ ಕ್ಯೂಆರ್ ಕೋಡ್ ಆಧಾರಿತ
ಪಾಸ್‌ಗಳಿಗೆ ಇರುವುದಿಲ್ಲ.
* ಸರಳ ಖರೀದಿ ವ್ಯವಸ್ಥೆ: ಪಾಸ್‌ಗಳನ್ನು ನಮ್ಮ ಮೆಟ್ರೋ ಅಧಿಕೃತ ಆಪ್ ಮೂಲಕ ಖರೀದಿಸಬಹುದು. ಇತರ ಮೊಬೈಲ್ ಅಪ್ಲಿಕೇಶನ್‌ಗಳಲ್ಲಿ ಶೀಘ್ರದಲ್ಲೇ ಪರಿಚಯಿಸಲಾಗುವುದು.
* ಸ್ಪರ್ಶರಹಿತ ಪ್ರವೇಶ ಮತ್ತು ನಿರ್ಗಮನ: ಪ್ರಯಾಣಿಕರು ತಮ್ಮ ಮೊಬೈಲ್‌ನಲ್ಲಿ ಪ್ರದರ್ಶಿಸಲಾದ QR ಕೋಡ್ ಅನ್ನು ಸ್ವಯಂಚಾಲಿತ ಸಂಗ್ರಹ (AFC) ಗೇಟ್‌ಗಳಲ್ಲಿ ಸ್ಕ್ಯಾನ್ ಮಾಡಿ ಪ್ರವೇಶ ಮತ್ತು ನಿರ್ಗಮನ ಪಡೆಯಬಹುದು.
ಮೆಟ್ರೋ ಪಾಸ್ ದರ ಎಷ್ಟಿದೆ?
1 ದಿನದ ಪಾಸ್: ಒಂದು ದಿನದ ಪಾಸ್ ಪಡೆಯಲು ಸ್ಟಾರ್ಟ್ ಕಾರ್ಡ್ ದರ 50 ರೂ. ಠೇವಣಿ ಸಹಿತ 300 ರೂಪಾಯಿ ಪಾವತಿಸಬೇಕು. ಮೊಬೈಲ್ ಕ್ಯೂಆರ್ ಕೋಡ್ ಪಾಸ್ ದರವು 250 ರೂಪಾಯಿ ನಿಗದಿಪಡಿಸಲಾಗಿದೆ. ಈ ಪಾಸ್ ಪಡೆದವರು ಒಂದು ದಿನ ಎಷ್ಟಾದರೂ ಸಲ ಮೆಟ್ರೋದಲ್ಲಿ ಸಂಚಾರ ಮಾಡಬಹುದಾಗಿದೆ.
2 ದಿನದ ಪಾಸ್: ಎರಡು ದಿನದ ಪಾಸ್‌ಗೆ (ಸ್ಟಾರ್ಟ್ ಕಾರ್ಡ್ ದರ 50 ರೂ. ಠೇವಣಿ ಸಹಿತ) 600 ರೂಪಾಯಿ ನೀಡಬೇಕಿದೆ. ಮೊಬೈಲ್ ಕ್ಯೂಆರ್ ದರ 550 ರೂಪಾಯಿ ಪಾವಿಸಬೇಕು. ಈ ಪಾಸ್‌ನಿಂದ ನೀವು ಮೂರು ದಿನಗಳ ವರೆಗೆ ಅನಿಯಮಿತವಾಗಿ ಸಂಚಾರ ಮಾಡಬಹುದಾಗಿದೆ.
5 ದಿನದ ಪಾಸ್: ಐದು ದಿನದ ಪಾಸ್‌ಗೆ (ಸ್ಟಾರ್ಟ್ ಕಾರ್ಡ್ ದರ 50 ರೂ. ಠೇವಣಿ ಸಹಿತ) 900 ರೂಪಾಯಿ ಇದ್ದು, ಕೇವಲ ಮೊಬೈಲ್ ಕ್ಯೂಆರ್ ಮೂಲಕ 850 ರೂಪಾಯಿ ಪಾವತಿಸಿ ಪಾಸ್ ಪಡೆದರೆ ನೀವು 5 ದಿನಗಳವರೆಗೆ ಎಷ್ಟಾದರೂ ಸಲ ಮೆಟ್ರೋದಲ್ಲಿ ಪ್ರಯಾಣ ಮಾಡಬಹುದಾಗಿದೆ ಎಂದು BMRCL ಮಾಹಿತಿ ನೀಡಿದೆ.
ಬಿಎಂಆರ್‌ಸಿಎಲ್, ಪ್ರಯಾಣಿಕರ ಕಾರ್ಡ್ ವಿತರಣೆ ಮತ್ತು ಮರುಪಾವತಿಗಾಗಿ ಸರತಿ ಸಾಲುಗಳನ್ನು ತಪ್ಪಿಸಬಹುದು. ಸಮಯವನ್ನು ಉಳಿಸಲು ಮತ್ತು ತಡೆರಹಿತ ಪ್ರಯಾಣದ ಅನುಭವವನ್ನು ಇದು ಹೆಚ್ಚಿಸಲಿದೆ. ಮೊಬೈಲ್ ಕ್ಯೂಆರ್ ಆಧಾರಿತ ಪಾಸ್‌ಗಳಿಗೆ ಬದಲಾಯಿಸಲು ಪ್ರೋತ್ಸಾಹಿಸುತ್ತದೆ. ಈ ಉಪಕ್ರಮವು ಪೂರ್ಣ ಡಿಜಿಟಲ್ ಮತ್ತು ಪ್ರಯಾಣಿಕ ಸ್ನೇಹಿ ಮೆಟ್ರೋ ವ್ಯವಸ್ಥೆ ರೂಪಿಸುವ ಬಿಎಂಆರ್‌ಸಿಎಲ್‌ನ ಮತ್ತೊಂದು ಮಹತ್ವದ ಹೆಜ್ಜೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.












Click it and Unblock the Notifications