ಟೆಂಡರ್ ಶ್ಯೂರ್ ರಸ್ತೆ ಅವಸ್ಥೆ ಕಂಡು ಮೇಯರ್ ಗರಂ, 11 ಲಕ್ಷ ದಂಡ

ಬೆಂಗಳೂರು, ಜುಲೈ 25: ನಿನ್ನೆ ನಗರದಲ್ಲಿ ರಾತ್ರಿ ಸಂಚಾರ ನಡೆಸಿ ಅಭಿವೃದ್ಧಿ ಕಾರ್ಯಗಳ ಪರಿಶೀಲನೆ ನಡೆಸಿದ ಮೇಯರ್ ಸಂಪತ್‌ರಾಜ್ ಅವರು ಟೆಂಡರ್ ಶ್ಯೂರ್ ರಸ್ತೆಯ ಅವಸ್ಥೆ ಕಂಡು ಅವಾಕ್ಕಾದರು.

ಆಡಳಿತ ಪಕ್ಷದ ನಾಯಕ ಶೀವರಾಜ್ ಜೊತೆಗೆ ಬಿಬಿಎಂಪಿ ಪೂರ್ವ ವಲಯದ ವಿವಿಧ ಪ್ರದೇಶಗಳಿಗೆ ಭೇಟಿ ನೀಡಿದ ಸಂಪತ್‌ರಾಜ್ ಅವರು, ಟೆಂಡರ್ ಶ್ಯೂರ್ ರಸ್ತೆಗಳ ಪರಿಶೀಲನೆ ಮಾಡಿ ಅವುಗಳ ದುರವಸ್ಥೆಗೆ ಇಂದು ಕ್ರಮ ಕೈಗೊಂಡರು.

ಕ್ಯಾಷ್ ಫಾರ್ಮಸಿ ಬಳಿಯ ಟೆಂಡರ್ ಶ್ಯೂರ್ ರಸ್ತೆ ಕಿತ್ತು ಹೋಗಿತ್ತು ಅಲ್ಲದೆ, ಮಳೆ ನೀರು ಹರಿದುಹೋಗಲು ಸಹ ವ್ಯವಸ್ಥೆ ಇರಲಿಲ್ಲ ಇದರಿಂದ ಸಿಟ್ಟಾದ ಮೇಯರ್ ಅವರು, ಅವರಿಗೆ 10 ಲಕ್ಷ ದಂಡ ವಿಧಿಸಿದರು.

Bengaluru mayor Sampat Raj fine contractors for making bad roads

ಬೆಂಗಳೂರು ಕ್ಲಬ್ ಸಮೀಪದ ಟೆಂಡರ್ ಶ್ಯೂರ್ ರಸ್ತೆಯನ್ನು ಸರಿಯಾಗಿ ನಿರ್ಮಿಸಿಲ್ಲವೆಂದು ಗಮನಿಸಿದ್ದ ಮೇಯರ್ ಅವರು ಆ ಗುತ್ತಿಗೆದಾರರನಿಗೆ 1 ಲಕ್ಷ ದಂಡ ವಿಧಿಸಿದರು.

Bengaluru mayor Sampat Raj fine contractors for making bad roads

ಮೇಯರ್ ಸಂಪತ್‌ ರಾಜ್ ಅವರು ನಿನ್ನೆ ರಾತ್ರಿ ರೆಸಿಡೆನ್ಸಿ ರಸ್ತೆ, ಮ್ಯೂಜಿಯಂ ರೋಡ್ ಮತ್ತಿತರ ಪ್ರದೇಶಗಳಲ್ಲಿ ನಿರ್ಮಿಸಿರುವ ಟೆಂಡರ್ ಶ್ಯೂರ್ ರಸ್ತೆ ಕಾಮಗಾರಿಗಳನ್ನು ಪರಿಶೀಲನೆ ನಡೆಸಿದರು. ಪರಿಶೀಲನೆ ಸಂದರ್ಭದಲ್ಲಿ ರಸ್ತೆ ಬದಿ ಬಿದ್ದಿದ್ದ ರಾಶಿ ರಾಶಿ ಕಸವನ್ನು ಕೂಡಲೇ ತೆರವುಗೊಳಿಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಮೇಯರ್ ಅವರು ಸೂಚಿಸಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+