Bengaluru Rains: ನಗರದಲ್ಲಿ ಸುರಿದ ಭಾರೀ ಮಳೆ: ಉಕ್ಕಿ ಹರಿದ ಒಳಚರಂಡಿ ನೀರು, ಸಂಚಾರ ಸಲಹೆ

ಬೆಂಗಳೂರು, ಡಿಸೆಂಬರ್ 03: ಉದ್ಯಾನ ನಗರಿ ಬೆಂಗಳೂರಿನಲ್ಲಿ ಚಂಡಮಾರುತ ಫೆಂಗಲ್ ಪ್ರಭಾವ ಜೋರಾಗಿದೆ. ಮಂಗಳವಾರ ಮಧ್ಯಾಹ್ನವು ನಗರಾದ್ಯಂತ ಭಾರೀ ಮಳೆ ಸುರಿದಿದ್ದು, ಜನಜೀವನ ಅಸ್ಯವ್ಯಸ್ತಗೊಂಡಿತು. ಸುಮಾರು ಒಂದು ಗಂಟೆ ಕಾಲ ಸುರಿದ ಮಳೆಗೆ ನಗರದ ಪ್ರಮುಖ ವೃತ್ತಗಳಲ್ಲಿ ಒಳಚರಂಡಿ ನೀರು ಬುಗ್ಗೆಯಂತೆ ಚಿಮ್ಮಿತು. ರಸ್ತೆಗಳು ಜಲಾವೃಗೊಂಡ ಹಿನ್ನೆಲೆಯಲ್ಲಿ ಸಂಚಾರ ಪೊಲೀಸರು ಕೆಲವೆಡೆ ಮಾರ್ಗ ಬದಲಾಯಿಸುವಂತೆ ಮನವಿ ಮಾಡಿಕೊಂಡಿದ್ದಾರೆ.

ಬೆಂಗಳೂರಿನಾದ್ಯಂತ ಕಳೆದ ಮೂರು ದಿನಗಳಿಂದ ಚಂಡಮಾರುತದ ಪ್ರಭಾವ ಮುಂದುವರಿದಿದೆ. ಇದರ ಪ್ರಭಾವದಿಂದಾಗಿ ಇಂದು (ಡಿ.3) ಮಟ ಮಟ ಮಧ್ಯಾಹ್ನವೇ ಮೆಜೆಸ್ಟಿಕ್, ವಿಜಯನಗರ, ಚಾಮರಾಪೇಟೆ, ರಾಜಾಜಿನಗರ, ಬಿಬಿಎಂಪಿ ವೃತ್ತ, ಕೆ.ಆರ್. ಮಾರುಕಟ್ಟೆ, ಲಾಲ್ ಬಾಗ್, ಹೊರಮಾವು, ಬೆಳ್ಳಂದೂರು, ಬಾಗಲಗುಂಟೆ, ಹೆಬ್ಬಾಳ, ಮಹದೇವಪುರ, ಎಲೆಕ್ಟ್ರಾನಿಕ್ ಸಿಟಿ, ಸರ್ಜಾಪುರ ರಸ್ತೆ, ಮಡಿವಾಳ, ಜಯನಗರ ಸೇರಿದಂತೆ ಅನೇಕ ಕಡೆಗಳಲ್ಲಿ ಧಾರಾಕಾರ ಮಳೆ ಆಯಿತು. ವಿವಿಪುರಂ ನಲ್ಲಿ ಒಟ್ಟು 21 ಮಿಲಿ ಮೀಟರ್ ದಾಖಲಾಗಿದೆ ಎಂದು KSNCMC ತಿಳಿಸಿದೆ.

Bengaluru Faces Heavy Rainfall and Many Issues Due to Cyclone Fengal on Dec 3rd

ಬಿದ್ದ ಮಳೆ ನೀರು ರಸ್ತೆಗಳ ಮೇಲೆ ನಿಂತರುಕೊಂಡಿತು. ವಾಟರ್‌ಲಾಗಿಂಗ್ ಸಮಸ್ಯೆಯಿಂದಾಗಿ ಮಳೆ ನೀರು ಸರಾಗವಾಗಿ ಹರಿದು ಹೋಗಲಿಲ್ಲ. ರಸ್ತೆಗಳು ಜಲಾವೃತಗೊಂಡವು. ಕೆಆರ್ ಮಾರುಕಟ್ಟೆ, ಕೆ.ಆರ್ ವೃತ್ತ, ಹೆಬ್ಬಾಳ ಜಂಕ್ಷನ್, ಸಿಲ್‌ಬೋರ್ಡ್, ಬಿಬಿಎಂಪಿ ವೃತ್ತದ ಸಿಗ್ನಲ್‌ಗಳಲ್ಲಿ ಜನದಟ್ಟಣೆ ಕಂಡು ಬಂತು.

