Bengaluru: ಬೈಕ್‌ನಲ್ಲೇ ಮೊಬೈಲ್ ಪಂಕ್ಚರ್ ಅಂಗಡಿ! 60,000 ರೂ. ಹೂಡಿಕೆಯ ಹೊಸ ಐಡಿಯಾ ವೈರಲ್

ಬೆಂಗಳೂರಿನಲ್ಲಿ ಸ್ಟಾರ್ಟ್ ಅಪ್ ಐಡಿಯಾಗಳಿಗೆ ಕೊರತೆ ಇಲ್ಲ. ಬೆಂಗಳೂರು ನಗರದಲ್ಲಿ ಸಣ್ಣದರಿಂದ ದೊಡ್ಡ ಸ್ಟಾರ್ಟ್ ಅಪ್‌ಗಳು ಪ್ರತಿ ದಿನವೂ ಪ್ರಾರಂಭವಾಗುತ್ತಲ್ಲೇ ಇರುತ್ತವೆ. ಈಗ ಬೆಂಗಳೂರು ನಗರದ ಕೆಲವು ಪ್ರದೇಶಗಳಲ್ಲಿ ಬೈಕ್ ಮತ್ತು ಕಾರ್‌ಗಳ ಪಂಕ್ಚರ್ ಆಗುವುದು ಸಾಮಾನ್ಯ ಎನ್ನುವಂತೆ ಆಗಿದೆ. ಆದರೆ, ವಾಹನ ಸವಾರರು ವಾಹನದ ಟೈರ್ ಪಂಕ್ಚರ್ ಆಗುವಾಗ ಪಂಕ್ಚರ್ ಹಾಕಿಸಿಕೊಳ್ಳುವುದಕ್ಕೆ ಕಿ.ಮೀ ಗಟ್ಟಲೆ ವಾಹನವನ್ನು ತಳ್ಳಿಕೊಂಡು ಇಲ್ಲವೇ ಟೈರ್ ಬಿಚ್ಚಿಕೊಂಡು ಹೋಗಬೇಕಾದ ಅನಿವಾರ್ಯತೆ ಇದೆ. ಇದೀಗ ಬೆಂಗಳೂರು ನಗರದಲ್ಲಿ ಬೈಕ್‌ ಪಂಕ್ಚರ್ ವೈರಲ್ ಆಗಿದೆ.

ಜನನಿಬಿಡ ಹಾಗೂ ಟ್ರಾಫಿಕ್ ಜಾಮ್ ಇರುವ ರಸ್ತೆಯ ಮಧ್ಯದಲ್ಲಿ ಟೈರ್ ಪಂಕ್ಚರ್ ಆದರೆ, ಸಾಮಾನ್ಯ ಪ್ರಯಾಣವೇ ತುಂಬಾ ಸಮಸ್ಯೆ ಆಗುತ್ತದೆ. ಆದರೆ ಬೆಂಗಳೂರಿನ ವ್ಯಕ್ತಿಯೊಬ್ಬರು ಪಂಕ್ಚರ್ ಅಂಗಡಿಯನ್ನು ನೇರವಾಗಿ ಗ್ರಾಹಕರಿಗೆ ತಲುಪಿಸುವ ಐಡಿಯಾ ಕಂಡುಕೊಂಡಿದ್ದಾನೆ. ಇದು ಹೇಗೆ ಸಾಧ್ಯ ಅಂತ ಕೇಳಿದ್ರಾ. ಹೌದು, ಬೈಕ್ ಸವಾರರಿಗೆ ಅನುಕೂಲವಾಗುವಂತೆ ತನ್ನ ಬೈಕ್‌ನಲ್ಲೇ ವಾಹನಗಳ ಟೈರ್‌ಗೆ ಪಂಕ್ಚರ್ ಹಾಕುವುದಕ್ಕೆ ಬೇಕಾದ ವ್ಯವಸ್ಥೆಯನ್ನು ವ್ಯಕ್ತಿಯೊಬ್ಬರು ಮಾಡಿಕೊಂಡಿದ್ದಾರೆ. ಇದೀಗ ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

Bengaluru Man Turns His Bike Into a Mobile Puncture Shop 60 000 Setup Goes Viral

ಜನರು ತಮ್ಮ ವಾಹನದ ಟೈರ್ ಪಂಕ್ಚರ್ ಆದಾಗ ಇನ್ಮುಂದೆ ಗ್ಯಾರೇಜ್ ತಲುಪುವವರೆಗೆ ಕಾಯುವ ಬದಲು, ಅವರು ತಮ್ಮ ಬೈಕ್ ಪಂಕ್ಚರ್ ಆದ ಟೈರ್‌ಗಳನ್ನು ರಿಪೇರಿ ಮಾಡುವ ಉಪಕರಣಗಳನ್ನು ಅಳವಡಿಸಿದ್ದಾರೆ. ಮೊಬೈಲ್ ಸೆಟಪ್‌ಗೆ ಸುಮಾರು 60,000 ರೂ. ವೆಚ್ಚವಾಗಿದೆ ಅಂತ ಅವರು ಹೇಳಿಕೊಂಡಿದ್ದಾರೆ.

