ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಸಕಾಲ ಸೇವೆ ಬಳಕೆ: ಬೆಂಗಳೂರಿಗೆ ಕೊನೆಯ ಸ್ಥಾನ

|
Google Oneindia Kannada News

ಬೆಂಗಳೂರು, ಅಕ್ಟೋಬರ್ 15: 'ಸಕಾಲ' ಸೇವೆ ಅನುಷ್ಠಾನದಲ್ಲಿ ಬೆಂಗಳೂರು ಕೊನೆಯ ಸ್ಥಾನದಲ್ಲಿದೆ. ಸ್ವತಃ ಸಚಿವ ಸುರೇಶ್ ಕುಮಾರ್ ಅವರು ಇದನ್ನು ಹೇಳಿದ್ದಾರೆ.

'2012 ರಲ್ಲಿ ಸಕಾಲ ಪ್ರಾರಂಭವಾದಾಗ 151 ಸೇವೆಗಳನ್ನಷ್ಟೆ ನೀಡಲಾಗುತ್ತಿತ್ತು, ಈಗ ಸಂಖ್ಯೆ 1026 ಕ್ಕೆ ಏರಿದೆ. ಬಿಬಿಎಂಪಿ ವ್ಯಾಪ್ತಿಯಲ್ಲಿ ಸಹ ಅರ್ಜಿ ಸ್ವೀಕಾರ ಕಡಿಮೆ ಆಗಿದೆ. ಹಾಗಿದ್ದರೂ ಬೆಂಗಳೂರಲ್ಲಿ ಸಕಾಲದ ಉಪಯೋಗ ಸರಿಯಾಗಿ ಆಗುತ್ತಿಲ್ಲ' ಎಂದು ಅವರು ಹೇಳಿದರು.

ಸಹಾಯಕ ಕಂದಾಯ ಇಲಾಖೆಯಲ್ಲಿ ಖಾತಾ ನೋಂದಣಿಗೆ ಅವಕಾಶವಿಲ್ಲ!ಸಹಾಯಕ ಕಂದಾಯ ಇಲಾಖೆಯಲ್ಲಿ ಖಾತಾ ನೋಂದಣಿಗೆ ಅವಕಾಶವಿಲ್ಲ!

ಬೆಂಗಳೂರು ನಗರ ಜಿಲ್ಲೆಯ ಎಲ್ಲ ಅಧಿಕಾರಿಗಳಿಗೆ ಇದೇ 20ರೊಳಗೆ ಕಾರ್ಯಾಗಾರ ಏರ್ಪಡಿಸಲು ಜಿಲ್ಲಾಧಿಕಾರಿಗೆ ಸೂಚಿಸಲಾಗಿದ್ದು, ಪ್ರಾದೇಶಿಕ ಆಯುಕ್ತರು ಪ್ರತಿ 15 ದಿನಗಳಿಗೊಮ್ಮೆ ಸಕಾಲ ಸ್ಥಿತಿ-ಗತಿ ಕುರಿತು ಪರಿಶೀಲಿನೆ ನಡೆಸುವಂತೆ ಹೇಳಿದ್ದೇನೆ ಎಂದು ಸುರೇಶ್ ಕುಮಾರ್ ಹೇಳಿದ್ದಾರೆ.

Bengaluru Is In Last Place In Using Sakala Service

'ಸಕಾಲದ ಬಗ್ಗೆ ಕೆಲವು ದೂರುಗಳು ಸಹ ಇವೆ. 15 ದಿನಗಳ ಒಳಗಾಗಿ ಸೇವೆ ನೀಡಬೇಕು ಎಂದು ಇದ್ದರೆ 14 ನೇ ದಿನ ಅರ್ಜಿ ತಿರಸ್ಕಾರವಾಗುತ್ತಿದೆ. ದೂರು ತೆಗೆದುಕೊಳ್ಳುವ ಸಮಯದಲ್ಲಿಯೇ ಅರ್ಜಿಗಳನ್ನು ಪರಿಶಿಲನೆ ನಡೆಸುವ ವ್ಯವಸ್ಥೆಯನ್ನು ಜಾರಿಗೆ ತರಲಾಗುತ್ತದೆ' ಎಂದು ಅವರು ಹೇಳಿದರು.

ಬಿಡಿಎ 'ಸಕಾಲ' ಕೌಂಟರ್‌ಗೆ ಮರು ಚಾಲನೆ: ವಲಯ ಮಟ್ಟದಲ್ಲೂ ಲಭ್ಯ! ಬಿಡಿಎ 'ಸಕಾಲ' ಕೌಂಟರ್‌ಗೆ ಮರು ಚಾಲನೆ: ವಲಯ ಮಟ್ಟದಲ್ಲೂ ಲಭ್ಯ!

ಯಾವ ಇಲಾಖೆಯ ಯಾವ ಸೇವೆಯನ್ನು ಎಷ್ಟು ದಿನಗಳ ಒಳಗಾಗಿ ನೀಡಬೇಕು ಎಂಬ ಬಗ್ಗೆ ಮಾಹಿತಿಯನ್ನು ತೆಗೆದುಕೊಂಡು ದಿನ ನಿಗದಿ ಮಾಡಲಾಗುದು. ಸಕಾಲ ಬಳಕೆಯಲ್ಲಿ ಯಾವ ಜಿಲ್ಲೆ ಯಾವ ಸ್ಥಾನದಲ್ಲಿದೆ ಎಂಬ ಪಟ್ಟಿಯನ್ನು ಕೆಲವೇ ದಿನಗಳಲ್ಲಿ ಬಿಡುಗಡೆ ಮಾಡಲಾಗುವುದು ಎಂದು ಹೇಳಿದರು.

English summary
Sakala service not effectivley used by Bengalurians. Minister Seresh Kumar upset about officers work about Sakala service.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X