ಅಲೆದಾಟಕ್ಕೆ ಬ್ರೇಕ್: AI ಬಳಸಿ ಸುಲಭವಾಗಿ ಮನೆ ಹುಡುಕಿದ ಬೆಂಗಳೂರು ಯುವಕ
ಬೆಂಗಳೂರು: ಬೆಂಗಳೂರು ನಗರದಲ್ಲಿ ಮನೆ ಹುಡುಕುವುದು ಇತ್ತೀಚಿನ ದಿನಗಳಲ್ಲಿ ಸುಲಭದ ಮಾತಾಗಿ ಉಳಿದಿಲ್ಲ ಮತ್ತು ಇದು ಅನೇಕರಿಗೆ ಸವಾಲಿನ ಕೆಲಸವಾಗಿ ಪರಿಣಮಿಸಿದೆ. ಬ್ರೋಕರ್ ಆಪ್ಸ್ ಅಂತ್ಯವಿಲ್ಲದ ಸ್ಕ್ರೋಲಿಂಗ್ ನಿರಂತರವಾಗಿ ಕರೆಮಾಡುವ ಬ್ರೋಕರ್ ಕರೆಗಳ ಕಿರಿಕಿರಿ ಮತ್ತು ಅನೇಕ ಮನೆ ಅಥವಾ ಪ್ಲಾಟ್‌ಗಳಿಗೆ ಹೋಗಿ ನೋಡಿಕೊಂಡು ಬರುವುದು ತುಂಬಾ ಕಷ್ಟಕರವಾಗಿದೆ. ಈ ಮಧ್ಯೆ ಒಬ್ಬ ಪ್ರಾಡಕ್ಟ್ ಡಿಸೈನರ್ ಈ ಸಮಸ್ಯೆಯನ್ನು ಬಗೆಹರಿಸಲು ಬುದ್ಧಿವಂತಿಕೆಯನ್ನು ಉಪಯೋಗಿಸಿದ್ದಾರೆ. ಇವರ ಈ ಹೊಸ ಪ್ರಯತ್ನವು ಎಲ್ಲರ ಗಮನವನ್ನು ಸೇಳೆಯುತ್ತಿದೆ.
ಸುನಾಲ್ ಸೂದ್ ಎಂಬ ಪ್ರಾಡಕ್ಟ್ ಡಿಸೈನರ್ ತಮ್ಮ ಮನೆಯ ಹುಡುಕಾಟಕ್ಕೆ ಒಂದು ಸುಲಭ ಮಾರ್ಗವನ್ನು ಅಂದರೆ ಕೃತಕ ಬುದ್ದಿಮತ್ತೆ AI ಉಪಯೊಗಿಸಿಕೊಂಡು ಮನೆಯನ್ನು ಹೇಗೆ ಹುಡುಕಿಕೊಂಡರು ಎಂಬುದನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಬೆಂಗಳೂರಿನಲ್ಲಿ ಮನೆ ಹುಡುಕುವುದು ಸುಲಭದ ಮಾತಲ್ಲ ಇದು ಒಂದು ಪೂರ್ಣಕಾಲಿಕ ಕೆಲಸವಾಗಿರುತ್ತದೆ. ಆದ್ದರಿಂದ ನಾನು ಕೃತಕ ಬುದ್ಧಿಮತ್ತೆ ಮೊರೆ ಹೊದೆ ಎಂದು ಅವರು ತಿಳಿಸಿದ್ದಾರೆ.

ಅವರು ಬಳಸಿದ ವಿಧಾನ ಸರಳವಾಗಿದ್ದರು ಅದು ತುಂಬಾ ಪರಿಣಾಮಕಾರಿಯಾಗಿತ್ತು. AI ಕೃತಕ ಬುದ್ದಿ ಮತ್ತೆಯು ಏಕಕಾಲಕ್ಕೆ ಹಲವಾರು ಫೇಸ್‌ಬುಕ್ ಗುಂಪುಗಳನ್ನು ಸ್ಕ್ಯಾನ್ ಮಾಡಿ ಲಭ್ಯವಿರುವ ಬಾಡಿಗೆ ಮನೆಗಳ ಮಾಹಿತಿಯನ್ನು ಕಲೆಹಾಕಿತು. ಮುಖ್ಯವಾಗಿ ನೊ ಬ್ರೋಕರ್‌ನಲ್ಲಿರುವ ಎಲ್ಲ ಇತ್ತೀಚಿನ ಪೊಸ್ಟ್ ಗಳನ್ನು ಸ್ಕ್ಯಾನ್ ಮಾಡಿ ಹೊಸ ಪೋಸ್ಟ್‌ಗಳಿಗೆ ಆದ್ಯತೆ ನೀಡುತ್ತದೆ.
