Bengaluru: 1 ತಿಂಗಳು ಬದುಕೋಕೆ ಇಷ್ಟೊಂದು ಖರ್ಚಾಗುತ್ತಾ? ಯುವತಿಯ ಪೋಸ್ಟ್ ಕಂಡು ಬೆಚ್ಚಿಬಿದ್ದ ನೆಟ್ಟಿಗರು
ಬೆಂಗಳೂರು ಎಂದರೆ ಐಟಿ ಉದ್ಯೋಗಿಗಳು, ವಿದ್ಯಾರ್ಥಿಗಳು ಹಾಗೂ ಕನಸು ಹೊತ್ತು ಬರುವ ಯುವಜನತೆಯ ನೆಚ್ಚಿನ ತಾಣ. ಇಲ್ಲಿನ ಜೀವನಶೈಲಿ, ವಾತಾವರಣ ಎಲ್ಲರನ್ನೂ ಆಕರ್ಷಿಸುತ್ತದೆ. ಆದರೆ, 'ಸಿಲಿಕಾನ್ ಸಿಟಿ'ಯಲ್ಲಿ ಬದುಕುವುದು ಅಷ್ಟು ಸುಲಭವಲ್ಲ. ಇಲ್ಲಿನ ಜೀವನ ವೆಚ್ಚ ದಿನದಿಂದ ದಿನಕ್ಕೆ ಗಗನಕ್ಕೇರುತ್ತಿದೆ ಎಂಬುದಕ್ಕೆ ಸಾಮಾಜಿಕ ಜಾಲತಾಣ 'ಎಕ್ಸ್' ನಲ್ಲಿ ವೈರಲ್ ಆಗಿರುವ ಪೋಸ್ಟ್ ಒಂದೇ ಸಾಕ್ಷಿ.
ಇತ್ತೀಚೆಗೆ ಬೆಂಗಳೂರಿನಲ್ಲಿ ಎರಡು ತಿಂಗಳ ಇಂಟರ್ನ್‌ಶಿಪ್ ಮುಗಿಸಿದ ಅನ್ಶಿಕಾ ಅಗರ್‌ವಾಲ್ ಎಂಬ ಯುವತಿ, ತಮ್ಮ ಒಂದು ತಿಂಗಳ ಖರ್ಚಿನ ಸಂಪೂರ್ಣ ಲೆಕ್ಕಾಚಾರವನ್ನು ಹಂಚಿಕೊಂಡಿದ್ದಾರೆ. ಇಂಟರ್ನ್‌ಶಿಪ್‌ಗಾಗಿ ಬೆಂಗಳೂರಿಗೆ ಬರುವ ವಿದ್ಯಾರ್ಥಿಗಳಿಗೆ ಹಾಗೂ ಯುವ ವೃತ್ತಿಪರರಿಗೆ ಒಂದು ತಿಂಗಳಿಗೆ ಎಷ್ಟು ಹಣ ಬೇಕಾಗುತ್ತದೆ ಎಂಬುದರ ನೈಜ ಚಿತ್ರಣವನ್ನು ಈ ಪೋಸ್ಟ್ ತೆರೆದಿಟ್ಟಿದೆ. ಯುವತಿಯ ಲೆಕ್ಕಾಚಾರದ ಪ್ರಕಾರ, ಬೆಂಗಳೂರಿನಲ್ಲಿ ಒಬ್ಬರು ಸಾಧಾರಣವಾಗಿ ಬದುಕಲು ತಿಂಗಳಿಗೆ ಸರಿಸುಮಾರು ₹26,000 ಬೇಕಾಗುತ್ತದೆ.

