ಬೆಂಗಳೂರು ಲಾಕ್‌ಡೌನ್: ಎಲ್ಲಾ ಆರೋಗ್ಯ ಸೇವೆಗಳು ಲಭ್ಯ
ಬೆಂಗಳೂರು, ಜುಲೈ 13: ಬೆಂಗಳೂರಿನಲ್ಲಿ ಕೊರೊನಾ ಸೋಂಕು ಹೆಚ್ಚಳವಾಗುತ್ತಿರುವ ಹಿನ್ನೆಲೆಯಲ್ಲಿ ಜುಲೈ 14 ರಿಂದ ಒಂದು ವಾರಗಳ ಕಾಲ ಲಾಕ್‌ಡೌನ್ ಘೋಷಿಸಲಾಗಿದೆ.
ಲಾಕ್‌ಡೌನ್ ಸಂದರ್ಭದಲ್ಲಿ ಎಲ್ಲಾ ಆರೋಗ್ಯ ಸೇವೆಗಳು ಲಭ್ಯವಿರಲಿವೆ.
Recommended Video
-ಎಲ್ಲಾ ಆಸ್ಪತ್ರೆಗಳು, ನರ್ಸಿಂಗ್ ಹೋಂಗಳು, ಕ್ಲಿನಿಕ್‌ಗಳು, ಲ್ಯಾಬ್‌ಗಳು, ಸಂಗ್ರಹಣಾ ಕೇಂದ್ರಗಳು, ಮೆಡಿಸಿನ್ ಸೌಲಭ್ಯಗಳು, ಡಿಸ್ಪೆನ್ಸರಿಗಳು, ಫಾರ್ಮಸಿಗಳು, ಕೆಮಿಸ್ಟ್ ಜನ ಔಷಧ ಕೇಂದ್ರಗಳು, ಗೃಹ ಆರೈಕೆದಾರರು ಮತ್ತು ವೈದ್ಯಕೀಯ ಉಪಕರಣಗಳ ಅಂಗಡಿಗಳು ಸೇರಿದಂತೆ ಎಲ್ಲಾ ಔಷಧ ಅಂಗಡಿಗಳು ಲಭ್ಯವಿರಲಿವೆ.
-ಎಲ್ಲಾ ಫಾರ್ಮಾಸಿಟಿಕಲ್ ಹಾಗೂ ರಿಸರ್ಚ್ ಲ್ಯಾಬ್‌ಗಳು
-ಔಷಧಗಳು, ಔಷಧೀಯ ವೈದ್ಯಕೀಯ ಸಾಧನಗಳು, ಮೆಡಿಕಲ್ ಆಕ್ಸಿಜನ್ ಅವುಗಳ ಪ್ಯಾಕಿಂಗ್ ಸಾಮಗ್ರಿ, ಕಚ್ಚಾ ಸಾಮಗ್ರಿ ಹಾಗೂ ಮಧ್ಯವರ್ತಿಗಳ ಎಲ್ಲಾ ತಯಾರಿಕಾ ಘಟಕಗಳು.

-ವೈದ್ಯಕೀಯ, ಆರೋಗ್ಯ ಮೂಲ ಸೌಕರ್ಯಕ್ಕೆ ಸಂಬಂಧಿಸಿದ ಎಲ್ಲಾ ನಿರ್ಮಾಣಗಳು
-ಎಲ್ಲಾ ವೈದ್ಯಕೀಯ, ಅರೆ ವೈದ್ಯಕೀಯ, ಶುಶ್ರೂಷಕರು, ವಿಜ್ಞಾನಿಗಳು, ಲ್ಯಾಬ್ ಟೆಕ್ನಿಷಿಯನ್‌ಗಳು, ಮಿಡ್-ವೈವ್ಸ್ ಹಾಗೂ ಇತರೆ ಆಸ್ಪತ್ರೆ ಪೂರಕ ಸೇವೆಗಳು ಲಭ್ಯವಿರಲಿವೆ.












Click it and Unblock the Notifications