ಬಿಬಿಎಂಪಿ: 5 ವಿಭಜನೆಗೆ ವಿರೋಧ, ಕನ್ನಡಗರೇ ಮೇಯರ್ ಆಗ್ಬೇಕು ಎನ್ನುವ ಆಗ್ರಹ...
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ( ಬಿಬಿಎಂಪಿ)ಯನ್ನು 5 ವಿಭಜನೆ ಮಾಡಲು ರಾಜ್ಯ ಸರ್ಕಾರ ಮುಂದಾಗಿದೆ. ಈ ರೀತಿ ಬೆಂಗಳೂರು ವಿಭಜನೆಯಾದರೆ, ಬೆಂಗಳೂರಿನಲ್ಲಿ ಕನ್ನಡಿಗರಿಗೆ ಮೇಯರ್ ಗಿರಿ ಹಾಗೂ ಉಪ ಮೇಯರ್ ಸ್ಥಾನ ಸಿಗುವುದು ಡೌಟ್. ಇದಕ್ಕೆ ಕಾರಣವೂ ಇದೆ. ಬೆಂಗಳೂರಿನಲ್ಲಿ ಈಗಾಗಲೇ ತೆಲುಗು, ಮಲಯಾಳಂ ಹಾಗೂ ತಮಿಳು ಭಾಷಿಕರ ಸಂಖ್ಯೆ ಹೆಚ್ಚಾಗಿದೆ. ಅಲ್ಲದೇ ಬೆಂಗಳೂರು ಹೊರ ವಲಯ ಹಾಗೂ ನಿರ್ದಿಷ್ಟ ಭಾಗದಲ್ಲಿ ಹಿಂದಿ ಭಾಷಿಕರ ಸಂಖ್ಯೆಯೂ ಹೆಚ್ಚಿದೆ. ಹೀಗಾಗಿ, ಬೆಂಗಳೂರು ಐದು ವಿಭಜನೆಯಾದರೆ, ಕನ್ನಡಿಗರು ಪ್ರತಿನಿಧ್ಯ ಕಳೆದುಕೊಳ್ಳಲಿದ್ದಾರೆ ಎನ್ನುವ ಆತಂಕ ಎದುರಾಗಿದೆ.
ಬೆಂಗಳೂರನ್ನು ಐದು ವಿಭಜನೆ ಮಾಡಿ ಸಮಗ್ರ ಅಭಿವೃದ್ಧಿ ಮಾಡಲಾಗುವುದು. ಗ್ರೇಟರ್ ಬೆಂಗಳೂರು ರಚನೆ ಮಾಡಲಾಗುವುದು ಎಂದು ರಾಜ್ಯ ಕಾಂಗ್ರೆಸ್ ಸರ್ಕಾರ ಹೇಳಿದೆ. ಈ ನಿಟ್ಟಿನಲ್ಲಿ ಈಗಾಗಲೇ ಕಾರ್ಯಪ್ರವೃತ್ತರಾಗಿರುವ ರಾಜ್ಯ ಸರ್ಕಾರವು ತಜ್ಞರ ಸಮಿತಿಯೊಂದನ್ನು ರಚನೆ ಮಾಡಿದ್ದು. ಅವರಿಂದ ವರದಿಯನ್ನೂ ಸಹ ತರೆಸಿಕೊಂದಿದೆ. ಆದರೆ, ಗ್ರೇಟರ್ ಬೆಂಗಳೂರು ಪರಿಕಲ್ಪನೆಗೆ ವಿರೋಧ ಪಕ್ಷಗಳಾದ ಬಿಜೆಪಿ ಹಾಗೂ ಜೆಡಿಎಸ್ ಎರಡೂ ಏಕಕಲಾಕ್ಕೆ ವಿರೋಧಿಸಿದೆ. ಅಲ್ಲದೇ ಈ ನಿಟ್ಟಿನಲ್ಲಿ ಅಭಿಯಾನವನ್ನೂ ಪ್ರಾರಂಭಿಸುವುದಾಗಿ ಎಚ್ಚರಿಕೆ ನೀಡಿದೆ.

ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯು 800 ಚ.ದ ಮೀಟರ್ ಇದ್ದು. ಇದರಿಂದ ಆಡಳಿತ ವಿಕೇಂದ್ರೀಕರಣ (ಎಲ್ಲಾ ಭಾಗದ ಜನರಿಗೆ ಸೇವೆ ಹಾಗೂ ಆಡಳಿತ ಸೇವೆ ಸಮರ್ಪಕವಾಗಿ ನೀಡಲು ಸಾಧ್ಯವಾಗುತ್ತಿಲ್ಲ) ಎನ್ನುವುದು ಸರ್ಕಾರದ ವಾದ. ಆದರೆ, ಈಚೆಗೆ ನಡೆದ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವು ಬೆಂಗಳೂರಿನಲ್ಲಿ ಒಂದೇ ಒಂದು ಲೋಕಸಭಾ ಕ್ಷೇತ್ರದಲ್ಲೂ ಗೆಲುವು ಸಾಧಿಸಿಲ್ಲ. ತನ್ನ ಅಸ್ತಿತ್ವವನ್ನು ಉಳಿಸಿಕೊಳ್ಳಲು ಹಾಗೂ ಅಧಿಕಾರಕ್ಕೆ ಬರುವುದಕ್ಕೆ ಕಾಂಗ್ರೆಸ್ ವಿಭಜನೆ ಅಸ್ತ್ರ ಬಳಸುತ್ತಿದೆ ಎಂದು ಬಿಜೆಪಿ ಹೇಳಿದೆ. ಇದಕ್ಕೆ ತಿರುಗೇಟು ನೀಡಿರುವ ಕಾಂಗ್ರೆಸ್ ಪಕ್ಷವು ಬಿಜೆಪಿ ಎಲ್ಲವನ್ನೂ ಚುನಾವಣಾ ದೃಷ್ಟಿಯಿಂದಲೇ ನೋಡುತ್ತದೆ. ಬಿಜೆಪಿಗೆ ಜನ ಹಿತ ಮುಖ್ಯವಲ್ಲ ಎಂದು ವಾದಿಸಿದೆ.
