ರಾಷ್ಟ್ರೀಯ ನಾಟಕ ಶಾಲೆ ರಂಗ ತರಬೇತಿಗೆ ಅರ್ಜಿ ಆಹ್ವಾನ
ಬೆಂಗಳೂರು, ಮೇ 21: ಉದಯೋನ್ಮುಖ ರಂಗಕರ್ಮಿಗಳಿಗೆ ಆಶಾಕಿರಣದಂತಿರುವ ರಾಷ್ಟ್ರೀಯ ನಾಟಕ ಶಾಲೆ 2015-16 ನೇ ಸಾಲಿನ ಅಭಿನಯ ತರಬೇತಿ ಪ್ರವೇಶಕ್ಕೆ ಅರ್ಜಿ ಆಹ್ವಾನಿಸಿದೆ. ಬೆಂಗಳೂರಿನ ಕಲಾಗ್ರಾಮದಲ್ಲಿ ಕೆಲಸ ಮಾಡುತ್ತಿರುವ ಸಂಸ್ಥೆಯಲ್ಲಿ ಜುಲೈ 15 ರಿಂದ ಅಭಿನಯ ತರಗತಿಗಳು ಆರಂಭವಾಗಲಿವೆ.
ತರಬೇತಿ ಪಡೆಯಲು 20 ವಿದ್ಯಾರ್ಥಿಗಳಿಗೆ ಅವಕಾಶವಿದೆ. ಕರ್ನಾಟಕ, ತೇಲಂಗಾಣ, ತಮಿಳುನಾಡು. ಕೇರಳ, ಪಾಂಡಿಚೇರಿ, ಲಕ್ಷದ್ವೀಪದ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು.

ಅರ್ಜಿ ಸಲ್ಲಿಕೆಗೆ ಜೂನ್ 10 ಕೊನೆ ದಿನ. 20 ರಿಂದ 30 ವರ್ಷ ಒಳಗಿನವರಿಗೆ ಅರ್ಜಿ ಸಲ್ಲಿಸಲು ಅವಕಾಶವಿದೆ. ಆಯ್ಕೆಯಾದ ವಿದ್ಯಾರ್ಥಿಗಳಿಗೆ 4,500 ರೂ. ಪ್ರೋತ್ಸಾಹ ಧನವನ್ನು ನೀಡಲಾಗುತ್ತದೆ.
ಅರ್ಜಿ ಎಲ್ಲಿ ಪಡೆಯಬೇಕು?: ರಾಷ್ಟ್ರೀಯ ನಾಟಕ ಶಾಲೆ ಕೇಂದ್ರ, ಕಲಾಗ್ರಾಮ, ಬೆಂಗಳೂರು ವಿಶ್ವವಿದ್ಯಾಲಯ ಹಿಂಭಾಗ, ಮಲ್ಲತಹಳ್ಳಿ
ವೆಬ್ ತಾಣ: www.nsd.gov.in ಎನ್ ಎಸ್ ಡಿ ಬೆಂಗಳೂರು ಹೆಸರಿನಲ್ಲಿ 150 ರು ಡಿಡಿ ಸಲ್ಲಿಕೆ ಮಾಡಬೇಕು. [Camp Director,NSD Bengaluru centre]
ಅರ್ಹರು ಜೂನ್ 26, 27 ಮತ್ತು 28 ರಂದು ತಮ್ಮ ಸ್ವಂತ ವೆಚ್ಚದಲ್ಲಿ ಪರೀಕ್ಷೆಗೆ ಹಾಜರಾಗಬೇಕು. ಹೆಚ್ಚಿನ ಮಾಹಿತಿಗೆ 080-23183027/ ಮತ್ತು [email protected] ಸಂಪರ್ಕಿಸಬಹುದು.












Click it and Unblock the Notifications