ಮಾರ್ಚ್‌ನಲ್ಲಿ 14ನೇ ಆವೃತ್ತಿಯ 'ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ', ದಿನಾಂಕ, ಸಿನಿಮಾಗಳ ವಿವರ ಇಲ್ಲಿದೆ
ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ (BIFF) 14ನೇ ಆವೃತ್ತಿಯು ಮುಂದಿನ ತಿಂಗಳ ಮಾರ್ಚ್ ನಲ್ಲಿ ಆರಂಭವಾಗಲಿದೆ. ಯಾವ ದಿನಾಂಕದಂದು ಆರಂಭವಾಗಲಿ, ಎಷ್ಟು ಚಿತ್ರಗಳು ಆಯ್ಕೆಯಾಗಲಿವೆ ಎಂಬ ಮಾಹಿತಿ ಇಲ್ಲಿ ತಿಳಿಯಿರಿ.
ಬೆಂಗಳೂರು, ಫೆಬ್ರವರಿ 08: ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ (BIFF) 14ನೇ ಆವೃತ್ತಿಯು ಮುಂದಿನ ತಿಂಗಳ ಮಾರ್ಚ್ 23 ರಿಂದ ಆರಂಭವಾಗಲಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಅಧಿಕೃತಪಡಿಸಿದ್ದಾರೆ.
ಬೆಂಗಳೂರಲ್ಲಿ ಮಂಗಳವಾರ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ ಅಧಿಕೃತ 'ಲಾಂಛನ' ಬಿಡುಗಡೆ ಮಾಡಿ ಈ ಮಾಹಿತಿ ತಿಳಿಸಿದರು. ಅಟಲ್ ಬಿಹಾರಿ ವಾಜಪೇಯಿ ಕ್ರೀಡಾಂಗಣದಲ್ಲಿ ಡಾ ಪುನೀತ್ ರಾಜ್‌ಕುಮಾರ್ ರಸ್ತೆ ಉದ್ಘಾಟನಾ ಸಮಾರಂಭಕ್ಕೆ ಆಗಮಿಸಿದ್ದ ಬೊಮ್ಮಾಯಿ ಕನ್ನಡ ನಟರು ಮತ್ತು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಸದಸ್ಯರ ಸಮ್ಮುಖದಲ್ಲಿ ಲೋಗೋ ಬಿಡುಗಡೆ ಆಯಿತು. ಈ ಉತ್ಸವು ಮಾರ್ಚ್ 23ಕ್ಕೆ ಆರಂಭವಾಗಿ ಮಾ.30 ರವರೆಗೆ ನಡೆಯುವುದಾಗಿ ಅವರು ತಿಳಿಸಿದರು.
ಇನ್ನು ಚಲನ ಚಿತ್ರೋತ್ಸವಕ್ಕೆ ಸಂಬಂಧಿಸಿದಂತೆ ಇಂದು ಬುಧವಾರ ಕಂದಾಯ ಸಚಿವರು ಆದ ಬಿಐಎಫ್‌ಎಫ್‌ನ ಸಂಘಟನಾ ಸಮಿತಿಯ ಅಧ್ಯಕ್ಷ ಆರ್ ಅಶೋಕ್ ಹಾಗೂ ಕರ್ನಾಟಕ ಚಲನಚಿತ್ರ ಅಕಾಡೆಮಿ (KCA) ಅಧ್ಯಕ್ಷ ಅಶೋಕ್ ಕಶ್ಯಪ್ ಅಗತ್ಯ ಚರ್ಚೆಗಳಿಗಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಭೇಟಿ ಮಾಡಲಿದ್ದಾರೆ.

ಈ ವೇಳೆ ಚಿತ್ರೋತ್ಸವದ ಸಿದ್ಧತೆ, ಸಿನಿಮಾಗಳ ಪ್ರದರ್ಶನ ಸೇರಿದಂತೆ ಇನ್ನಿತರ ವ್ಯವಸ್ಥೆಗಳ ಬಗ್ಗೆ ನಿರ್ಧಾರಗಳು ಆಗಲಿವೆ ಎನ್ನಲಾಗಿದೆ. ಪ್ರಸ್ತಕ 14ನೇ ಆವೃತ್ತಿಯ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ವಿಭಾಗಗಳು ಮತ್ತು ಸ್ಪರ್ಧೆಗಳಲ್ಲಿ ಸುಮಾರು 300 ಚಲನಚಿತ್ರಗಳನ್ನು ಪ್ರದರ್ಶನಗೊಳ್ಳಲಿವೆ. ರಾಜ್ಯ ಚಲಚಿತ್ರ ಅಕಾಡೆಮಿ ವಿಶ್ವದಾದ್ಯಂತ ಚಲನಚಿತ್ರಗಳನ್ನು ಕ್ಯುರೇಟಿಂಗ್ ಮಾಡಲು ಆರಂಭಿಸುತ್ತದೆ. ಉತ್ಸವದಲ್ಲಿನ ಸ್ಪರ್ಧೆಗೆ ಕುರಿತಂತೆ ಅಕಾಡೆಮಿಯು ಚಿತ್ರಗಳ ಆಯ್ಕೆ ಮಾಡಿ ಪ್ರದರ್ಶನಕ್ಕೆ ಅಂತಿಮಗೊಳಿಸಲು ಸಜ್ಜಾಗಿದೆ ಎಂದು ಆಯೋಜಕರು ತಿಳಿಸಿದ್ದಾರೆ.












Click it and Unblock the Notifications