₹9,000 ಕೋಟಿ ವೆಚ್ಚದಲ್ಲಿ ಬೆಂಗಳೂರು ಏರ್‌ಪೋರ್ಟ್ ವಿಸ್ತರಣೆಗೆ ಪ್ಲಾನ್: Bengaluru International Airport
ಬೆಂಗಳೂರು, ಜೂನ್ 14: ಬೆಂಗಳೂರಿನಲ್ಲಿನ ಹಾಲಿ ಕೆಂಪೇಗೌಡ ಇಂಟರ್‌ನ್ಯಾಷನಲ್ ಏರ್‌ಪೋರ್ಟ್ ಪ್ರಯಾಣಿಕರ ಸಂಖ್ಯೆ ವಾರ್ಷಿಕವಾಗಿ ಏರಿಕೆ ಆಗುತ್ತಿದೆ. ಈ ಸಂಬಂಧ ನಗರದ ಸಮೀಪ ಬೆಂಗಳೂರು ಎರಡನೇ ವಿಮಾನ ನಿಲ್ದಾಣ (Bengaluru Second Airport) ನಿರ್ಮಿಸಲು ರಾಜ್ಯ ಸರ್ಕಾರ ಪ್ಲಾನ್ ಮಾಡಿಕೊಂಡಿದೆ. ಆದರೆ ಇದರ ಸ್ಥಾಪನೆಗೆ ಇನ್ನೂ 15 ವರ್ಷ ಹಿಡಿಯಬಹುದು. ಸದ್ಯ ಪ್ರಯಾಣಿಕರ ಓಡಾಟ ನೋಡಿಕೊಂಡು ಹಾಲಿ ಏರ್‌ಪೋರ್ಟ್ ವಿಸ್ತರಣೆಗೆ KIAL ಹೊಸ ಪ್ಲಾನ್ ಮಾಡಿಕೊಂಡಿದೆ.
ಬೆಂಗಳೂರಿನ ವಿಮಾನ ನಿಲ್ದಾಣದಲ್ಲಿ ಮುಂದಿನ ದಿನಗಳಲ್ಲಿ ದೊಡ್ಡ ಬದಲಾವಣೆ ಆಗಲಿದೆ. ಏಕೆಂದರೆ ಪ್ರಯಾಣಿಕರನ್ನು ಗಮನದಲ್ಲಿಟ್ಟುಕೊಂಡು ವಿಸ್ತರಣೆಗೆ ಯೋಜನೆ ರೂಪಿಸಲಾಗಿದೆ. ಈ ಸಂಬಂಧ ಏರ್‌ಪೋರ್ಟ್ ನಿರ್ವಹಣಾ ಕಂಪನಿಯಾಗಿರುವ ಕಂಪನಿಯಾದ ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಲಿಮಿಟೆಡ್ (BIAL), ಬಾಂಡ್‌ಗಳ ಮೂಲಕ ₹9,000 ಕೋಟಿ (ಸುಮಾರು $1.1 ಬಿಲಿಯನ್) ಹಣ ಸಂಗ್ರಹಿಸಲಿದೆ.

BIAL ಈಗಾಗಲೇ ಹಣಕಾಸು ಸಂಸ್ಥೆಗಳಿಂದ ಪಡೆದ ಸಾಲವನ್ನು ಮರ ಪಾವತಿಸಿ ಮತ್ತೆ ಹೊಸ ಸಾಲ ಮಾಡುವ ಗುರಿ ಇಟ್ಟುಕೊಂಡಿದೆ. ಆ ಹಣವನ್ನು ಭವಿಷ್ಯದಲ್ಲಿ ಹೆಚ್ಚಿನ ಪ್ರಯಾಣಿಕರನ್ನು ನಿರ್ವಹಿಸಲು ಹಾಲಿ ವಿಮಾನ ನಿಲ್ದಾಣವನ್ನು ವಿಸ್ತರಿಸಲು ಬಳಕೆ ಮಾಡಿಕೊಳ್ಳಲಿದೆ. ಈ ಸಂಬಂಧ BIAL ಕಂಪನಿಯು ICICI ಬ್ಯಾಂಕ್, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ಮತ್ತು ಆಕ್ಸಿಸ್ ಬ್ಯಾಂಕ್‌ನಂತಹ ಪ್ರಮುಖ ಬ್ಯಾಂಕ್‌ಗಳ ಜತೆ ಸಮಾಲೋಚನೆ ನಡೆಸಿದೆ. ಎಲ್ಲವು ಅಂದುಕೊಂಡಂತೆ ಆಗಿ ಲೋನ್ ಬಿಡುಗಡೆ ಆದರೆ ವಿಸ್ತರಣೆ ಕಾರ್ಯ ಮಾಡಲಿದೆ.
15 ವರ್ಷಗಳ ಬಾಂಡ್ ಆದಾರಗಳಡಿ ಹಣ ಪಡೆಯಲು ಮುಂದಾಗಿದೆ. ಅಷ್ಟು ಹಣದ ಬಡ್ಡಿ ಸುಮಾರು 8.15% ಆಗಿರಬಹುದು. ಈ ಹಣದ ಬಡ್ಡಿಯು ಮಾರುಕಟ್ಟೆ ಸ್ಥಿತಿಗತಿಗಳ ಆಧಾರದಲ್ಲಿ ಬದಲಾಗುತ್ತದೆ. ಯಾವುದೇ ಬಾಂಡ್‌ಗಳನ್ನು ಷೇರು ಪೇಟೆಯಲ್ಲಿ ಮಾರಾಟ ಮಾಡಲ್ಲ ಎಂದು ಬಿಐಎಎಲ್ ತಿಳಿಸಿದೆ.

