Keralam Assembly Elections 2026: ಎಲ್‌ಡಿಎಫ್ vs ಯುಡಿಎಫ್ ಪೈಪೋಟಿ, ಶಬರಿಮಲೆ ಚಿನ್ನಾಭರಣ ಕಳ್ಳತನ ವಿಷಯವೇ ಪ್ರಮುಖ
Keralam Assembly Elections 2026: ಕೇರಳಂ ವಿಧಾನಸಭೆ ಚುನಾವಣೆಗೆ ಇನ್ನು ಕೆಲವೇ ದಿನಗಳು ಮಾತ್ರ ಬಾಕಿ ಉಳಿದಿವೆ. ಕೇರಳಂ ವಿಧಾನಸಭೆ ಚುನಾವಣೆಯು ಈ ಬಾರಿ ಒಂದೇ ಹಂತದಲ್ಲಿ ನಡೆಯಲಿದೆ. 2026ರ ಏಪ್ರಿಲ್ 9ರ ಗುರುವಾರ ಕೇರಳಂ ವಿಧಾನಸಭೆಯ 140 ಸ್ಥಾನಗಳಿಗೆ ಚುನಾವಣೆ ನಡೆಯಲಿದ್ದು, ಮೇ 4ರಂದು ಮತ ಎಣಿಕೆ ನಡೆಯಲಿದೆ. ಈ ಬಾರಿ ಹಲವು ಕಾರಣಗಳಿಗೆ ಕೇರಳಂ ವಿಧಾನಸಭೆ ಚುನಾವಣೆ ಮಹತ್ವ ಪಡೆದುಕೊಂಡಿದೆ.
ಕೇರಳಂ ರಾಜ್ಯದಲ್ಲಿ ಯಾವಾಗಲೂ ಮುಖ್ಯವಾಗಿ ಎಡ ಪ್ರಜಾಸತ್ತಾತ್ಮಕ ರಂಗ (LDF) ಮತ್ತು ಯುನೈಟೆಡ್ ಡೆಮಾಕ್ರಟಿಕ್ ಫ್ರಂಟ್ (UDF) ಎನ್ನುವ ಎರಡು ಪ್ರಮುಖ ಒಕ್ಕೂಟಗಳ ನಡುವೆ ಸ್ಪರ್ಧೆ ನಡೆಯುತ್ತದೆ. ಕೇರಳಂನಲ್ಲಿ 140 ಸದಸ್ಯರ ವಿಧಾನಸಭಾ ಕ್ಷೇತ್ರಗಳಿದ್ದು, ಕೇರಳದ ವಿಧಾನಸಭೆ ಮ್ಯಾಜಿಕ್ ನಂಬರ್ 71 ಆಗಿದೆ. ಕೇರಳಂನಲ್ಲಿ ಒಟ್ಟು 14 ಜಿಲ್ಲೆಗಳಿವೆ. ಪಿಣರಾಯಿ ವಿಜಯನ್ ನೇತೃತ್ವದ ಎಲ್‌ಡಿಎಫ್ (LDF) ಮೈತ್ರಿಕೂಟವು ಅಧಿಕಾರದಲ್ಲಿದೆಯಾದರೂ, ಈ ಬಾರಿ ಆಡಳಿತ ವಿರೋಧಿ ಅಲೆ ಎದುರಾಗಿದೆ.

ಕೇರಳಂ: ಹೆಚ್ಚು ಚರ್ಚೆ ಆಗುತ್ತಿರುವ ವಿಷಯಗಳು
ಇನ್ನು ಕೇರಳಂ ವಿಧಾನಸಭೆ ಚುನಾವಣೆಯಲ್ಲಿ ಹಲವು ವಿಷಯಗಳು ಚರ್ಚೆಯಲ್ಲಿವೆ. ಅದರಲ್ಲಿ ಮುಖ್ಯವಾಗಿ ಶಬರಿಮಲೆ ದೇವಾಲಯ ವಿವಾದ, ಹಣಕಾಸಿನ ಬಿಕ್ಕಟ್ಟು ಮತ್ತು ಕೇರಳಂ ಸಾಲ ಮಾದರಿ, ಕಲ್ಯಾಣ ಮತ್ತು ಸಾಮಾಜಿಕ ಭದ್ರತೆ ಹಾಗೂ FCRA ತಿದ್ದುಪಡಿ ಸೇರಿದಂತೆ ಹಲವು ವಿಷಯಗಳು ಹೆಚ್ಚು ಚರ್ಚೆ ಆಗುತ್ತಿವೆ.