ಯಾವುದಕ್ಕೆ ಎಷ್ಟು ಖರ್ಚು? ಇಲ್ಲಿದೆ ಮಾಹಿತಿ:
1. ಪಿಜಿ ಬಾಡಿಗೆಯೇ ದೊಡ್ಡ ಹೊರೆ: ಯುವತಿಯ ಪೋಸ್ಟ್ ಪ್ರಕಾರ, ಅವರ ಒಟ್ಟು ಖರ್ಚಿನಲ್ಲಿ ಅತಿ ಹೆಚ್ಚು ಹಣ ಹೋಗಿರುವುದು ಬಾಡಿಗೆಗೆ. ಪೇಯಿಂಗ್ ಗೆಸ್ಟ್ (PG) ನಲ್ಲಿ ಉಳಿದುಕೊಳ್ಳಲು ತಿಂಗಳಿಗೆ ಬರೋಬ್ಬರಿ ₹12,500 ಪಾವತಿಸಿದ್ದಾರೆ. ಇದು ವಿದ್ಯಾರ್ಥಿಗಳು ಹಾಗೂ ಹೊಸದಾಗಿ ಕೆಲಸಕ್ಕೆ ಸೇರುವ ಯುವಜನತೆಗೆ ವಸತಿಗಾಗಿ ಎಷ್ಟು ದೊಡ್ಡ ಮೊತ್ತ ಬೇಕಾಗುತ್ತದೆ ಎಂಬುದನ್ನು ತೋರಿಸುತ್ತದೆ.
2. ಊಟದ ಖರ್ಚು: ಬಾಡಿಗೆಯ ನಂತರ ಅತಿ ಹೆಚ್ಚು ಹಣ ಖರ್ಚಾಗಿರುವುದು ಊಟಕ್ಕೆ. ಪ್ರತಿ ತಿಂಗಳು ಸುಮಾರು ₹6,000 ಅನ್ನು ಊಟಕ್ಕಾಗಿ ಮೀಸಲಿಡಬೇಕಾಯಿತು ಎಂದು ಯುವತಿ ಹೇಳಿದ್ದಾರೆ. "ಪಿಜಿಯಲ್ಲಿ ಊಟ ನೀಡುತ್ತಿದ್ದರೂ, ಅದನ್ನು ಪ್ರತಿದಿನ ತಿನ್ನಲು ಸಾಧ್ಯವಾಗುತ್ತಿರಲಿಲ್ಲ. ಹೀಗಾಗಿ ಹೊರಗಡೆ ಊಟ ಮಾಡುವುದು ಅನಿವಾರ್ಯವಾಗಿತ್ತು," ಎಂದು ಅನ್ಶಿಕಾ ಬರೆದುಕೊಂಡಿದ್ದಾರೆ. ಆದರೂ, ಸರಿಯಾಗಿ ಹುಡುಕಿದರೆ ಬೆಂಗಳೂರಿನಲ್ಲಿ ಕಡಿಮೆ ಬೆಲೆಗೆ ಉತ್ತಮ ಊಟ ಸಿಗುವ ಸ್ಥಳಗಳು ಕೂಡ ಇವೆ ಎಂಬುದನ್ನು ಅವರು ಒಪ್ಪಿಕೊಂಡಿದ್ದಾರೆ.
3. ಪ್ರಯಾಣ: ಬೆಂಗಳೂರಿನ ಟ್ರಾಫಿಕ್ ಮತ್ತು ಪ್ರಯಾಣದ ಬಗ್ಗೆ ಎಲ್ಲರಿಗೂ ತಿಳಿದೇ ಇದೆ. ಆಟೋ ರಿಕ್ಷಾ ಹಾಗೂ ಕ್ಯಾಬ್‌ಗಳ ಮೂಲಕ ಕಚೇರಿ ಹಾಗೂ ಇತರೆ ಸ್ಥಳಗಳಿಗೆ ಓಡಾಡಲು ತಿಂಗಳಿಗೆ ಅಂದಾಜು ₹2,000 ಖರ್ಚಾಗಿದೆ.
