Bengaluru Life: ಬೆಂಗಳೂರಿನಲ್ಲಿ ಎಲ್ಲವೂ ಸಾಧ್ಯ: 1ಆರ್‌ಕೆಯಿಂದ 5 ಬಿಎಚ್‌ಕೆ ವರೆಗೆ ಜೀವನ ಬದಲಾಯಿಸಿಕೊಂಡೆ ವರ್ಟಿಕಾ ಶುಕ್ಲಾ!

Bengaluru Life: ಬೆಂಗಳೂರು ಹಲವರಿಗೆ ಜೀವನ ರೂಪಿಸಲು ಸಹಕಾರಿಯಾಗಿದೆ. ಎಲ್ಲೆಲ್ಲಿಂದಲೊ ಬಂದವರು ಇಲ್ಲಿ ಹೊಸ ಜೀವನ ಕಟ್ಟಿಕೊಂಡಿದ್ದಾರೆ. ದುಡ್ಡು ಮಾಡಿದ್ದಾರೆ, ತಮ್ಮ ಕನಸುಗಳನ್ನು ಈಡೇರಿಸಿಕೊಂಡಿದ್ದಾರೆ. ಉದ್ಯೋಗ, ಜೀವನ ಬದಲಾಯಿಸಿಕೊಂಡಿದ್ದಾರೆ. ತುಂಬಾ ಜನ ಈ ವಿಷಯಗಳನ್ನು ನೆನಪಿಸಿಕೊಂಡು ಖುಷಿಪಡುವುದಿದೆ. "ನಮ್ಮೂರಿಗೆ ನಮ್ಮನ್ನು ಅತಿಥಿಗಳನ್ನಾಗಿ ಮಾಡಿದ್ದು ಬೆಂಗಳೂರು', "ನಮ್ಮೂರಲ್ಲಿ ತಲೆ ಎತ್ತಿಕೊಂಡು ನಡೆಯುವಂತೆ ಮಾಡಿದ್ದು ಸಹ ಇದೇ ಬೆಂಗಳೂರು' ಎನ್ನುವ ಸಾಲುಗಳನ್ನು ನೀವು ಸಹ ಸೋಶಿಯಲ್ ಮೀಡಿಯಾದಲ್ಲಿ ನೋಡಿರಬಹುದು. ಇಷ್ಟೆಲ್ಲ ಪೀಠಿಕೆಗೆ ಕಾರಣ ಬೆಂಗಳೂರಿನಲ್ಲಿ ಖಾಲಿ ಕೈಯಿಂದ ದೊಡ್ಡ ಮಟ್ಟಕ್ಕೆ ಬೆಳೆದಿರುವವರೊಬ್ಬರು ತಮ್ಮ ಯಶಸ್ಸಿನ ಪಯಣದ ಬಗ್ಗೆ ಮುಕ್ತವಾಗಿ ಮಾತನಾಡಿದ್ದಾರೆ. ಇದು ಬೆಂಗಳೂರಿನಲ್ಲಿರುವ ಹಲವರಿಗೆ ಸ್ಫೂರ್ತಿಯೂ ಆಗಬಲ್ಲದು. ಉದ್ಯಮಿ ವರ್ಟಿಕಾ ಶುಕ್ಲಾ ಅವರ ಯಶಸ್ಸಿನ ಪಯಣದ ಸ್ಟೋರಿ ಇಲ್ಲಿದೆ.

ಉದ್ಯಮಿ ವರ್ಟಿಕಾ ಶುಕ್ಲಾ ಅವರು 2020ರಲ್ಲಿ ಬೆಂಗಳೂರಿನಲ್ಲಿ ಒಂದು ಸಣ್ಣ ಕೋಣೆ - ಅಡುಗೆ ಮನೆಯಿಂದ (1 RK)ಇಂದು 5 ರೂಮ್‌ಗಳ ಮಲಗುವ ಕೋಣೆ ಮನೆಯವರೆಗೆ ಹೇಗೆ ತಮ್ಮ ವಸತಿ ಪಯಣ ಬೆಂಗಳೂರಿನಲ್ಲಿ ಬದಲಾಯಿತು ಎನ್ನುವ ಬಗ್ಗೆ ಮಾತನಾಡಿದ್ದಾರೆ. ಉದ್ಯಮಿ ವರ್ಟಿಕಾ ಶುಕ್ಲಾ ಅವರು, ತಮ್ಮ 22 ನೇ ವಯಸ್ಸಿನಲ್ಲಿ ಆನುವಂಶಿಕ ಸಂಪತ್ತು ಅಥವಾ ಕುಟುಂಬದಿಂದ ಹಣಕಾಸಿನ ಸಹಾಯವಿಲ್ಲದೆ ಹೊಸ ಜೀವನ ಪ್ರಾರಂಭಿಸಿದ್ದರು. ನಂತರ ಬೆಂಗಳೂರಿನಲ್ಲಿ ಹಲವು ಕಂಪನಿಗಳನ್ನು ಬದಲಾಯಿಸಿದರು, ಎಂಬಿಎ ಪದವಿ ಪಡೆದರು ಅವರು ತಮ್ಮ ವೃತ್ತಿಜೀವನವನ್ನು ಬೆಂಗಳೂರಿನಲ್ಲಿ ಮೊದಲು ಶುರು ಮಾಡಿದ್ದಾಗಿ ಹೇಳಿಕೊಂಡಿದ್ದಾರೆ.

