BLR Airport: ಬೆಂಗಳೂರು ಏರ್‌ಪೋರ್ಟ್ T2ಗೆ 5 ಸ್ಟಾರ್ ಮಾನ್ಯತೆ: ದೇಶದ ಮೊದಲ ಟರ್ಮಿನಲ್..
ಬೆಂಗಳೂರು, ಏಪ್ರಿಲ್ 10: ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಬೆಂಗಳೂರಿನ ಟರ್ಮಿನಲ್ 2 ಸ್ಕೈಟ್ರಾಕ್ಸ್ '5 ಸ್ಟಾರ್ ಮಾನ್ಯತೆ' ಪಡೆದ ಭಾರತದ ಮೊದಲ ಟರ್ಮಿನಲ್ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಜಾಗತಿಕವಾಗಿ ಗೌರವಿಸಲ್ಪಡುವ ಸ್ಕೈಟ್ರಾಕ್ಸ್ ಮಾನದಂಡಗಳ ಆಧಾರದ ಮೇಲೆ ಈ ಮಾನ್ಯತೆಯನ್ನು ನೀಡಲಾಗಿದೆ. ಬೆಂಗಳೂರು ಏರ್‌ಪೋರ್ಟ್ ಸಾಧನೆಗಳು ನಿರಂತರವಾಗಿ ಹೆಚ್ಚಾಗುತ್ತಿದೆ.
ಭಾರತ ಮತ್ತು ದಕ್ಷಿಣ ಏಷ್ಯಾದ ಅತ್ಯುತ್ತಮ ಪ್ರಾದೇಶಿಕ ವಿಮಾನ ನಿಲ್ದಾಣ ಎಂಬ ಹಿರಿಮೆಯನ್ನು ಸತತ ಎರಡನೇ ಬಾರಿ ಮುಡಿಗೇರಿಸಿಕೊಳ್ಳುತ್ತಿದೆ. ಈ ಮೂಲಕ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವು ಪ್ರಮುಖ ಜಾಗತಿಕ ವಿಮಾನಯಾನ ಕೇಂದ್ರವಾಗಿ ಹೊರಹೊಮ್ಮಿದೆ.

ಸ್ಕೈಟ್ರಾಕ್ಸ್ ವಲ್ಡ್ ಏರ್‌ಪೋರ್ಟ್ ಅವಾರ್ಡ್, ವಿಮಾನ ನಿಲ್ದಾಣಗಳ ಶ್ರೇಷ್ಠತೆಯ ಮಾನದಂಡವೆಂದು ಜಾಗತಿಕವಾಗಿ ಹೆಸರುವಾಸಿಯಾಗಿದ್ದು, ಪ್ರಯಾಣಿಕರ ಅನುಭವ ಹೆಚ್ಚಿಸುವಲ್ಲಿ ಉತ್ತಮ ಸಾಧನೆ ಮಾಡಿದ ವಿಮಾನ ನಿಲ್ದಾಣಗಳನ್ನು ಗುರುತಿಸಲಾಗಿದೆ.
5 ಸ್ಟಾರ್ ಮಾನ್ಯತೆ ಸಿಕ್ಕಿದ್ದೇಗೆ?
