Bengaluru Family ಬೆಂಗಳೂರಲ್ಲಿ ಮಕ್ಕಳ ಆರೈಕೆ, ಅಡುಗೆ ಮಾಡುವುದಕ್ಕೆ 46,000 ರೂ., ಸೋಷಿಯಲ್ ಮೀಡಿಯಾ ಚರ್ಚೆ

ಬೆಂಗಳೂರು: ಬೆಂಗಳೂರಿನ ಮಹಿಳೆಯೊಬ್ಬರು ಅವರ ಮಕ್ಕಳನ್ನು ನೋಡಿಕೊಳ್ಳುವುದಕ್ಕೆ ಸಹಾಯಕಿರಗೆ / ಮನೆ ಕೆಲಸ ಮಾಡುವವರಿಗೆ ಎಷ್ಟು ದುಡ್ಡು ಕೊಡುತ್ತಾರೆ ಎನ್ನುವ ವಿಡಿಯೋವೊಂದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಈ ವಿಡಿಯೋ ವೈರಲ್‌ ಆದ ಬೆನ್ನಲ್ಲೇ ಶ್ರೀಮಂತರು ಇಷ್ಟೊಂದು ದುಬಾರಿ ಮೊತ್ತವನ್ನು ನೀಡಿ, ಮನೆ ಕೆಸಲ ಹಾಗೂ ಮಕ್ಕಳನ್ನು ನೋಡಿಕೊಳ್ಳುವುದಕ್ಕೆ ಜನ ನೇಮಿಸಿಕೊಳ್ಳುವುದಕ್ಕೆ ಸಾಧ್ಯ ಎಂದೂ ಕೆಲವರು ಹೇಳಿದ್ದಾರೆ. ಇಷ್ಟಕ್ಕೂ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿರುವ ಸುದ್ದಿ ಏನು, ಜನ ಇದಕ್ಕೆ ಮಿಶ್ರ ಪ್ರತಿಕ್ರಿಯೆ ನೀಡುತ್ತಿರುವುದು ಯಾಕೆ ಎನ್ನುವ ವಿವರ ಇಲ್ಲಿದೆ.

ಬೆಂಗಳೂರಿನ ಮಹಿಳೆಯೊಬ್ಬರು ತಮ್ಮ 3 ವರ್ಷ ಮತ್ತು 4 ವರ್ಷದ ಮಕ್ಕಳು ನೋಡಿಕೊಳ್ಳುವುದಕ್ಕೆ ಹಾಗೂ ಮನೆ ಕೆಲಸದ ಸಹಾಯಕ್ಕೆ ತಿಂಗಳಿಗೆ ಪಾವತಿ ಮಾಡುತ್ತಿರುವ ದುಬಾರಿ ಮೊತ್ತದ ಬಗ್ಗೆ ಚರ್ಚೆ ನಡೆದಿದೆ. ಇನ್‌ಸ್ಟಾಗ್ರಾಮ್ ಪೋಸ್ಟ್‌ನಲ್ಲಿ ಪರ್ವೀನ್ ಚೌಧರಿ (parveen.cyclebreaker) ಎನ್ನುವ ಮಹಿಳೆಯು ಹಂಚಿಕೊಂಡಿರುವ ಈ ಮಾಹಿತಿಯು ಭಾರೀ ಚರ್ಚೆಗೆ ಕಾರಣವಾಗಿದೆ. ಮಕ್ಕಳನ್ನು ಆರೈಕೆ ಮಾಡುವ ದಾದಿಯರಿಗೆ (ಅಕ್ಕಂದಿರಿಗೆ) ನಾನು ಸಂಬಳ ಕೊಡುತ್ತಿದ್ದೇನಾದರೂ, ಇದು ವ್ಯವಹಾರಿಕವಾಗಿ ಮಾತ್ರ ಉಳಿದಿಲ್ಲ. ಅವರು ಈಗ ನಮ್ಮ ಕುಟುಂಬವಾಗಿ ಬದಲಾಗಿದ್ದಾರೆ ಎಂದು ಮಹಿಳೆ ಹೇಳಿದ್ದು, ಈ ವಿಡಿಯೋ ಇದೀಗ ವೈರಲ್ ಆಗುತ್ತಿದೆ.

