Cyclone MONTHA: ಸೈಕ್ಲೋನ್ ಪ್ರಭಾವ, ಬೆಂಗಳೂರು ರೈಲುಗಳ ಸಂಚಾರ 12 ಗಂಟೆ ವಿಳಂಬ, ವೇಳಾಪಟ್ಟಿ

Cyclone MONTHA Affected Train Services: ದಕ್ಷಿಣ ಭಾರತದ ಭಾಗದಲ್ಲಿ ಮೋಂಥಾ ಚಂಡಮಾರುತದ ಪ್ರಭಾವ ಹೆಚ್ಚಾಗಿದೆ. ಇದರಿಂದ ವಿವಿಧ ರಾಜ್ಯಗಳಲ್ಲಿ ಮಳೆ ಅಬ್ಬರ ಹೆಚ್ಚಾಗಿದೆ. ಗಾಳಿಯ ವೇಗದಲ್ಲಿ ಭಾರೀ ಬದಲಾವಣೆ ಆಗಿದೆ. ಈ ಸೈಕ್ಲೋನ್ ಕೇವಲ ಮಳೆ ಮೇಲೆ ತನ್ನ ಪ್ರಬಾವ ಬೀರದೇ ರೈಲು ಸಾರಿಗೆ ಮೇಲೂ ಬೀರಿದೆ. ಪ್ರಯಾಣಿಕರ ಸಂಚಾರ ಸುರಕ್ಷತೆ ಗಮನದಲ್ಲಿಟ್ಟುಕೊಂಡು ಒಂದಷ್ಟು ರೈಲುಗಳ ಸಮಯ ಮರು ಹೊಂದಿಸಲಾಗಿದೆ.

ಮೊಂಥಾ ಚಂಡಮಾರುತ ಹಿನ್ನೆಲೆಯಲ್ಲಿ ಪ್ರಯಾಣಿಕರ ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು, ದಕ್ಷಿಣ ಮಧ್ಯ ರೈಲ್ವೆ (SCR) ಈ ಕೆಳಗಿನ ರೈಲುಗಳ ನಿಗದಿತ ನಿರ್ಗಮನ ಸಮಯದಿಂದ 12 ಗಂಟೆಗಳ ಕಾಲ ಮರುಹೊಂದಿಸಿದೆ. ವೇಳಾಪಟ್ಟಿ ಪರಿಷ್ಕರಿಸಿದ್ದು, ಹೊಸ ವೇಳಾಪಟ್ಟಿ ಹೀಗಿದೆ.

Bengaluru many Trains Rescheduled by 12 Hours Due to Cyclone MONTHA Affected

* SMVT ಬೆಂಗಳೂರು- ಹೊಸ ಟಿನ್ಸುಕಿಯಾ ಜಂಕ್ಷನ್ ಸೂಪರ್‌ಫಾಸ್ಟ್ ಎಕ್ಸ್‌ಪ್ರೆಸ್ ರೈಲು (22501) ಅಕ್ಟೋಬರ್ 28 ರಂದು ಪ್ರಾರಂಭವಾಗುವ ಪ್ರಯಾಣವನ್ನು, SMVT ಬೆಂಗಳೂರಿನಿಂದ ನಿಗದಿತ ನಿರ್ಗಮನದಿಂದ 12 ಗಂಟೆಗಳ ಕಾಲ ತಡವಾಗಿ ತೆರಳಲಿದೆ. ಬೆಳಗ್ಗೆ 03:10 ಕ್ಕೆ ಹೊರಡುವಂತೆ ಮರುಹೊಂದಿಸಲಾಗಿದೆ.

* SMVT ಬೆಂಗಳೂರು - ಹಟಿಯಾ ಸೂಪರ್‌ಫಾಸ್ಟ್ ಎಕ್ಸ್‌ಪ್ರೆಸ್ ರೈಲು (12836) ಅಕ್ಟೋಬರ್ 28 ರಂದು ಪ್ರಾರಂಭವಾಗುವ ಪ್ರಯಾಣವನ್ನು, ನಿಗದಿತ ನಿರ್ಗಮನದಿಂದ 12 ಗಂಟೆಗಳ ಕಾಲ, ಅಂದರೆ ಬೆಳಗ್ಗೆ 08:50 ಕ್ಕೆ ಹೊರಡುವಂತೆ ಮರುಹೊಂದಿಸಲಾಗಿದೆ.

