Rain Alert: ಹವಾಮಾನ ವೈಪರೀತ್ಯ! ಬೆಂಗಳೂರಿಗೆ ವ್ಯಾಪಕ ಮಳೆ ಎಚ್ಚರಿಕೆ: ವೀಕೆಂಡ್ ಮೋಜಿಗೆ ವಿಘ್ನ

ಬೆಂಗಳೂರು, ಜುಲೈ 18: ಬೆಂಗಳೂರು ನಗರದ್ಯಂತ ಕಳೆದ ಒಂದು ವಾರದಿಂದ ಮಬ್ಬು ವಾತಾವರಣ ಕವಿದಿದೆ. ಇವತ್ತು ಶುಕ್ರವಾರ ಬೆಳಗ್ಗೆಯಿಂದಲೇ ಸೂರ್ಯ ಮರೆಯಾಗಿದ್ದು, ಹೆಚ್ಚಿನ ಪ್ರಮಾಣದಲ್ಲಿ ಚಳಿ ದಾಖಲಾಗಿದೆ. ಕನಿಷ್ಠ ತಾಪಮಾನ 20 ಡಿಗ್ರಿ ಸೆಲ್ಸಿಯಸ್‌ಗೆ ಕುಸಿದಿದೆ. ಚಂಡಮಾರುತ ಪ್ರಸರಣ ಕಾರಣದಿಂದ ಇಂದು ಸಾಧಾರಣದಿಂದ ಭಾರೀ ಮಳೆ ಬರಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದ್ದು, 'ಯೆಲ್ಲೋ ಅಲರ್ಟ್' ಸಹ ನೀಡಿದೆ. ಇಂದು ಉದ್ಯೋಗ, ಇತರ ಕಾರಣಗಳಿಗೆ ನಗರದಲ್ಲಿ ಓಡಾಡುವವರು, ವಾಹನ ಸವಾರರು ಗಮನಿಸಬೇಕಿದೆ.

ಬೆಳಗ್ಗೆಯಿಂದ ಮೋಡ ಕವಿದ ವಾತಾವರಣ ನೋಡಿದರೆ ಸಂಜೆ ಹೊತ್ತಿಗೆ ವ್ಯಾಪಕ ಮಳೆ ಆಗುವ ಎಲ್ಲ ಲಕ್ಷಣಗಳು ಇವೆ. ನಗರದಲ್ಲಿ ಚಳಿ ಹೆಚ್ಚಾಗಿದೆ. ಮಳೆಗಾಲದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಚಳಿ ಅನುಭವ ಆಗುತ್ತಿದೆ. ಮುಂಗಾರು ಬೆಂಗಳೂರು ನಗರ ಜಿಲ್ಲೆಯಲ್ಲಿ ಮತ್ತೆ ಸಕ್ರಿಯವಾಗಿದ್ದು, ಮುಂದಿನ ದಿನಗಳಲ್ಲಿ ವ್ಯಾಪಕವಾಗಿ ಸುರಿಯಲಿದೆ. ಈ ವಾರಾಂತ್ಯಕ್ಕೆ ಬಿರುಸಿನ ಮಳೆ ಆಗುವ ಎಲ್ಲ ಸಾಧ್ಯತೆ ಇದೆ ಎಂದು ಹವಾಮಾನ ತಜ್ಞರ ವರದಿಯಲ್ಲಿ ತಿಳಿಸಲಾಗಿದೆ.

Bengaluru Cloudy Sky with Moderate to Heavy Rain Expect Today IMD Issued Yellow Alert

ದಕ್ಷಿಣ ಭಾರತದ ವಿವಿಧ ರಾಜ್ಯಗಳ ಮೇಲ್ಮೈನಲ್ಲಿ ಚಂಡಮಾರುತ ಪ್ರಸರಣದ ಬಿರುಗಾಳಿ ಹಾದು ಹೋಗಿತ್ತು. ಅರಬ್ಬಿ ಸಮುದ್ರದಲ್ಲಿ ವಾಯುಭಾರ ಕುಸಿತು, ಬಂಗಾಳಕೊಲ್ಲಿಯಲ್ಲಿ ಸಣ್ಣ ವೈಪರೀತ್ಯಗಳು ಉಂಟಾಗಿದ್ದವು. ಅವು ದುರ್ಬಲಗೊಳ್ಳದೇ ಮತ್ತೆ ಚುರುಕಾಗಿದ್ದರಿಂದ ಬೆಂಗಳೂರು ನಗರ ಸೇರಿದಂತೆ ವಿವಿಧ ಕಡೆಗಳಲ್ಲಿ ಮುಂಗಾರು ಮಳೆ ಅಬ್ಬರಿಸುವ ಮುನ್ಸೂಚನೆ ನೀಡಿದೆ.