Bengaluru Family Paying Rs 46 000 for Childcare and Cooking Sparks Massive Online Debate Viral Video

ಪರ್ವೀನ್ ಅವರು ತಮ್ಮ ಪೋಸ್ಟ್‌ನಲ್ಲಿ ಇಬ್ಬರು ಸಹಾಯಕಿಯರನ್ನು ನೇಮಕ ಮಾಡಿಕೊಂಡಿರುವುದಾಗಿ ಹೇಳಿದ್ದಾರೆ. ಒಬ್ಬರು ಪ್ರಾಥಮಿಕ ಆರೈಕೆದಾರರಿಗೆ ತಿಂಗಳಿಗೆ 32,000 ರೂಪಾಯಿ ಸಂಬಳ ಕೊಡುವುದಾಗಿ, ಅವರು ಪ್ರತಿದಿನ 11 ಗಂಟೆಗಳ ಕಾಲ ಕೆಲಸ ಮಾಡುವುದಾಗಿ ಹೇಳಿದ್ದಾರೆ. ದ್ವಿತೀಯ ಸಹಾಯಕರೊಬ್ಬರಿಗೆ ತಿಂಗಳಿಗೆ 14,000 ರೂಪಾಯಿ ಕೊಡುವುದಾಗಿ ಹೇಳಿದ್ದಾರೆ. ಇಬ್ಬರೂ ಸಹ ಅಡುಗೆ ಮಾಡುವುದು, ಮನೆ ಸ್ವಚ್ಛಗೊಳಿಸುವುದು ಹಾಗೂ ಮಕ್ಕಳ ಆರೈಕೆಯನ್ನು ನೋಡಿಕೊಳ್ಳುತ್ತಾರೆ. ಇದರಿಂದಾಗಿ ಪರ್ವೀನ್ ಅವರಿಗೆ ಕೆಲಸ ಮಾಡಲು, ಪ್ರಯಾಣಿಸಲು ಮತ್ತು ತಮ್ಮ ಕುಟುಂಬದ ಜವಾಬ್ದಾರಿಗಳನ್ನು ನಿರ್ವಹಿಸಲು ಅವಕಾಶ ಸಿಗುತ್ತದೆ. ಒಟ್ಟಾರೆಯಾಗಿ ಸಹಾಯಕ ಸಿಬ್ಬಂದಿಗೆ ತಿಂಗಳಿಗೆ 46,000 ರೂಪಾಯಿಗಳನ್ನು ಖರ್ಚು ಮಾಡುತ್ತಿರುವುದಾಗಿ ಅವರು ಹೇಳಿಕೊಂಡಿದ್ದಾರೆ.

Bengaluru Family ನೆಟ್ಟಿಗರ ಪ್ರತಿಕ್ರಿಯೆ ಹೇಗಿದೆ ?

ಪರ್ವೀನ್ ಚೌಧರಿ ಅವರ ವಿಡಿಯೋಗೆ ಸೋಷಿಯಲ್ ಮೀಡಿಯಾದಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಈ ರೀತಿ ಕೆಲಸದವರು ಸಿಗುವುದು ಒಳ್ಳೆಯ ವಿಚಾರ ಎಂದು ಕೆಲವರು ಹೇಳಿದ್ದರೆ, ಇನ್ನೂ ಕೆಲವರು ದುಡ್ಡು ಇರುವವರಿಗೆ ಇದೆಲ್ಲ ಸಾಧ್ಯ ಎಂದು ಹೇಳಿದ್ದಾರೆ.

