Property: ಬೆಂಗಳೂರಿನ ಈ 5 ಭಾಗದಲ್ಲಿ ಭೂಮಿಗೆ ಬಂಗಾರದ ಬೆಲೆ, 10 ವರ್ಷದಲ್ಲಿ ರೇಟ್ ಡಬಲ್!
Bengaluru Real Estate: ಬೆಂಗಳೂರಿನ 5 ಪ್ರಮುಖ ಪ್ರದೇಶಗಳಲ್ಲಿ ಭೂಮಿ ಹಾಗೂ ಆಸ್ತಿಯ ಬೆಲೆ ನಿರಂತರವಾಗಿ ಹೆಚ್ಚಳವಾಗುತ್ತಿದೆ. ಈ ಪ್ರದೇಶಗಳಲ್ಲಿ ಕಳೆದ 10 ವರ್ಷಗಳಿಂದ ರಿಯಲ್ ಎಸ್ಟೇಟ್ ಹೇಗಿದೆ ಎಂದು ಪರಿಶೀಲನೆ ಮಾಡಲಾಗಿದ್ದು. ಈ ಐದು ಪ್ರಮುಖ ಪ್ರದೇಶಗಳಲ್ಲಿ ರಿಯಲ್ ಎಸ್ಟೇಟ್ ಬಂಪರ್ ಶುರುವಾಗಿದೆ. ಬೆಂಗಳೂರಿನ ಕೆಲವು ಪ್ರದೇಶಗಳಲ್ಲಿ ಕಳೆದ ಒಂದು ವರ್ಷದ ಅವಧಿಯಲ್ಲಿ ಯಾರೂ ನಿರೀಕ್ಷೆ ಮಾಡದಷ್ಟು ಅಭಿವೃದ್ಧಿಯಾಗಿದೆ ಎಂದು ರಿಯಲ್ ಎಸ್ಟೇಟ್ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
ಹೌದು ಮೆಟ್ರೋ ಸೇರಿದಂತೆ ಬೇರೆ ಬೇರೆ ಅಭಿವೃದ್ಧಿಗಳ ಕಾರಣಕ್ಕೆ ಬೆಂಗಳೂರಿನಲ್ಲಿ ಭೂಮಿಗೆ ಬಂಗಾರದ ಬೆಲೆ ಬರುವುದಕ್ಕೆ ಶುರುವಾಗಿದೆ. ಬೆಂಗಳೂರಿನಲ್ಲಿ ಐಟಿ ಕ್ಷೇತ್ರ ಅಭಿವೃದ್ಧಿ, ಹೂಡಿಕೆ ಹೆಚ್ಚಳ, ಮೆಟ್ರೋ ಅಭಿವೃದ್ಧಿ, ಬೇರೆ ನಗರಗಳಿಗಿಂತ ಅನುಕೂಲಕರ ವಾತಾವರಣ ಹಾಗೂ ಹೆಚ್ಚುತ್ತಿರುವ ಬೇಡಿಕೆ ಸೇರಿದಂತೆ ವಿವಿಧ ಕಾರಣಗಳಿಗೆ ಬೆಂಗಳೂರಿನಲ್ಲಿ ಭೂಮಿಯ ಬೆಲೆ ದಿನದಿಂದ ದಿನಕ್ಕೆ ಹೆಚ್ಚಳವಾಗುತ್ತಿದ್ದು. ವಿವಿಧ ಭಾಗದಲ್ಲಿ ಭೂಮಿಗೆ ಬಂಗಾರದ ಬೆಲೆ ಬಂದಿದೆ.

ಬೆಂಗಳೂರಿನ ರಿಯಾಲ್ಟಿ ಮಾರುಕಟ್ಟೆಯು ದೇಶದ ಉಳಿದ ನಗರಗಳಿಗಿಂತಲೂ ಮುಂಚೂಣಿಯಲ್ಲಿದೆ. ಬೆಂಗಳೂರಿನಲ್ಲಿ ಭೂಮಿ ಹಾಗೂ ಮನೆಗಳ ಬೆಲೆಯು ದೇಶ ಪ್ರಮುಖ ನಗರಗಳಾಗಿರುವ ದೆಹಲಿ ಹಾಗೂ ಮುಂಬೈಗೂ ಪೈಪೋಟಿ ನೀಡುವ ರೀತಿಯಲ್ಲಿ ಬದಲಾಗಿವೆ. ಕಳೆದ 10 ವರ್ಷಗಳ ಅವಧಿಯಲ್ಲಿ ಯಾವ ಭಾಗದಲ್ಲಿ ಭೂಮಿ ಬೆಲೆ ಹೆಚ್ಚಳವಾಗಿದೆ ಹಾಗೂ ಎಲ್ಲಿ ಹೂಡಿಕೆ ಮಾಡಿದರೆ ಉತ್ತಮ ಎನ್ನುವ ಸಂಪೂರ್ಣ ವಿವರ ಇಲ್ಲಿದೆ.