KIA ವಿಸ್ತರಣೆ ಅಗತ್ಯವಿದೆಯೇ?
ಬಿಐಎಎಲ್ ಹಾಗೂ ಕರ್ನಾಟಕ ರಾಜ್ಯ ಸರ್ಕಾರ ನೀಡಿರುವ ಮಾಹಿತಿ ಪ್ರಕಾರ, ಕೆಂಪೇಗೌಡ ಇಂಟರ್‌ನ್ಯಾಷನಲ್ ಏರ್‌ಪೋರ್ಟ್ ನಲ್ಲಿ ಪ್ರಯಾಣಿಕರ ಹೆಚ್ಚಳವನ್ನು ದೃಢಪಡಿಸಿವೆ. ಬೆಳೆಯುತ್ತಿರುವ ವಿಮಾನ ಪ್ರಯಾಣ ಪ್ರೋತ್ಸಾಹಿಸಲು ಅಗತ್ಯ ಮೂಲ ಸೌಕರ್ಯ ದೊರೆಯವುಂತೆ ಮಾಡಲು ಕೇಂದ್ರ ಸರ್ಕಾರ ಭಾರತದಲ್ಲಿ ವಿಮಾನ ನಿಲ್ದಾಣಗಳನ್ನು ನಿರ್ಮಿಸುತ್ತಿದೆ. ಇದಕ್ಕೆ ಕರ್ನಾಟಕ ಹೊರತಾಗಿಲ್ಲ. ಭವಿಷ್ಯದ ದೃಷ್ಟಿಯಿಂದ ಈಗಾಗಲೇ ಬೆಂಗಳೂರು ಎರಡನೇ ವಿಮಾನ ನಿಲ್ದಾಣ ಆರಂಭಿಕ ಪ್ರಕ್ರಿಯೆ ನಡೆದಿವೆ. ಸ್ಥಳ ಗುರುತಿಸಿದ್ದು, ಎಎಐ ಅಧಿಕಾರಿಗಳಿಂದ ವರದಿ ಸಲ್ಲಿಕೆ ಆಗಬೇಕು. ಜಾಗ ಫೈನಲ್ ಆದ ಬಳಿಕ ಮುಂದಿನ ಪ್ರಕ್ರಿಯೆ ಶುರುವಾಗಲಿದೆ.
ಏರ್‌ಪೋರ್ಟ್‌ಗೆ AAA ರೇಟಿಂಗ್
ಈ ಮಧ್ಯೆ ಹಾಲಿ ಏರ್‌ಪೋರ್ಟ್ ಅನ್ನು ಅಗತ್ಯತೆ ನೋಡಿಕೊಂಡು ಸೂಕ್ತವಾಗಿ ವಿಸ್ತರಣೆ ಮಾಡಬೇಕು. ಈ ಬಗ್ಗೆ ಗುರಿ ಹೊಂದಿರುವ BIAL ಗೆ ಈಗಾಗಲೇ ಕ್ರೆಡಿಟ್ ರೇಟಿಂಗ್ ಏಜೆನ್ಸಿಗಳು AAA ರೇಟಿಂಗ್ ನೀಡಿವೆ. ಈ ಮೂಲಕ ಬೆಂಗಳೂರು ಏರ್‌ಪೋರ್ಟ್ ಮೇಲೆ ಹೂಡಿಕೆ ಮಾಡಬಹುದು. ಅದು ಸುರಕ್ಷಿತ ಎಂದು ಈ ರೇಟಿಂಗ್‌ಗಳು ಹೇಳುತ್ತವೆ. ಇದೆಲ್ಲ ನೋಡಿಕೊಂಡು ಸಮರ್ಪಕ ಹಣ ಸಂಗ್ರಹಿಸಿ ವಿಸ್ತರಣೆಗೆ ಕಂಪನಿ ಮುಂದಾಗಿದೆ.












Click it and Unblock the Notifications