4. ಹೊರಗಿನ ತಿರುಗಾಟ: ಇಂಟರ್ನ್‌ಶಿಪ್ ಅವಧಿಯಲ್ಲಿ ತಾನು ಹೆಚ್ಚಾಗಿ ಹೊರಗಡೆ ಸುತ್ತಾಡಲು ಹೋಗಿಲ್ಲ ಎಂದು ಹೇಳಿರುವ ಅನ್ಶಿಕಾ, ಕೇವಲ ವಾರಾಂತ್ಯದ ಅಥವಾ ಸಾಮಾಜಿಕ ಚಟುವಟಿಕೆಗಳಿಗಾಗಿ ಸುಮಾರು ₹2,000 ಖರ್ಚು ಮಾಡಿದ್ದಾರೆ.
5. ಇತರೆ ಖರ್ಚುಗಳು: ದಿನನಿತ್ಯದ ಅಗತ್ಯ ವಸ್ತುಗಳ ಖರೀದಿ ಹಾಗೂ ಸಣ್ಣಪುಟ್ಟ ಖರ್ಚುಗಳಿಗಾಗಿ ತಿಂಗಳಿಗೆ ₹1,000 ದಿಂದ ₹2,000 ವರೆಗೆ ವ್ಯಯಿಸಲಾಗಿದೆ. ಹೀಗೆ ಎಲ್ಲವನ್ನು ಲೆಕ್ಕ ಹಾಕಿದರೆ ಒಂದು ತಿಂಗಳ ಒಟ್ಟು ಖರ್ಚು ₹26,000 ಗಡಿ ದಾಟಿದೆ.
ಸಾಮಾನ್ಯವಾಗಿ ಇಂಟರ್ನ್‌ಶಿಪ್ ಮಾಡುವಾಗ ಸಿಗುವ ಸ್ಟೈಪೆಂಡ್ ಮೊತ್ತ ತುಂಬಾ ಕಡಿಮೆಯಿರುತ್ತದೆ. 10 ರಿಂದ 15 ಸಾವಿರ ರೂಪಾಯಿ ಸ್ಟೈಪೆಂಡ್ ಪಡೆಯುವ ಯುವಜನತೆ, ಇಷ್ಟು ದೊಡ್ಡ ಮಟ್ಟದ ಜೀವನ ವೆಚ್ಚವನ್ನು ಹೇಗೆ ಸರಿದೂಗಿಸಬೇಕು ಎಂಬುದು ಈಗ ಕಾಡುತ್ತಿರುವ ದೊಡ್ಡ ಪ್ರಶ್ನೆಯಾಗಿದೆ. ಅದರಲ್ಲೂ ಹೊರ ರಾಜ್ಯ ಅಥವಾ ಬೇರೆ ಜಿಲ್ಲೆಗಳಿಂದ ಬರುವ ವಿದ್ಯಾರ್ಥಿಗಳಿಗೆ ಆರಂಭಿಕ ದಿನಗಳು ಅತ್ಯಂತ ಕಠಿಣವಾಗಿರುತ್ತವೆ.
ಬೆಂಗಳೂರಿನಂತಹ ಮಹಾನಗರದಲ್ಲಿ ಬಾಡಿಗೆ ಮನೆ ಅಥವಾ ಪಿಜಿ ಹುಡುಕುವುದು ದೊಡ್ಡ ಸಾಹಸದ ಕೆಲಸ. ಒಮ್ಮೆ ಪಿಜಿ ಸಿಕ್ಕರೂ, ಅಲ್ಲಿನ ಊಟ ಎಲ್ಲರಿಗೂ ಒಗ್ಗುವುದಿಲ್ಲ. ಹೀಗಾಗಿ, ಅನಿವಾರ್ಯವಾಗಿ ಆನ್‌ಲೈನ್ ಫುಡ್ ಡೆಲಿವರಿ ಆಪ್‌ಗಳ ಮೊರೆ ಹೋಗಬೇಕಾಗುತ್ತದೆ ಅಥವಾ ಹತ್ತಿರದ ದರ್ಶಿನಿಗಳನ್ನು ಅವಲಂಬಿಸಬೇಕಾಗುತ್ತದೆ. ಇದು ಸಹಜವಾಗಿಯೇ ತಿಂಗಳ ಬಜೆಟ್ ಅನ್ನು ಏರುಪೇರು ಮಾಡುತ್ತದೆ.
