ಮೀಟೂ ಕತೆಗಳ ಬಗ್ಗೆ ದಿಟ್ಟ ಪೊಲೀಸ್ ಅಧಿಕಾರಿ ರೂಪಾ ಮೌದ್ಗಿಲ್ ಪ್ರತಿಕ್ರಿಯೆ
ಬೆಂಗಳೂರು, ಅಕ್ಟೋಬರ್ 20: ಕರ್ನಾಟಕ ಪೊಲೀಸ್‌ನ ದಿಟ್ಟ ಮಹಿಳಾ ಪೊಲೀಸ್ ಅಧಿಕಾರಿ ರೂಪಾ ಮೌದ್ಗಿಲ್ ಅವರು ಮೀಟೂ ಅಭಿಯಾನದ ಕುರಿತು ಪತ್ರಕರ್ತರಿಗೆ ಪ್ರತಿಕ್ರಿಯೆ ನೀಡಿದ್ದಾರೆ.
Many times thr r complaints frm women who approach police about their sexual exploitation by police officers. A pro-active approach to this would be vigilance on such behaviours of police officers,just like thr is vigilance now on corruption related activities .@IPS_Association
— D Roopa IPS (@D_Roopa_IPS) October 19, 2018
ಎಷ್ಟೋ ರಂಗಗಳಲ್ಲಿ ಮೀಟೂ ಪ್ರಕರಣಗಳು ದಾಖಲಾಗಿವೆ. ಈ ಪ್ರಕರಣಗಳ ಕುರಿತು ಸೋಶಿಯಲ್ ಮೀಡಿಯಾ ಮೂಲಕ ಹೋರಾಟ ನಡೆಸುವುದು ಅವರವರ ವೈಯಕ್ತಿಕ ಆಯ್ಕೆಗೆ ಬಿಟ್ಟಿದ್ದು. ಅಥವಾ ಕಾನೂನು ಮೂಲಕ ಹೋರಾಟ ಮಾಡುವ ಆಯ್ಕೆಯೂ ಅವರವರ ವಿವೇಚನೆಗೆ ಬಿಟ್ಟಿದ್ದು ಎಂದು ಅವರು ಹೇಳಿದ್ದಾರೆ.

ಭ್ರಷ್ಟಾಚಾರ ನಿಗ್ರಹ ದಳ ಇದ್ದಂತೆ, ಆಫೀಸರ್ ಏನಾದರೂ ಲೈಂಗಿಕ ಕಿರುಕುಳ ಕೊಡುತ್ತಾರಾ? ಎಂದು ಚೆಕ್ ಮಾಡಲು ಈ ರೀತಿ ವಿಜಿಲೆನ್ಸ್ ವಿಂಗ್ ಇರಬೇಕಾಗುತ್ತದೆ. ಪೊಲೀಸ್ ಸ್ಟೇಷನ್ ಗೆ ಬಂದ ನೊಂದ ಮಹಿಳೆಯರ ಜತೆ ಹೇಗೆ ವರ್ತಿಸುತ್ತಾರೆ. ಅಶ್ಲೀಲವಾದ ಮೆಸೇಜ್ ಕಳಿಸುತ್ತಾರಾ? ಫೋನ್ ಮಾಡ್ತಾರಾ? ಅಂಥದ್ದರ ಮೇಲೆ ನಿಗಾ ಇಡಬೇಕಾಗುತ್ತದೆ.












Click it and Unblock the Notifications