Bengaluru Heat Wave: ನಗರದಲ್ಲಿಂದು 33.9 ಡಿ.ಸೆ. ತಾಪಮಾನ: ಮಾ. 10ರ ವರೆಗಿನ ಮುನ್ಸೂಚನೆ: ರಾಜ್ಯದ ಗರಿಷ್ಠ ತಾಪಮಾನದ ಮಾಹಿತಿ

ಬೆಂಗಳೂರು, ಮಾರ್ಚ್ 04: ಈ ವರ್ಷ ರಾಜ್ಯ ರಾಜಧಾನಿ ಬೆಂಗಳೂರು ಉತ್ತರ ಕರ್ನಾಟಕದ ಜಿಲ್ಲೆಯಂತೆ ಭಾಸವಾಗುತ್ತಿದೆ. ಒಂದು ತಿಂಗಳ ಹಿಂದಿನಿಂದಲೂ (ಫೆಬ್ರವರಿ ಆರಂಭ) ಅತ್ಯಧಿಕ ತಾಪಮಾನ ದಾಖಲಾಗುತ್ತಿದೆ. ಅದರ ಭಾಗವಾಗಿಯೇ ಸೋಮವಾರ ನಗರವು ಮತ್ತೆ ಅತ್ಯಧಿಕ ತಾಪಮಾನಕ್ಕೆ ಸಾಕ್ಷಿಯಾಗಿದೆ.

ಹೌದು, ಬೆಂಗಳೂರಲ್ಲಿ ಸೋಮವಾರ ವಾಡಿಕೆಗಿಂತ ಎರಡು ಮೂರರಷ್ಟು ಅಧಿಕ ತಾಪಮಾನ ದಾಖಲಾಗಿದೆ. 30 ಡಿಗ್ರಿ ಸೆಲ್ಸಿಯಸ್ ಆಸು ಪಾಸು ಇರುತ್ತಿದ್ದ ಬಿಸಿಲಿನ ಪ್ರಮಾಣದ ಇಂದು 33 ಡಿಗ್ರಿ ಸೆಲ್ಸಿಯಸ್‌ಗೆ ಹೆಚ್ಚಳವಾಗಿದೆ. ನಾಳೆ ಮಂಗಳವಾರವು (ಮಾರ್ಚ್ 5) ರಂದು ಸಹ ಇದೇ ವಾತಾವರಣ ಮುಂದುವರಿಯಲಿದೆ, ಹೆಚ್ಚು ಶಾಖದ ಅಲೆ ಕಂಡು ಬರಲಿದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ.

Bengaluru Heat Wave Monday Recorded 33 9 Degrees Celsius Max Temp IMD Forecast

ಮಾರ್ಚ್ 10ರವರೆಗೆ ತಾಪಮಾನದ ಮಾಹಿತಿ

ನಗರದಲ್ಲಿ ಮುಂದಿನ ಮಾರ್ಚ್ 10ರವರೆಗೆ ಗರಿಷ್ಠ ತಾಪಮಾನ 32 ಡಿಗ್ರಿ ಸೆಲ್ಸಿಯಸ್ ಕಂಡು ಬರಲಿದೆ. ಈ ಮೂಲಕ ಬೆಂಗಳೂರಿಗರು ಬಿಸಿಲಿಗೆ ಹೈರಾಣಾಗಲಿದ್ದಾರೆ. ನಿರ್ಮಲ ನೀಲಿ ಆಕಾಶ ಕಂಡು ಬರಲಿದೆ. ಸಾಮಾನ್ಯವಾಗಿ ಈ ರೀತಿ ಆಕಾಶವಿದ್ದಾಗ ತಾಪಮಾನ ಏರುಗತಿಯಲ್ಲಿರುತ್ತದೆ.

ಕೇವಲ ಬೆಂಗಳೂರು ಮಾತ್ರವಲ್ಲದೇ ಒಳನಾಡು ಜಿಲ್ಲೆಗಳಲ್ಲಿ, ಅದರಲ್ಲೂ ಉತ್ತರ ಒಳನಾಡು ಜಿಲ್ಲೆಗಳಲ್ಲಿಯೂ ವಾಡಿಕೆಗಿಂತಲೂ ಹೆಚ್ಚು ತಾಪಮಾನ ದಾಖಲಾಗುತ್ತಿದೆ.