Here was my bangalore expense during 2 month of internship
— 0xcoder (@kipupwidanshika) March 14, 2026
Pg: 12.5k
Food: 6k(I just couldn't eat PG food)
Travel: 2k in auto, cabs
Outings: 2k(didn't go out a lot)
Misc: 1-2k
Total: 26k around
Bangalore is expensive because of the rent and sometimes travel or else you can get…
ನೆಟ್ಟಿಗರ ಪ್ರತಿಕ್ರಿಯೆ ಹೇಗಿತ್ತು?
ಈ ಪೋಸ್ಟ್ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ತಮ್ಮದೇ ಆದ ಅಭಿಪ್ರಾಯಗಳನ್ನು ಹಂಚಿಕೊಳ್ಳುತ್ತಿದ್ದಾರೆ. ಬಹಳಷ್ಟು ಜನರು ಇದು ನಿಜವಾದ ಲೆಕ್ಕಾಚಾರ, ಬೆಂಗಳೂರಿನಲ್ಲಿ ಬದುಕಲು ಕನಿಷ್ಠ ಇಷ್ಟು ಹಣ ಬೇಕೇ ಬೇಕು ಎಂದಿದ್ದಾರೆ. "ನನ್ನ ತಿಂಗಳ ಖರ್ಚು 40,000 ದಿಂದ 50,000 ರೂಪಾಯಿಗಳಷ್ಟಿದೆ" ಎಂದು ಮತ್ತೊಬ್ಬ ಬಳಕೆದಾರರು ಕಮೆಂಟ್ ಮಾಡಿದ್ದಾರೆ. "ಬೆಂಗಳೂರಿನಲ್ಲಿ ಪಿಜಿ ಬಾಡಿಗೆ ತುಂಬಾನೇ ದುಬಾರಿ, ಜೊತೆಗೆ ಪ್ರಯಾಣದ ಖರ್ಚು ಕೂಡ ಜಾಸ್ತಿಯಾಗುತ್ತದೆ" ಎಂದು ಮತ್ತೊಬ್ಬರು ಬರೆದಿದ್ದಾರೆ.
ಆದರೆ, ಕೆಲವರು ಮಾತ್ರ ಭಿನ್ನಾಭಿಪ್ರಾಯ ವ್ಯಕ್ತಪಡಿಸಿದ್ದಾರೆ. "ನಮ್ಮ ಖರ್ಚುಗಳ ಮೇಲೆ ನಮಗೆ ಹಿಡಿತವಿದ್ದರೆ ಬೆಂಗಳೂರಿನಲ್ಲಿ ಬದುಕುವುದು ಅಷ್ಟೊಂದು ದುಬಾರಿಯಲ್ಲ," ಎಂದು ಒಬ್ಬರು ಕಿವಿಮಾತು ಹೇಳಿದ್ದಾರೆ. "ಇದು ಕೇವಲ ಉಸಿರಾಡಿಕೊಂಡು ಬದುಕಲು ಬೇಕಾದ ಕನಿಷ್ಠ ಮೊತ್ತ ಅಷ್ಟೇ," ಎಂಬ ಕಮೆಂಟ್‌ಗಳು ಕೂಡ ಬಂದಿವೆ. ಒಟ್ಟಿನಲ್ಲಿ, ಕೆಲಸದ ಕನಸು ಹೊತ್ತು ಬೆಂಗಳೂರಿಗೆ ಕಾಲಿಡುವ ಯುವಜನತೆಗೆ ವಾಸ್ತವದ ಅರಿವು ಮೂಡಿಸುವಲ್ಲಿ ಈ ಪೋಸ್ಟ್ ಯಶಸ್ವಿಯಾಗಿದೆ.