Bengaluru Life From 1RK to 5BHK Vartika Shukla Shares How Bengaluru Transformed Her Life

ಕೆಲವರು ಸಂಬಳ ಬೆಳೆದಂತೆ, ಅವರ ಜೀವನಶೈಲಿಯೂ ಆಗಾಗ್ಗೆ ಬದಲಾಗುವುದಿದೆ. ದೊಡ್ಡ ಮನೆಗಳು, ಉತ್ತಮ ಸೌಕರ್ಯಗಳು ಮತ್ತು ಹೊಸ ಆರ್ಥಿಕ ಆಯ್ಕೆಗಳು ಆ ಪ್ರಯಾಣದ ಭಾಗವಾಗುವುದಿದೆ. ಬೆಂಗಳೂರಿನ ಉದ್ಯಮಿ ವರ್ಟಿಕಾ ಶುಕ್ಲಾ ಅವರು ಹೇಗೆ ಜೀವನ ಬದಲಾಯಿಸಿಕೊಂಡರು ಎನ್ನುವ ಬಗ್ಗೆ ಮಾತನಾಡಿದ್ದಾರೆ. ಒಂದು ಕೋಣೆಯ ಅಡುಗೆ ಮನೆಯಿಂದ 5 ಮಲಗುವ ಕೋಣೆ ಮನೆಯ ವರೆಗೆ ಅವರ ಜೀವನ ಬದಲಾಗಿದೆ. 2020ರಲ್ಲಿ ಅವರ ಮನೆಯ ಬಾಡಿಗೆ ತಿಂಗಳಿಗೆ 50,000 ರೂ.ಗಳಿಂದ ಇಂದು 1.81 ಲಕ್ಷ ರೂ.ಗಳಿಗೆ ಏರಿಕೆ ಕಂಡಿದೆ ಎಂದಿದ್ದಾರೆ. ಆದರೆ, ಮನೆಯ ಬಾಡಿಗೆಗಿಂತಲೂ ಮುಖ್ಯವಾದ ಮತ್ತೊಂದು ವಿಚಾರವನ್ನೂ ಸಹ ಅವರು ಹಂಚಿಕೊಂಡಿದ್ದಾರೆ.

