Bengaluru Food: Paris Panini ಆಹಾರದಲ್ಲಿ ಜೀವಂತ ಹುಳು ಪತ್ತೆ ಆರೋಪ; ಗ್ರಾಹಕರ ದೂರಿಗೆ ಕ್ಷಮೆ ಕೇಳಿದ ಸಂಸ್ಥಾಪಕ!
ಬೆಂಗಳೂರಿನ ವಿವಿಧ ಪ್ರದೇಶಗಳಲ್ಲಿ ಫ್ರಾಂಚೈಸಿ ಹೊಂದಿರುವ ಜನಪ್ರಿಯ ಫ್ರೆಂಚ್ ಸ್ಯಾಂಡ್‌ವಿಚ್ ಮತ್ತು ರ‍್ಯಾಪ್ Paris Paniniಯ ಆಹಾರದಲ್ಲಿ ಹುಳು ಪತ್ತೆಯಾಗಿದೆ ಎಂದು ಗ್ರಾಹಕರೊಬ್ಬರು ಆರೋಪಿಸಿದ್ದಾರೆ. ಅಲ್ಲದೆ ಆಹಾರದ ಫೋಟೋವನ್ನು ಸೋಶಿಯಲ್ ಮೀಡಿಯಾದ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದು, ಸಂಸ್ಥೆಯ ಸಂಸ್ಥಾಪಕ Nicolas Grossemy ಅವರಿಗೆ ಟ್ಯಾಗ್ ಮಾಡಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಆಹಾರದ ಸ್ವಚ್ಛತೆ ಮತ್ತು ಗುಣಮಟ್ಟದ ಬಗ್ಗೆ ಪ್ರಶ್ನಿಸಿದ್ದಾರೆ. Paris Panini ಆಹಾರದಲ್ಲಿ ಜೀವಂತ ಹುಳುವೊಂದು ಸಿಕ್ಕಿದೆ ಎಂದು ಗ್ರಾಹಕರು ದೂರಿದ್ದಾರೆ.
ಪ್ರತಿಷ್ಠಿತ ಸಂಸ್ಥೆಯ ಆಹಾರದಲ್ಲಿ ಹುಳು ಸಿಕ್ಕಿದೆ ಎನ್ನುವ ವಿಚಾರವು ಚರ್ಚೆಗೆ ಕಾರಣವಾಗಿದೆ. ಆಹಾರದಲ್ಲಿ ಹುಳು ಸಿಕ್ಕಿರುವುದು ತುಂಬಾ ಬೇಸರವನ್ನುಂಟು ಮಾಡಿದೆ. ಕೆಫೆಗಳು ಎಲ್ಲೆಡೆ ಕಾಣಿಸಿಕೊಳ್ಳುತ್ತಿವೆ. ಆದರೆ ಸ್ವಚ್ಛತೆ ಮತ್ತು ನೈರ್ಮಲ್ಯ ಹತ್ತರಲ್ಲಿ ಶೂನ್ಯ! ಪ್ಯಾರಿಸ್ ಪಾನಿನಿಯಿಂದ ಕೊಟ್ಟ ಆಹಾರದಲ್ಲಿ ಹುಳು ಕಾಣಿಸಿಕೊಂಡಿದೆ ಎಂದು ಗ್ರಾಹಕರು ಸೋಶಿಯಲ್ ಮೀಡಿಯಾ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದಾರೆ. ಇದೀಗ ಈ ಪೋಸ್ಟ್ ವೈರಲ್ ಆಗಿದೆ.

