Old Bengaluru: 1995ರಲ್ಲಿ ಬೆಂಗಳೂರು ಹೇಗಿತ್ತು ಗೊತ್ತಾ? ವಿಡಿಯೋ ನೋಡಿ
ಒಂದು ಕಾಲದಲ್ಲಿ ನಿವೃತ್ತ ನೌಕರರ ನೆಚ್ಚಿನ ನಗರ ಎಂದೇ ಹೆಸರಾಗಿದ್ದ ಬೆಂಗಳೂರು ಇದೀಗ, ಉದ್ಯೋಗಿಗಳ, ಉದ್ಯಮಿಗಳ ಪಾಲಿನ ಸ್ವರ್ಗವಾಗಿದೆ. ಗ್ರೀನ್ ಸಿಟಿಯಾಗಿದ್ದ ಬೆಂಗಳೂರು ಬಳಿಕ ಸಿಲಿಕಾನ್ ಸಿಟಿಯಾಗಿ ಬದಲಾಯಿತು, ಇದೀಗ ಭಾರತ ಟೆಕ್ ರಾಜಧಾನಿ ಎನ್ನುವ ಹೆಗ್ಗಳಿಕೆ ಬೆಂಗಳೂರಿನದ್ದಾಗಿದೆ. ನಿರೀಕ್ಷೆಗೂ ಮೀರಿ ಮಹಾನಗರಿ ಬೆಳೆದು ನಿಂತಿದೆ. ಆದರೆ ಇದೇ ನಗರ 1995ರಲ್ಲಿ ಹೇಗಿತ್ತು ಗೊತ್ತಾ?
1995ರಲ್ಲಿ ಬೆಂಗಳೂರು ಅದೆಷ್ಟು ಪ್ರಶಾಂತವಾಗಿತ್ತು ಎನ್ನುವುದನ್ನು ನೋಡಿದರೆ ಅಚ್ಚರಿಯಾಗುತ್ತದೆ. ಕೇವಲ 30 ವರ್ಷಗಳಲ್ಲಿ ಈ ನಗರ ಅದ್ಯಾವ ಮಟ್ಟಿಗೆ ಅಭಿವೃದ್ಧಿಯಾಗಿದೆ ಎಂದು ನಿಮಗೆ ಅಂದಾಜು ಸಿಗುತ್ತದೆ. ಸಾಮಾಜಿಕ ಮಾಧ್ಯಮಗಳಲ್ಲಿ ಹಳೆಯ ವಿಡಿಯೋಗಳು ಇದೀಗ ಭಾರಿ ಸುದ್ದಿ ಮಾಡುತ್ತಿದೆ.

ವಿಡಿಯೋ ನೋಡಿದ ಅನೇಕ ಮಂದಿ, ತಾನು ಬೆಂಗಳೂರಿನ ಹಳೆಯ ದಿನಗಳನ್ನು ಕಣ್ಣಾರೆ ನೋಡಿದ್ದೇನೆ, ಅದು ಬೆಂಗಳೂರಿನ ಚಿನ್ನದಂತಹ ಕಾಲ ಎಂದು ಹೇಳಿದ್ದಾರೆ. ಇನ್ನು ಅನೇಕರು ವಿಡಿಯೋ ನೋಡಿ ಇಂದಿನ ಬೆಂಗಳೂರಿಗು ಅಂದಿನ ಬೆಂಗಳೂರಿಗೂ ಸಂಬಂಧವೇ ಇಲ್ಲದಂತೆ ಬೆಳೆದಿದೆ ಎಂದಿದ್ದಾರೆ.