ಶಬರಿಮಲೆ ದೇವಾಲಯ ವಿವಾದ: ಕೇರಳಂ ವಿಧಾನಸಭೆ ಚುನಾವಣೆಯಲ್ಲಿ ಶಬರಿಮಲೆ ದೇವಾಲದಯ ವಿಚಾರವು ಬಹಳಷ್ಟು ಚರ್ಚೆಗೆ ಕಾರಣವಾಗಿದೆ. ಬಿಜೆಪಿಯು ಇದೇ ವಿಷಯವನ್ನು ಪ್ರದಾನ ಅಸ್ತ್ರವನ್ನಾಗಿಸಿಕೊಂಡಿದೆ. ದೇವಾಲಯದಲ್ಲಿ ಚಿನ್ನದ ಆಭರಣಗಳ ಕಳ್ಳತನದ ವಿಚಾರವು ಎಡ ಪ್ರಜಾಸತ್ತಾತ್ಮಕ ರಂಗ ಸವಾಲಾಗಿದೆ. ಕಾಂಗ್ರೆಸ್ ಹಾಗೂ ಬಿಜೆಪಿ ನೇತೃತ್ವದ ಪಕ್ಷಗಳು ಈ ವಿಷಯದಲ್ಲಿ ಎಲ್‌ಡಿಎಫ್ ಸರ್ಕಾರವನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡಿವೆ. ಪ್ರಧಾನಿ ನರೇಂದ್ರ ಮೋದಿ ಅವರು ಕೇರಳಂನಲ್ಲಿ ಎನ್‌ಡಿಎ ಸರ್ಕಾರ ಅಧಿಕಾರಕ್ಕೆ ಬಂದರೆ ಶಬರಿಮಲೆ ದೇವಾಲಯದ ಚಿನ್ನದ ಕಳ್ಳತನ ಪ್ರಕರಣವನ್ನು ತನಿಖೆ ಮಾಡುವುದಾಗಿ ಹೇಳಿದ್ದಾರೆ.
ಹಣಕಾಸಿನ ಬಿಕ್ಕಟ್ಟು ಹಾಗೂ ಭಾರೀ ಸಾಲ: ಕೇರಳಂ ರಾಜ್ಯದ ಸಾಲವು ಹೆಚ್ಚಾಗುತ್ತಿರುವುದು ಹಾಗೂ ಅಲ್ಲಿನ ಸರ್ಕಾರದ ನೀತಿಗಳ ಬಗ್ಗೆ ತೀವ್ರ ಆಕ್ಷೇಪವಿದೆ. ಕಾಂಗ್ರೆಸ್ ನೇತೃತ್ವದ ಯುಡಿಎಫ್ ಹಾಗೂ ವಿರೋಧ ಪಕ್ಷದ ನಾಯಕ ವಿಡಿ ಸತೀಶನ್ ನೇತೃತ್ವದಲ್ಲಿ ಈ ವಿಚಾರವಾಗಿ ಅಭಿಯಾನ ಪ್ರಾರಂಭಿಸಿವೆ. ಕೇರಳಂ ರಾಜ್ಯವನ್ನು ಸಾಲ ಮಾದರಿಯನ್ನಾಗಿ ಪರಿವರ್ತಿಸಿದ್ದಕ್ಕಾಗಿ ಎಲ್‌ಡಿಎಫ್ ವಿರುದ್ಧ ಟೀಕಾ ಪ್ರಹಾರ ನಡೆಸಿದೆ. ರಾಜ್ಯದ ಹೆಚ್ಚಿನ ಸಾಲದ ಪ್ರಮಾಣವು ಮತ್ತು ಪಕ್ಷಗಳು ತಮ್ಮ ಪ್ರಣಾಳಿಕೆಗಳಲ್ಲಿ ನೀಡುರುವ ಭರವಸೆಯು ಭಾರೀ ಕಲ್ಯಾಣ ವೆಚ್ಚವನ್ನು ತಂದೊಡ್ಡಲಿವೆ ಎನ್ನುವ ವಿಚಾರವು ಗಂಭೀರ ಚರ್ಚೆಗೆ ಕಾರಣವಾಗಿದೆ.