ಟರ್ಮಿನಲ್ ವಿನ್ಯಾಸ, ಸ್ವಚ್ಛತೆ, ಭದ್ರತೆ, ಡಿಜಿಟಲ್ ಏಕೀಕರಣ, ಆತಿಥ್ಯ, ಒಳಗೊಳ್ಳುವಿಕೆ ಮತ್ತು ಸುಸ್ಥಿರತೆ ಸೇರಿದಂತೆ 30ಕ್ಕೂ ಹೆಚ್ಚು ವಿಭಾಗಗಳಲ್ಲಿ 800 ಕ್ಕೂ ಹೆಚ್ಚು ಪ್ರಯಾಣಿಕರ ಅಭಿಪ್ರಾಯ, ಲೆಕ್ಕಪರಿಶೋಧನೆಯ ನಂತರ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಟರ್ಮಿನಲ್ 2ಗೆ 5 ಸ್ಟಾರ್ ಮಾನ್ಯತೆಯನ್ನು ನೀಡಲಾಗಿದೆ ಎಂದು KIAL ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಟರ್ಮಿನಲ್ 2 ಪ್ರಯಾಣಿಕರ ಪ್ರಯಾಣದ ಅನುಭವವನ್ನು ಅತ್ಯುತ್ತಮಗೊಳಿಸುವತ್ತ ಸತತ ಪ್ರಯತ್ನ ನಡೆಸುತ್ತಿದೆ. ಸೇವಾ ದಕ್ಷತೆ ಮತ್ತು ಒದಗಿಸುವ ಸೌಕರ್ಯಗಳ ನಡುವೆ ಸಮತೋಲನ ಕಾಯ್ದುಕೊಂಡಿದೆ.

ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವು ಈ ಪ್ರತಿಷ್ಠಿತ ಮಾನ್ಯತೆಯನ್ನು ಮುಡಿಗೇರಿಸಿಕೊಳ್ಳಲು ಕಾರಣವಾದ ಕೆಲವು ಮಾನದಂಡಗಳು ಇಲ್ಲಿವೆ.
ವಿಶ್ವ ದರ್ಜೆಯ ಟರ್ಮಿನಲ್ ಅನುಭವ
ಟರ್ಮಿನಲ್ 2 ರ ಪರಿಸರ ಸ್ನೇಹಿ 'ಉದ್ಯಾನವನದಲ್ಲಿ ಟರ್ಮಿನಲ್' ವಿನ್ಯಾಸ, ಹಸಿರು ವಾತಾವರಣ, ಹೇರಳವಾದ ನೈಸರ್ಗಿಕ ಬೆಳಕು ಮತ್ತು ಪ್ರಕೃತಿ ಸೊಬಗಿನ ನಿರ್ಮಾಣಗಳು ಪ್ರಯಾಣಿಕರಿಗೆ ವಿಶೇಷ ಅನುಭವ ಒದಗಿಸುತ್ತವೆ. ಹಾಗೂ, ಪ್ರಯಾಣಿಕ-ಕೇಂದ್ರಿತ ಮಾರ್ಗ ಶೋಧಕ ಸೌಲಭ್ಯಗಳು (ವೇಫೈಂಡಿಂಗ್) ಯಾವುದೇ ಅಡೆತಡೆಯಿಲ್ಲದೇ ಪ್ರಯಾಣಿಸಲು ಅನುಕೂಲ ಒದಗಿಸುತ್ತದೆ. ಅಷ್ಟೇ ಅಲ್ಲದೆ, ಟರ್ಮಿನಲ್ 2ರಲ್ಲಿನ ಕಲೆ ಮತ್ತು ಸಾಂಸ್ಕೃತಿಕ ವಿನ್ಯಾಸವು ಪ್ರಯಾಣಿಕರ ಮನಸೂರೆಗೊಳಿಸುವಂತಿದ್ದು, ಅನನ್ಯ ಆಕರ್ಷಕ ಅನುಭವಕ್ಕೆ ಕಾರಣವಾಗಿದೆ.
