Namma Metro: ನಾಗಸಂದ್ರ-ಮಾದಾವರ ನಡುವೆ ಹಸಿರು ಮಾರ್ಗ ಕಾರ್ಯಾಚರಣೆ ಶುರು; ಟಿಕೆಟ್ ದರ ಎಷ್ಟು?

ಅಂತೂ ಇಂತೂ ನಮ್ಮ ಮೆಟ್ರೋದ ವಿಸ್ತೃತ ಹಸಿರು ಮಾರ್ಗದಲ್ಲಿ ವಾಣಿಜ್ಯ ಕಾರ್ಯಾಚರಣೆಗೆ ಮುಹೂರ್ತ ನಿಗದಿಯಾಗಿದೆ. ಗುರುವಾರ (ನವೆಂಬರ್ 7) ನಾಗಸಂದ್ರ - ಮಾದಾವರ ನಿಲ್ದಾಣಗಳ ನಡುವಿನ 3.14 ಕಿ.ಮೀ ಉದ್ದದ ಮಾರ್ಗದಲ್ಲಿ ರೈಲು ಸಂಚಾರ ಆರಂಭವಾಗಲಿದ್ದು, ಈ ಭಾಗದ ಪ್ರಯಾಣಿಕರ ಬಹುದಿನಗಳ ಕನಸೊಂದು ನನಸಾಗಿದೆ.

ನವೆಂಬರ್ 7ರಂದು ಬೆಳಗ್ಗೆ 5 ಗಂಟೆಯಿಂದಲೇ ಮಾದಾವರ ನಿಲ್ದಾಣದಿಂದ ಮೊದಲ ಮೆಟ್ರೋ ರೈಲು ಹೊರಡಲಿದೆ. ರಾತ್ರಿ 11 ಗಂಟೆಗೆ ಇಲ್ಲಿಂದ ಕೊನೆಯ ರೈಲು ಹೊರಡಲಿದೆ. ನಾಗಸಂದ್ರ ಮಾದಾವರ ನಡುವೆ ಪ್ರತಿ 10 ನಿಮಿಷಕ್ಕೆ ಒಂದರಂತೆ ರೈಲು ಸಂಚಾರ ಇರುತ್ತದೆ ಎಂದು ಬಿಎಂಆರ್ ಸಿಎಲ್ ಮಾಹಿತಿ ನೀಡಿದೆ. ಉಳಿದಂತೆ ನಾಗಸಂದ್ರ- ರೇಷ್ಮೆ ಸಂಸ್ಥೆ ನಡುವಿನ ಮಾರ್ಗದಲ್ಲಿ ಎಂದಿನಂತೆ ರೈಲುಗಳು ಕಾರ್ಯಾಚರಣೆ ನಡೆಸಲಿವೆ, ಸಮಯದಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ ಎಂದು ತಿಳಿಸಿದೆ. ಮೆಟ್ರೋ ಪ್ರಯಾಣ ದರ ಕನಿಷ್ಠ 10 ರೂಪಾಯಿಗಳಾಗಿದ್ದು, ಗರಿಷ್ಠ 60 ರೂಪಾಯಿಗಳಾಗಿದೆ.

Bengaluru Metro Green Line Extension Opening on Nov 7 ticket price

ಡಿಸಿಎಂ ಡಿಕೆ ಶಿವಕುಮಾರ್ ಪರಿಶೀಲನೆ

ಬುಧವಾರ ಡಿಸಿಎಂ ಡಿಕೆ ಶಿವಕುಮಾರ್ ಹಸಿರು ಮಾರ್ಗದಲ್ಲಿ ಯಶವಂತಪುರದಿಂದ ಮಾದಾವರದವರೆಗೆ ಮೆಟ್ರೋ ರೈಲಿನಲ್ಲಿ ಪ್ರಯಾಣ ಮಾಡಿದರು. ಡಿಸಿಎಂ ಡಿಕೆ ಶಿವಕುಮಾರ್ ಅವರಿಗೆ ಸಂಸದ ತೇಜಸ್ವಿ ಸೂರ್ಯ ಕೂಡ ಜೊತೆಯಾದರು. ಸಾರ್ವಜನಿಕರಿಗೆ ಅನುಲಕೂಲವಾಗಲಿ ಎನ್ನುವ ದೃಷ್ಟಿಯಿಂದ ನಾಳೆಯಿಂದಲೇ (ಗುರುವಾರ) ಸಾರ್ವಜನಿಕ ಕಾರ್ಯಾಚರಣೆಗೆ ತೆರೆಯಲಾಗುತ್ತದೆ. ಮುಂದಿನ ದಿನಗಳಲ್ಲಿ ಔಪಚಾರಿಕ ಉದ್ಘಾಟನೆ ಮಾಡಲಾಗುವುದು ಎಂದು ಹೇಳಿದ್ದಾರೆ.

7 ವರ್ಷಗಳ ಕಾಮಗಾರಿ

2017ರ ಏಪ್ರಿಲ್‌ನಲ್ಲಿ ನಾಗಸಂದ್ರ-ಮಾದಾವರ ನಡುವಿನ 3.14 ಕಿ.ಮೀ ಮೆಟ್ರೋ ಮಾರ್ಗ ನಿರ್ಮಾಣ ಕಾಮಗಾರಿಗೆ ಚಾಲನೆ ನೀಡಲಾಗಿತ್ತು. ಭೂಸ್ವಾಧೀನ ಪ್ರಕ್ರಿಯೆಯಲ್ಲಿ ತೊಡಕು ಉಂಟಾದ ಕಾರಣ ಕಾಮಗಾರಿ ಮುಗಿಯಲು ಸಾಕಷ್ಟು ವಿಳಂಬವಾಯಿತು. ಬರೋಬ್ಬರಿ 7 ವರ್ಷಗಳು ಕಾಮಗಾರಿ ನಡೆದ ಬಳಿಕ ಅಂತಿಮವಾಗಿ ರೈಲು ಸಂಚಾರಕ್ಕೆ ಸಜ್ಜಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+