KIA: ಬೆಂಗಳೂರು ಏರ್‌ಪೋರ್ಟ್ ಟರ್ಮಿನಲ್ 3 ನಿರ್ಮಾಣ ಯಾವಾಗ? ಇಲ್ಲಿದೆ ಮಾಹಿತಿ
ಬೆಂಗಳೂರು, ಸೆಪ್ಟಂಬರ್ 13: ಒಂದು ದಿನದ ಹಿಂದಷ್ಟೇ (ಸೆ.12) ಟರ್ಮಿನಲ್ -2 ನಲ್ಲಿ ವಿಮಾನ ಕಾರ್ಯಾಚರಣೆ ಆರಂಭವಾಗಿದೆ. ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವು ವಾರ್ಷಿಕ 60 ಮಿಲಿಯನ್ ಪ್ರಯಾಣಿಕರನ್ನು ನಿಭಾಯಿಸುವ ಗುರಿ ಹೊಂದಲಾಗಿದೆ. ಇದರೊಂದಿಗೆ ವಿಮಾನ ನಿಲ್ದಾಣದ ಟರ್ಮಿನಲ್ 3ರ ಕಾರ್ಯಾಚರಣೆ ಕುರಿತು ಮಹತ್ವದ ಮಾಹಿತಿ ಬಹಿರಂಗವಾಗಿದೆ.
ಟರ್ಮಿನಲ್ ಟಿ2 ನ ಮೊದಲ ಹಂತದಲ್ಲಿ ದೇಶಿಯ ಮತ್ತು ವಿದೇಶಿ ವಿಮಾನಗಳು ಕಾರ್ಯಾಚರಣೆ ಆರಂಭಿಸಿವೆ. ಇಲ್ಲಿ ವಾರ್ಷಿಕವಾಗಿ 25 ಮಿಲಿಯನ್ ಜನರನ್ನು ನಿರ್ವಹಿಸಲಿದೆ. ಅದರಲ್ಲಿ ಸುಮಾರು ಹತ್ತು ಮಿಲಿಯರ್ ಅಂತಾರಾಷ್ಟ್ರೀಯ ಮತ್ತು ಉಳಿದವರು ಸ್ವದೇಶಿ ಪ್ರಯಾಣಿಕರಾಗುತ್ತಾರೆ.

ಈ ವಿಮಾನ ನಿಲ್ದಾಣವು ಮುಂದಿನ 2030ರ ವರ್ಷದಲ್ಲಿ ಮೂರನೇ ಟರ್ಮಿನಲ್ ಅನ್ನು ಕಾಣಲಿದೆ. ಈಗಾಗಲೇ ಯೋಜನೆ ರೂಪಿಸಲಾಗಿದೆ. ಇನ್ನೂ ಹಾಲಿ ಟರ್ಮಿನಲ್ ಉದ್ದೇಶಿತ ವಿಮಾನಗಳು ಟಿ2ಗೆ ಶಿಫ್ಟ್ ಆಗಿವೆ. ಆದಷ್ಟು ಶೀಘ್ರವೇ ಟರ್ಮಿನಲ್ 1 ನವೀಕರಣ ಮಾಡಲಾಗುವುದು ಎಂದು ಬೆಂಗಳೂರು ಏರ್‌ಪೋರ್ಟ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ ಎಂದು TNIE ವರದಿ ಮಾಡಿದೆ.
ಟಿ2 ನಲ್ಲಿ ಈ ವಿಮಾನಗಳ ಕಾರ್ಯಾಚರಣೆ
ಸದ್ಯ ಟರ್ಮಿನಲ್ 2ನಿಂದ ಇಂಡಿಗೋ, ಆಕಾಶ ಏರ್, ಸ್ಪೈಸ್‌ಜೆಟ್‌ಗಳು ಮತ್ತು ಅಲಯನ್ಸ್ ಏರ್ ಟರ್ಮಿನಲ್ 1ರಿಂದ ಕಾರ್ಯನಿರ್ವಹಿಸುತ್ತಿವೆ. ಇನ್ನ ಏರ್ ಏಷ್ಯಾ, ಏರ್ ಇಂಡಿಯಾ, ವಿಸ್ತಾರಾ ಹಾಗೂ ಸ್ಟಾರ್ ಏರ್ ಸಂಸ್ಥೆಗಳು ತಮ್ಮ ದೇಶಿಯ ಕಾರ್ಯಾಚರಣೆಗಳನ್ನು ಟರ್ಮಿನಲ್ 2 ನಡೆಯುತ್ತಿವೆ.

ಇನ್ನೂ ವಿವರವಾಗಿ ನೋಡುವುದಾದರೆ ಟರ್ಮಿನಲ್ 2ನಿಂದ ಒಟ್ಟು 27 ವಿಮಾನಯಾನ ಸಂಸ್ಥೆಗಳು ಪ್ರಯಾಣ ಸೇವೆ ಆರಂಭಿಸಿವೆ. ಅದರಲ್ಲಿ 25 ವಿದೇಶಿ ವಿಮಾನಯಾನ ಸಂಸ್ಥೆಗಳು ಮತ್ತು ಉಳಿದ ಎರಡು ದೇಶಿಯ ವಿಮಾನಯಾನ ಸಂಸ್ಥೆಗಳಾಗಿವೆ ಎಂದು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಮಾಹಿತಿ ನೀಡಿದೆ.
ಟರ್ಮಿನಲ್ 1 ನವೀಕರಣ
ಈಗಾಗಲೇ ಬೆಂಗಳೂರು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿರುವ ಟರ್ಮಿನಲ್ 2 ಅನ್ನು ವಿಶೇಷ ವಿನ್ಯಾಸದಿಂದ ನಿರ್ಮಿಸಲಾಗಿದೆ. ಬೆಂಗಳೂರು ಉದ್ಯಾನ ನಗರಿ ಮಾದರಿಯನ್ನು ಇದರಲ್ಲಿ ಅನುಸರಿಸಲಾಗಿದೆ. ಮುಂದಿನ ದಿನಗಳಲ್ಲಿ ಮೂರನೇ ಟರ್ಮಿನಲ್ ಹೇಗಿರಲಿದೆ ಎಂಬ ಕುತೂಹಲ ಉಂಟಾಗಿದೆ. ಸದ್ಯ ಕೆಲವೇ ದಿನಗಳಲ್ಲಿ ಟರ್ಮಿನಲ್ 1 ನವೀಕರಣ ಕಾರ್ಯ ಆರಂಭವಾಗಲಿದೆ.
ಟರ್ಮಿನಲ್ 2 ಆದಾಗಿನಿಂದ ಬೆಂಗಳೂರು ಏರ್‌ಪೋರ್ಟ್ ಆಕರ್ಷಣೀಯ ತಾಣವಾಗುತ್ತಿದೆ. ವಿಶಾಲ ಟರ್ಮಿನಲ್ ಆತ್ಯಾಧುನಿಕ ಒಳಾಂಗಣ ಜೊತೆಗೆ ವಿಮಾನಗಳ ಲ್ಯಾಂಡಿಂಗ್, ಟೇಕ್ ಆಫ್ ಚಟುವಟಿಕೆಗಳು, ರನ್ ಯಲ್ಲಿ ನಿಲುಗಡೆಯನ್ನು ಹಾಗೂ ಟಿ2 ಸುವ್ಯವಸ್ಥೆಯನ್ನು ಪ್ರಯಾಣಿಕರು ಆನಂದಿಸುತ್ತಿದ್ದಾರೆ.












Click it and Unblock the Notifications