ಬೆಂಗಳೂರು-ಚೆನ್ನೈ ಎಕ್ಸ್‌ಪ್ರೆಸ್‌ವೇ ಸೇರಿ ರಾಜ್ಯದ ಪ್ರಮುಖ ಹೆದ್ದಾರಿಗಳ ಟೋಲ್ ದರ ಏರಿಕೆ, ಯಾರಿಗೆಲ್ಲಾ ವಿನಾಯಿತಿ

Bengaluru-Chennai Expressway: ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು (ಎನ್‌ಎಚ್‌ಎಐ) ಬೆಂಗಳೂರು-ಚೆನ್ನೈ ಎಕ್ಸ್‌ಪ್ರಸ್‌ ವೇ ಸೇರಿದಂತೆ ರಾಜ್ಯದ ಪ್ರಮುಖ ಹೆದ್ದಾರಿಗಳ ಟೋಲ್‌ ಶುಲ್ಕವನ್ನು ಹೆಚ್ಚಳ ಮಾಡಿದೆ. ಹಾಗಾದ್ರೆ ಪರಿಷ್ಕೃತ ದರಗಳು ಎಲ್ಲಿವರೆಗೂ ಜಾರಿಯಲ್ಲಿರಲಿವೆ ಹಾಗೂ ಯಾವೆಲ್ಲಾ ಭಾಗಗಳಿಗೆ ಅನ್ವಯ ಆಗಲಿದೆ ಎನ್ನುವ ಸಂಪೂರ್ಣ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ.

ಕರ್ನಾಟಕದಲ್ಲಿ ಹಾದುಹೋಗುವ ಬೆಂಗಳೂರು-ಚೆನ್ನೈ ಎಕ್ಸ್‌ಪ್ರೆಸ್‌ವೇಯ ರಾಜ್ಯದ ಭಾಗ ಸೇರಿದಂತೆ ಒಟ್ಟು ಮೂರು ಪ್ರಮುಖ ಹೆದ್ದಾರಿ ಮಾರ್ಗಗಳ ಟೋಲ್ ಶುಲ್ಕವನ್ನು ಹೆಚ್ಚಿಸಿದೆ. ಈ ಪರಿಷ್ಕೃತ ದರಗಳು ಮಾರ್ಚ್ 31, 2027ರ ವರೆಗೆ ಜಾರಿಯಲ್ಲಿರಲಿವೆ ಎಂದು ತಿಳಿದುಬಂದಿದೆ.

Bengaluru-Chennai Expressway Toll Hike Revised NHAI Toll Rates Plazas and Validity Till March 2027

1. ಬೆಂಗಳೂರು-ಚೆನ್ನೈ ಎಕ್ಸ್‌ಪ್ರೆಸ್‌ವೇ (NE-7)

ರಾಷ್ಟ್ರೀಯ ಎಕ್ಸ್‌ಪ್ರೆಸ್‌ವೇ 7ರ ಬೆಂಗಳೂರು-ಬೇತಮಂಗಲ ನಡುವಿನ ಭಾಗ (0.7 ಕಿ.ಮೀ ಸಂಪರ್ಕ ರಸ್ತೆ ಹಾಗೂ NH-4 ಇಂಟರ್‌ಚೇಂಜ್ ಸೇರಿದಂತೆ) ಮತ್ತು ಹೊಸಕೋಟೆಯಿಂದ ಆಂಧ್ರಪ್ರದೇಶದ ಗಡಿಭಾಗದವರೆಗಿನ 70.7 ಕಿಲೋ ಮೀಟರ್‌ ವ್ಯಾಪ್ತಿಯ ಶುಲ್ಕ ಹೆಚ್ಚಳ ಮಾಡಲಾಗಿದೆ.

4 ಪ್ರಮುಖ ಟೋಲ್ ಪ್ಲಾಜಾಗಳಲ್ಲಿ ಶುಲ್ಕ ಏರಿಕೆ

* ಹೆಡಗಿನಬೆಲೆ (ಹೊಸಕೋಟೆ ಬಳಿ)

* ಅಗ್ರಹಾರ (ಕೋಲಾರ ಜಿಲ್ಲೆಯ ಮಾಲೂರು ಬಳಿ)

* ಕೃಷ್ಣರಾಜಪುರ (ಬಂಗಾರಪೇಟೆ ಬಳಿ)

* ಸುಂದರಪಾಳ್ಯ (ಬೇತಮಂಗಲ ಬಳಿ)

