ಇನ್‌ಸ್ಟಾಗ್ರಾಂನಲ್ಲಿ ಬಿಲ್ಡಪ್ ಕೊಟ್ಟು ಸಿಕ್ಕಿಬಿದ್ದ ಬೆಂಗಳೂರು ಡಬಲ್ ಮರ್ಡರ್ ಆರೋಪಿ
ಬೆಂಗಳೂರು ಜುಲೈ 12: ಬೆಂಗಳೂರಿನಲ್ಲಿ ನಡೆದ ಜೋಡಿ ಕೊಲೆ ಆರೋಪಿಗಳನ್ನು ಪೊಲೀಸರು ಕೊಲೆ ನಡೆದು ಕೇವಲ ನಾಲ್ಕು ಗಂಟೆಗಳಲ್ಲಿ ಬಂಧಿಸಿದ್ದಾರೆ. ಕೊಲೆ ಬಳಿಕ ರಾಜೋರೋಷವಾಗಿ ಇನ್ ಸ್ಟಾಗ್ರಾಂನಲ್ಲಿ ಬಿಲ್ಡಪ್ ಸ್ಟೇಟಸ್ ಹಾಕಿಕೊಂಡಿದ್ದ ಆರೋಪಿ ಫಿಲಿಕ್ಸ್‌ನನ್ನು ಅಮೃತಹಳ್ಳಿ ಪೊಲೀಸರು ಹೆಡೆಮುರಿ ಕಟ್ಟಿದ್ದಾರೆ.
ಸಿಲಿಕಾನ್ ಸಿಟಿಯಲ್ಲಿ ನಡೆದ ಡಬಲ್ ಮರ್ಡರ್ ಪ್ರಕರಣ ಬೆಂಗಳೂರಿಗರನ್ನು ಬೆಚ್ಚಿ ಬೀಳಿಸಿದೆ. ಕೊಲೆ ಬಳಿಕ ಆರೋಪಿ ಇನ್ ಸ್ಟಾಗ್ರಾಂನಲ್ಲಿ ಸಕ್ರಿಯವಾಗಿದ್ದನು. ಮಾತ್ರವಲ್ಲದೆ ಜೋಗಯ್ಯ ಸಿನಿಮಾದ ''ಪೇಪರ್ ಮುದ್ಗಡೆ ಬರ್ಕೊ ಬೆಂಗ್ಳೂರ್ ನಂದು'' ಅನ್ನೋ ಡೈಲಾಗ್‌ಗೆ ರೌಡಿ ಈರುಳ್ಳಿ ಬಾಬು ಜೊತೆಗಿನ ಫೋಟೋ ಮತ್ತು ತನ್ನ ಫೋಟೋ ಹಾಕಿ ಬಿಲ್ಡಪ್ ಕೊಟ್ಟಿದ್ದನು.

ಇದು ಆರೋಪಿ ಫಿಲಿಕ್ಸ್ ಅನ್ನು ಬಂಧಿಸಲು ಸಾಧ್ಯವಾಗಿದೆ. ಮಾತ್ರವಲ್ಲದೆ ಕೊಲೆ ನಂತರ ಆರೋಪಿ ತನ್ನ ಮೊಬೈಲ್ ಫೋನ್ ಮೂಲಕ ಕೊಲೆಗೆ ಸಂಬಂಧಿಸಿದ ಸುದ್ದಿಯನ್ನು ನೋಡಿದ್ದಾನೆ. ನಿರಂತರವಾಗಿ ಮೊಬೈಲ್ ಬಳಕೆ ಮಾಡಿದ್ದಾನೆ. ತನ್ನ ಫೋಟೋ ಹಾಕಿ ಬಿಲ್ಡಪ್ ಕೊಟ್ಟಿದ್ದಾನೆ. ಬಳಿಕ ಕುಣಿಗಲ್ ಬಳಿ ತಲುಪುತ್ತಿದ್ದಂತೆ ಪೊಲೀಸರ ಕೈಗೆ ಆರೋಪಿ ಸಿಕ್ಕಿಕೊಂಡಿದ್ದಾನೆ.
ಜೋಡಿ ಕೊಲೆಯಾದ ಬಳಿಕ ಪೊಲೀಸರು ಆರೋಪಿ ಪತ್ತೆ ಕಾರ್ಯವನ್ನು ಆರಂಭಿಸಿದ್ದರು. ಈ ಕಾರ್ಯಚರಣೆ ವೇಳೆ ಆರೋಪಿ ಫಿಲಿಕ್ಸ್‌ನನ್ನು ಬಂಧಿಸಲಾಗಿದೆ. ಆರೋಪಿ ಫಿಲಿಕ್ಸ್ ಜೊತೆಗೆ ವಿನಯ್ ರೆಡ್ಡಿ, ಶಿವು ಎಂಬುವವರನ್ನೂ ಪೊಲೀಸರು ಬಂಧಿಸಿದ್ದಾರೆ. ಕೊಲೆಯಾದ ಫಣೀಂದ್ರ, ಆರೋಪಿ ಫಿಲಿಕ್ಸ್‌ನನ್ನು ಇತ್ತೀಚೆಗಷ್ಟೇ ಕೆಲಸದಿಂದ ತೆಗೆದು ಹಾಕಿದ್ದರು. ಅಷ್ಟೇ ಅಲ್ಲದೆ ಕೆಲದ ವೇಳೆ ಫಿಲಿಕ್ಸ್ ಅನ್ನು ಫಣೀಂದ್ರ ಬೈಯ್ಯುತ್ತಿದ್ದರಂತೆ. ಇದೇ ದ್ವೇಷವನ್ನು ಹೊಂದಿದ್ದ ಫಿಲಿಕ್ಸ್ ಫಣೀಂದ್ರ ಅವರನ್ನು ಕೊಂದಿದ್ದಾನೆ ಎನ್ನಲಾಗುತ್ತಿದೆ.