FCRA ತಿದ್ದುಪಡಿ: ಕೇರಳಂ ರಾಜ್ಯದಲ್ಲಿ ವಿಧಾನಸಭೆ ಚುನಾವಣೆಯ ಸಮಯದಲ್ಲಿ ಹೆಚ್ಚು ಚರ್ಚೆ ಆಗುತ್ತಿರುವ ವಿಷಯಗಳಲ್ಲಿ FCRA ತಿದ್ದುಪಡಿಯು ಸಹ ಪ್ರಮುಖವಾಗಿದೆ. ಹೆಚ್ಚು ವಿದೇಶಿ ಕೊಡುಗೆಯನ್ನು ನಿಯಂತ್ರಿಸುವ ತಿದ್ದುಪಡಿ ಮಸೂದೆ 2026 ಮಂಡನೆ ಮಾಡಲಾಗಿದ್ದು, ಇದು ಬಿಜೆಪಿಗೆ ಹಿನ್ನಡೆಯನ್ನುಂಟು ಮಾಡುವ ಸಾಧ್ಯತೆ ಇದೆ ಎಂದು ವಿಶ್ಲೇಷಿಸಲಾಗಿದೆ.
ಮಾನವ-ಪ್ರಾಣಿ ಸಂಘರ್ಷ: ಇನ್ನು ಕೇರಳಂ ರಾಜ್ಯದಲ್ಲಿ ಅರಣ್ಯದ ಸಮೀಪ ಪ್ರದೇಶ ಮತ್ತು ಎತ್ತರದ ಪ್ರದೇಶಗಳಲ್ಲಿ ಮಾನವ - ಪ್ರಾಣಿ ಸಂಘರ್ಷ ಹೆಚ್ಚಾಗುತ್ತಿದೆ. ಕಾಡು ಆನೆಗಳು ಮತ್ತು ಹಂದಿಗಳ ಆಗಾಗ್ಗೆ ದಾಳಿ ಮಾಡುತ್ತಿರುವುದರಿಂದ ಕಾಡಂಚಿನ ರೈತರು ತಮ್ಮ ಬೆಳೆಗಳನ್ನು ಉಳಿಸಿಕೊಳ್ಳಲು ಪರದಾಡುವಂತಾಗಿದೆ.
ಆಡಳಿತ ವಿರೋಧಿ ಮತ್ತು ಆಡಳಿತ: ಕಳೆದ 10 ವರ್ಷಗಳಿಂದಲೂ ಅಧಿಕಾರದಲ್ಲಿರುವ ಎಡ ಪ್ರಜಾಸತ್ತಾತ್ಮಕ ರಂಗ (LDF) ಈ ಬಾರಿ ಆಡಳಿತವ ವಿರೋಧ ಅಲೆಯನ್ನು ಎದುರಿಸುತ್ತಿದೆ. ಈ ಚುನಾವಣೆಯನ್ನು ಪಿಣರಾಯಿ ವಿಜಯನ್ ಅವರ ದಶಕದ ಆಡಳಿತದ ಜನಾಭಿಪ್ರಾಯದ ದೃಷ್ಟಿಯಿಂದ ನೋಡಲಾಗುತ್ತಿದೆ. ಅಲ್ಲದೆ ಕೇರಳಂ ರಾಜ್ಯದಿಂದ ಹೆಚ್ಚಾಗುತ್ತಿರುವ ವಲಸೆ ವಿಚಾರವೂ ಈ ಬಾರಿ ಭಾರೀ ಚರ್ಚೆಗೆ ಕಾರಣವಾಗಿದೆ.
