ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಟರ್ಮಿನಲ್-2ಗೆ 'ಪ್ಲಾಟಿನಂ ರೇಟಿಂಗ್'
ಬೆಂಗಳೂರು, ಮೇ 18: ನೈಸರ್ಗಿಕ ಸಂಪನ್ಮೂಲಗಳು, ನೀರಿನ ಸಂರಕ್ಷಣೆ ಸೇರಿದಂತೆ ಉದ್ಯಾನ ನಗರಿಯ ಹಸಿರುಮಯ ಪರಿಕಲ್ಪನೆಯಡಿ ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ (KIA) ಟರ್ಮಿನಲ್ 2 ಅನ್ನು ನಿರ್ಮಿಸಲಾಗಿದೆ. ಇದೇ ಕಾರಣಕ್ಕೆ ಟಿ-2 ಸಮರ್ಥನೀಯತೆಗಾಗಿ ಮತ್ತೊಂದು ಖ್ಯಾತಿಗೆ ದೊರೆತಿದೆ.
ಬೆಂಗಳೂರು ವಿಮಾನ ನಿಲ್ದಾಣವು ಸುಸ್ಥಿರ ಬದ್ಧತೆ ಹೊಂದಿದೆ. ವ್ಯಾಪಾರದ ವಿಚಾರದಲ್ಲೂ ಮುಂದಿದೆ. ನೂತನ ಟರ್ಮಿನಲ್-2 ಮೂಲಕ ಜವಾಬ್ದಾರಿ ಹಾಗೂ ಪರಿಸರ ಪ್ರಜ್ಞೆ ಮೂಡಿಸುವಲ್ಲಿ ಯಶಸ್ವಿಯಾಗಿದೆ. ಈ ನಿಟ್ಟಿನಲ್ಲಿ ಟರ್ಮಿನಲ್-2ಗೆ 'ಭಾರತೀಯ ಗ್ರೀನ್ ಬಿಲ್ಡಿಂಗ್ ಕೌನ್ಸಿಲ್ ' (IGBC) ರೇಟಿಂಗ್ ಸಿಸ್ಟಮ್ ಅಡಿಯಲ್ಲಿ ಈ ''ಪ್ಲಾಟಿನಂ ರೇಟಿಂಗ್'' ದೊರೆತಿದೆ.

ಈ ಕುರಿತು ಮಾತನಾಡಿದ ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಲಿಮಿಟೆಡ್‌ನ ವ್ಯವಸ್ಥಾಪಕ ನಿರ್ದೇಶಕ ಮತ್ತು ಸಿಇಒ ಹರಿ ಮರಾರ್ ಅವರು, ಟರ್ಮಿನಲ್ 2 ಭಾರತೀಯ ಗ್ರೀನ್ ಬಿಲ್ಡಿಂಗ್ ಕೌನ್ಸಿಲ್ ನಿಂದ ಪ್ಲಾಟಿನಂ ರೇಟಿಂಗ್ ದೊರೆತಿದ್ದನ್ನು ಅಧಿಕೃತಪಡಿಸಿ ಹರ್ಷ ವ್ಯಕ್ತಪಡಿಸಿದರು.
ಇದು ನಮ್ಮ ಉದ್ದೇಶ ಮತ್ತು ಸುಸ್ಥಿರತೆಗೆ BIAL ನ ಅಚಲ ಬದ್ಧತೆಗೆ ಸಾಕ್ಷಿಯಾಗಿದೆ. ನೈಸರ್ಗಿಕ ಸಂಪನ್ಮೂಲಗಳು, ಶಕ್ತಿ ಮತ್ತು ನೀರನ್ನು ಸಂರಕ್ಷಿಸುವ ನಮ್ಮ ಪ್ರಯತ್ನಗಳನ್ನು ಪ್ರದರ್ಶಿಸುವ ಹಸಿರು ಪರಿಕಲ್ಪನೆಗಳು ಮತ್ತು ತಂತ್ರಗಳನ್ನು ಅನುಷ್ಠಾನಗೊಳಿಸುವ ನಮ್ಮ ಸಮರ್ಪಣೆ ಕುರಿತು ಟರ್ಮಿನಲ್ 2 ಸಾರಿ ಸಾರಿ ಹೇಳುತ್ತದೆ ಎಂದರು.