ಇನ್ನೂ ಶಾಂತಿನಗರ ಪ್ರಮುಖ ರಸ್ತೆಗಳಲ್ಲಿ ಬಹುಕಾಲ ಮಳೆ ನೀರು ರಸ್ತೆ ಮೇಲೆಯೆ ನಿಂತುಕೊಮಡು ಸಮಸ್ಯೆ ಆಯಿತು. ಬಿಬಿಎಂಪಿ ವೃತ್ತದಲ್ಲಿ ಒಳಚರಂಡಿ ಒಳಗಿನಿಂದ ಮಳೆ ಹಾಗೂ ತ್ಯಾಜ್ಯ ನೀರು ಬುಗ್ಗೆಯಂತೆ ರಸ್ತೆ ಮೇಲೆ ಉಕ್ಕಿ ಹರಿಯಿತು. ಇದರ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ.

ಮಳೆ ನೀರು ನಿಂತ ರಸ್ತೆಗಳು: ಸಂಚಾರ ಸಲಹೆ

ಸಾಗರ್ ಆಸ್ಪತ್ರೆ ಯಿಂದ ಡೈರಿ ಸರ್ಕಲ್ ಕಡೆಗೆ, ರಾಮಮೂರ್ತಿನಗರ ಸೇತುವೆ ಬಳಿ, ಬಿಳೇಕಳ್ಳಿ ಜಂಕ್ಷನ್‌ ಯಿಂದ ಜೆಡಿ ಮರ ಕಡೆಗೆ ಹೋಗುವವರಿಗೆ ಮಳೆ ಕಿರಿ ಕಿರಿ ಉಂಟು ಮಾಡಿದೆ. ಈ ರಸ್ತೆಗಳಲ್ಲಿ ನೀರು ನಿಂತ ಕಾರಣ ವಾಹನಗಳ ಸಂಚಾರ ನಿಧಾನಗತಿಯಲ್ಲಿರುತ್ತದೆ ಬೆಂಗಳೂರು ಸಂಚಾರ ಪೊಲೀಸರು ಮಾಹಿತಿ ನೀಡಿದ್ದಾರೆ.

ಸಾರಕ್ಕಿ ಸಿಗ್ನಲ್ ಯಿಂದ ವೇಗ ಸಿಟಿ ಮಾಲ್ ರಸ್ತೆ, ಸಂಜಯ್ ನಗರದಿಂದ ವಿಮಾನ ನಿಲ್ದಾಣ ಕಡೆಗೆ, ಬನ್ನೇರುಘಟ್ಟ ರಸ್ತೆಯಿಂದ ಬಿಳೇಕಳಿ ಜಂಕ್ಷನ್ ಕಡೆಗೆ, ಲುಲು ಮಾಲ್‌ನಿಂದ ಖೊಡೆ ವೃತ್ತದ ಕಡೆಗಿನ ಪ್ರಮುಖ ರಸ್ತೆಗಳಲ್ಲಿ ಮಳೆ ನೀರು ನಿಂತ ಪರಿಣಾಮ ಸುಗಮ ಸಂಚಾರ ಅಡ್ಡಿಯಾಗಿದೆ. ಈ ಮಾರ್ಗವಾಗಿ ಓಡಾಡುವವರಿಗೆ ನಿಧಾನವಾಗಿ ಚಲಿಸುವಂತೆ ಕೋರಿದ್ದಾರೆ.

ಭಾರೀ ಮಳೆ ಬಿದ್ದ ಪ್ರದೇಶಗಳು

ವಿವಿಪುರಂ 21 ಮಿ.ಮೀ., ದೊರೆಸಾನಿಪಾಳ್ಯ 20,5ಮಿ.ಮೀ., ಸಿಂಗಸಂದ್ರ 20 ಮಿ.ಮೀ., ವಿದ್ಯಾಪೀಠ 18.5 ಮಿ.ಮೀ., ಅರಕರೆ 17.50 ಮಿ.ಮೀ., ಬಿಳೇಕಳ್ಳಿ 16, ರಾಜರಾಜೇಶ್ವರಿ ನಗರ 16ಮಿ.ಮೀ., ರಾಜರಾಜೇಶ್ವರಿ ನಗರ 2, 15.5 ಮಿ.ಮೀ., ದಯಾನಂದನಗರ 14.5 ಮಿ.ಮೀ., ನಾಯಂಡಹಳ್ಳಿ 14ಮಿ.ಮೀ., ಕಾಟನ್‌ಪೇಟೆ 12.5, ಮಿ.ಮೀ.ಚಾಮರಾಜಪೇಟೆ 12ಮಿಲಿ ಮೀಟರ್ ಮಳೆ ದಾಖಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+