Bengaluru Weather: ನಗರದಲ್ಲಿ ವರ್ಷದ ಅತ್ಯಧಿಕ ಚಳಿ ದಾಖಲು, ಮುನ್ಸೂಚನೆ ಏನಿದೆ?
ಬೆಂಗಳೂರು, ಜನವರಿ 05: ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಕಳೆದೊಂದು ವಾರದಲ್ಲಿ ಕ್ರಮೇಣ ಚಳಿ ಹೆಚ್ಚಾಗಿದೆ. ನಗರದಲ್ಲಿ ಒಂದೇ ದಿನ ಅತ್ಯಧಿಕ ಕನಿಷ್ಠ ತಾಪಮಾನ ದಾಖಲಾಗಿದೆ. ಬೆಳಗ್ಗೆ, ರಾತ್ರಿ ಮಂಜು ಕವಿಯುತ್ತಿದ್ದು, ಮಧ್ಯಾಹ್ನ ಒಣ ಹವೆ ಕಂಡು ಬಂದಿದೆ. ಇದೇ ವಾತಾವರಣ ಮುಂದಿನ ಎರಡರಿಂದ ಐದು ದಿನ ಮುಂದುವರಿಯಲಿದೆ. ಶನಿವಾರ ಬೆಂಗಳೂರು HAL ನಲ್ಲಿ 12 ಡಿಗ್ರಿ ಸೆಲ್ಸಿಯಸ್ಸ್ ಕನಿಷ್ಠ ತಾಪಮಾನ ದಾಖಲಾಗಿದೆ.
ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ (KSNDMC) ನೀಡಿರುವ ಮುನ್ಸೂಚನೆ ಪ್ರಕಾರ, ಬೆಂಗಳೂರು ಸೇರಿದಂತೆ ರಾಜ್ಯದ ನಾನಾ ಜಿಲ್ಲೆಗಳಲ್ಲಿ ಚಳಿ ಹೆಚ್ಚಾಗುತ್ತಿದೆ. ಅದೇ ರೀತಿ ಬೆಂಗಳೂರಿನಲ್ಲಿ ಕಳೆದ ನಾಲ್ಕೈದು ದಿನಗಳಿಂದ ಇನ್ನಿಲ್ಲದಂತೆ ಥಂಡಿ ವಾತಾವರಣ ಸೃಷ್ಟಿಯಾಗಿದೆ.

ನೆನ್ನೆ ನಗರದಲ್ಲಿ ವರ್ಷದ ಅತ್ಯಧಿಕ ಚಳಿ ದಾಖಲಾಗಿದೆ. 12 ಡಿಗ್ರಿ ಸೆಲ್ಸಿಯಸ್ ಕನಿಷ್ಠ ಉಷ್ಣಾಂಶ ದಾಖಳಾಗಿದೆ. ಇದು ಈ ವರ್ಷದ ಅತೀ ಕನಿಷ್ಠ ತಾಪಮಾನ ಎನ್ನಲಾಗುತ್ತಿದೆ. ಮುಂದಿನ ಎರಡು ದಿನ ಇದೇ ರೀತಿಯ ವಾತವರಣ ಕಂಡು ಬರಲಿದೆ.
ಮುಂದಿನ ಎರಡರಿಂದ ಐದು ದಿನಗಳ ಕಾಲ ನಗರದಲ್ಲಿ ಕನಿಷ್ಠ ತಾಪಮಾನ 14 ಡಿಗ್ರಿ ಸೆಲ್ಸಿಯಸ್ ಗರಿಷ್ಠ ತಾಪಮಾನ 26-27ರಿಂದ ಡಿಗ್ರಿ ಸೆಲ್ಸಿಯಸ್ ಕಂಡು ಬರಲಿದೆ. ಶುಷ್ಕ ವಾತಾವರಣ ಕಂಡು ಬರಲಿದ್ದು, ಬೆಳಗ್ಗೆ, ರಾತ್ರಿ ಮಂಜು ಕವಿಯಲಿದೆ. ಸದ್ಯ ನಗರದಲ್ಲಿ ಯಾವ ಮಳೆಯ ವಾತಾವರಣ, ಹವಾಮಾನ ವೈಪರಿತ್ಯಗಳ ಲಕ್ಷಗಣಗಳು ಸದ್ಯಕ್ಕೆ ಇಲ್ಲ ಎಂದು ತಿಳಿದು ಬಂದಿದೆ.
