BCAP: ಮಹತ್ತರ ಗುರಿಗಾಗಿ ಬೆಂಗಳೂರು ಹವಾಮಾನ ಕ್ರಿಯೆ ಮತ್ತು ಸ್ಥಿತಿಸ್ಥಾಪಕತ್ವ ಯೋಜನೆ, ಏನಿದು?
ಬೆಂಗಳೂರು, ನವೆಂಬರ್ 27: ಬೆಂಗಳೂರು ನಗರದಲ್ಲಿ 2050ರ ವೇಳೆಗೆ ತಟಸ್ಥ ಇಂಗಾಲವನ್ನು ಸಾಧಿಸುವ ದೃಷ್ಟಿಯಿಂದ ಇಂದು ಬೆಂಗಳೂರು ಹವಾಮಾನ ಕ್ರಿಯೆ ಮತ್ತು ಸ್ಥಿತಿಸ್ಥಾಪಕತ್ವ ಯೋಜನೆಯನ್ನು (BCAP) ಪ್ರಾರಂಭಿಸಲಾಗಿದೆ. ಈ ಯೋಜನೆಯು ಬೆಂಗಳೂರು ವಿಶ್ವದಲ್ಲಿನ ಕೆಲವೇ ನಗರಗಳಲ್ಲಿ ಒಂದಾಗಿ ಇರುವಂತೆ ಮತ್ತು ಜಾಗತಿಕ ಗುಣಮಟ್ಟದ ಹವಾಮಾನ ಕ್ರಿಯಾ ಯೋಜನೆಯನ್ನು ಹೊಂದಿರುವ ಭಾರತದ ಮೂರನೇ ನಗರವಾಗಿರುವಂತೆ ಮಾಡಲಿದೆ.
ಹೌದು, ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಈ ಯೋಜನೆಯನ್ನು ವರ್ಲ್ಡ್ ರಿಸೋರ್ಸ್ ಇನ್ ಸ್ಟಿಟ್ಯೂಟ್(WRI) ಇಂಡಿಯಾ ಪ್ರಸ್ತುತಪಡಿಸುತ್ತಿದೆ. ಇದನ್ನು ಸೋಮವಾರ ಬಿಬಿಎಂಪಿ ಘನತ್ಯಾಜ್ಯ ವಿಭಾಗದ ವಿಶೇಷ ಆಯುಕ್ತರಾದ ಡಾ. ಕೆ. ಹರೀಶ್ ಕುಮಾರ್ ರವರು ನಗರದ ಸ್ವಾತಂತ್ರ ಉದ್ಯಾನವನದಲ್ಲಿ ಬಿಡುಗಡೆಗೊಳಿಸಿದರು.

2050ರ ವೇಳೆಗೆ ತಟಸ್ಥ ಇಂಗಾಲ ಮತ್ತು ಹವಾಮಾನ ಸ್ಥಿತಿಸ್ಥಾಪಕತ್ವವನ್ನು ಹೊಂದುವ ಗುರಿಯೊಂದಿಗೆ ಸುರಕ್ಷಿತ, ಆರೋಗ್ಯಕರ ಮತ್ತು ಹೆಚ್ಚು ನ್ಯಾಯಸಮ್ಮತ ನಗರಕ್ಕಾಗಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯು ಮಾರ್ಗಸೂಚಿಯನ್ನು ರಚಿಸುತ್ತಿದೆ.
ಅನಿಲ ಹೊರಸೂಸುವಿಕೆ ಕಡಿಮೆಗೆ ಕ್ರಮ
ಬೆಂಗಳೂರಿನ ಸಿ40 ನಗರಗಳ ಬದ್ಧತೆಯ ಭಾಗವಾಗಿ, ಬೆಂಗಳೂರು ಹಸಿರುಮನೆ ಅನಿಲ(GHG) ಹೊರಸೂಸುವಿಕೆಯನ್ನು ಕಡಿಮೆ ಮಾಡುವ ಮತ್ತು ಆರೋಗ್ಯಕರ, ನ್ಯಾಯಸಮ್ಮತ ಮತ್ತು ಸ್ಥಿತಿಸ್ಥಾಪಕತ್ವವುಳ್ಳ ಸಮುದಾಯಗಳನ್ನು ನಿರ್ಮಿಸುವ ಗುರಿಯೊಂದಿಗೆ ಡೇಟಾ-ಚಾಲಿತ, ಎಲ್ಲವನ್ನೂ ಒಳಗೊಂಡಿರುವ ಮತ್ತು ಸಹಯೋಗದ ಹವಾಮಾನ ಕ್ರಿಯಾ ಯೋಜನೆಯನ್ನು ಸಿದ್ಧಪಡಿಸುತ್ತಿದೆ.