1. ವೈಟ್‌ಫೀಲ್ಡ್: ಬೆಂಗಳೂರಿನಲ್ಲಿ ಭೂಮಿ ಬೆಲೆ ಹೆಚ್ಚಳವಾಗಿರುವ ಪ್ರಮುಖ ಪ್ರದೇಶಗಳಲ್ಲಿ ವೈಟ್‌ಫೀಲ್ಡ್ ಸಹ ಒಂದಾಗಿದೆ. ಇದೀಗ ಈ ಭಾಗದಲ್ಲಿ ಇನ್ನಷ್ಟು ಭೂಮಿ ಬೆಲೆ ಹೆಚ್ಚಳವಾಗುತ್ತಿದೆ. ಅದಕ್ಕೆ ಈ ಭಾಗದಲ್ಲಿ ಮೆಟ್ರೋ ಅಭಿವೃದ್ಧಿ ಆಗಿರುವುದು ಸಹ ಒಂದು ಪ್ರಮುಖ ಕಾರಣವಾಗಿದೆ. ಈ ಭಾಗದಲ್ಲಿ ಆಸ್ತಿ ಬೆಲೆಯು ಅಂದಾಜು ಶೇ 80ರಿಂದ 89% ರಷ್ಟು ಏರಿಕೆ ಕಂಡಿದೆ. ಈ ಭಾಗದಲ್ಲಿ ಐಟಿ ಪಾರ್ಕ್‌ಗಳು, ಆಸ್ಪತ್ರೆಗಳು, ಮಾಲ್‌ಗಳು ಹಾಗೂ ಶಿಕ್ಷಣ ಸಂಸ್ಥೆಗಳ ಸಂಖ್ಯೆ ಹೆಚ್ಚಳವಾಗಿದೆ. ಐಟಿ ಕ್ಷೇತ್ರದ ಅಭಿವೃದ್ಧಿ ಹಾಗೂ ಉದ್ಯೋಗ ಸಂಖ್ಯೆ ಹೆಚ್ಚಳವೂ ಭೂಮಿ ಬೆಲೆ ಹೆಚ್ಚಳಕ್ಕೆ ಕಾರಣವಾಗಿದೆ. ಇದಕ್ಕೆ ಮೆಟ್ರೋ ಅಭಿವೃದ್ಧಿ ಹೊಸ ಸೇರ್ಪಡೆಯಾಗಿದೆ.
2. ಸರ್ಜಾಪುರ ರಸ್ತೆ: ಇನ್ನು ಬೆಂಗಳೂರಿನಲ್ಲಿ ವಿಪರೀತವಾಗಿ ಭೂಮಿ ಹಾಗೂ ಆಸ್ತಿಗಳ ಬೆಲೆ ಹೆಚ್ಚಳವಾಗಿರುವ ಪ್ರದೇಶದಲ್ಲಿ ಸರ್ಜಾಪುರ ಮೊದಲ ಸ್ಥಾನದಲ್ಲಿದೆ. ಕಳೆದ 8ರಿಂದ 10 ವರ್ಷಗಳ ಅವಧಿಯಲ್ಲಿ ಈ ಭಾಗದಲ್ಲಿ ಪ್ರಾಪರ್ಟಿಗಳ ಬೆಲೆಯು ಬರೋಬ್ಬರಿ ಶೇ 120 ರಿಂದ 150% ಪ್ರತಿಶತ ಹೆಚ್ಚಳವಾಗಿದೆ. ಐಟಿ ಪಾರ್ಕ್ ಮತ್ತು ಟೆಕ್ ಮಾರ್ಗಗಳ ಅಭಿವೃದ್ಧಿಯು ಪ್ರಾಪರ್ಟಿ ಬೆಲೆ ಹೆಚ್ಚಳಕ್ಕೆ ಕಾರಣವಾಗಿದೆ. ಹೊರ ವರ್ತುಲ ರಸ್ತೆ ಹಾಗೂ ಎಲೆಕ್ಟ್ರಾನಿಕ್ ಸಿಟಿಗೆ ಸಂಪರ್ಕ ಕಲ್ಪಿಸುವ ರಸ್ತೆಗಳ ಅಭಿವೃದ್ಧಿ ಇದಕ್ಕೆ ಪ್ಲಸ್ ಪಾಯಿಂಟ್ ಆಗಿದೆ.