ಕನ್ನಡಿಗರೇ ಮೇಯರ್ ಆಗಿರಬೇಕು
ನಾಡಪ್ರಭು ಕೆಂಪೇಗೌಡ ಅವರು ನಿರ್ಮಿಸಿ ಅಭಿವೃದ್ಧಿಪಡಿಸಿರುವ ಬೆಂಗಳೂರನ್ನು ಯಾವುದೇ ಕಾರಣಕ್ಕೂ ವಿಭಜನೆ ಮಾಡಬಾರದು. ಬೆಂಗಳೂರು ಮಹಾನಗರ ಪಾಲಿಕೆಯನ್ನು ಐದು ಭಾಗವಾಗಿ ವಿಭಜನೆ ಮಾಡಿದರೆ. ಕನ್ನಡಿಗರಿಗೆ ಅನ್ಯಾಯವಾಗಲಿದೆ. ಕನ್ನಡಿಗರಿಗೆ ಮೇಯರ್ ಸ್ಥಾನ ಕೈತಪ್ಪಲಿದೆ ಎನ್ನುವ ಆತಂಕವನ್ನು ಬಿಜೆಪಿ ಹಾಗೂ ಜೆಡಿಎಸ್ ವ್ಯಕ್ತಪಡಿಸಿವೆ. ಅಲ್ಲದೇ ಬೆಂಗಳೂರನ್ನು ಐದು ವಿಭಾಗವಾಗಿ ವಿಭಜನೆ ಮಾಡಿದರೆ, ಜೆಡಿಎಸ್ ಹಾಗೂ ಬಿಜೆಪಿಯಿಂದ ಜಂಟಿ ಆಂದೋಲನ ನಡೆಸುವುದಾಗಿಯೂ ಎಚ್ಚರಿಕೆ ನೀಡಿವೆ.
ಬಿಬಿಎಂಪಿಗೆ ಚುನಾವಣೆ ನಡೆಸಿ
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಗೆ ಕೂಡಲೇ ಚುನಾವಣೆ ನಡೆಸಬೇಕು ಎಂದು ಬಿಜೆಪಿ ಹಾಗೂ ಜೆಡಿಎಸ್ ಆಗ್ರಹಿಸಿವೆ. ಕಳೆದ ನಾಲ್ಕು ವರ್ಷಗಳಿಂದ ಬಿಬಿಎಂಪಿ ಚುನಾವಣೆ ನಡೆದಿಲ್ಲ. ಹೀಗಾಗಿ, ಬಿಬಿಎಂಪಿಯಲ್ಲಿ ಸದಸ್ಯರು ಇಲ್ಲದಂತಾಗಿದೆ. ಕೂಡಲೇ ಚುನಾವಣೆ ನಡೆಸಬೇಕು ಎಂದು ಆಗ್ರಹಿಸಲಾಗಿದೆ. ಇಷ್ಟೊಂದು ದೀರ್ಘಕಾಲದ ವರೆಗೆ ಬೆಂಗಳೂರಿನಲ್ಲಿ (ಪಾಲಿಕೆ ಚುನಾವಣೆ ) ನಡೆಯದೆ ಇರುವುದು ದಾಖಲೆಯಾಗಿದೆ. ಹೀಗಾಗಿ, ಕೂಡಲೇ ಚುನಾವಣೆ ನಡೆಸಬೇಕು ಎಂದು ಒತ್ತಾಯಿಸಲಾಗಿದೆ.
ಮೇಯರ್ ಅವಧಿ ಎಷ್ಟಾದರೂ ಇರಲಿ
ಬಿಬಿಎಂಪಿ ಮೇಯರ್ ಅವಧಿ ಎರಡೂವರೆ ವರ್ಷವಾದರೂ ಇರಲಿ, ಐದು ವರ್ಷವಾದರೂ ಇರಲಿ. ಆದರೆ, ಬೆಂಗಳೂರಿಗೆ ಒಬ್ಬರೇ ಮೇಯರ್ ಇರಲಿ ಎಂದು ವಿರೋಧ ಪಕ್ಷಗಳು ಒತ್ತಾಯಿಸಿವೆ. ಕರ್ನಾಟಕಕ್ಕೆ ಒಬ್ಬರು ಮುಖ್ಯಮಂತ್ರಿ, ದೇಶಕ್ಕೆ ಒಬ್ಬ ಪ್ರಧಾನಿ ಎನ್ನುವಂತೆ ಬೆಂಗಳೂರಿಗೆ ಒಬ್ಬರೇ ಮೇಯರ್ ಇರಬೇಕು ಎಂದು ವಿರೋಧ ಪಕ್ಷಗಳು ಅಭಿಪ್ರಾಯಪಟ್ಟಿವೆ.












Click it and Unblock the Notifications