Bengaluru Metro: ಒಂದೇ ತಿಂಗಳಲ್ಲಿ 2 ದಾಖಲೆ ಬರೆದ ನಮ್ಮ ಮೆಟ್ರೋ, ಏನದು?
ಬೆಂಗಳೂರು, ಜನವರಿ 26: ರಾಜಧಾನಿ ಬೆಂಗಳೂರಿನಲ್ಲಿ ನಮ್ಮ ಮೆಟ್ರೋ ಮೇಲೆ ಅವಲಂಬನೆ ಆಗುವ ಪ್ರಯಾಣಿಕರ ಸಂಖ್ಯೆ ಹೆಚ್ಚಾಗುತ್ತಿದೆ. ವಾಹನ ಸಂಚಾರ ದಟ್ಟಣೆ ಹೆಚ್ಚುತ್ತಿರುವ ಕಾರಣ ನಗರದ ವಿವಿಧೆ ಹೊಸ ಮೆಟ್ರೋ ನಿರ್ಮಾಣಗೊಳ್ಳುತ್ತಿವೆ. ಹಾಲಿ ಮಾರ್ಗಗಳಲ್ಲಿ ದೈನಂದಿನ ಪ್ರಯಾಣಿಕರ ಸಂಖ್ಯೆ 09 ಲಕ್ಷ ದಾಟಿದೆ. ಆದರೆ ವಿಸ್ತರಣೆಗೊಂಡ ಮಾರ್ಗದ ಈ ಮೆಟ್ರೋ ನಿಲ್ದಾಣದಲ್ಲಿ ಕಳೆದ ತಿಂಗಳಲ್ಲಿ ಅತೀ ಕಡಿಮೆ ಪ್ರಯಾಣಿಕರು ಸಂಚರಿಸಿದ್ದಾರೆ.
ಹೌದು, ನಮ್ಮ ಮೆಟ್ರೋ ಮಾದಾವರ ಮತ್ತು ರೇಷ್ಮೆ ಸಂಸ್ಥೆವರೆಗೆ ಹಸಿರು ಮಾರ್ಗದ ಒಂದು ನಿಲ್ದಾಣದಲ್ಲಿ ಇಡೀ ಒಂದು ಕೇವಲ ಒಂದೂವರೆ ಸಾವಿರದಷ್ಟು ಮಂದಿ ಮಾತ್ರವೇ ಓಡಾಡಿದ್ದಾರೆ. ಈ ಕುರಿತು 'ಬೆಂಗಳೂರು ಮೆಟ್ರೋ ಅಪ್ಡೇಟ್ಸ್' (@WF_Watcher) ಮಾಹಿತಿ ಹಂಚಿಕೊಂಡಿದೆ. ವಿಶೇಷವೆಂದರೆ ಇದೇ ಡಿಸೆಂಬರ್‌ನಲ್ಲಿ ಇದುವರೆಗಿನ ದಾಖಲೆಯ ಪ್ರಯಾಣಿಕರು ಕೇವಲ ಒಂದು ದಿನದಲ್ಲಿ ಸಂಚರಿಸಿದ್ದಾರೆ. ಡಿಸೆಂಬರ್‌ನಲ್ಲಿ ಮೆಟ್ರೋ ಎರಡೆರಡು ದಾಖಲೆಗೆ ಸಾಕ್ಷಿಯಾಗಿದೆ.