Anwesha Majhi ಎನ್ನುವವರು ತಮ್ಮ ಸೋಶಿಯಲ್ ಮೀಡಿಯಾ ಎಕ್ಸ್ ಖಾತೆಯಲ್ಲಿ ಈ ವಿಷಯವನ್ನು ಹಂಚಿಕೊಂಡಿದ್ದಾರೆ. ಇತ್ತೀಚಿನ ದಿನಗಳಲ್ಲಿ ಸ್ವಚ್ಛತೆ ಕಾಪಾಡಿಕೊಳ್ಳುವ ವಿಷಯದಲ್ಲಿ ಏನು ತಪ್ಪಾಗಿದೆ? ಇದು ನನಗೆ ತುಂಬಾ ದುಃಖವನ್ನುಂಟುಮಾಡಿದೆ. ಎಲ್ಲೆಡೆ ಕೆಫೆಗಳು ತಲೆ ಎತ್ತುತ್ತಿವೆ, ಆದರೆ ಸ್ವಚ್ಛತೆ ಮತ್ತು ನೈರ್ಮಲ್ಯ ಹತ್ತರಲ್ಲಿ ಶೂನ್ಯ! ಪ್ಯಾರಿಸ್ ಪಾನಿನಿಯಿಂದ ಇಂದು ನನ್ನ ಆಹಾರದಲ್ಲಿ ಜೀವಂತ ಮರಿಹುಳು ಕೂಡ ಸಿಕ್ಕಿದೆ ಎಂದು ಬರೆದುಕೊಂಡಿದ್ದಾರೆ.
Bengaluru Food: ಕೆಫೆಯ ಸಂಸ್ಥಾಪಕರು ಹೇಳಿದ್ದೇನು ?
ಇನ್ನು ಈ ದೂರಿಗೆ ಸಂಸ್ಥಾಪಕರು ಪ್ರತಿಕ್ರಿಯೆ ನೀಡಿದ್ದಾರೆ. ಕೆಫೆಯ ಸಂಸ್ಥಾಪಕರು ಈ ಪೋಸ್ಟ್‌ನ ಕಮೆಂಟ್‌ನಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ. "ಹಾಯ್ @AnweshaMajhi_, ನಾನು ನಿಕೋಲಸ್ ಪ್ಯಾರಿಸ್ ಪಾನಿನಿಯ ಸ್ಥಾಪಕ. ನೀವು ಎದುರಿಸಿದ ಸಮಸ್ಯೆಗೆ ನನಗೆ ತುಂಬಾ ವಿಷಾದವಿದೆ. ಇದು ಸಂಪೂರ್ಣವಾಗಿ ಸ್ವೀಕಾರಾರ್ಹವಲ್ಲ ಮತ್ತು ನಾವು ನಮಗಾಗಿ ನಿಗದಿಪಡಿಸಿದ ಮಾನದಂಡಗಳಿಗಿಂತ ತುಂಬಾ ಕೆಳಮಟ್ಟದ್ದಾಗಿದೆ ಎಂದಿದ್ದಾರೆ.
ಮುಂದುವರಿದು ಕ್ಷಮೆಯಾಚನೆ ಮಾಡುವುದರಿಂದ ನಿಮ್ಮ ಅನುಭವವನ್ನು ತಪ್ಪಿಸಲು ಸಾಧ್ಯವಿಲ್ಲ ಎಂದು ಸಂಸ್ಥಾಪಕರು ಹೇಳಿದ್ದಾರೆ. ಅಲ್ಲದೆ ಈ ವಿಷಯವನ್ನು ವೈಯಕ್ತಿಕವಾಗಿ ಪರಿಶೀಲಿಸುವುದಾಗಿ ಹೇಳಿದ್ದಾರೆ. ಮುಂದುವರಿದು @AnweshaMajhi_ ದಯವಿಟ್ಟು ನಿಮ್ಮ ಆರ್ಡರ್ ವಿವರಗಳನ್ನು ನನಗೆ DM ಮಾಡಬಹುದೇ? ನಾನು ಇದನ್ನು ವೈಯಕ್ತಿಕವಾಗಿ ಪರಿಶೀಲಿಸುತ್ತೇನೆ. ಎಲ್ಲಿ ಲೋಪವಾಗಿದೆ ಎಂಬುದನ್ನು ಪತ್ತೆ ಹಚ್ಚುತ್ತೇನೆ ಮತ್ತು ಅಗತ್ಯವಾಗಿ ಸರಿಪಡಿಸುವ ಕ್ರಮವನ್ನು ತೆಗೆದುಕೊಳ್ಳಲಾಗಿದೆಯೆ ಎಂದು ಖಚಿತಪಡಿಸಿಕೊಳ್ಳುತ್ತೇನೆ. ಕ್ಷಮೆಯಾಚನೆಯು ಅನುಭವವನ್ನು ತಪ್ಪಿಸುವುದಿಲ್ಲ ಎನ್ನುವ ವಿಷಯವು ನನಗೆ ತಿಳಿದಿದೆ. ಆದರೆ ನಾನು ಇದನ್ನು ತುಂಬಾ ಗಂಭೀರವಾಗಿ ಪರಿಗಣಿಸುತ್ತಿದ್ದೇನೆ ಎಂದು ಹೇಳಿದ್ದಾರೆ.