ಮನೆಯ ಫಿಲ್ಟರಿಂಗ್
ಇದಷ್ಟೆ ಅಲ್ಲದೆ ನಕಲಿ ಬ್ರೋಕರ್, ಸ್ಕ್ಯಾಮ್ ಹಾಗೂ ನಕಲಿ ಜಾಹೀರಾತುಗಳನ್ನೂ ಪಿಲ್ಟರ್ ಮಾಡುವ ಮೂಲಕ ಸಮಯ ವ್ಯರ್ಥವಾಗುವದನ್ನು ತಪ್ಪಿಸಿದೆ. ಪ್ರತಿ ಮನೆಯ ಸ್ಥಳದಿಂದ ಅವರು ದಿನ ನಿತ್ಯ ಕೆಲಸ ಮಾಡುವ ಸ್ಥಳಕ್ಕೆ ಹೋಗುವ ಸಮಯವನ್ನು ಲಕ್ಕ ಹಾಕಿ ಅದಲ್ಲಿ ಅನುಕೂಲಕರವಾದ ಮನೆಗಳನ್ನು ಮಾತ್ರ ಆಯ್ಕೆ ಮಾಡಿತು.
ಈ ತರಹ ಮನೆಗಳನ್ನು ಫಿಲ್ಟರಿಂಗ್ ಮಾಡಿದರೆ ಸುಮಾರು 20 ಮನೆಗಳನ್ನು ಪರಿಶೀಲಿಸುವ ಬದಲಾಗಿ ಕೇವಲ ನಾಲ್ಕು ಮನೆಗಳ ಭೇಟಿಗೆ ಸೀಮಿತಗೊಳಿಸಿ, ಅದರಲ್ಲಿ ತಮ್ಮ ಮನೆಯನ್ನು ಅಂತಿಮವಾಗಿ ಆಯ್ಕೆ ಮಾಡಿಕೊಂಡಿದ್ದಾರೆ. ಇದರಿಂದ ಸಮಯ ಉಳಿಯವುದರ ಜೊತೆಗೆ ಮನೆಯ ಹುಡುಕಾಟದ ಒತ್ತಡವು ಕಡಿಮೆ ಮಾಡಿದೆ ಎಂದು ಹೇಳಿದ್ದಾರೆ.
ಸಾಮಾಜಿಕ ಜಾಲತಾಣದಗಳಲ್ಲಿ ಈ ಐಡಿಯಾಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. "AIಯ ಅತ್ಯುತ್ತಮ ಬಳಕೆ" ಎಂದು ಕೆಲವರು ಪ್ರಶಂಸಿದರೆ, ಇನ್ನು ಕೆಲವರು ನಮ್ಮ ದೈನಂದಿನ ಕೆಲ ಸಮಸ್ಯೆಗಳನ್ನು ತಂತ್ರಜ್ಙಾನ ಬಳುಸುವ ಮೂಲಕ ನಾವು ನಮ್ಮ ಶ್ರಮ ಮತ್ತು ಸಮಯವನ್ನು ಉಳಿಸಬಹುದಾಗಿದೆ ಎಂಬುದಕ್ಕೆ ಇದು ಒಂದು ಉತ್ತಮ ಉದಾಹರಣೆ ಆಗಿದೆ. ಇನ್ನು ಮನೆ ಹುಡುಕಾಟದಲ್ಲಿ ಇರುವುವರಿಗೆ ಈ ವಿಧಾನವು ಪರಿಣಾಮಕಾರಿ ಮತ್ತು ಹೊಸ ಪರ್ಯಾಯ ಮಾರ್ಗವನ್ನು ನೀಡುತ್ತದೆ.
ಗಮನಿಸಿ: ಈ ವರದಿಯು ಸಾಮಾಜಿಕ ಜಾಲತಾಣದ ಮಾಹಿತಿಯನ್ನು ಆಧರಿಸಿದೆ. ಇಲ್ಲಿರುವ ಅಂಶಗಳನ್ನು ಸ್ವತಂತ್ರವಾಗಿ ಪರಿಶೀಲಿಸಲಾಗಿಲ್ಲ.
