Bengaluru House Rent: ಬೆಂಗಳೂರು ನಗರಿಗೆ ದುಬಾರಿ ಗರಿ
ಬೆಂಗಳೂರು, ಏಪ್ರಿಲ್ 30: ಸಂಚಾರ ದಟ್ಟಣೆ, ಸ್ವಚ್ಚತೆ ವಿಚಾರಗಳಲ್ಲಿ ಆಗಾಗ ಸುದ್ದಿಯಲ್ಲಿರುವ ಕರ್ನಾಟಕ ರಾಜ್ಯ ರಾಜಧಾನಿ ಐಟಿ ಕೇಂದ್ರ ಬೆಂಗಳೂರು ಇದೀಗ ಮನೆ ಬಾಡಿಗೆ ವಿಚಾರವಾಗಿ ಸುದ್ದಿಯಲ್ಲಿದೆ.
ಹೌದು, ಮನೆಗಳ ಬಾಡಿಗೆ ವರ್ಷದಿಂದ ವರ್ಷಕ್ಕೆ, ತ್ರೈಮಾಸಿಕ ಅಂತರದಲ್ಲಿ ಬೆಂಗಳೂರಿನಲ್ಲಿ ಅತ್ಯಧಿಕ ಪ್ರಮಾಣದಲ್ಲಿ ಮನೆ ಬಾಡಿಗೆ ಹೆಚ್ಚಳವಾಗಿದೆ. ಹೀಗಾಗಿ ಉದ್ಯಾನ ನಗರಿ ಬೆಂಗಳೂರು ಮೊದಲ ಸ್ಥಾನದಲ್ಲಿದ್ದರೆ, ದೇಶದ ವಾಣಿಜ್ಯ ನಗರಿ ಮುಂಬೈ ಎರಡನೇ ಸ್ಥಾನದಲ್ಲಿದೆ ಎಂದು ವರದಿಯೊಂದು ಮಾಹಿತಿ ಬಹಿರಂಗಪಡಿಸಿದೆ.

ಸಾವಿರಾರು ಐಟಿ ಕಂಪನಿಗಳಿಗೆ ನೆಲೆ ಕೊಡುವ ಮೂಲಕ ಲಕ್ಷಾಂತರ ಜನರಿಗೆ ಉದ್ಯೋಗ ಕಲ್ಪಿಸಿರುವ ಬೆಂಗಳೂರಲ್ಲಿ ಕಳೆದ ಜನವರಿ-ಮಾರ್ಚ್ ತಿಂಗಳ ವರ್ಷ ಮೊದಲ ತ್ರೈಮಾಸಿಕದ ಮೂರು ತಿಂಗಳ ಅವಧಿಯಲ್ಲಿ ಮನೆ ಬಾಡಿಗೆ ಬರೋಬ್ಬರಿ ಶೇಕಡಾ 4.45ರಷ್ಟು ಹೆಚ್ಚಳ ಆಗಿದೆ.
ಮುಂಬೈನಲ್ಲಿ ಶೇ.4.15ರಷ್ಟು ಬಾಡಿಗೆ ಹೆಚ್ಚಳ
ಇನ್ನೂ ಎರಡನೇ ಸ್ಥಾನದಲ್ಲಿರುವ ಮುಂಬೈ ನಗರದಲ್ಲಿ ಮನೆ ಬಾಡಿಗೆ ಇದೇ ಅವಧಿಯಲ್ಲಿ ಶೇಕಡಾ 4.15ರಷ್ಟು ಏರಿಕೆ ಆಗಿದೆ ಎಂದು ರಿಯಲ್ ಎಸ್ಟೇಟ್ ಸಂಸ್ಥೆ Anarock ವರದಿ ಮಾಹಿತಿ ನೀಡಿದೆ.
ಈ ಮೂಲಕ ಕೋವಿಡ್ ವೇಳೆ ಬಾಡಿಗೆ ವಿಚಾರದಲ್ಲಿ ಹಿನ್ನಡೆ ಅನುಭವಿಸಿದ್ದ ಮನೆಗಳ ಮಾಲೀಕರಿಗೆ ಇತ್ತೀಚಿನ ದಿನಗಳಲ್ಲಿ ಅದೃಷ್ಟ ಖುಲಾಯಿಸಿದೆ ಎನ್ನಬಹುದು.