ಬೆಂಗಳೂರಿನಾದ್ಯಂತ ಚಳಿ ಆವರಿಸಿದೆ. ಬೆಂಗಳೂರು ಹೊರ ಭಾಗದ ಎಚ್‌ಎಎಲ್ ನಿಲ್ದಾಣ ಕಡೆ ಶನಿವಾರ ಅತೀವ ಚಳಿ ಕಂಡು ಬಂದಿದೆ. ಉಳಿದಂತೆ ಬೆಂಗಳೂರು ನಗರದಲ್ಲಿ 14 ಡಿಗ್ರಿ ಸೆಲ್ಸಿಯಸ್, ಬೆಂಗಳೂರು ಕೆಐಎಎಲ್‌ನಲ್ಲಿ ಕಡಿಮೆ ತಾಪಮಾನ ದಾಖಲಾಗಿದೆ.
ಕರ್ನಾಟಕದ ವಿವಿಧ ಜಿಲ್ಲೆಗಳಲ್ಲಿ ಅದರಲ್ಲೂ ಮಲೆನಾಡಿನ ಚಿಕ್ಕಮಗಳೂರು, ಹಾಸನ, ವಿಜಯಪುರ, ಬೀದರ್, ರಾಯಚೂರು, ಕಲಬುಗರಿ, ಹಾವೇರಿ, ಬೆಳಗಾವಿ, ಕೋಲಾರ, ಚಿಕ್ಕಬಳ್ಳಾಪುರ, ಮೈಸೂರು ಭಾಗದಲ್ಲೂ ವ್ಯಾಪಕ ಚಳಿ ಆವರಿಸಿದೆ. ಮಧ್ಯಾಹ್ನ ಶುಷ್ಕ ವಾತಾವರಣ ಕಂಡು ಬರುತ್ತಿದೆ. ಗರಿಷ್ಠ ತಾಪಮಾನ 28 -30 ಡಿಗ್ರಿ ಸೆಲ್ಸಿಯಸ್ ವರೆಗೆ ದಾಖಲಾಗುತ್ತಿದೆ.
ಜ.5ರ ರಾಜ್ಯದ ಕನಿಷ್ಠ ತಾಪಮಾನದ ಜಿಲ್ಲೆಗಳ ಪಟ್ಟಿ
ಬೀದರ್: 10 ಡಿಗ್ರಿ ಸೆಲ್ಸಿಯಸ್
ಬೆಳಗಾವಿ ವಿಮಾನ ನಿಲ್ದಾಣ: 11 ಡಿಗ್ರಿ ಸೆಲ್ಸಿಯಸ್
ಬೆಳಗಾವಿ: 11.4 ಡಿಗ್ರಿ ಸೆಲ್ಸಿಯಸ್
ವಿಜಯಪುರ: 10.6 ಡಿಗ್ರಿ ಸೆಲ್ಸಿಯಸ್
ಬಾಗಲಕೋಟೆ: 13.2 ಡಿಗ್ರಿ ಸೆಲ್ಸಿಯಸ್
ಧಾರವಾಡ : 13 ಡಿಗ್ರಿ ಸೆಲ್ಸಿಯಸ್
ಹಾವೇರಿ: 12.6 ಡಿಗ್ರಿ ಸೆಲ್ಸಿಯಸ್
ಗದಗ: 13.8 ಡಿಗ್ರಿ ಸೆಲ್ಸಿಯಸ್
ರಾಯಚೂರು: 14.4 ಡಿಗ್ರಿ ಸೆಲ್ಸಿಯಸ್
ದಾವಣಗೆರೆ: 12 ಡಿಗ್ರಿ ಸೆಲ್ಸಿಯಸ್
ಚಿಕ್ಕಮಗಳೂರು: 10.2 ಡಿಗ್ರಿ ಸೆಲ್ಸಿಯಸ್












Click it and Unblock the Notifications