3. ಬಾಗಲೂರು: ನಗರ ಬಾಗಲೂರಿನಲ್ಲೂ ಭೂಮಿಗೆ ಬಂಪರ್ ಬೆಲೆ ಬಂದಿದೆ. ಬಾಗಲೂರಿನಲ್ಲಿ ಪ್ರಾಪರ್ಟಿ ಬೆಲೆಯು ಶೇ 90-94% ರಷ್ಟು ಹೆಚ್ಚಳವಾಗಿದೆ. ಹೊಸ ಉಪ ನಗರ ಪ್ರದೇಶವಾಗಿ ಈ ಪ್ರದೇಶ ಗುರುತಿಸಿಕೊಂಡಿದೆ. ಈ ಭಾಗದಲ್ಲಿ ಪ್ರತಿ ಚದರ ಅಡಿಗೆ 8,000 ಸಾವಿರದಿಂದ 8,500 ರೂಪಾಯಿ ಆಗಿದೆ. ಭೂಮಿ ಹಾಗೂ ಪ್ರಾಪರ್ಟಿ ಬೆಲೆಯು ಕಳೆದ 10 ವರ್ಷದ ಅವಧಿಯಲ್ಲಿ ಶೇ 94% ಹೆಚ್ಚಳವಾಗಿದೆ. ಮೂಲಸೌಕರ್ಯ ಅಭಿವೃದ್ಧಿ ಹಾಗೂ ಬೆಂಗಳೂರಿನ ಹೊರ ಕೇಂದ್ರ ಭಾಗದಿಂದ ಸುತ್ತಮುತ್ತಲಿನ ಪ್ರದೇಶದಲ್ಲಿ ಜನ ಆಸ್ತಿ ಖರೀದಿ ಮಾಡುವುದು ಹೆಚ್ಚಳವಾಗುವುದು ಇದಕ್ಕೆ ಕಾರಣವಾಗಿದೆ.
4. ವರ್ತೂರು: ಬೆಂಗಳೂರಿನಲ್ಲಿ ಭೂಮಿ ಬೆಲೆ ಹೆಚ್ಚಳವಾಗಿರುವ ನಾಲ್ಕನೇ ಪ್ರದೇಶದಲ್ಲಿ ವರ್ತೂರು ಇದೆ. ಈ ಭಾಗದಲ್ಲಿ 10 ವರ್ಷಗಳ ಅವಧಿಯಲ್ಲಿ ಆಸ್ತಿಗಳ ಬೆಲೆಯು ರಾಕೆಟ್‌ನಂತೆ ಏರಿಕೆ ಕಂಡಿದೆ. ಈ ಭಾಗದಲ್ಲಿ ಭೂಮಿ ಬೆಲೆಯು ಬರೋಬ್ಬರಿ ಶೇ. 100ರಿಂದ 120ರಷ್ಟು ಹೆಚ್ಚಳ ಕಂಡಿದೆ. ವರ್ತೂರಿನಲ್ಲಿ ಭೂಮಿ ಬೆಲೆ ಹೆಚ್ಚಳವಾಗುವುದಕ್ಕೆ ಪ್ರಮುಖ ಮತ್ತೊಂದು ಕಾರಣವೆಂದರೆ ಇಲ್ಲಿಂದ ವೈಟ್‌ಫೀಲ್ಡ್ ಹಾಗೂ ಸರ್ಜಾಪುರ ರಸ್ತೆಗಳಿಗೆ ಸಂಪರ್ಕ ಅಭಿವೃದ್ಧಿ ಆಗಿರುವುದು. ಅಲ್ಲದೇ ಈ ಭಾಗದಲ್ಲಿ ಆಸ್ತಿಗಳ ಬೆಲೆ ಮಾತ್ರವಲ್ಲ ಮನೆಗಳ ಬಾಡಿಗೆಯೂ ಭರ್ಜರಿ ಹೆಚ್ಚಳವಾಗಿದೆ. ಈ ಭಾಗದಲ್ಲಿ ಹೊಸ ಟೌನ್ ಶಿಪ್ ನಿರ್ಮಾಣವಾಗಲಿದೆ ಎನ್ನುವುದು ಸಹ ಭೂಮಿ ಬೆಲೆ ಹೆಚ್ಚಳಕ್ಕೆ ಕಾರಣವಾಗಿದೆ.
5. ಬೂದಿಗೆರೆ ಕ್ರಾಸ್: ಈ ಭಾಗದಲ್ಲೂ ಭೂಮಿ ಬೆಲೆ ಭರ್ಜರಿ ಹೆಚ್ಚಳವಾಗಿದೆ. ಬುದಿಗೆರೆ ಕ್ರಾಸ್‌ನಲ್ಲಿ ಹತ್ತು ವರ್ಷಗಳ ಹಿಂದಿನ ಭೂಮಿ ಬೆಲೆ ನೋಡಿದರೆ ಈಗ ಶೇ 105% ರಷ್ಟು ಭೂಮಿ ಬೆಲೆ ಹೆಚ್ಚಳವಾಗಿದೆ. ಹೆಬ್ಬಾಳದಲ್ಲಿ ಪ್ರಮುಖ ಐಟಿ ಕೇಂದ್ರಗಳಿವೆ. ಅಲ್ಲದೇ ಹೊರ ವರ್ತುಲ ರಸ್ತೆ ಅಭಿವೃದ್ಧಿ ಹಾಗೂ ವಸತಿ ಪ್ರದೇಶ ಅಭಿವೃದ್ಧಿ ಸಹ ಈ ಭಾಗದಲ್ಲಿ ಪ್ರಾಪರ್ಟಿ ಬೆಲೆ ಹೆಚ್ಚಳಕ್ಕೆ ಕಾರಣವಾಗಿದೆ ಎಂದು ಹೇಳಲಾಗಿದೆ.












Click it and Unblock the Notifications