* ರೈಲು (ಸಂಖ್ಯೆ 12503) SMVT ಬೆಂಗಳೂರು - ಅಗರ್ತಲ ಹಮ್‌ಸಫರ್ ಎಕ್ಸ್‌ಪ್ರೆಸ್, ಅಕ್ರೋಬರ್ 28 ರಂದು ಪ್ರಾರಂಭವಾಗಬೇಕಿತ್ತು. ಅದರ ನಿರ್ಗಮನವು 12 ಗಂಟೆಗಳ ನಂತರ, ಅಂದರೆ ಬೆಳಗ್ಗೆ 10:15 ಕ್ಕೆ SMVT ಬೆಂಗಳೂರಿನಿಂದ ಹೊರಡಲಿದೆ ಎಂದು ರೈಲ್ವೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

* SMVT ಬೆಂಗಳೂರು - ಹೌರಾ ಜಂಕ್ಷನ್ ಡುರೊಂಟೊ ಎಕ್ಸ್‌ಪ್ರೆಸ್ ರೈಲು (ಸಂಖ್ಯೆ 12246) ಅಕ್ಟೋಬರ್ 28 ರಂದು ಪ್ರಯಾಣ ಪ್ರಾರಂಭವಾಗಬೇಕಿತ್ತು. ಅದನ್ನು 12 ಗಂಟೆಗಳ ನಂತರ, ಅಂದರೆ ಬೆಳಗ್ಗೆ 11:15 ಕ್ಕೆ SMVT ಬೆಂಗಳೂರಿನಿಂದ ಹೊರಡುವಂತೆ ಸಮಯ ಬದಲಾಯಿಸಲಾಗಿದೆ.

* SMVT ಬೆಂಗಳೂರು - ಹೌರಾ ಜಂಕ್ಷನ್ ಸೂಪರ್‌ಫಾಸ್ಟ್ ಎಕ್ಸ್‌ಪ್ರೆಸ್ ರೈಲು (ಸಂಖ್ಯೆ 12864) ಅಕ್ಟೋಬರ್ 28 ಆರಂಭವಾಗುವ ಪ್ರಯಾಣ ನಿಗದಿತ ನಿರ್ಗಮನದಿಂದ 12 ಗಂಟೆಗಳ ನಂತರ ಹೊರಡಲಿದೆ. ಅಂದರೆ ಬೆಳಗ್ಗೆ 10:35 ಕ್ಕೆ SMVT ಬೆಂಗಳೂರಿನಿಂದ ಹೊರಡಲಿದೆ.

* ರೈಲು ಸಂಖ್ಯೆ 13433 SMVT ಬೆಂಗಳೂರು - ಮಾಲ್ಡಾ ಟೌನ್ ಅಮೃತ್ ಭಾರತ್ ಎಕ್ಸ್‌ಪ್ರೆಸ್ ರೈಲು ಅಕ್ಟೋಬರ್ 28 ರಂದು ಪ್ರಾರಂಭವಾಗುವ ಪ್ರಯಾಣ SMVT ಬೆಂಗಳೂರಿನಿಂದ ನಿಗದಿತ ನಿರ್ಗಮನದಿಂದ 12 ಗಂಟೆಗಳ ನಂತರ ಪ್ರಯಾಣ ಆರಂಭಿಸಲಿದೆ. ಅಂದರೆ ಮಧ್ಯಾಹ್ನ 01:50 ಕ್ಕೆ ಕಾರ್ಯಾಚರಣೆ ಆರಂಭಿಸಲಿದೆ.

* ವಾಸ್ಕೋ ಡ ಗಾಮಾ - ಶಾಲಿಮಾರ್ ಅಮರಾವತಿ ಎಕ್ಸ್‌ಪ್ರೆಸ್ ರೈಲು (18048) ಅಕ್ಟೋಬರ್ 28 ರಂದು ಪ್ರಾರಂಭವಾಗುವ ಪ್ರಯಾಣ ನಿಗದಿತ ನಿರ್ಗಮನದಿಂದ 12 ಗಂಟೆಗಳ ನಂತರ ಹೊರಡುತ್ತದೆ. ಬೆಳಗ್ಗೆ 06:30ಕ್ಕೆ ವಾಸ್ಕೋ ಡ ಗಾಮಾದಿಂದ ಹೊರಡುವಂತೆ ಮರು ಹೊಂದಿಸಲಾಗಿದೆ ಎಂದು ದಕ್ಷಿಣ ಮಧ್ಯ ರೈಲ್ವೆಯು ಪ್ರಕಟಣೆಯಲ್ಲಿ ತಿಳಿಸಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+