WFHಗೆ ವಿದಾಯ: ಮನೆ ಬಾಡಿಗೆ ಏರಿಕೆ
ಕೊರೊನಾ ಸಮಯದಲ್ಲಿ ಬೆಂಗಳೂರು, ಮುಂಬೈ ಸೇರಿದಂತೆ ದೇಶಾದ್ಯಂತ ಲಾಕ್ ಡೌನ್ ಆಯಿತು. ಆಗ ಐಟಿ ಕಂಪನಿಗಳು ತನ್ನ ನೌಕರರಿಗೆ ಮನೆಯಿಂದ ಕೆಲಸ (WFH) ಮಾಡಲು ಅವಕಾಶ ಕಲ್ಪಿಸಿತು. ಆದಾದ ಬಳಿಕ ವರ್ಷಗಳ ಕಾಲ ಅದನ್ನೇ ಮುಂದುವರಿಸಿದ್ದರಿಂದ ಮನೆ ಬಾಡಿಗೆ ಬಾರದೇ ಮಾಲೀಕರು ಆತಂಕಕ್ಕೆ ಒಳಗಾಗಿದ್ದರು. ಅವರ ಆದಾಯಕ್ಕೆ ಕತ್ತರಿ ಬಿದಿತ್ತು.
ಕಳೆದೊಂದು ವರ್ಷದಿಂದ ಬೆಂಗಳೂರಿನಂತಹ ಮಹಾನಗರಗಳಲ್ಲಿ ಕ್ರಮೇಣ ಮನೆಯಿಂದ ಕೆಲಸಕ್ಕೆ ವಿದಾಯ ಹೇಳಿ ಕಚೇರಿಯಿಂದ ಕೆಲಸ ಮಾಡಲು ಉದ್ಯೋಗಿಗಳಿಗೆ ಸೂಚಿಸಿವೆ. ಜೊತೆಗೆ ಒಂದಷ್ಟ ಕಂಪನಿಗಳು ಫುಲ್ ಟೈಮ್ ಮನೆಯಿಂದ ಕೆಲಸಕ್ಕೆ ಬ್ರೇಕ್ ಹಾಕಿದ್ದು, ಹೈಬ್ರಿಡ್ ವ್ಯವಸ್ಥೆ ಜಾರಿಗೊಳಿಸಿವೆ.
ಹೀಗಾಗಿ ಐಟಿ ಉದ್ಯೋಗಿಗಳು ಬೆಂಗಳೂರಿಗೆ ಬರುವಂತಾಗಿದೆ. ಇದರಿಂದ ಮನೆ ಬಾಡಿಗೆಗಳು ಹಂತ ಹಂತವಾಗಿ ಹೆಚ್ಚಾಗಿವೆ. ಮೆಟ್ರೋ ಮಾರ್ಗ ಇರುವ ಸುತ್ತಮುತ್ತಲಿನ ಪ್ರದೇಶದಲ್ಲಿ ಮನೆ ಬಾಡಿಗೆ ವಿಪರೀತವಾಗಿ ಹೆಚ್ಚಾಗಿದೆ. ಕೆಲವೊಬ್ಬರು ಈ ಅವಕಾಶದ ದುರ್ಬಳಕೆ ಸಹ ಮಾಡಿಕೊಂಡು ಉದಾಹರಣೆಗಳನ್ನು ಕಾಣಬಹುದು.
ಕೊರೊನಾ ಪೂರ್ವ 2019 ರಲ್ಲಿ ಮನೆ ಬಾಡಿಗೆ ಎಷ್ಟಿತ್ತು?
ಕೊರೊನಾ ಆಗಮನ ಮೊದಲು 2019 ರಲ್ಲಿ ಇದೇ ನಗರಗಳಲ್ಲಿ ಮನೆ ಬಾಡಿಗೆಯಿಂದ ಬರುವ ಆದಾಯ ಪ್ರಮಾಣ ಶೇಕಾ 3.6% ರಷ್ಟಿತ್ತು ಎನ್ನಲಾಗಿದೆ. ಮುಂಬೈ ಮತ್ತು ಗುರುಗ್ರಾಮದಲ್ಲಿ ಈ ಆದಾಯ ಪ್ರಮಾಣ ಶೇ.3.5 ರಷ್ಟಿತ್ತು. ನಂತರ ಈ ಆದಾಯ ಶೇಕಡಾ 24ರಷ್ಟು ಬೆಳವಣಿಗೆ ಆಯಿತು.
ವರದಿಗಳ ಪ್ರಕಾರ, ಬೆಂಗಳೂರಿನ ಸರ್ಜಾಪುರ ವ್ಯಾಪ್ತಿಯಲ್ಲಿ 2023ರ ಕೊನೆಯ ತ್ರೈಮಾಸಿಕದಲ್ಲಿ ಮನೆ ಬಾಡಿಗೆ ಸರಾಸರಿ 1,000 ಚದರ ಅಡಿಗಳ ಪ್ರಮಾಣಿತ ಮನೆ/ಫ್ಲಾರ್ಟ್ (2 BHK) 31,600 ರಷ್ಟಿತ್ತು. ಅದೇ ಗಾತ್ರದ ಮನೆಗೆ ಈ ವರ್ಷ 2024ರ ಜನವರಿ-ಮಾರ್ಚ್ ಮೊದಲ ತ್ರೈಮಾಸಿಕದಲ್ಲಿ ಮಾಸಿಕ 34,000 ರೂ.ಗೆ ಹೆಚ್ಚಾಗಿದೆ.
ದೇಶದ ನಗರಗಳಲ್ಲಿ 2022-2024ರವರೆಗಿನ ಮನೆ ಬಾಡಿಗೆ?
ಬೆಂಗಳೂರು ವೈಟ್‌ಫಿಲ್ಡ್‌ನಲ್ಲಿ 2022-2024ರ ಮಾರ್ಚ್ ಅಂತ್ಯದವರೆಗೆ 22,500 ರೂ.ನಿಂದ 32,500 ರೂ.ವರೆಗೆ ಮನೆ ಬಾಡಿಗೆ ಏರಿಕೆ ಆಗಿದೆ. ಪುಣೆಯಲ್ಲಿ ಇದೇ ಮೂರು ವರ್ಷದಲ್ಲಿ 17000 ರೂ.ನಿಂದ 22000 ರೂಪಾಯಿ, ನವದೆಹಲಿ (NCR) ಯಲ್ಲಿ 19,000-24,000 ರೂಪಾಯಿ, ಕಲ್ಕತ್ತಾದಲ್ಲಿ ಮನೆ ಬಾಡಿಗೆ 22,000-27000 ರೂ. ಹಾಗೂ ಚೆನ್ನೈ 18000-21000 ರೂಪಾಯಿ ಹೆಚ್ಚಳವಾಗಿದೆ ಎಂದು ವರದಿ ತಿಳಿಸಿದೆ.












Click it and Unblock the Notifications