ಇಂದು ಬೆಂಗಳೂರಲ್ಲಿ 33.9 ಡಿ.ಸೆ ತಾಪಮಾನ

ಹವಾಮಾನ ಇಲಾಖೆ ವರದಿ ಪ್ರಕಾರ, ಬೆಂಗಳೂರು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸೋಮವಾರ (ಮಾರ್ಚ್ 4) ಗರಿಷ್ಠ 33.9 ಡಿಗ್ರಿ ಸೆಲ್ಸಿಯಸ್‌, ಬೆಂಗಳೂರು ನಗರದಲ್ಲಿ ಗರಿಷ್ಠ 33 ಡಿಗ್ರಿ ಸೆಲ್ಸಿಯಸ್‌ ಮತ್ತು ಬೆಂಗಳೂರಿನ ಎಚ್‌ಎಎಲ್‌ನಲ್ಲಿ 32.8 ಡಿಗ್ರಿ ಸೆಲ್ಸಿಯಸ್‌ ಉಷ್ಣಾಂಶ ದಾಖಲಾಗಿದೆ. ಈ ಮೂಲಕ ತಾಪಮಾನದ ಕಾವು ಬೆಂಗಳೂರಿಗರನ್ನು ಇನ್ನಿಲ್ಲದಂತೆ ಕಾಡುತ್ತಿದೆ.

ಸದ್ಯಕ್ಕೆ ನಗರದಲ್ಲಿ ಇದೇ ರೀತಿಯ ವಾತಾವರಣ ಮುಂದುವರಿಯಲಿದೆ. ಮಳೆಯ, ಮಬ್ಬು ವಾತಾರಣದ ನಿರ್ಮಾಣದ ಸಾಧ್ಯತೆ ಇಲ್ಲ ಎನ್ನಲಾಗಿದೆ.

Bengaluru Heat Wave Monday Recorded 33 9 Degrees Celsius Max Temp IMD Forecast

ಕಲಬುರಗಿಯಲ್ಲಿ ರಾಜ್ಯದ ಗರಿಷ್ಠ ತಾಪಮಾನ

ರಾಜ್ಯದ ತಾಪಮಾನ ನೋಡುವುದಾದರೆ, ಉತ್ತರ ಕರ್ನಾಟಕದಲ್ಲಿ ಅತ್ಯಧಿಕ ತಾಪಮಾನ ದಾಖಲಾಗಿದೆ. ಕಲಬುರಗಿಯಲ್ಲಿ ಒಂದೇ ದಿನದಲ್ಲಿ 37.4 ಡಿಗ್ರಿ ಸೆಲ್ಸಿಯಸ್‌ ಗರಿಷ್ಠ ತಾಪಮಾನ ದಾಖಲಾಗಿದ್ದು, ಇದು ರಾಜ್ಯದ ಅತ್ಯಧಿಕ ಗರಿಷ್ಠ ತಾಪಮಾನವಾಗಿದೆ.

ಉಳಿದಂತೆ ದಾಣಗೆರೆ ಮತ್ತು ರಾಯಚೂರಿನಲ್ಲಿ ತಲಾ 36, ಬಾಗಲಕೋಟೆ, ಕೊಪ್ಪಳದಲ್ಲಿ, ಗದಗ, ಚಾಮರಾಜನಗರ ಜಿಲ್ಲೆಯಲ್ಲಿ ತಲಾ 35, ಹಾವೇರಿ, ವಿಜಯಪುರ, ಬೀದರ್‌ನಲ್ಲಿ ತಲಾ 34 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ದಾಖಲಾಗಿದೆ. ರಾಜ್ಯದ ಗರಿಷ್ಠ ತಾಪಮಾನ 14.2 ಡಿಗ್ರಿ ಸೆಲ್ಸಿಯಸ್ ಹಾಸನದಲ್ಲಿ ದಾಖಲಾಗಿದೆ ಎಂದು ಐಎಂಡಿ ವರದಿ ತಿಳಿಸಿದೆ.

ಉತ್ತರ ಕರ್ನಾಟಕದ ಅನೇಕ ಕಡೆಗಗಳಲ್ಲಿ ಒಣಹವೆ ಮುಂದುವರಿಯಲಿದೆ. ಮಲೆನಾಡು ಸೇರಿದಂತೆ ದಕ್ಷಿಣ ಒಳನಾಡು ಜಿಲ್ಲೆಗಳಲ್ಲಿ ಅಧಿಕ ಬಿಸಿಲು ದಾಖಲಾಗಲಿದೆ. ಕರಾವಳಿಯಲ್ಲಿ ಶೆಕೆಯ ವಾತಾವರಣ ಕಂಡುಬರಲಿದೆ. ಜನರು ಬಿಸಿಲಿನ ಶಾಖಕ್ಕೆ ಹೈರಾಣಾಗಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+