Video: ಬೆಂಗಳೂರು ಸುರಕ್ಷಿತವಲ್ಲ... ಯಾಕೆ? ಈ ವೀಡಿಯೋ ನೋಡಿ..

ಕೆಲಸ ಮುಗಿಸಿ ಮನೆಗೆ ತೆರಳುತ್ತಿದ್ದ ಯುವತಿಯೊಂದಿಗೆ ಸಣ್ಣ ವಯಸ್ಸಿನ ಹುಡುಗನೊಬ್ಬ ಅಸಭ್ಯವಾಗಿ ವರ್ತಿಸಿದ್ದಾನೆ. ಈ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದೆ. ಯುವತಿಯೊಬ್ಬಳು ರಸ್ತೆಯಲ್ಲಿ ವ್ಲಾಗ್ ಮಾಡಿಕೊಂಡು ಹೋಗುವಾಗ ಸಣ್ಣ ವಯಸ್ಸಿನ ಹುಡುಗನೊಬ್ಬ ಕೆಟ್ಟದಾಗಿ ಸ್ಪರ್ಶಿಸಿದ್ದಾನೆ. ಈ ಘಟನೆಯಿಂದ ಒಂದು ಕ್ಷಣ ಯುವತಿ ಬೆಚ್ಚಿಬಿದ್ದಿದ್ದಾಳೆ.

ಹೌದು.. ಬಿಟಿಎಂ ಲೇಔಟ್‌ನಲ್ಲಿ ಸೈಕಲ್‌ನಲ್ಲಿ ತೆರಳುತ್ತಿದ್ದ ಸರಿಸುಮಾರು ಹತ್ತು ವರ್ಷದ ಬಾಲಕನೊಬ್ಬ ಯುವತಿಯ ಎದೆಯನ್ನು ಸ್ಪರ್ಶಿಸಿ ವೇಗದಲ್ಲಿ ಸೈಕಲ್ ಓಡಿಸಿಕೊಂಡು ಹೋಗಿದ್ದಾನೆ. ಇದರಿಂದ ಯವತಿ ಒಂದು ಕ್ಷಣ ಶಾಕ್ ಆಗಿದ್ದಾಳೆ. ಅಲ್ಲದೆ ಈ ದೃಶ್ಯ ಯುವತಿ ಮಾಡುತ್ತಿದ್ದ ವಿಡಿಯೋದಲ್ಲೇ ಸೆರೆಯಾಗಿದೆ.

Bengaluru is not safe why watch this video

ಯುವತಿ ನಂತರ ತನಗಾದ ಅನುಭವವನ್ನು ಹಂಚಿಕೊಂಡು ಕಣ್ಣೀರು ಹಾಕಿದ್ದಾಳೆ. ಆಕೆಯ ಬಟ್ಟೆ ಮೇಲೆ ಹುಡುಗನ ಬೆರಳಿನ ಗುರುತು ಕಂಡು ಬಂದಿದೆ. ವೀಡಿಯೋದಲ್ಲಿ ಯುವತಿ ತನಗಾದ ಕೆಟ್ಟ ಅನುಭವಕ್ಕೆ ಬೇಸರ ವ್ಯಕ್ತಪಡಿಸಿ ಕಣ್ಣೀರು ಹಾಕಿದ್ದಾಳೆ. ತನಗೆ ಈ ಸ್ಥಳ ಸುರಕ್ಷಿತವಾಗಿ ಕಾಣಿಸುತ್ತಿಲ್ಲ ಎಂದಿದ್ದಾಳೆ.

ನನ್ನ ಜೀವನದಲ್ಲಿ ಯಾವತ್ತೂ ಕೂಡ ಈ ರೀತಿ ನನಗೆ ಆಗಿಲ್ಲ. ನಾನು ವಿಡಿಯೋ ಮಾಡಿಕೊಂಡು ಹೋಗುತ್ತಿದೆ. ಆಗ ನಾನು ಹೋಗುವ ಕಡೆಗೆ ಹುಡುಗ ಸೈಕಲ್‌ನಲ್ಲಿ ಹೋಗುತ್ತಿದ್ದ. ಮುಂದೆ ಹೋಗಿ ನನ್ನನ್ನು ನೋಡಿ ಯೂ-ಟರ್ನ್ ಮಾಡಿಕೊಂಡು ಆ ಹುಡುಗ ಬಂದನು. ಬಳಿಕ ನಾನು ಮಾತನಾಡುವಂತೆ ಮಾತನಾಡಿ ಗೇಲಿ ಮಾಡಿ ನನ್ನೊಂದಿಗೆ ಅಸಭ್ಯವಾಗಿ ನಡೆದುಕೊಂಡಿದ್ದಾನೆ ಎಂದು ಯುವತಿ ವೀಡಿಯೋದಲ್ಲಿ ಹೇಳಿಕೊಂಡಿದ್ದಾಳೆ.