ಬಿಬಿಎಂಪಿ ಮತ್ತು ಕರ್ನಾಟಕ ಸರ್ಕಾರವು ಸಿ40 ಸಿಟೀಸ್ ಮತ್ತು WRI India ಸಹಯೋಗದೊಂದಿಗೆ ಜ್ಞಾನ ಪಾಲುದಾರರಾಗಿ ಸಿದ್ಧಪಡಿಸಿದ BCAP, ಬೆಂಗಳೂರಿನ ವಿವಿಧ ಸರ್ಕಾರಿ ಇಲಾಖೆಗಳು, ವೈದ್ಯರು, ನಾಗರಿಕ ಸಮಾಜದ ಸದಸ್ಯರು ಮತ್ತು ಸಮುದಾಯ ಆಧಾರಿತ ಸಂಸ್ಥೆಗಳು ಸೇರಿದಂತೆ ಎಲ್ಲಾ ಮಧ್ಯಸ್ಥಗಾರರ ಗುಂಪುಗಳೊಂದಿಗೆ ಗಂಭೀರವಾದ ಸಮಾಲೋಚನೆಗಳನ್ನು ಪರಿಗಣಿಸುತ್ತದೆ.
ಹವಾಮಾನ ಬಿಕ್ಕಟ್ಟು ಎದುರಿಸಲು ಸಜ್ಜು
ಉತ್ಪಾದನೆಯಾಗುವ GHG ಹೊರಸೂಸುವಿಕೆಯ ಪ್ರಮಾಣವನ್ನು ಸಮತೋಲನಗೊಳಿಸುವುದು ಮತ್ತು ವಾತಾವರಣದಿಂದ ತೆಗೆದುಹಾಕಲ್ಪಟ್ಟ ಪ್ರಮಾಣವನ್ನು ಸಂಪೂರ್ಣ ಶೂನ್ಯ/ತಟಸ್ಥ ಇಂಗಾಲ ಎಂದು ಕರೆಯಲಾಗುತ್ತದೆ. ಸುಮಾರು 100 ವಿಶ್ವದ ಪ್ರಮುಖ ನಗರಗಳ ಸಿ40 ನೆಟ್‌ವಕ್ ಭಾಗವಾಗಿ ಬೆಂಗಳೂರು ಹವಾಮಾನ ಬಿಕ್ಕಟ್ಟನ್ನು ಎದುರಿಸಲು ಅಗತ್ಯವಾದ ತುರ್ತು ಕ್ರಮವನ್ನು ತಲುಪಿಸಲು ಕೆಲಸ ಮಾಡುತ್ತಿದೆ.
ಮುಂಬರುವ ಪಕ್ಷಗಳ ಸಮ್ಮೇಳನದ (COP28) ಹಿನ್ನೆಲೆಯಲ್ಲಿ ಇದು ವಿಶೇಷವಾಗಿ ಮಹತ್ವದ್ದಾಗಿದೆ. ಏಕೆಂದರೆ, ಬೆಂಗಳೂರು ವಿಶೇಷವಾಗಿ ದುರ್ಬಲ ಪ್ರದೇಶಗಳಿಗಾಗಿ ಬೆಂಗಳೂರನ್ನು ಹೆಚ್ಚು ಹವಾಮಾನ ಸ್ಥಿತಿಸ್ಥಾಪಕವಾಗಿಸಲು ಪ್ರಯತ್ನಿಸುತ್ತಿದೆ ಎಂದು ಬಿಬಿಎಂಪಿ ತಿಳಿಸಿದೆ.