-
Rameshwaram Cafe: ರಾಮೇಶ್ವರಂ ಕೆಫೆ ಪಾರ್ಸಲ್ - ಬ್ಯಾಗ್ ತುಂಬಾ ದುಬಾರಿ ಕಣ್ರೀ: ಸೋಷಿಯಲ್ ಮೀಡಿಯಾ ವೈರಲ್ ಪೋಸ್ಟ್ -
Kannada: ಕರ್ನಾಟಕದಲ್ಲಿರುವ ಬ್ಯಾಂಕ್ಗಳಲ್ಲಿ ಸ್ಪಷ್ಟ ಕನ್ನಡ; ತುಳು, ಕೊಂಕಣಿ ಭಾಷೆಯ ಕಲರವ ಈಗ ಉಳಿದಿಲ್ಲ: ಕವಿರಾಜ್ -
Kannada Books: ಓದುಗರಷ್ಟು ಪ್ರಾಮಾಣಿಕತೆ ಪುಸ್ತಕ ಮಳಿಗೆ ಮಾಡಿರುವವರಿಗಿಲ್ಲ: ರಾಜೇಂದ್ರ ಪ್ರಸಾದ್ ಬರಹ -
Dolly Dhananjay: ಆ ಚಿತ್ರಕಥೆ.. 6 ತಿಂಗಳು ನನ್ನ ಟೇಬಲ್ ಮೇಲೆ ಬಿದ್ದಿತ್ತು: ನಟ ಡಾಲಿ ಧನಂಜಯ್ -
ಅಲೆದಾಟಕ್ಕೆ ಬ್ರೇಕ್: AI ಬಳಸಿ ಸುಲಭವಾಗಿ ಮನೆ ಹುಡುಕಿದ ಬೆಂಗಳೂರು ಯುವಕ -
Venkatesh Daggubati: ಬೆಂಗಳೂರಿನ ಐಕಾನಿಕ್ ವಿದ್ಯಾರ್ಥಿ ಭವನದಲ್ಲಿ ದೋಸೆ ಸವಿದ ಟಾಲಿವುಡ್ ನಟ ವೆಂಕಟೇಶ್ ದಗ್ಗುಬಾಟಿ -
Rishab Shetty: ಪತ್ನಿ ಪ್ರಗತಿ ಶೆಟ್ಟಿ ಹೊರತುಪಡಿಸಿ ಎಲ್ಲರನ್ನೂ ಅನ್ಫಾಲೋ ಮಾಡಿದ ನಟ ರಿಷಬ್ ಶೆಟ್ಟಿ -
March 30 Horoscope: ಕೆಲಸ ಮತ್ತು ಹಣದ ಸ್ಥಿತಿಯಲ್ಲಿ ಹೊಸ ಬದಲಾವಣೆ -
Hardik Pandya: ವಾಂಖೆಡೆ ಸ್ಟೇಡಿಯಂ ಸಿಬ್ಬಂದಿಗೆ ನೀಡಿದ್ದ ಸಹಾಯಹಸ್ತದ ಮಾತು ಉಳಿಸಿಕೊಂಡ ಹಾರ್ದಿಕ್ ಪಾಂಡ್ಯ -
Karnataka Rain: ಬೇಸಿಗೆಯಲ್ಲೂ ಮಳೆರಾಯನ ಆರ್ಭಟ: ಏಪ್ರಿಲ್ 4ರವರೆಗೆ ಕರ್ನಾಟಕದ 16 ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ -
Gold Rate Today: ವಾರದ ಆರಂಭದಲ್ಲೇ ಚಿನ್ನದ ಬೆಲೆ ಕುಸಿತ; 100 ಗ್ರಾಂ ಖರೀದಿಸಿದರೆ 8,100 ರೂಪಾಯಿವರೆಗೆ ಉಳಿತಾಯ -
ಬೆಂಗಳೂರು ಬಿಸಿನೆಸ್ ಕಾರಿಡಾರ್ ಯೋಜನೆಗೆ ಚಾಲನೆ: ಕಾಮಗಾರಿಗೆ 3,348 ಕೋಟಿ ರೂ ಟೆಂಡರ್ ಆಹ್ವಾನ












Click it and Unblock the Notifications