ಡಾ.ಸಂಯೋಗಿತಾ ಎನ್ನುವವರು ನಾನು ತಾಯಿಯಾಗಿದ್ದೇನೆ ಎನ್ನುವ ಕಾರಣಕ್ಕೆ ನನ್ನ ವೃತ್ತಿಜೀವನವನ್ನು ಬಿಡಲು ಸಾಧ್ಯವಿಲ್ಲ. ಇದನ್ನು ನಾನು ಅಪರಾಧ ಭಾವದಿಂದ ಹೇಳುತ್ತಿಲ್ಲ, ಪ್ರೀತಿಯಿಂದ ಹೇಳುತ್ತಿದ್ದೇನೆ. ನಾನು ಕೆಲಸ ಮಾಡುವ ತಾಯಿಯ ಬಳಿ ಬೆಳೆದವಳು/ವನು. ಅವರಿಂದಲೇ ನಾನು ಶಕ್ತಿ ಮತ್ತು ಆತ್ಮವಿಶ್ವಾಸ ಕಲಿತೆ.

ಮಕ್ಕಳಿಗೆ ದಾದಿ (ಕೇರ್‌ಟೇಕರ್) ಇದ್ದರೆ ಅದು ಅವರು ತಾಯಿಯಿಂದ ಕಡಿಮೆ ಪ್ರೀತಿ ಪಡೆಯುತ್ತಾರೆ ಎಂಬುದಲ್ಲ. ಬದಲಿಗೆ, ಅದು ಮಕ್ಕಳಿಗೆ ಸಂತೋಷವಾಗಿರುವ, ಶಾಂತವಾಗಿರುವ ಮತ್ತು ಸಂಪೂರ್ಣ ಗಮನ ಕೊಡುವುದಕ್ಕೆ ಸಾಧ್ಯವಾಗುತ್ತದೆ ಎಂದಿದ್ದಾರೆ.

ಈ ರೀಲ್ಸ್‌ನಲ್ಲಿ ಹೇಳಿರುವಂತೆ ದಿನಕ್ಕೆ 11 ಗಂಟೆಗಳು, 26 ದಿನಗಳು ದಾದಿ 286 ಗಂಟೆಗಳ ಕಾಲ ಕೆಲಸ ಮಾಡುತ್ತಾರೆ ಎಂದುಕೊಳ್ಳೋಣ. ಆದ್ದರಿಂದ ಅವರಿಗೆ ಪ್ರತಿ ಗಂಟೆಗೆ 110 ರೂಪಾಯಿ ಪಾವತಿ ಮಾಡಿದಂತೆ ಆಗುತ್ತದೆ. ಈಗ ಇದು ಭಾರತದಲ್ಲಿ ಮಾತ್ರ ಸಾಧ್ಯ, ಸರ್ಕಾರದಲ್ಲಿನ ಭ್ರಷ್ಟಾಚಾರದಿಂದಾಗಿ ಬಡತನ ಹೆಚ್ಚಾಗಿದೆ. ಯಾವುದೇ ದೇಶದಲ್ಲಿ ಗಂಟೆಗೆ 2 ಡಾಲರ್‌ಗೆ ಕಾರ್ಮಿಕರನ್ನು ಹುಡುಕಲು ಸಾಧ್ಯವೇ ? ಆದ್ದರಿಂದ ಇದು ಸ್ತ್ರೀವಾದವಲ್ಲ. ಶ್ರೀಮಂತರು ಬಡವರನ್ನು ಶೋಷಿಸುವುದು. ಆದರೆ ಹೌದು ವೈಯಕ್ತಿಕ ಮಟ್ಟದಲ್ಲಿ ಇದು ಒಳ್ಳೆಯ ವ್ಯವಹಾರ, ಗೆಲುವು ಆದರೆ ವ್ಯವಸ್ಥಿತ ವೈಫಲ್ಯ ಎಂದು ನೆಟ್ಟಿಗರೊಬ್ಬರು ಹೇಳಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+