ಯುಎಸ್ ಮೂಲದ ವ್ಯಕ್ತಿಯಿಂದ ರೆಕಾರ್ಡ್
@Bnglrweatherman ಎನ್ನುವ ಎಕ್ಸ್ ಹ್ಯಾಂಡಲ್‌ನಲ್ಲಿ ಈ ವಿಡಿಯೋಗಳನ್ನು ಹಂಚಿಕೊಳ್ಳಲಾಗಿದೆ. ಎರಡು ವಿಡಿಯೋಗಳನ್ನು ಹಂಚಿಕೊಳ್ಳಲಾಗಿದ್ದು, ಎರಡು ವಿಡಿಯೋಗಳಿಂದ 20 ನಿಮಿಷ ಸುದೀರ್ಘವಾದ ವಿಡಿಯೋಗಳಾಗಿದೆ. ಬೆಂಗಳೂರಿನ ವಿಶಾಲವಾದ ರಸ್ತೆಗಳು, ಕೆಂಪು ಬಸ್‌ಗಳು, ಹಳೆಯ ಕಾರುಗಳು, ಆಟೋಗಳು, ಟ್ರಾಫಿಕ್ ಇಲ್ಲದ ರಸ್ತೆಗಳನ್ನು ನೋಡಬಹುದು.
A US born person filmed this video of Bengaluru city in 1995 when he used to spend his summer vacations in India
— Karnataka Weather (@Bnglrweatherman) August 23, 2024
The good old days of Bangalore 🤌🫰🫶🤩❤️
VC: Jaynarbmw pic.twitter.com/1qh50Pfd0y
ವಿಧಾನಸೌಧ, ಹೈಕೋರ್ಟ್ ಕಟ್ಟಡಗಳು ಸೇರಿ ಬೆಂಗಳೂರಿನ ವಿವಿಧ ಕಟ್ಟಡಗಳನ್ನು ನೋಡಬಹುದು. ವಿಡಿಯೋ ನೋಡಿದ ಅನೇಕ ಹಿರಿಯರು ಅಂದಿನ ಕಾಲವೇ ಚನ್ನಾಗಿತ್ತು. ಬೆಂಗಳೂರು ಕೂಡ ಸುಂದರವಾಗಿತ್ತು ಎಂದು ಹಳೆಯ ನೆನಪುಗಳನ್ನು ಮೆಲುಕು ಹಾಕಿದ್ದಾರೆ.
ಈ ವಿಡಿಯೋಗೆ ಕ್ಯಾಪ್ಟನ್ ಮಣಿವಣ್ಣನ್ ಕೂಡ ಪ್ರತಿಕ್ರಿಯೆ ನೀಡಿದ್ದು, ಅಮೂಲ್ಯವಾದ ವಿಡಿಯೋ ಹಂಚಿಕೊಂಡಿದ್ದಕ್ಕೆ ಧನ್ಯವಾದಗಳು, ಅಂದು ಎಲ್ಲೆಂದರಲ್ಲಿ ಫ್ರೀಯಾಗಿ ಓಡಾಡಿಕೊಂಡು ಇರಬಹುದಿತ್ತು, ಬೆಂಗಳೂರು ಬುಸಿನೆಸ್ ಜಿಲ್ಲೆಯನ್ನು 10 ನಿಮಿಷಗಳಲ್ಲಿ ಓಡಾಡಿಕೊಂಡು ಬರಬಹುದಿತ್ತು ಎಂದು ಹಳೆಯ ನೆನಪುಗಳನ್ನು ಹಂಚಿಕೊಂಡಿದ್ದಾರೆ.
ಇನ್ನೂ ಕೆಲವರು ಅಂತಹ ಹಳೆಯ ದಿನಗಳು ಮರಳಿ ಬಂದರೆ ಎಷ್ಟು ಸುಂದರವಾಗಿರುತ್ತದೆ ಎಂದು ಆಸೆ ವ್ಯಕ್ತಪಡಿಸಿದ್ದಾರೆ. 2004-05ರಲ್ಲಿ ಬೆಂಗಳೂರಿನ ಸುವರ್ಣ ಯುಗ ಮುಕ್ತಾಯವಾಯಿತು. ಅಂದಿನಿಂದ ನಗರ ವೇಗವಾಗಿ ಬೆಳೆದಿದ್ದು, ಇಂದು ನಗರದ ಚಿತ್ರಣವೇ ಬದಲಾಗಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.












Click it and Unblock the Notifications