ಬೆಂಗಳೂರಿನ ಈ ಭಾಗಗಳಲ್ಲಿ ಭೂಮಿ ಬೆಲೆ ದಿಢೀರ್‌ ಏರಿಕೆ: ಆಸ್ತಿ ಖರೀದಿ & ಮಾರಾಟಕ್ಕೆ ಬಂಪರ್!

ಬೆಂಗಳೂರಿನ ವಿವಿಧ ಭಾಗದಲ್ಲಿ ರಿಯಲ್‌ ಎಸ್ಟೇಟ್‌ಗೆ ಬಂಪರ್ ಬಂದಿದೆ. ನಗರದ ಹಲವು ಭಾಗದಲ್ಲಿ ಏಕಾಏಕಿ ಆಸ್ತಿಗಳ ಬೆಲೆ ಹೆಚ್ಚಳವಾಗಿದೆ. ನಗರದ ಒಳ ಹಾಗೂ ಹೊರ ವಲಯದಲ್ಲಿ ಭೂಮಿ ಖರೀದಿ ಹಾಗೂ ಮಾರಾಟ ಪ್ರಕ್ರಿಯೆ ಜೋರಾಗಿದೆ. ನಗರದಲ್ಲಿ ಭೂಮಿ ಬೆಲೆ ಹೆಚ್ಚಳವಾಗುತ್ತಿರುವುದೇಕೆ ಹಾಗೂ ಯಾವೆಲ್ಲಾ ಮಾರ್ಗದಲ್ಲಿ ಭೂಮಿ ಬೆಲೆ ಹೆಚ್ಚಾಗಿದೆ ಎನ್ನುವ ಸಂಪೂರ್ಣ ವಿವರ ಇಲ್ಲಿದೆ.

ಬೆಂಗಳೂರಿನಲ್ಲಿ ಹೊಸ ಮೆಟ್ರೋ ರೈಲು ಹಾದು ಹೋಗುತ್ತಿರುವ ಮಾರ್ಗಗಳಲ್ಲಿ ಭೂಮಿಯ ಬೆಲೆ ದಿಢೀರ್‌ ಹೆಚ್ಚಳವಾಗುತ್ತಿದೆ. ಮೆಟ್ರೋ ನಿಲ್ದಾಣಗಳನ್ನು ನಿರ್ಮಿಸಲು ಉದ್ದೇಶಿಸಲಾಗಿರುವ ಜಾಗಗಳಲ್ಲಿ ಆಸ್ತಿ ಬೇಡಿಕೆ ಹೆಚ್ಚಳವಾಗುವುದರೊಂದಿಗೆ ಭೂಮಿ ಬೆಲೆ ಭರ್ಜರಿ ಹೆಚ್ಚಳವಾಗಿದೆ. ಬೆಂಗಳೂರು ನಮ್ಮ ಮೆಟ್ರೋ ಯೋಜನೆಗಳು ರಿಯಲ್‌ ಎಸ್ಟೇಟ್‌ಗೆ ಹೊಸ ಬೂಸ್ಟ್‌ ನೀಡಿದೆ. ನಮ್ಮ ಮೆಟ್ರೋ ಇದೀಗ ಹಸಿರು ಹಾಗೂ ನೇರಳೆ (Green & Purple lines) ಮೆಟ್ರೋ ಮಾರ್ಗವಿದೆ. ಮುಂದಿನ ದಿನಗಳಲ್ಲಿ ಮೆಟ್ರೋ ಹಳದಿ & ಗುಲಾಬಿ ಮಾರ್ಗ (Yellow and Pink)ದ ರೈಲು ಮಾರ್ಗ ಸೇವೆಗೆ ಮುಕ್ತವಾಗಲಿದೆ. ಈ ಎರಡೂ ಮಾರ್ಗಳು 2025ರಲ್ಲಿ ಹೊಸ ಮಾರ್ಗಗಳಲ್ಲಿ ಸಂಚರಿಸಲಿದೆ. ಹೀಗಾಗಿ, ಹೊಸ ಮಾರ್ಗದಲ್ಲಿ ಭೂಮಿಗೆ ಭರ್ಜರಿ ಬೇಡಿಕೆ ಬಂದಿದೆ. ಹೊಸ ಮಾರ್ಗದಲ್ಲಿ ರಿಯಲ್‌ ಎಸ್ಟೇಟ್‌ಗೆ ಸಂಬಂಧಿಸಿದಂತೆ ಏನೆಲ್ಲಾ ಬದಲಾವಣೆಗಳು ಆಗಿವೆ ಎನ್ನುವುದನ್ನು ನೋಡೋಣ.