ಕೇರಳಂ: ಹಾಲಿ ವಿಧಾನಸಭೆಯ ಬಲಾಬಲ
ಇನ್ನು ಕೇರಳಂ ರಾಜ್ಯದಲ್ಲಿ ಇದೀಗ ಎಲ್.ಡಿ.ಎಫ್ (LDF - ಆಡಳಿತ ಪಕ್ಷ) ಅತಿ ಹೆಚ್ಚು ಸ್ಥಾನಗಳು ಅಂದರೆ, 95 ಸ್ಥಾನಗಳಲ್ಲಿ ಗೆಲ್ಲುವ ಮೂಲಕ ಅಧಿಕಾರದಲ್ಲಿದೆ.
ಎಲ್.ಡಿ.ಎಫ್ (LDF - ಆಡಳಿತ ಪಕ್ಷ): 95 ಸ್ಥಾನಗಳು
ಸಿಪಿಐ(ಎಂ) [CPI(M)]: 61
ಸಿಪಿಐ [CPI]: 16
ಕೇರಳ ಕಾಂಗ್ರೆಸ್ (ಎಂ) [KC(M)]: 5
ಇತರೆ ಮಿತ್ರಪಕ್ಷಗಳು ಮತ್ತು ಎಲ್.ಡಿ.ಎಫ್ ಬೆಂಬಲಿತ ಪಕ್ಷೇತರರು: 13
ಯು.ಡಿ.ಎಫ್ (UDF - ಪ್ರತಿಪಕ್ಷ): 42 ಸ್ಥಾನಗಳು
ಕಾಂಗ್ರೆಸ್ [INC]: 21
ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್ [IUML]: 15
ಇತರೆ ಮಿತ್ರಪಕ್ಷಗಳು: 6
ಖಾಲಿ ಇರುವ ಸ್ಥಾನಗಳು: 3
ಕೇರಳಂನಲ್ಲಿನ ಪ್ರಮುಖ ರಾಜಕೀಯ ಪಕ್ಷಗಳು
ಎಲ್‌ಡಿಎಫ್
-----------
ಸಿಪಿಎಂ
ಸಿಪಿಐ
ಕೇರಳ ಕಾಂಗ್ರೆಸ್ (ಎಂ)
ಭಾರತೀಯ ಸಮಾಜವಾದಿ ಜನತಾ ದಳ
ಎನ್‌ಸಿಪಿ (ಎಸ್)
ನ್ಯಾಷನಲ್ ಸೆಕ್ಯೂಲರ್ ಕಾನ್ಫರೆನ್ಸ್
ಆರ್‌ಜೆಡಿ
ಐಎನ್‌ಎಲ್
ಕಾಂಗ್ರೆಸ್ - ಎಸ್
ಕೇರಳ ಕಾಂಗ್ರೆಸ್ (ಬಿ)
ಜೆಸಿಕೆ
ಯುಡಿಎಫ್
-----------
ಕಾಂಗ್ರೆಸ್
ಮುಸ್ಲಿಂ ಲೀಗ್
ಕೇರಳ ಕಾಂಗ್ರೆಸ್
ಕೇರಳ ಕಾಂಗ್ರೆಸ್-ಜಾಕೋಬ್
ಎನ್‌ಸಿಕೆ
ಆರ್‌ಪಿಎಂಐ
ಆರ್‌ಎಸ್‌ಪಿ
ಆರ್‌ಸಿಪಿ
ಸಿಎಂಪಿ
ಜೆಎಸ್‌ಎಸ್
ಫಾರ್ವರ್ಡ್ ಬ್ಲಾಕ್
ಜೆಆರ್‌ಪಿ
ಟಿಎಂಸಿ
ಎನ್‌ಡಿಎ
--------
ಬಿಜೆಪಿ
ಬಿಡಿಜೆಎಸ್
ಟ್ವಿಂಟಿ - 20
ಎಚ್‌ಎಎಂ ಪಾರ್ಟಿ
ಎಐಎಡಿಎಂಕೆ
ಕಾಮರಾಜ್ ಕಾಂಗ್ರೆಸ್
Keralam Assembly Elections 2026 ಸ್ವತಂತ್ರವಾಗಿ ಸ್ಪರ್ಧಿಸುತ್ತಿರುವ ಪಕ್ಷಗಳು
ಎಎಪಿ
ಎಸ್‌ಡಿಪಿಐ
ಬಿಎಸ್‌ಬಿ
ವೆಲ್ಫೇರ್ ಪಾರ್ಟಿ