ನಂತರ ವೇಗವಾಗಿ ಹೋಗುತ್ತಿದ್ದ ಹುಡುಗನನ್ನು ಸ್ಥಳೀಯರು ಹಿಡಿದುಕೊಂಡರು. ಅವನು ಇನ್ನೂ ಚಿಕ್ಕಹುಡುಗ ಬಿಟ್ಟುಬಿಡಿ ಎಂದು ನನ್ನ ಬಳಿ ಕೇಳಿಕೊಂಡರು. ಆ ಹುಡುಗ ಕೂಡ ನಾನು ಸೈಕಲ್ ಓಡಿಸುವಾಗ ನಿಯಂತ್ರಣ ಕಳೆದುಕೊಂಡು ನಿಮ್ಮನ್ನು ತಳ್ಳಿದೆ ಎಂದು ಹೇಳಿಕೊಂಡಿದ್ದಾನೆ. ನಾನು ಮಾಡುತ್ತಿದ್ದ ವಿಡಿಯೋದಲ್ಲಿ ಆ ಹುಡುಗ ನಡೆದುಕೊಂಡ ರೀತಿ ಸ್ಪಷ್ಟವಾಗಿ ಸೆರೆಯಾಗಿದೆ. ಅದನ್ನು ನೋಡಿದಾಗಲೇ ಜನ ನನ್ನನ್ನು ನಂಬುತ್ತಾರೆ ಎಂದು ಆಕೆ ಹೇಳಿಕೊಂಡಿದ್ದಾರೆ.

ಆ ಹುಡುಗ ಇನ್ನೂ ಚಿಕ್ಕವನಾಗಿರುವ ಕಾರಣ ನಾನು ಯಾವುದೇ ದೂರು ದಾಖಲಿಸಲಿಲ್ಲ. ನನಗೆ ಆ ಹುಡುಗನ ಭವಿಷ್ಯವನ್ನು ಹಾಳು ಮಾಡಲು ಮನಸ್ಸಿಲ್ಲ ಎಂದು ಹುಡುಗಿ ವಿಡಿಯೋದಲ್ಲಿ ಕಣ್ಣೀರು ಹಾಕುತ್ತಾ ಹೇಳಿಕೊಂಡಿದ್ದಾಳೆ. ಈ ವೀಡಿಯೋಕ್ಕೆ ಹಲವಾರು ಜನ ಪ್ರತಿಕ್ರಿಯೆ ನೀಡಿದ್ದು, ಹುಡುಗಿಗೆ ದೂರು ದಾಖಲಿಸಲು ಸಲಹೆಯನ್ನು ನೀಡಿದ್ದಾರೆ.

ವೀಡಿಯೋಕ್ಕೆ ವಿಭಿನ್ನ ರೀತಿಯಲ್ಲಿ ಕಾಮೆಂಟ್‌ಗಳು ಬಂದಿವೆ. ತಪ್ಪು ಚಿಕ್ಕವರು ಮಾಡಿದರೆ ತಪ್ಪೇ ದೊಡ್ಡವರು ಮಾಡಿದರೂ ತಪ್ಪೇ.. ಅಷ್ಟಕ್ಕೂ ಇದು ಸಣ್ಣ ತಪ್ಪಲ್ಲ. ಆ ಹುಡುಗನ ಮನಸ್ಥಿತಿ ಈ ವಿಡಿಯೋದಲ್ಲಿ ಸ್ಪಷ್ಟವಾಗಿ ತೋರಿಸುತ್ತದೆ. ಆತನ ಭವಿಷ್ಯ ಈ ವೀಡಿಯೋದಲ್ಲಿ ಕಾಣಿಸುತ್ತಿದೆ. ನೀವು ಎಫ್‌ಐಆರ್ ದಾಖಲಿಸಿ ಎಂದು ನೆಟ್ಟಿಗರು ಯುವತಿಗೆ ಸಲಹೆ ನೀಡಿದ್ದಾರೆ. ಈ ವೀಡಿಯೋ ನಿಜಕ್ಕೂ ಬೆಂಗಳೂರಿಗರನ್ನು ಬೆಚ್ಚಿಬೀಳಿಸಿದೆ. ಬೆಂಗಳೂರು ಎಷ್ಟು ಸುರಕ್ಷಿತ ಎನ್ನುವ ಪ್ರಶ್ನೆಯನ್ನು ಹುಟ್ಟುಹಾಕಿದೆ.

ಸಣ್ಣ ವಯಸ್ಸಿನ ಹುಡುಗರು ತೋರುತ್ತಿರುವ ಇಂತಹ ವರ್ತನೆ ನಿಜಕ್ಕೂ ಆತಂಕ ಮೂಡಿಸುವಂತಿದೆ. ಸಣ್ಣ ವಯಸ್ಸಿನಲ್ಲಿ ಹುಡುಗರ ಮನಸ್ಥಿತಿ ಹೇಗಾಗಿದೆ ಎನ್ನುವುದಕ್ಕೆ ಈ ದೃಶ್ಯಯವೇ ಸಾಕ್ಷಿ. ಇಂತಹ ಘಟನೆಗಳು ಮುಂದುವರೆಯದಂತೆ ಪೊಲೀಸರು ಕ್ರಮ ಕೈಗೊಳ್ಳುವುದು ಅಗತ್ಯ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+