ಈ ಹಸಿರು ಮಾರ್ಗವು ಮೊದಲು ರೇಷ್ಮೆ ಸಂಸ್ಥೆಯಿಂದ ನಾಗಸಂದ್ರವರೆಗೆ ಇತ್ತು. ನಂತರ ಅದನ್ನು ಮೂರು ನಿಲ್ದಾಣಗಳ ಜೊತೆಗೆ ಮುಂದಿನ ಮಾದಾವರ ವರೆಗೆ ವಿಸ್ತರಣೆ ಮಾಡಲಾಯಿತು. ಈ ವಿಸ್ತರಣೆಯ ಹಸಿರು ಮಾರ್ಗದ ಮಂಜುನಾಥ ನಗರ ಮೆಟ್ರೋ ನಿಲ್ದಾಣದಲ್ಲಿ ಡಿಸೆಂಬರ್ 2024ರಲ್ಲಿ ಕೇವಲ 1494 ಮಂದಿ ಮಾತ್ರವೇ ಪ್ರಯಾಣಿಸಿದ್ದಾರೆ ಎಂದು ಪೋಸ್ಟ್‌ನಲ್ಲಿ ತಿಳಿಸಲಾಗಿದೆ.
ಬೆಂಗಳೂರು ಮೆಟ್ರೋ ರೈಲು ನಿಲ್ದಾಣ (BMRCL) ಬೆಂಗಳೂರಿನಲ್ಲಿ ಸದ್ಯ 76 ಕಿಲೋ ಮೀಟರ್ ಜಾಲದಲ್ಲಿ ಪ್ರಯಾಣಿಕರಿಗೆ ರೈಲು ಸೇವೆ ನೀಡುತ್ತಿದೆ. ಒಟ್ಟು 68 ಮೆಟ್ರೋ ನಿಲ್ದಾಣಗಳಿವೆ. ಈ ಪೈಕಿ ಈ ಹಸಿರು ನಿಲ್ದಾಣಕ್ಕೆ ರೈಲು ಹತ್ತಲು ಅತೀ ಕಡಿಮೆ ಪ್ರಯಾಣಿಕರು ಪ್ರವೇಶಿಸಿದ್ದಾರೆ. ಇದು ಡಿಸೆಂಬರ್‌ನಲ್ಲಿ ಅತೀ ಕಡಿಮೆ ಪ್ರಯಾಣಿಕರ ಪ್ರವೇಶ ಕಂಡ ನಿಲ್ದಾಣವಾಗಿದೆ. ದೈನಂದಿನ ಪ್ರಯಾಣಿಕ ಸಂಖ್ಯೆಯಲ್ಲಿ ಈ ಮಟ್ಟಿಗೆ ಕಡಿಮೆ ಆಗಿರುವುದು ಇದೇ ಮೊದಲು ಎನ್ನಲಾಗುತ್ತಿದೆ.
ಅತೀ ಕಡಿಮೆ 1494 ಮಂದಿ ಸಂಚಾರ
ಡಿಸೆಂಬರ್‌ನಲ್ಲಿ ಅತಿ ಕಡಿಮೆ ಸರಾಸರಿ ಪ್ರಯಾಣಿಕರನ್ನು ಹೊಂದಿರುವ ನಿಲ್ದಾಣವೆಂದರೆ ಹಸಿರು ಮಾರ್ಗದಲ್ಲಿರುವ "ಮಂಜುನಾಥನಗರ" ಕೇವಲ 1494 ಮಂದಿ ಮಾತ್ರ. ಹೆಚ್ಚು ಬೇಡಿಕೆ ಇರುವ ಸಾರಿಗೆಯಾದ ನಮ್ಮ ಮೆಟ್ರೋದ ಒಂದು ನಿಲ್ದಾಣದಿಂದ ತಿಂಗಳಿಗೆ ಇಷ್ಟು ಕಡಿಮೆ ಮಂದಿಯ ಸಂಚರಿಸಿದ್ದಾರೆ ಎಂದರೆ ನಂಬಲು ಆಶ್ಚರ್ಯವೆನಿಸುತ್ತದೆ ಎಂದು ಪೋಸ್ಟ್‌ನಲ್ಲಿ ಬರೆದುಕೊಳ್ಳಲಾಗಿದೆ.

ಒಂದೇ ದಿನ 9.20 ಲಕ್ಷ ಜನ ಸಂಚಾರ
ವೈಟ್‌ಪಿಲ್ಡ್‌ಗೆ ನೇರಳೆ ಮಾರ್ಗ ತೆರೆದುಕೊಳ್ಳುತ್ತಿದ್ದಂತೆ ಪ್ರಯಾಣಿಕ ದಟ್ಟಣೆ ಹೆಚ್ಚಾಗುತ್ತಾ ಹೋಯಿತು. ಇದೀಗ ಹಳದಿ ಮಾರ್ಗ ಯಾವಾಗ ತೆರೆಯಲಾಗುತ್ತದೋ ಎಂದು ಜನ ಕಾಯುತ್ತಿದ್ದಾರೆ. ಈ ಮಧ್ಯೆ ಕಳೆದ ತಿಂಗಳು ಡಿಸೆಂಬರ್ 06ರಂದು ಒಂದೇ ದಿನ ಒಟ್ಟಾರೆ ಮೆಟ್ರೋದಲ್ಲಿ 9.20 ಲಕ್ಷ ಜನರು ಓಡಾಡಿದ್ದಾರೆ. ಇದು ಈವರೆಗಿನ ಸಾರ್ವಕಾಲಿಕ ದಾಖಲೆ ಆಗಿದೆ. ಮತ್ತೊಂದೆಡೆ ಅತೀ ಕಡಿಮೆ ಜನರ ಓಡಾಟದಲ್ಲೂ ಮೆಟ್ರೋ ನಿಲ್ದಾಣ ದಾಖಲೆ ಬರೆದಿದೆ.
ಈ ಮೂಲಕ ಡಿಸೆಂಬರ್ ತಿಂಗಳಲ್ಲಿಯೇ ನಮ್ಮ ಮೆಟ್ರೋ ಎರಡೆರಡು ವಿಚಾರಗಳಿಗೆ ಸಾಕ್ಷಿಯಾದಂತಾಗಿದೆ.












Click it and Unblock the Notifications