ತಡೆರಹಿತ ಡಿಜಿಟಲ್ ನಾವೀನ್ಯತೆ
ಪ್ರಯಾಣಿಕರಿಗೆ ಬಯೋಮೆಟ್ರಿಕ್ ಪ್ರವೇಶ, ಕೃತಕ ಬುದ್ಧಿಮತ್ತೆ ಚಾಲಿತ ಬಿಎಲ್‌ಆರ್ ಪಲ್ಸ್ ಅಪ್ಲಿಕೇಶನ್, ಫಾಸ್ಟ್-ಟ್ಯಾಕ್ಡ್ ವಲಸೆ ಮತ್ತು ಸುಧಾರಿತ ಸರತಿ ಸಾಲು ನಿರ್ವಹಣೆಯೊಂದಿಗೆ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಬೆಂಗಳೂರಿನಲ್ಲಿ ಪ್ರಯಾಣಿಕರು ಹೆಚ್ಚಿನ ಸೇವಾ ದಕ್ಷತೆಯನ್ನು ಪಡೆಯಬಹುದಾಗಿದೆ. ನಡೆಯಬೇಕಾದ ದೂರದ ಮಾಹಿತಿಯ ಸೂಚಕಗಳು ಮತ್ತು ಸ್ವಯಂಚಾಲಿತ ಭದ್ರತಾ ವ್ಯವಸ್ಥೆಗಳು ಡಿಜಿಟಲ್ ಅನುಭವವನ್ನು ಮತ್ತಷ್ಟು ಸುಗಮಗೊಳಿಸುತ್ತದೆ.
ಈ ಪ್ರಮಾಣಿಕರಿಗೆ ಒತ್ತಡ ಮುಕ್ತ ಅನುಭವ
ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಬೆಂಗಳೂರು ದೇಶದ ವಿಮಾನ ನಿಲ್ದಾಣಗಳಲ್ಲೇ ಮೊದಲ ಸಂವೇದನಾ ಕೊಠಡಿಯನ್ನು ಆರಂಭಿಸಿದೆ. ಇದು ಸಂವೇದನಾ ಸೂಕ್ಷ್ಮತೆಗಳನ್ನು ಹೊಂದಿರುವ ಪ್ರಯಾಣಿಕರಿಗೆ ಒತ್ತಡ ಮುಕ್ತ ಅನುಭವವನ್ನು ಒದಗಿಸುತ್ತಿದೆ.
ಸಂವೇದನಾ ಆಧಾರಿತ ಸ್ಲೈಡಿಂಗ್ ಬಾಗಿಲುಗಳು, ಆಡಿಯೊ ಪ್ರಾಂಪ್ಟ್‌ಗಳೇ ಮೊದಲಾದ ಸೀಮಿತ ಚಲನಶೀಲ ಪ್ರಯಾಣಿಕ ಸ್ನೇಹಿ ಸೌಲಭ್ಯಗಳು ಸೇರಿದಂತೆ, ಗುಪ್ತ ದಿವ್ಯಾಂಗ ಸನ್‌ಫ್ಲಾವರ್ ಲ್ಯಾನ್ಯಾರ್ಡ್ ಕಾರ್ಯಕ್ರಮವು ಅಗತ್ಯವಿರುವ ಪ್ರಯಾಣಿಕರಿಗೆ ಸಹಾಯ ಒದಗಿಸುತ್ತದೆ.
ಸುಸ್ಥಿರತೆ, ಪರಿಸರ ಸ್ನೇಹ ಮೂಲಸೌಕರ್ಯ
ಪ್ಲಾಟಿನಂ LEED ಪೂರ್ವ-ಪ್ರಮಾಣೀಕರಣ ಮತ್ತು ಎಸಿಐ 5ನೇ ಹಂತದ ಕಾರ್ಬನ್ ಮಾನ್ಯತೆಯನ್ನು ಹೊಂದಿರುವ ವಿಶ್ವದ ಅತಿದೊಡ್ಡ ಟರ್ಮಿನಲ್ ಆಗಿರುವ ಟರ್ಮಿನಲ್ 2, ನವೀಕರಿಸಬಹುದಾದ ಇಂಧನ, ಪರಿಸರ ಸ್ನೇಹಿ ಮೂಲಸೌಕರ್ಯಗಳಿಗೆ ಒತ್ತು ನೀಡಿದೆ.