ಈ ವ್ಯವಸ್ಥೆಯು ಸಮಸ್ಯೆಯನ್ನು ಪರಿಹರಿಸುತ್ತದೆ. ಟೈರ್ ಪಂಕ್ಚರ್ ಆದಾಗ, ಚಾಲಕರು ತಮ್ಮ ವಾಹನವನ್ನು ಹತ್ತಿರದ ರಿಪೇರಿ ಅಂಗಡಿಯ ವರೆಗೆ ತಳ್ಳಬೇಕಾಗುತ್ತದೆ. ಇಲ್ಲವೇ ಪಂಕ್ಚರ್ ಹಾಕುವವರನ್ನೇಸ ತಮ್ಮ ವಾಹನ ನಿಂತಿರುವ ಜಾಗಕ್ಕೆ ಕರೆದುಕೊಂಡು ಬರಬೇಕಾಗುತ್ತದೆ. ಅಷ್ಟೇನು ಪರಿಚಯವಿಲ್ಲದ ರಸ್ತೆಗಳಲ್ಲಿ ಅಥವಾ ಗ್ಯಾರೇಜ್‌ನಿಂದ ದೂರದಲ್ಲಿ ಪಂಕ್ಚರ್ ಆದಾಗ ವಾಹನ ಸವಾರರು ಪರದಾಡಬೇಕಾದ ಪರಿಸ್ಥಿತಿ ನಿರ್ಮಾಣವಾಗುತ್ತದೆ. ಇದೀಗ ಈ ಸಮಸ್ಯೆಗಳಿಗೆ ವ್ಯಕ್ತಿಯೊಬ್ಬರು ಪರಿಹಾರ ಕಂಡುಕೊಂಡಿದ್ದಾರೆ.

ಬೈಕ್ ಮತ್ತು ಕಾರು ಪಂಕ್ಚರ್ ಆದಾಗ ಅದನ್ನು ಸರಿಪಡಿಸಲು ಮೊಬೈಲ್ ಪಂಕ್ಚರ್ ಸೇವೆಯನ್ನು ಪರಿಚಯಿಸಲಾಗಿದೆ. ದೊಡ್ಡ ಏರ್ ಟ್ಯಾಂಕ್ ಮತ್ತು ಇತರ ಉಪಕರಣಗಳು ಇರುವ ಮೊಬೈಲ್ ಬೈಕ್ ಪಂಕ್ಚರ್ ವಿಡಿಯೋ ವೈರಲ್ ಆಗಿದೆ. ಮೊಬೈಲ್ ರಿಪೇರಿ ಸೇವೆಯು ಇನ್ಮುಂದೆ ಬೆಂಗಳೂರಿನಲ್ಲಿ ಅತ್ಯಂತ ಸುಲಭವಾಗಲಿದೆ.

ವಾಹನಕ್ಕೆ ಬೇಕಾದ ನಿರ್ವಹಣೆ ಅಗತ್ಯತೆ ಮತ್ತು ಗ್ರಾಹಕರಿಗೆ ಬೇಕಾದ ಸಹಾಯಕ್ಕಾಗಿ ವಾಹನ ಸವಾರರು ಮೆಕ್ಯಾನಿಕ್‌ಗಾಗಿ ಕಾಯಬೇಕಾದ ಅವಶ್ಯಕತೆ ಇರುವುದಿಲ್ಲ. ಸೋಷಿಯಲ್ ಮೀಡಿಯಾದಲ್ಲಿ ಇದೀಗ ಈ ವಿಡಿಯೋ ವೈರಲ್ ಆಗಿದ್ದು, ಬೈಕ್ ಸವಾರರ ಮನಸ್ಸು ಗೆದ್ದಿದೆ. ಬೆಂಗಳೂರಿನಲ್ಲಿ ಬೈಕ್ ಪಂಕ್ಚರ್ ಆದಾಗ ಇನ್ಮುಂದೆ ವಾಹನ ಸವಾರರಿಗೆ ತುಂಬಾ ಸುಲಭವಾಗಿ ಸೇವೆ ಪಡೆದುಕೊಳ್ಳಬಹುದಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+