ಹಲವು ಆಕರ್ಷಣೆಗಳನ್ನು ಹೊಂದಿರುವ ಟಿ2
IGBC ಗ್ರೀನ್ ನ್ಯೂ ಬಿಲ್ಡಿಂಗ್ಸ್ ರೇಟಿಂಗ್ ಸಿಸ್ಟಮ್ ವ್ಯಾಪ್ತಿಯ ನಿಯಮಗಳಿಗೆ ಹೊಂದುವಂತೆ ಟರ್ಮಿನಲ್ 2 ವಿನ್ಯಾಸ ರೂಪಿಸಲಾಗಿರುವುದು ವಿಶೇಷ. ಈ ಟರ್ಮಿನಲ್ ಸುಸ್ಥಿರ, ವಾಸ್ತುಶಿಲ್ಪ ಮತ್ತು ವಿನ್ಯಾಸ, ಸೈಟ್ ಆಯ್ಕೆ ಮತ್ತು ಯೋಜನೆ, ನೀರಿನ ಸಂರಕ್ಷಣೆ, ಶಕ್ತಿ ದಕ್ಷತೆ, ಕಟ್ಟಡ ಸಾಮಗ್ರಿಗಳು ಮತ್ತು ಸಂಪನ್ಮೂಲಗಳು, ಒಳಾಂಗಣ ಪರಿಸರ ಗುಣಮಟ್ಟ, ನಾವೀನ್ಯತೆ ಮತ್ತು ಅಭಿವೃದ್ಧಿ ವಿಚಾರದಲ್ಲೂ ಆಕರ್ಷಣೆಯಾಗಿದೆ.
ಭಾರತೀಯ ಕೈಗಾರಿಕಾ ಒಕ್ಕೂಟದ ಕಾರ್ಯನಿರ್ವಾಹಕ ನಿರ್ದೇಶಕ ಕೆ ಎಸ್ ವೆಂಕಟಗಿರಿ ಅವರು ಮಾತನಾಡಿ, ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿನ ಟರ್ಮಿನಲ್ 2 ಒಂದು ಪ್ರವರ್ತಕ ಹೆಗ್ಗುರುತಾಗಿದೆ. ಬಯೋಫಿಲಿಕ್ ವಿನ್ಯಾಸ ತತ್ವಶಾಸ್ತ್ರವನ್ನು ತಲೆ ಎತ್ತಿರುವ ಭಾರತದ ಮೊದಲ 'ಟರ್ಮಿನಲ್ ಇನ್ ಎ ಗಾರ್ಡನ್' ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಅತ್ಯುತ್ತಮ ದೂರದೃಷ್ಟಿಯ ವಿಧಾನದಡಿ ರೂಪಿಸಲಾಗಿದೆ. ಹಸರೀಕರಣ,ಪರಿಸರ ವ್ಯವಸ್ಥೆಗೆ ಪೂರಕವಾಗಿದೆ ಎಂದು ಅವರು ಹೇಳಿದರು.
KIA ಟರ್ಮಿನಲ್ 2ನ ಅಂಶಗಳು
* ಬಯೋಫಿಲಿಕ್ ವಿನ್ಯಾಸದಡಿ ನಿರ್ಮಾಣವಾದ ಟರ್ಮಿನಲ್.
* ಟಿ2 ಒಟ್ಟು 327,460 ಚದರ ಕಿಲೋ ಮಿಟರ್ ವ್ಯಾಪ್ತಿಯಲ್ಲಿ ತಲೆ ಎತ್ತಿದೆ.
* ಮಳೆನೀರು ಕೊಯ್ಲು ಮಾಡಲು 37,500 ಸಾಮರ್ಥ್ಯದ ರೀಚಾರ್ಜ್ ಕೊಳ ನಿರ್ಮಿಸಲಾಗಿದೆ.
* ನೀರು-ಸಮರ್ಥ ಕೊಳಾಯಿ ನೆಲೆವಸ್ತುಗಳ ಕಾರಣದಿಂದಾಗಿ ಹೊರಗಿನಿಂದ ತರಿಸುವ ಕುಡಿಯುವ ನೀರಿನಲ್ಲಿ ಶೇ.37ರಷ್ಟು ಕಡಿತದ ಕುರಿತು ಜಾಗೃತಿ.
* ಟರ್ಮಿನಲ್ ಕಟ್ಟಡದ ಒಟ್ಟು ವಾರ್ಷಿಕ ವಿದ್ಯುತ್ ಬಳಕೆ ಶೇ.16.7ರಷ್ಟಿನಿಂದ 6.5 MW ವರೆಗೆ ತಗ್ಗಿದೆ.
* ಶೇ.90ಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ಕಟ್ಟಿಗೆ ಆಧಾರದಲ್ಲಿ ನಿರ್ಮಾಣವಾಗಿದ್ದರಿಂದ ಭವಿಷ್ಯದಲ್ಲಿ ಶೀಘ್ರ ನವೀಕರಣ ಸರಳ.












Click it and Unblock the Notifications