ಚಿಲ್ಲರೆ ವ್ಯಾಪಾರ, ಆಹಾರ ಮತ್ತು ಪಾನೀಯ ಇತರ ಸೌಲಭ್ಯ
ಬೆಂಗಳೂರು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಬೆಂಗಳೂರಿನಲ್ಲಿ ಪ್ರಯಾಣಿಕರು, ಜಾಗತಿಕ ಮತ್ತು ಸ್ಥಳೀಯ ಬ್ರ್ಯಾಂಡ್‌ಗಳ ಆಯ್ದ ಚಿಲ್ಲರೆ ವ್ಯಾಪಾರ ಮಳಿಗೆಗಳು, ಆಹಾರ ಮತ್ತು ಪಾನೀಯಗಳ ಅನುಭವವನ್ನು ಆನಂದಿಸಬಹುದಾಗಿದೆ. ಜೊತೆಗೆ, ವಿಮಾನ ನಿಲ್ದಾಣದಲ್ಲಿ ಲಭ್ಯವಿರುವ 080 ಲೌಂಜ್‌ಗಳು, ಪ್ರೀಮಿಯಂ ಆತಿಥ್ಯ ಕೊಡುಗೆಗಳು ಮತ್ತು ಸಹಯೋಗಿ ಸಂಸ್ಥೆಗಳು ಪ್ರಯಾಣಿಕರಿಗೆ ಅತ್ಯುತ್ತಮ ದರ್ಜೆಯ ಸೌಕರ್ಯ ಮತ್ತು ಸೇವೆಯನ್ನು ಒದಗಿಸುವ ಗುರಿ ಹೊಂದಿವೆ.
ಪ್ರಯಾಣಿಕರಿಗೆ ಉತ್ತಮ ಸೇವೆ ನಮ್ಮ ಗುರಿ: KIAL ಎಂಡಿ
5 ಸ್ಟಾರ್ ಮಾನ್ಯತೆ ಪಡೆದ ಕುರಿತು ಮಾತನಾಡಿದ ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ನಿಯಮಿತದ (KIAL) ವ್ಯವಸ್ಥಾಪಕ ನಿರ್ದೇಶಕ ಮತ್ತು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ (ಎಂಡಿ & ಸಿಇಒ) ಶ್ರೀ ಹರಿ ಮರಾರ್ ಅವರು, ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಬೆಂಗಳೂರು ತಡೆರಹಿತ, ನವೀನ ಮತ್ತು ಸುಸ್ಥಿರವಾದ ವಿಶ್ವದರ್ಜೆಯ ಪ್ರಯಾಣದ ಅನುಭವ ಹೆಚ್ಚಿಸುವ ನಿಟ್ಟಿನಲ್ಲಿ ಕಾರ್ಯ ನಿರತವಾಗಿದೆ ಎಂದು ತಿಳಿಸಿದರು.
ಸ್ಕೈಟ್ರಾಕ್ಸ್‌ನಿಂದ ಭಾರತದಲ್ಲೇ ಮೊದಲ 5 ಸ್ಟಾರ್ ಮಾನ್ಯತೆ ಪಡೆದಿರುವುದು ಹಾಗೂ ದಕ್ಷಿಣ ಏಷ್ಯಾದ ಅತ್ಯುತ್ತಮ ಪ್ರಾದೇಶಿಕ ವಿಮಾನ ನಿಲ್ದಾಣ ಎಂಬ ಹೆಗ್ಗುರುತನ್ನು ಸತತ ಎರಡನೇ ಬಾರಿಗೆ ಗಳಿಸಿರುವುದು ನಮ್ಮ ಪ್ರಯತ್ನಗಳಿಗೆ ದೊರೆತ ಮಾನ್ಯತೆಯಷ್ಟೇ ಅಲ್ಲದೇ, ನಮ್ಮ ತಂಡದ ಉತ್ಸಾಹ ಮತ್ತು ಸಮರ್ಪಣೆಗೆ ಸಾಕ್ಷಿಯಾಗಿದೆ. ಈ ಮೈಲಿಗಲ್ಲು ಬೆಂಗಳೂರನ್ನು ಜಾಗತಿಕ ವಿಮಾನಯಾನ ವೇದಿಕೆಯಲ್ಲಿ ಮುಂಚೂಣಿಯಲ್ಲಿರಿಸುತ್ತದೆ.
