ಬೆಂಗಳೂರಿನಲ್ಲಿ 495 ಕೋವಿಡ್ 19 ಸೋಂಕಿತ ವಲಯಗಳಿವೆ!

ಬೆಂಗಳೂರು, ಜೂನ್ 30: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ(ಬಿಬಿಎಂಪಿ) ವಾರ್ ರೂಂ ಬುಲೆಟಿನ್ ಪ್ರಕಾರ, ಬೆಂಗಳೂರಿನಲ್ಲಿ 495 ಕೋವಿಡ್ 19 ಸೋಂಕಿತ ಅಥವಾ ಕಂಟೇನ್ಮೆಂಟ್ ಜೋನ್ ಗಳಿವೆ ಎಂದು ಗುರುತಿಸಲಾಗಿದೆ.

Recommended Video

      Dr Sudhakar shares his experience after finishing his quarantine period | Oneindia Kannada

      ಬಿಬಿಎಂಪಿ ಕೋವಿಡ್19 ವಾರ್ ರೂಂ ಬುಲೆಟಿನ್ 29-06-2020
      ಒಟ್ಟು ಸೋಂಕಿತ ಪ್ರಕರಣಗಳು : 4059
      ಗುಣಮುಖರಾದವರು : 433
      ಒಟ್ಟು ಸಾವಿನ ಪ್ರಕರಣಗಳು : 81
      ಸೋಮವಾರದ ಸಂಜೆ ವೇಳೆಗೆ 55 ಜೋನ್ ಗಳು ಸಹಜ ಸ್ಥಿತಿಗೆ ಮರಳಿವೆ ಎಂಬುದು ಹರ್ಷದಾಯಕ ಸಂಗತಿ ಎಂದು ಬಿಬಿಎಂಪಿ ಆಯುಕ್ತ ಅನಿಲ್ ಕುಮಾರ್ ಹೇಳಿದ್ದಾರೆ.

      ಸದ್ಯ ವಾರ್ ರೂಮ್ ಉಸ್ತುವಾರಿ ವಹಿಸಿಕೊಂಡಿರುವ ಅಧಿಕಾರಿ ಹೆಪ್ಸಿಬಾ ಕೊರ್ಲಪಟಿ ಅವರು ಮಾತನಾಡಿ, ಬೆಂಗಳೂರು ದಕ್ಷಿಣ, ಪೂರ್ವ ಹಾಗೂ ಪಶ್ಚಿಮ ವಲಯಗಳಲ್ಲಿ ಅಧಿಕ ಪ್ರಮಾಣದಲ್ಲಿ ಸೋಂಕಿತರು ಕಂಡು ಬಂದಿದ್ದಾರೆ. ಹೊಸ ಪ್ರದೇಶಗಳಲ್ಲಿ ಹೆಚ್ಚಿನ ಸೋಂಕು ಕಾಣಿಸಿಕೊಂಡಿಲ್ಲ ಎಂದಿದ್ದಾರೆ.

      Bengaluru has 495 active containment zones now: BBMP

      ಬೆಂಗಳೂರಿನಲ್ಲಿ ಸೋಮವಾರದಂದು 738 ಪ್ರಕರಣಗಳು ದಾಖಲಾಗಿದ್ದು, ಭಾನುವಾರ 783 ಹಾಗೂ ಶನಿವಾರ 596 ಪ್ರಕರಣ ದಾಖಲಾಗಿದ್ದನ್ನು ಇಲ್ಲಿ ಸ್ಮರಿಸಬಹುದು.

      ಒಟ್ಟಾರೆ, 4052 ಕೊವಿಡ್ 19 ಪ್ರಕರಣಗಳು ದಾಖಲಾಗಿದ್ದು, 3427 ಸಕ್ರಿಯ ಕೇಸ್ ಗಳಿವೆ. 91 ಮಂದಿ ಮೃತಪಟ್ಟಿದ್ದಾರೆ. ಕರ್ನಾಟಕದಲಿ 14, 295 ಕೇಸ್ ಗಳಿದ್ದು, 6388 ಸಕ್ರಿಯ ಪ್ರಕರಣಗಳಿವೆ. 226 ಮಂದಿ ಮೃತಪಟ್ಟಿದ್ದಾರೆ.

      ಜುಲೈ 5ರಿಂದ ಭಾನುವಾರದಂದು ಬೆಳಗ್ಗೆ 9 ರಿಂದ ಸಂಜೆ 5ರ ತನಕ ಲಾಕ್ಡೌನ್ ಜಾರಿಗೊಳಿಸಲಾಗುತ್ತದೆ. ಪ್ರತಿದಿನ ಸಂಜೆ 8 ರಿಂದ ಬೆಳಗ್ಗೆ 5 ರ ತನಕ ರಾತ್ರಿ ಕರ್ಫ್ಯೂ ಮುಂದುವರೆಸಲಾಗುತ್ತದೆ ಎಂದರು.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+