ಕನಿಷ್ಠ 110 ಮಿಲಿ ಮೀಟರ್ ಮಳೆ ಸಂಭವ

ನಗರದಲ್ಲಿ ತುಂತುರು ಇಲ್ಲವೇ ಹಗುರ ಮಳೆ ನಿರೀಕ್ಷೆ ಇತ್ತು. ಇಂದು ಮತ್ತು ನಾಳೆ ಕನಿಷ್ಠ 110 ಮಿಲಿ ಮೀಟರ್ ನಷ್ಟು ಮಳೆ ಆಗುವ ಸಾಧ್ಯತೆ ಇದೆ. ಕೆಲವು ಕಡೆಗಳಲ್ಲಿ ಜಿಟಿ ಜಿಟಿ ಮಳೆ ಮುಂದುವರಿದರೆ, ಇನ್ನು ಹಲವೆಡೆ ವ್ಯಾಪಕ ಮಳೆ ಆಗಲಿದೆ. ಮಧ್ಯಾಹ್ನ ನಂತರ ಮುಂಗಾರು ಮಳೆ ಆಗಲಿದ್ದು, ಸಾರ್ವಜನಿಕರು ಹಾಗೂ ಬೀದಿ ಬದಿ ವ್ಯಾಪಾರಿಗಳಿಗೆ ತೊಂದರೆ ಆಗಬಹುದು.

ಈ ವೀಕೆಂಡ್ ಮೋಜಿಗೆ ಮಳೆ ವಿಘ್ನ

ಇಂದು ಶುಕ್ರವಾರ ಸಂಜೆಯಿಂದ ವೀಕೆಂಡ್ ಮೂಡ್‌ಗೆ ಬೆಂಗಳೂರಿನ ಜನ ಜಾರುತ್ತಾರೆ. ಈ ಮಳೆ ಅದಕ್ಕೂ ಬ್ರೇಕ್ ಹಾಕುವ ನಿರೀಕ್ಷೆ ಇದೆ. ಶನಿವಾರ ಮತ್ತು ರವಿವಾರ (ಜುಲೈ 19 & 20) ರಂದು ಜೋರು ಮಳೆ ಮುಂದುವರಿಯಲಿದೆ. ಗಾಳಿ ಮಳೆ ಸಂಬಂಧ ನಗರದಲ್ಲಿ ಟ್ರಾಫಿಕ್ ಕಿರಿ ಕಿರಿ ಉಂಟಾಗಬಹುದು. ಈಗಾಗಲೇ ಐಟಿ ಕಂಪನಿಗಳು ಪೂರ್ತಿ ಕಚೇರಿಯಿಂದಲೇ ಕೆಲಸ ಮಾಡಲು ಮುಂದಾಗಿದ್ದರಿಂದ ಇದು ಕೂಡ ಟ್ರಾಫಿಕ್ ಹೆಚ್ಚಲು ಕಾರಣ ಎನ್ನಲಾಗಿದೆ. ಇದೆಲ್ಲ ಕಾರಣಗಳಿಂದ ಈ ವಾರಾಂತ್ಯಕ್ಕೆ ಮೋಜು, ಮಸ್ತಿಗೆ ಪ್ಲಾನ್ ಮಾಡಿದವರಿಗೆ ಮಳೆ ವಿಘ್ನ ಉಂಟು ಮಾಡಿದೆ. ಇಷ್ಟು ಮಾತ್ರವಲ್ಲದೇ ಕರ್ನಾಟಕ ಕರಾವಳಿಗೆ ಅತ್ಯಧಿಕ ಮಳೆ ಆಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+