ಏರ್‌ಪೋರ್ಟ್ ಈ ಸಾಧನೆಗೆ ಕಾರಣವಾದ ನಮ್ಮ ಪ್ರಯಾಣಿಕರು, ಪಾಲುದಾರರು ಮತ್ತು ಉದ್ಯೋಗಿಗಳಿಗೆ, ಅವರ ನಂಬಿಕೆ ಮತ್ತು ಬೆಂಬಲಕ್ಕಾಗಿ ಸದಾ ಕೃತಜ್ಞರಾಗಿರುತ್ತೇವೆ. ಭವಿಷ್ಯದಲ್ಲೂ ಇದೇ ರೀತಿಯಲ್ಲಿ ಪ್ರಯಾಣಿಕರಿಗೆ ಉತ್ತಮ ಅನುಭವ ನೀಡುವ ನಮ್ಮ ಪ್ರಯತ್ನ ಮುಂದುವರೆಯಲಿದೆ ಎಂದು ಹೇಳಿದರು.
ಜಾಗತಿಕ ಟರ್ಮಿನಲ್‌ಗಳ ಸಾಲಿಗೆ ಕೆಐಎ ಟಿ2
ಈ ಪ್ರತಿಷ್ಠಿತ ಮಾನ್ಯತೆ ಗಳಿಸುವ ಮೂಲಕ, ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಬೆಂಗಳೂರು ಜಾಗತಿಕವಾಗಿ ಮೆಚ್ಚುಗೆ ಪಡೆದ 5-ಸ್ಟಾರ್ ಮಾನ್ಯತೆ ಪಡೆದ ವಿಮಾನ ನಿಲ್ದಾಣಗಳ ಟರ್ಮಿನಲ್‌ಗಳ ಸಾಲಿಗೆ ಸೇರ್ಪಡೆಗೊಂಡಂತಾಗಿದೆ.
ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಟರ್ಮಿನಲ್ 2 ವನ್ನು 5 ಸ್ಟಾರ್ ಮಾನ್ಯತೆಯೊಂದಿಗೆ ಪ್ರಮಾಣೀಕರಿಸಲು ಅತೀವ ಸಂತೋಷವೆನಿಸುತ್ತದೆ. ಈ ಅತ್ಯುನ್ನತ ಮಾನ್ಯತೆಯನ್ನು ಸಾಧಿಸಿದ ಭಾರತದ ಮೊದಲ ವಿಮಾನ ನಿಲ್ದಾಣವಾಗಿರುವುದು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಅತ್ಯುನ್ನತ ಗುಣಮಟ್ಟಕ್ಕೆ ಸಿಕ್ಕ ಮನ್ನಣೆ ಇದು ಎಂದು ಸ್ಕೈಟ್ರಾಕ್ಸ್‌ನ ಸಿಇಒ ಎಡ್ವರ್ಡ್ ಪ್ಲಾಸ್ಟೆಡ್ ಅವರು ಶ್ಘಾಘಿಸಿದರು.