ಆದರೆ ಫಿಲಿಕ್ಸ್ ಗೆ ವಿನು ಕುಮಾರ್ ಹತ್ಯ ಮಾಡುವ ಉದ್ದೇಶವಿರಲಿಲ್ಲ. ಆದರೆ ಫಣೀಂದ್ರ ಅವರ ಮೇಲೆ ಹಲ್ಲೆಯನ್ನು ತಡೆಯಲು ಬಂದ ವಿನು ಕುಮಾರ್ ಅನ್ನೂ ಆರೋಪಿ ಹತ್ಯೆ ಮಾಡಿದ್ದಾನೆ. ಜೊತೆಗೆ ಫಿಲಿಕ್ಸ್ ಜೊತೆಗೆ ಹತ್ಯೆಯಲ್ಲಿ ಭಾಗಿಯಾದ ವಿನಯ್ ರೆಡ್ಡಿ, ಶಿವುಗೆ ಫಣೀಂದ್ರ ಅವರ ಮೇಲೆ ಯಾವುದೇ ದ್ವೇಷವಿರಲಿಲ್ಲ. ಫಿಲಿಕ್ಸ್ ನೀಡಿದ ಸುಫಾರಿಗೆ ಕಿವಿಗೊಟ್ಟು ಅವರಿಬ್ಬರು ಹತ್ಯೆಯಲ್ಲಿ ಭಾಗಿಯಾಗಿದ್ದಾರೆ ಎಂದು ತಿಳಿದು ಬಂದಿದೆ.
ಕೊಲೆಯಾದ ಬಳಿಕ ತಲೆಮರಿಸಿಕೊಂಡಿದ್ದ ಆರೋಪಿಯನ್ನು ಸದ್ಯ ಆತನ ಮೊಬೈಲ್ ಟವರ್ ಆಧರಿಸಿ ಪೊಲೀಸರು ಬಂಧಿಸಿದ್ದಾರೆ.
ಘಟನೆ ನಡೆದಿದ್ದು ಯಾವಾಗ?
ಮಂಗಳವಾರ ಸಂಜೆ 4.30ರ ಸುಮಾರಿಗೆ ಏರೋನಿಕ್ಸ್ ಇಂಟರ್‌ನೆಟ್ ಕಂಪನಿಯ ವ್ಯವಸ್ಥಾಪಕ ನಿರ್ದೇಶಕ ಫಣಿಂದ್ರ ಸುಬ್ರಹ್ಮಣ್ಯ ಹಾಗೂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ (ಸಿಇಒ) ವಿನುಕುಮಾರ್ ಕೊಲೆಯಾಗಿತ್ತು. ಹಂತಕನನ್ನು ಇದೇ ಕಂಪನಿಯ ಮಾಜಿ ಉದ್ಯೋಗಿ ಫೆಲಿಕ್ಸ್ ಎಂದು ಗುರುತಿಸಲಾಗಿತ್ತು.
ಅಮೃತಹಳ್ಳಿಯ ಪಂಪಾ ಬಡಾವಣೆಯಲ್ಲಿರುವ ಈ ಏರೋನಿಕ್ಸ್ ಇಂಟರ್‌ನೆಟ್ ಕಂಪನಿ ಮಂಗಳವಾರ ಸಂಜೆ 4.30ರ ಹೊತ್ತಿಗೆ ಆಗಮಿಸಿ ಮಾಜಿ ಉದ್ಯೋಗಿ ಫೆಲಿಕ್ಸ್ ಮಾರಕಾಸ್ತ್ರಗಳಿಂದ ಕೊಚ್ಚಿ ಭರ್ಬರವಾಗಿ ಜೋಡಿ ಹತ್ಯೆ ಮಾಡಿದ್ದನು. ಘಟನೆಯಲ್ಲಿ ತೀವ್ರ ರಕ್ತಸ್ರಾವವಾಗಿ ಇಬ್ಬರು ಮೃತಪಟ್ಟಿದ್ದಾರೆ. ಸ್ಥಳಕ್ಕೆ ಅಮೃತಹಳ್ಳಿ ಪೊಲೀಸರು ಭೇಟಿ ನೀಡಿ, ತನಿಖೆ ಕೈಗೊಂಡಿದ್ದರು. ತಲೆಮರಿಸಿಕೊಂಡಿದ್ದ ಆರೋಪಿ ಪತ್ತೆ ಕಾರ್ಯ ನಡೆಸಿದ್ದರು.
ಫೆನಿಕ್ಸ್ ಕಂಪನಿ ಬಿಟ್ಟು ಹೋದ ಬಳಿಕ ತಾನು ಒಂದು ಸ್ವಂತ ಕಂಪನಿ ಇಟ್ಟುಕೊಂಡಿದ್ದ. ಯಾವುದೋ ವಿಚಾರವಾಗಿ ಮಾಜಿ ಕಂಪನಿಯವರು ಜೊತೆ ಜಗಳ ಮಾಡಿಕೊಂಡಿದ್ದ ಎಂದು ತಿಳಿದು ಬಂದಿದೆ. ಮಂಗಳವಾರ ಒಮ್ಮೆಲೆ ಆಟೋದಲ್ಲಿ ಬಂದಿದ್ದ ಎನ್ನಲಾಗುತ್ತಿರುವ ಈ ಹಂತಕ ಹತ್ಯೆ ಮಾಡಿ ಪರಾರಿಯಾಗಿದ್ದನು.












Click it and Unblock the Notifications