BCAPಯು GHG ಗಳನ್ನು ವಾತಾವರಣಕ್ಕೆ ಹೊರಸೂಸುವ ಎಲ್ಲಾ ಪ್ರಮುಖ ವಲಯಗಳು/ ಮೂಲಗಳನ್ನು ವಿಶ್ಲೇಷಿಸುವ(GPC ರಿಪೋರ್ಟಿಂಗ್ ಫ್ರೇಮ್ ವರ್ಕ್-ಮೂಲಮಟ್ಟ ಪ್ರಕಾರ) ನಗರದ ಮೊಟ್ಟಮೊದಲ GHG ಇನ್ವೆಂಟರಿ ತಯಾರಿಕೆಯನ್ನು ಸಹ ಗುರುತಿಸುತ್ತದೆ. ಈ ಇನ್ವೆಂಟರಿಯು ಬೆಂಗಳೂರಿಗೆ ಸಾಕ್ಷಿ ಆಧಾರಿತ ಉಪಶಮನ ತಂತ್ರಗಳು ಮತ್ತು ನೀತಿಗಳನ್ನು ನಿರ್ಮಿಸಲು ಮತ್ತು ತೆಗೆದುಕೊಂಡ ಕ್ರಮಗಳ ಪ್ರಗತಿಯನ್ನು ಅಳೆಯಲು ಅನುವು ಮಾಡಿಕೊಡುತ್ತದೆ.
ಯೋಜನೆ ವ್ಯಾಪ್ತಿಗೆ 7 ಅಂಶಗಳು
BCAP ಅಡಿಯಲ್ಲಿನ ಕೆಲವು ವಿಧಾನಗಳ ಅಳವಡಿಕೆ ಬಳಿಕ ಬೆಂಗಳೂರಿನಲ್ಲಿ ಇಂಗಾಲ ಹೊರಸೂಸುವಿಕೆ ಕಡಿಮೆ ಆಗಲಿದೆ. ಬೆಂಗಳೂರಿನ ಪ್ರಮುಖ ಹವಾಮಾನ ಅಪಾಯಗಳನ್ನು ಮತ್ತು ಆ ಮೂಲಕ ಹೊಂದಾಣಿಕೆ ಮತ್ತು ಸ್ಥಿತಿಸ್ಥಾಪಕತ್ವದ ಅಡಿಯಲ್ಲಿ ಗಮನಹರಿಸಲಿದೆ. ಆಗಾಗ ಹವಾಮಾನ ಬದಲಾವಣೆಯ ಅಪಾಯ ಮತ್ತು ದುರ್ಬಲತೆಯ ಮೌಲ್ಯಮಾಪನ ಮಾಡಲಾಗುತ್ತದೆ.
ಕಟ್ಟಡಗಳು, ಸಾರಿಗೆ, ಘನತ್ಯಾಜ್ಯ ನಿರ್ವಹಣೆ, ನೀರು, ತ್ಯಾಜ್ಯನೀರು ಮತ್ತು ಮಳೆನೀರು, ಗಾಳಿಯ ಗುಣಮಟ್ಟ, ನಗರ ಯೋಜನೆ, ಹಸಿರೀಕರಣ ಮತ್ತು ಜೀವವೈವಿಧ್ಯ, ಮತ್ತು ವಿಪತ್ತು ಮತ್ತು ನಿರ್ವಹಣೆ - ಹೀಗೆ ಏಳು ಪ್ರಮುಖ ಕ್ಷೇತ್ರಗಳು ಈ ಯೋಜನೆ ವ್ಯಾಪ್ತಿಗೆ ಒಳಪಡುತ್ತವೆ. ಒಟ್ಟಾರೆಯಾಗಿ ಮುಂದಿನ ಎರಡು ಮುಂದಿನ 26 ವರ್ಷಗಳಲ್ಲಿ ಈ ಯೋಜನೆ ಸಾಕಾರಗೊಳಿಸಲು ಬಿಬಿಎಂಪಿ ಶ್ರಮಿಸಲಿದೆ.












Click it and Unblock the Notifications