Bengaluru Life: 15 ಸಾವಿರ ರೂ. ಬಾಡಿಗೆ ಮನೆಯಿಂದ 1.81 ಲಕ್ಷ ರೂ. ಬಾಡಿಗೆ ಮನೆಯ ವರೆಗೆ

15 ಸಾವಿರ ರೂ. ಬಾಡಿಗೆ ಮನೆಯಿಂದ 1.81 ಲಕ್ಷ ರೂ. ಬಾಡಿಗೆ ಮನೆಯ ವರೆಗೆ ಹೇಗೆ ಜೀವನ ಬದಲಾಯಿತು ಅಂತ ಉದ್ಯಮಿ ವರ್ಟಿಕಾ ಶುಕ್ಲಾ ಅವರು ಹೇಳಿಕೊಂಡಿದ್ದಾರೆ. ತಮ್ಮ ವೃತ್ತಿಜೀವನ ಮುಂದುವರಿದಂತೆ ಅವರ ವಸತಿ ಹೇಗೆ ಬದಲಾಯಿತು ಎಂಬುದರ ಟೈಮ್‌ಲೈನ್ ಅನ್ನು ಹಂಚಿಕೊಂಡರು. 2020 ರಲ್ಲಿ, ಅವರು ಒಂದು ಕೋಣೆಯ ಅಡುಗೆಮನೆಯ ಮನೆಯಲ್ಲಿ ವಾಸಿಸುತ್ತಿದ್ದರು ಮತ್ತು ತಿಂಗಳಿಗೆ 50,000 ರೂ. ಬಾಡಿಗೆಯನ್ನು ಪಾವತಿಸುತ್ತಿದ್ದರು. 2021 ರಲ್ಲಿ 1 ಲಕ್ಷ ರೂ.ಗಳ ಮಾಸಿಕ ಬಾಡಿಗೆಯೊಂದಿಗೆ 2BHKಗೆ ಶಿಫ್ಟ್‌ ಆಗಿದ್ದಾರೆ. 2023ರ ವೇಳೆಗೆ 3BHK ನಲ್ಲಿ ವಾಸಿಸುತ್ತಿದ್ದರು ಮತ್ತು ತಿಂಗಳಿಗೆ 2 ಲಕ್ಷ ರೂ.ಗಳನ್ನು ಪಾವತಿಸುತ್ತಿದ್ದರು. ಅವರು ಈಗ 5BHK ಯಲ್ಲಿ ವಾಸಿಸುತ್ತಿದ್ದಾರೆ, ಅದಕ್ಕೆ ಅವರು ಮಾಸಿಕ 1.81 ಲಕ್ಷ ರೂ. ಬಾಡಿಗೆ ಪಾವತಿಸುತ್ತಿರುವುದಾಗಿ ಹೇಳಿಕೊಂಡಿದ್ದಾರೆ.

Bengaluru Life: ಆಸೆಗಳೊಂದಿಗೆ ಜೀವನ ಬದಲಾಯಿತು

ದುಬಾರಿ ಮನೆ ಮಾತ್ರವಲ್ಲ, ಅವರು ತಮ್ಮ ಆಸೆಗಳಿಗೆ ತಕ್ಕಂತೆ ಕೆಲಸ ಮಾಡಿದ್ದಾಗಿ ಹೇಳಿಕೊಂಡಿದ್ದಾರೆ. ಅವರ ಲಿಂಕ್ಡ್‌ಇನ್ ಪ್ರೊಫೈಲ್ ಪ್ರಕಾರ, ಶುಕ್ಲಾ ಮಹರ್ಷಿ ದಯಾನಂದ ವಿಶ್ವವಿದ್ಯಾಲಯದಿಂದ ಬಿ.ಟೆಕ್ ಪದವಿಯನ್ನು ಪೂರ್ಣಗೊಳಿಸಿದ್ದಾರೆ ಮತ್ತು ನಂತರ ಎಂಬಿಎ ಪದವಿ ಪಡೆದಿದ್ದಾರೆ. ಮೈಕ್ರೋಸಾಫ್ಟ್‌ನಲ್ಲಿ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದರು ಮತ್ತು ನಂತರ ಉದ್ಯಮಶೀಲತೆಗೆ ತೆರಳುವ ಮೊದಲು ವಿವಿಧ ಕಂಪನಿಗಳಲ್ಲಿ ಕೆಲಸ ಮಾಡಿರುವುದಾಗಿ ಹೇಳಿಕೊಂಡಿದ್ದಾರೆ.

ಮುಂದಿನ ಕೆಲವು ವರ್ಷಗಳಲ್ಲಿ ವೃತ್ತಿಪರ ಮತ್ತು ವೈಯಕ್ತಿಕ ಜೀವನದಲ್ಲಿ ಬದಲಾವಣೆಗಳನ್ನು ಆಗುತ್ತಿದ್ದವು. ಆದ್ದರಿಂದ ನಾನು ಉತ್ತಮ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಲೇ ಇದ್ದೆ. ನಾನು ಕಂಪನಿಗಳನ್ನು ಬದಲಾಯಿಸಿದೆ. ನನ್ನ ವೃತ್ತಿಜೀವನವನ್ನು ನಿರ್ಮಿಸಿದೆ. ನನ್ನ ಎಂಬಿಎ ಪ್ರಾರಂಭಿಸಿದೆ. ನನ್ನಲ್ಲಿ ಹೂಡಿಕೆ ಮಾಡಿದೆ. ನನ್ನ ಆತ್ಮವಿಶ್ವಾಸವನ್ನು ಬೆಳೆಸಿಕೊಂಡೆ ಈ ಪಯಣ ಮುಂದುವರಿಯಿತು ಅಂತ ತಮ್ಮ ಇನ್‌ಸ್ಟಾಗ್ರಾಮ್ ಪೋಸ್ಟ್‌ನಲ್ಲಿ ಬರೆದುಕೊಂಡಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+