ನಾವು ನಮ್ಮ ಕಿಚನ್‌ಗಳಲ್ಲಿ ಈ ರೀತಿಯ ತಪ್ಪುಗಳು ಆಗಬಾರದು ಎನ್ನುವ ಉದ್ದೇಶದಿಂದ ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ಅನುಸರಿಸುತ್ತಿದ್ದೇವೆ. ಆದರೆ, ಈ ತಪ್ಪು ಹೇಗೆ ಸಂಭವಿಸಿದೆ ಎನ್ನುವುದನ್ನು ನಾವು ನಿಖರವಾಗಿ ಪತ್ತೆ ಮಾಡಲಿದ್ದೇವೆ. ಸಂಪೂರ್ಣ ವಿವರಗಳು ಇಲ್ಲದೆ ನಾನು ಊಹನಾತ್ಮಕವಾಗಿ ಉತ್ತರಗಳನ್ನು ನೀಡಲು ಬಯಸುವುದಿಲ್ಲ ಎಂದೂ ಅವರು ಇದೇ ಸಂದರ್ಭದಲ್ಲಿ ಹೇಳಿದ್ದಾರೆ.
ವಿಶ್ವಾಸಾರ್ಹ ಬ್ರ್ಯಾಂಡ್ ಅನ್ನು ನಿರ್ಮಿಸುವುದು ಯಾವಾಗಲೂ ನಮ್ಮ ಆದ್ಯತೆಯಾಗಿದೆ. ಈ ರೀತಿಯ ತಪ್ಪುಗಳನ್ನು ನೋಡುವುದು ನಿಜವಾಗಿಯೂ ಕಠಿಣ ಪರಿಣಾಮ ಬೀರುತ್ತದೆ. ಪ್ಯಾರಿಸ್ ಪಾನಿನಿಯನ್ನು ನಿರ್ಮಿಸುವ ಒಂದು ದೊಡ್ಡ ಭಾಗವು ಜನರು ನಂಬಬಹುದಾದ ಬ್ರ್ಯಾಂಡ್ ಅನ್ನು ರಚಿಸಲು ಪ್ರಯತ್ನಿಸುತ್ತಿದೆ. ಈ ರೀತಿಯ ಅನುಭವಗಳು ಸಂಭವಿಸದಂತೆ ನೋಡಿಕೊಳ್ಳಲು ನಾನು ಸಾಕಷ್ಟು ಪ್ರಯತ್ನ ಮಾಡುತ್ತೇನೆ ಎಂದೂ ಹೇಳಿದ್ದಾರೆ.
What is wrong with hygiene these days? It makes me so sad. Cafes are popping up everywhere, but the cleanliness and hygiene are zero out of ten! I even got a live caterpillar in my food today from Paris Panini!
— Anwesha Majhi (@AnweshaMajhi_) August 29, 2026
This was the last day at @parispanini @NGrossemy23925
Saddest part… pic.twitter.com/Y1WFoFeZZi


Click it and Unblock the Notifications