-
EPFO 3.0: ಇನ್ಮುಂದೆ UPI, ATM ಮೂಲಕವೇ ಪಿಎಫ್ ಹಣ ಪಡೆಯಬಹುದು; ಏಪ್ರಿಲ್ 1 ರಿಂದಲೇ ಹೊಸ ನಿಯಮ ಜಾರಿ -
Gold Rate : ಮಾರ್ಚ್ 29ರ ಚಿನ್ನ ಮತ್ತು ಬೆಳ್ಳಿ ಬೆಲೆ: ಪ್ರಮುಖ ನಗರಗಳ ಇಂದಿನ ದರ ಪಟ್ಟಿ ಹೀಗಿದೆ -
Pooja Gandhi: ಹಿಂದಿ ಒಂದು ಭಾಷೆಯಾಗಿ ಕಲಿಯಲಿ, ಆದ್ರೆ ಕನ್ನಡದ ಮಕ್ಕಳ ಮೇಲೆ ಹೇರಿಕೆ ಬೇಡ: ನಟಿ ಪೂಜಾ ಗಾಂಧಿ -
Chicken Leg Piece: ಚಿಕನ್ ಲೆಗ್ ಪೀಸ್ ಸಿಗಲಿಲ್ಲ ಎಂದು ಮದುವೆ ಮಂಟಪದಲ್ಲೇ ಮಾರಾಮಾರಿ, ವಿಡಿಯೋ ಇಲ್ಲಿದೆ -
ಆರ್ಸಿಬಿ ಗೆಲ್ಲಿಸಿದ ಕೊಹ್ಲಿ ಕಂಡು ಗ್ಯಾಲರಿಯಲ್ಲೇ ಕುಣಿದು ಕುಪ್ಪಳಿಸಿದ ಅನನ್ಯಾ ಬಿರ್ಲಾ: ಭಾರೀ ವೈರಲ್ -
April Monthly Horoscope: ಏಪ್ರಿಲ್ ಮಾಸ ಭವಿಷ್ಯ: ಉದ್ಯೋಗ, ಹಣಕಾಸು ಮತ್ತು ಆರೋಗ್ಯದ ಸೂಚನೆಗಳು -
Bengaluru: 19 ಸಾವಿರಕ್ಕೆ 2BHK ಮನೆ ಸಿಕ್ಕಿದ್ದೇಗೆ? 4 ವರ್ಷದಲ್ಲಿ 3 ಮನೆ ಬದಲಾಯಿಸಿದ ದಂಪತಿ ಹೇಳಿದ ಬಾಡಿಗೆ ಸೀಕ್ರೆಟ್ Viral -
Karnataka Weather: ದಕ್ಷಿಣ ಒಳನಾಡಿನಲ್ಲಿ ಗುಡುಗು ಸಹಿತ ಮಳೆ ಮುನ್ಸೂಚನೆ -
NWKRTC: ದಾಂಡೇಲಿ-ಬೆಂಗಳೂರು ಮಧ್ಯೆ ಪಲ್ಲಕ್ಕಿ ವೈಭವ: ಬಸ್ಗಳ ಸಂಚಾರಕ್ಕೆ ಗ್ರೀನ್ ಸಿಗ್ನಲ್, ಡಿಟೇಲ್ಸ್ -
Rishab Shetty: ಪತ್ನಿ ಪ್ರಗತಿ ಶೆಟ್ಟಿ ಹೊರತುಪಡಿಸಿ ಎಲ್ಲರನ್ನೂ ಅನ್ಫಾಲೋ ಮಾಡಿದ ನಟ ರಿಷಬ್ ಶೆಟ್ಟಿ -
March 30 Horoscope: ಕೆಲಸ ಮತ್ತು ಹಣದ ಸ್ಥಿತಿಯಲ್ಲಿ ಹೊಸ ಬದಲಾವಣೆ -
New Railway Line: ಗದಗ-ಹೊಟಗಿ ರೈಲು ಡಬ್ಲಿಂಗ್ ಪೂರ್ಣ, ಮಹಾರಾಷ್ಟ್ರವರೆಗೂ ಸಂಚಾರ ಸುಧಾರಣೆ












Click it and Unblock the Notifications