-
Gold Rate: ಸತತ ಕುಸಿತ ಕಾಣುತ್ತಿರುವ ಬಂಗಾರದ ಬೆಲೆ; ಬೆಂಗಳೂರಿನಲ್ಲಿ ಇಂದಿನ ಚಿನ್ನ, ಬೆಳ್ಳಿ ದರ ಎಷ್ಟು ಗೊತ್ತಾ? -
Gold Price: ಏಪ್ರಿಲ್ನಲ್ಲಿ ಚಿನ್ನದ ದರ ಭವಿಷ್ಯ: ಹೇಗಿರುತ್ತದೆ ಮುಂದಿನ ತಿಂಗಳು ಚಿನ್ನದ ಬೆಲೆ? ವಿಶ್ಲೇಷಣೆ -
ಅಡುಗೆ ಮನೆಗಳಿಗೆ ಇನ್ನು ನೇರ ಗ್ಯಾಸ್ ಸಂಪರ್ಕ: ಪೈಪ್ಲೈನ್ ವಿಸ್ತರಣೆಗೆ ಕೇಂದ್ರದಿಂದ ಹೊಸ ಆದೇಶ ಜಾರಿ -
Gold Rate: ಬೆಂಗಳೂರು ಸೇರಿದಂತೆ ವಿವಿಧ ನಗರಗಳಲ್ಲಿ ಎಷ್ಟಿದೆ 22 ಕ್ಯಾರಟ್ ಚಿನ್ನದ ದರ? -
Love Mocktail 3: ಕ್ರಿಪ್ಟೋಮ್ನೇಶಿಯಾ ಯಾರದ್ದೋ ಕಥೆ ಯಾರದ್ದೋ ಹೆಸರು ರೂಪಾ ರಾವ್ ಬರಹ -
ತಿಂಗಳಿಗೆ 10 ಸಾವಿರ ರೂ. ಥೆರಪಿಗೆ, 3 ಸಾವಿರ ನೇಲ್ ಆರ್ಟ್ಗೆ! ಬೆಂಗಳೂರು ಯುವತಿಯ 'Gen Z’' ಖರ್ಚಿನ ಪಟ್ಟಿ Viral -
Jobs: ಕಂದಾಯ ಇಲಾಖೆಯಲ್ಲಿ 500 ಹೊಸ ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳಿಗೆ ಶೀಘ್ರದಲ್ಲೇ ನೇಮಕಾತಿ -
ಕೂಲಿಗೆ ಹೋಗಿದ್ದ ವಿದ್ಯಾರ್ಥಿನಿಯನ್ನು ದ್ರಾಕ್ಷಿ ತೋಟದಿಂದಲೇ ಕರೆತಂದು SSLC ಪರೀಕ್ಷೆ ಬರೆಸಿದ ಗದಗ ಬಿಇಒ -
Bengaluru: ಬೆಳ್ಳಂಬೆಳಗ್ಗೆ ಬೆಂಗಳೂರಿನ ಸಮಸ್ಯೆಗಳು: ಬೇರೆ ಊರುಗಳಿಂದ ಬಂದ ಮೆಜೆಸ್ಟಿಕ್ನಲ್ಲಿ ಸಂಕಷ್ಟ, 7 ಪ್ರಮುಖ ಸಂಕಷ್ಟಗಳು -
Ananya Birla: ಆರ್ಸಿಬಿ ಅಭಿಮಾನಿಗಳು ಹಾಗೂ ಸಹೋದರನಿಗೆ ಅನನ್ಯಾ ಬಿರ್ಲಾ ವಿಶೇಷ ಸಂದೇಶ -
Karnataka Weather: ಬಿಸಿಲಿನಿಂದ ಕಂಗೆಟ್ಟಿದ್ದ ಕರುನಾಡಿಗೆ ತಂಪೆರೆಯಲಿದ್ದಾನೆ ವರುಣ; ಎಲ್ಲೆಲ್ಲಿ ಮಳೆ? ಇಲ್ಲಿದೆ ಮಾಹಿತಿ -
Karnataka Weather: ಇಂದು ರಾಜ್ಯದ ಈ ಜಿಲ್ಲೆಗಳಲ್ಲಿ ಗುಡುಗು, ಬಿರುಗಾಳಿ ಸಹಿತ ಮಳೆಯಾಗುವ ಮುನ್ಸೂಚನೆ












Click it and Unblock the Notifications