House hunting in Bangalore is a full-time job
— Sunal Sood (@sunalsood) March 20, 2026
So I hired an AI
My workflow and how it helped me, save it so you can try it out →
• Opens facebook all flatmates groups, and runs Comet with all detailed prompts and kind of places I wanted
• scans Facebook flat &… pic.twitter.com/v9Q3Kz2IGp
-
Viral: ರೋಬೋಟ್ಗಳಿಗೆ ತರಬೇತಿ ನೀಡಲು ತಲೆಗೆ ಕ್ಯಾಮೆರಾ ಕಟ್ಟಿಕೊಂಡ ಭಾರತೀಯ ಕಾರ್ಮಿಕರು: ಮನುಷ್ಯರನ್ನೇ ರಿಪ್ಲೇಸ್ ಮಾಡಲಿದೆಯಾ AI? -
ಸೌದಿ ಅರೇಬಿಯಾದಲ್ಲಿ ಪಾಕಿಸ್ತಾನಿ ಸೇನಾಪಡೆ ನಿಯೋಜನೆ: ಮಿತ್ರ ರಾಷ್ಟ್ರಕ್ಕೆ 13,000 ಸೈನಿಕರು, ಯುದ್ಧ ವಿಮಾನಗಳ ರವಾನೆ -
Weekly Horoscope: ನಾಲ್ಕು ರಾಶಿಯವರಿಗೆ ಅದೃಷ್ಟ ಹೊತ್ತು ತರುವ ವಾರ ಇದು: ಹೇಗಿದೆ ನೋಡಿ ನಿಮ್ಮ ವಾರ ಭವಿಷ್ಯ -
PUC Revaluation: ಸ್ಕ್ಯಾನ್ ಪ್ರತಿ ಪಡೆದವರ ಉತ್ತರ ಪತ್ರಿಕೆ ಮರುಮೌಲ್ಯಮಾಪನ; ಶುಲ್ಕ, ಪ್ರಮುಖ ದಿನಾಂಕಗಳು -
Bengaluru Property: ಬೆಂಗಳೂರು ಮೆಟ್ರೋದ ಈ ಮಾರ್ಗಗಳಲ್ಲಿ ಭೂಮಿ, ಪ್ರಾಪರ್ಟಿ ಬೆಲೆ ಶೇ 20% ರಿಂದ ಶೇ 30% ಹೆಚ್ಚಳ -
Gold Price Drop: ವಾರದ ಮೊದಲ ದಿನವೇ ಚಿನ್ನ-ಬೆಳ್ಳಿ ದರ ಭರ್ಜರಿ ಕುಸಿತ, ಇಂದಿನ ದರಪಟ್ಟಿ -
Career Break: ಅಲಾರಂ ಇಲ್ಲದ ಜೀವನ ಬೇಕು ಎಂದು ಗೂಗಲ್ ಕೆಲಸ ಬಿಟ್ಟ ಯುವ ಟೆಕ್ಕಿ, ನೆಟ್ಟಿಗರ ಮೆಚ್ಚುಗೆ -
E-Khata: ಜನ ಸೇವಕ ಯೋಜನೆ: ಮನೆಯಲ್ಲೇ ಕುಳಿತು ಇ - ಖಾತಾ ಪಡೆಯಿರಿ, ಈ 5 ದಾಖಲೆಗಳಿದ್ದರೆ ಸಾಕು -
Gold Rings: ಅಕ್ಷಯ ತೃತೀಯಕ್ಕೆ ಖರೀದಿಸಬಹುದಾದ ಆಕರ್ಷಕ ವಿನ್ಯಾಸದ 5 ಚಿನ್ನದ ಉಂಗುರಗಳು -
ಮಂಡ್ಯದಲ್ಲಿ 500 ಎಕರೆ ಆಟೋ ಕೈಗಾರಿಕಾ ಹಬ್: ಎಂಬಿ ಪಾಟೀಲ, ಎಚ್ಡಿ ಕುಮಾರಸ್ವಾಮಿ ಮಹತ್ವದ ಚರ್ಚೆ -
April 13 Horoscope: 12 ರಾಶಿಗಳಿಗೆ ಇಂದು ಪ್ರೇಮ, ಹಣಕಾಸು, ಉದ್ಯೋಗದಲ್ಲಿ ಏನು ಹೇಳುತ್ತದೆ ನಿಮ್ಮ ರಾಶಿ? -
Bengaluru power cut: ಬೆಂಗಳೂರಿನ ಹಲವೆಡೆ ಹೆಚ್ಚಾಯ್ತು ದಿಢೀರ್ ಪವರ್ ಕಟ್, ಹೈರಾಣಾದ ಜನ: ಬೆಸ್ಕಾಂ ಕೊಟ್ಟ ಉತ್ತರ ಇಲ್ಲಿದೆ












Click it and Unblock the Notifications