Breaking: ಬೆಂಗಳೂರಲ್ಲಿ ಡಿ.28 ರಿಂದ ಜ.02ವರೆಗೆ ಮತ್ತೆ ಮಂಜು - ಚಳಿ ಸೃಷ್ಟಿ

ಬೆಂಗಳೂರು, ಡಿಸೆಂಬರ್ 27: ಹವಾಮಾನದಲ್ಲಿ ಉಂಟಾದ ಬದಲಾವಣೆಗಳಿಂದ ಬೆಂಗಳೂರಿನಲ್ಲಿ ಕೆಲವು ದಿನಗಳಿಂದ ಸುರಿದಿದ್ದ ಮಳೆ ಕಡಿಮೆಯಾಗುವ ಲಕ್ಷಣಗಳು ಗೋಚರಿಸಿವೆ. ಬುಧವಾರ ಡಿಸೆಂಬರ್ 28ರಿಂದ ಜನವರಿ 02ವರೆಗೆ ಬೆಂಗಳೂರಿನಲ್ಲಿ ಮೈ ಕೊರೆವ ಚಳಿಯ ವಾತಾವರಣ ನಿರ್ಮಾಣವಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ (IMD) ಬೆಂಗಳೂರು ಕೇಂದ್ರ ಮುನ್ಸೂಚನೆ ನೀಡಿದೆ.

ಬಂಗಾಳಕೊಲ್ಲಿಯಲ್ಲಿ ನಿರ್ಮಾಣವಾಗಿದ್ದ ವಾಯುಭಾರ ಕುಸಿತ ಶ್ರೀಲಂಕಾ ಕರಾವಳಿ ಪ್ರದೇಶದಲ್ಲಿ ಸಾಗಿದೆ. ಅರಬ್ಬಿ ಸಮುದ್ರದಲ್ಲಿ ಮೇಲ್ಮೈ ಸುಳಿಗಾಳಿ ಉಂಟಾಗಿದೆ. ಇದರ ಪರಿಣಾಮವಾಗಿ ಬೆಂಗಳೂರಿನಲ್ಲಿ ಕಳೆದ ಮೂರು ನಾಲ್ಕು ದಿನ ಜಡಿ ಮಳೆ ಸುರಿದಿತ್ತು. ಇಡಿ ದಿನ ಮೋಡ ಕವಿದ ವಾತಾವರಣ ಕಂಡು ಬಂದಿದ್ದು, ಈಗಲೂ ಚಳಿ ಹಾಗೂ ತುಂತುರು ಮಳೆ ವಾತಾವರಣ ಮುಂದುವರಿದಿದೆ. ಮಂಗಳವಾರ ಸಹ ಯಲಹಂಕ, ಹೆಬ್ಬಾಳ, ಜಯನಗರ, ಚಾಮರಾಜಪೇಟೆ, ಮೆಜೆಸ್ಟಿಕ್, ವಿಜಯನಗರ, ಹಂಪಿನಗರ, ಹೂಡಿ, ಮಹದೇವಪುರ ವ್ಯಾಪ್ತಿಯ ಹಲವು ಪ್ರದೇಶಗಳಲ್ಲಿ ತುಂತುರು ಮಳೆ ಬಿದ್ದಿದೆ. ಈ ಮಳೆಯು ಮುಂದಿನ 24ಗಂಟೆ ಬಳಿಕ ಸಂಪೂರ್ಣವಾಗಿ ತಗ್ಗುವ ಸಾಧ್ಯತೆ ಇದೆ.

ಬುಧವಾರದಿಂದ ಮತ್ತೆ ದಟ್ಟ ಮಂಜು ಸಹಿತ ಚಳಿ ಹೆಚ್ಚಾಗಲಿದೆ. ಕೆಲವು ಪ್ರದೇಶಗಳಲ್ಲಿ ಮಾತ್ರ ಸೋನೆ ಸುರಿಯಲಿದೆ. ಮಾಂಡೌಸ್ ಚಂಡಮಾರುತ ಅಬ್ಬರ ತಣ್ಣಗಾದ ಬಳಿಕ ಹೆಚ್ಚಾಗಿದ್ದ ಚಳಿ ಕಳೆದ ಒಂದು ವಾರದಿಂದ ಕಡಿಮೆ ಆಗಿದೆ. ಇದೀಗ ಮತ್ತೆ ತೀವ್ರಗತಿಯಲ್ಲಿ ಚಳಿ ಹೆಚ್ಚಾಗುವ ಮುನ್ಸೂಚನೆ ಇದೆ. ಸದ್ಯ ಕೊರೊನಾ ಭೀತಿ ಹೆಚ್ಚಾಗುತ್ತಿರುವ ಹೊತ್ತಿನಲ್ಲಿ ಬೆಂಗಳೂರು ನಾಗರಿಕರು ಚಳಿಗೆ ಬೆಚ್ಚಗಿನ ಬಟ್ಟೆ ಜೊತೆಗೆ ಮಾಸ್ಕ್ ಧರಿಸುವುದು ಮತ್ತು ಹೊರಾಂಗಣ ಸಭೆ, ಸಮಾರಂಭಗಳಿಗೆ ಹೋಗುವುದನ್ನು ಆದಷ್ಟು ಕಡಿಮೆ ಮಾಡಿದರೆ ಉತ್ತಮ ಎಂದು ವೈದ್ಯರು ಸೂಚಿಸಿದ್ದಾರೆ.

Bengaluru cold weather: Again Cold weather will be created from Dec. 28 till January 2nd

ತಾಪಮಾನದಲ್ಲಿ ಇಳಿಕೆ

ಡಿಸೆಂಬರ್ 28ರಿಂದ ಜನವರಿ 02ವರೆಗೆ ಬೆಂಗಳೂರು ನಗರಾದ್ಯಂತ ವ್ಯಾಪಕವಾಗಿ ಚಳಿ ಕಂಡು ಬರಲಿದೆ. ಮಂಗಳವಾರ ನಗರ ವ್ಯಾಪ್ತಿಯಲ್ಲಿ ಕನಿಷ್ಠ 18 ಡಿಗ್ರಿ ಸೆಲ್ಸಿಯಸ್ ಹಾಗೂ ಗರಿಷ್ಠ 26 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿದೆ. ಈ ಉಷ್ಣಾಂಶದ ಪ್ರಮಾಣವು ಬುಧವಾರದಿಂದ ಕ್ರಮೇಣವಾಗಿ ಇಳಿಕೆ ಆಗಿ ಚಳಿ ಹೆಚ್ಚಾಗಲಿದೆ. ಜನವರಿ 2 ಹೊತ್ತಿಗೆ ಕನಿಷ್ಠ ತಾಪಮಾನ 14-15ಡಿಗ್ರಿ ಸೆಲ್ಸಿಯಸ್‌ವರೆಗೆ ಇಳಿಕೆ ಆಗಲಿದೆ ಎಂದು ಹವಾಮಾನ ಇಲಾಖೆ ವರದಿ ತಿಳಿಸಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+