Bengaluru Land prices Boom sharply in New Namma Metro Line Bumper for property Buying amp amp Selling

ಆಸ್ತಿ ಬೆಲೆ ಭರ್ಜರಿ ಹೆಚ್ಚಳ: ಇನ್ನು ಈ ಭಾಗದಲ್ಲಿ ಭೂಮಿ ಬೆಲೆಯು ಭರ್ಜರಿ ಹೆಚ್ಚಳವಾಗಿದೆ. ಮೆಟ್ರೋ ನಿಲ್ದಾಣ ನಿರ್ಮಾಣವಾಗುವ ಪ್ರದೇಶಗಳ 500 ಮೀಟರ್‌ ವ್ಯಾಪ್ತಿಯಲ್ಲಿ ಇತ್ತೀಚಿನ ವರ್ಷಗಳಲ್ಲಿ ಆಸ್ತಿ ಬೆಲೆಯು ಬಂಪರ್ ಏರಿಕೆ ಕಂಡಿದೆ. ಹೊಸ ಮೆಟ್ರೋ ಮಾರ್ಗದಲ್ಲಿ ಆಸ್ತಿಗಳ ಬೆಲೆಯು ಇತ್ತೀಚಿನ ದಿನಗಳಲ್ಲಿ ಶೇ 20ರಿಂದ 40ರಷ್ಟು ಹೆಚ್ಚಳವಾಗಿದೆ ಎಂದು ಹೇಳಲಾಗಿದೆ.

ಹೊಸ ಮೆಟ್ರೋ ಮಾರ್ಗದಲ್ಲಿ ಭೂಮಿಯ ಬೆಲೆಯು ಪ್ರತಿ ಚದರ ಮೀಟರ್‌ಗೆ ಬರೋಬ್ಬರಿ 5,000 ಸಾವಿರ ರೂಪಾಯಿಗಿಂತಲೂ ಹೆಚ್ಚಳವಾಗಿದೆ. ಬೆಂಗಳೂರಿನಲ್ಲಿ ಎಂಡ್‌ ಟು ಎಂಡ್‌ ಕನೆಕ್ಟಿವಿಟಿ (ಒಂದು ಮಾರ್ಗದಿಂದ ಮತ್ತೊಂದು ಮಾರ್ಗಕ್ಕೆ ಏಕ ಸಂಚಾರ ಸೇವೆ ಉದಾ: ಮೆಟ್ರೋ, ಬಸ್‌ ಸೇವೆ ಇರುವಂತೆ) ಅಭಿವೃದ್ಧಿಯಾಗುತ್ತಿದೆ. ಹೀಗಾಗಿ, ಮೆಟ್ರೋ ನಿಲ್ದಾಣಗಳ ಸುತ್ತಮುತ್ತಲಿನ ಪ್ರದೇಶದಲ್ಲಿ ಭೂಮಿಗೆ ಡಬಲ್ ಬೆಲೆ ಬಂದಿದೆ. ಇನ್ನು ರಾಜ್ಯ ಸರ್ಕಾರವು ದೇವನಹಳ್ಳಿ, ಆನೇಕಲ್‌ ಹಾಗೂ ಹೊಸಕೋಟೆ ಸೇರಿದಂತೆ ವಿವಿಧ ಭಾಗಕ್ಕೆ ಮೆಟ್ರೋ ವಿಸ್ತರಣೆ ಮಾಡುವುದಾಗಿ ಹೇಳಿದೆ. ಇದರಿಂದ ಬೆಂಗಳೂರು ಮಾತ್ರವಲ್ಲ ಬೆಂಗಳೂರಿನ ಹೊರ ವಲಯದಲ್ಲೂ ಭೂಮಿಗೆ ಬಂಗಾರದ ರೇಟ್‌ ಫಿಕ್ಸ್‌ ಆಗುತ್ತಿದೆ.

ಈಗಾಗಲೇ ರಿಯಲ್‌ ಎಸ್ಟೇಟ್‌ ಅಭಿವೃದ್ಧಿಯಾಗಿರುವ ಪ್ರದೇಶಗಳಲ್ಲೇ ಹೊಸ ಪ್ರದೇಶಗಳಲ್ಲೂ ಭೂಮಿಯ ಬೆಲೆಯು ಭರ್ಜರಿ ಹೆಚ್ಚಳವಾಗುತ್ತಿದೆ ಎನ್ನುತ್ತಾರೆ ರಿಯಲ್‌ ಎಸ್ಟೇಟ್‌ ತಜ್ಞರು. ಮೆಟ್ರೋ ಹೊಸ ಪ್ರದೇಶಗಳಿಗೆ ವಿಸ್ತರಣೆ ಆಗುತ್ತಿರುವುದರಿಂದ ಎಲ್ಲೆಲ್ಲಿ ಮೆಟ್ರೋ ಹೊಸ ಜಾಲವಿದೆಯೋ ಅಲ್ಲೆಲ್ಲವೂ ಭೂಮಿಯ ಮೇಲೆ ಹೂಡಿಕೆ ಹಾಗೂ ಭೂಮಿ ಖರೀದಿ ಮಾಡುವವರ ಸಂಖ್ಯೆ ಹೆಚ್ಚಳವಾಗುತ್ತಿದೆ ಎಂದು ಹೇಳಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+