ಹೆಡಗಿನಬೆಲೆ ಟೋಲ್‌ನಲ್ಲಿ ಲಘು ವಾಹನಗಳ ಶುಲ್ಕದ ವಿವರ

* ಅಗ್ರಹಾರದಿಂದ: 50 ರೂಪಾಯಿ

* ಕೃಷ್ಣರಾಜಪುರದಿಂದ: 120 ರೂಪಾಯಿ

* ಸುಂದರಪಾಳ್ಯದಿಂದ: 150 ರೂಪಾಯಿ

ಅಗ್ರಹಾರ ಟೋಲ್‌ ಶುಲ್ಕದ ವಿವರ

* ಹೆಡಗಿನ್‌ಬೆಲೆಯಿಂದ: 50 ರೂಪಾಯಿ

* ಕೃಷ್ಣರಾಜಪುರದಿಂದ: 70 ರೂಪಾಯಿ

* ಸುಂದರಪಾಳ್ಯದಿಂದ: 95 ರೂಪಾಯಿ

ಕೃಷ್ಣರಾಜಪುರ ಟೋಲ್ ಪ್ಲಾಜಾ ಶುಲ್ಕದ ವಿವರ

* ಹೆಡಗಿನ್‌ಬೆಲೆಯಿಂದ: 120 ರೂಪಾಯಿ

* ಅಗ್ರಹಾರದಿಂದ: 70 ರೂಪಾಯಿ

* ಸುಂದರಪಾಳ್ಯದಿಂದ: 30 ರೂಪಾಯಿ

ಸುಂದರಪಾಳ್ಯ ಟೋಲ್ ಶುಲ್ಕದ ವಿವರ

* ಹೆಡಗಿನ್‌ಬೆಲೆಯಿಂದ: 150 ರೂಪಾಯಿ

* ಅಗ್ರಹಾರದಿಂದ: 95 ರೂಪಾಯಿ

* ಕೃಷ್ಣರಾಜಪುರದಿಂದ: 30 ರೂಪಾಯಿ

ಟೋಲ್ ವಿನಾಯಿತಿ ನಿಯಮಗಳು

ಟೋಲ್ ವಿನಾಯಿತಿ ಹಾಗೂ ರಿಯಾಯಿತಿ ನಿಯಮಗಳಲ್ಲಿ ಮಹತ್ವದ ಬದಲಾವಣೆಗಳಾಗಿವೆ. ಮಿನಿ ಬಸ್, ಬಸ್ ಮತ್ತು ಟ್ರಕ್ ಸೇರಿ ಇತರೆ ಭಾರೀ ವಾಹನಗಳ ದರಗಳಲ್ಲೂ ಹೆಚ್ಚಳ ಮಾಡಲಾಗಿದೆ. ಹಾಗಾದ್ರೆ ಈ ಕುರಿತ ಪ್ರಮುಖ ಅಂಶಗಳನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ.

* ಮರುಪ್ರಯಾಣಕ್ಕೆ ಅದರಲ್ಲೂ 24 ಗಂಟೆಗಳ ಒಳಗೆ ಹಿಂತಿರುಗುವ ವಾಹನಗಳಿಗೆ ಶೇಕಡ 50ರಷ್ಟು ರಿಯಾಯಿತಿ ಸಿಗಲಿದೆ.

* ತಿಂಗಳ ಪಾಸ್: ಒಂದು ತಿಂಗಳಲ್ಲಿ 50 ಏಕಮುಖ ಪ್ರಯಾಣಗಳಿಗೆ ಅನ್ವಯವಾಗುವ ಒಟ್ಟು ಶುಲ್ಕದಲ್ಲಿ ಮೂರನೇ ಎರಡರಷ್ಟು (2/3) ಭಾಗ ಮಾತ್ರ ಪಾವತಿಸಬೇಕಾಗುತ್ತದೆ.

ಈ ಹೆದ್ದಾರಿಗಳ ಟೋಲ್‌ ದರ ಹೆಚ್ಚಳ

* ಬೆಂಗಳೂರು-ನೆಲಮಂಗಲ ಮಾರ್ಗ (NH-48): 19.5 ಕಿಲೋ ಮೀಟರ್ ಉದ್ದದ ಈ ಮಾರ್ಗದಲ್ಲಿ ಕಾರ್/ಜೀಪ್/ಲಘು ವಾಹನಗಳಿಗೆ ಏಕಮುಖ ಪ್ರಯಾಣಕ್ಕೆ 105 ರೂಪಾಯಿ ಹಾಗೂ 24 ಗಂಟೆಯೊಳಗಿನ ಮರು ಪ್ರಯಾಣಕ್ಕೆ 155 ರೂಪಾಯಿ ಶುಲ್ಕ ನಿಗದಿಪಡಿಸಲಾಗಿದೆ.

* ಮುಳಬಾಗಿಲು - ಆಂಧ್ರಪ್ರದೇಶ ಗಡಿ (NH-75): 22.19 ಕಿಲೋ ಮೀಟರ್‌ ಉದ್ದದ ಈ ಮಾರ್ಗದಲ್ಲೂ ಟೋಲ್ ಶುಲ್ಕ ಹೆಚ್ಚಳ ಮಾಡಲಾಗಿದೆ.

ಈ ಕುರಿತು ಮಾತನಾಡಿರುವ ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು' 'ನೇರ ಸಂಪರ್ಕ ಸಂಪೂರ್ಣವಾಗಿ ಕಲ್ಪಿಸದೇ ಇದ್ದರೂ ಈ ಎಕ್ಸ್‌ಪ್ರೆಸ್‌ವೇಗೆ ನಿರೀಕ್ಷೆಗಿಂತ ಉತ್ತಮ ಸ್ಪಂದನೆ ವ್ಯಕ್ತವಾಗಿದೆ. ಹೆಚ್ಚಿನ ಸಂಖ್ಯೆಯಲ್ಲಿ ಪ್ರಯಾಣಿಕರು ಇಲ್ಲಿ ಸಂಚಾರ ಮಾಡುತ್ತಿದ್ದಾರೆ. ದರ ಏರಿಕೆಗೂ ಮುನ್ನ ಈ ಭಾಗದಿಂದ ದಿನಕ್ಕೆ ಸುಮಾರು 10ರಿಂದ 12 ಲಕ್ಷ ರೂಪಾಯಿವರೆಗೆ ಟೋಲ್ ಸಂಗ್ರಹವಾಗುತ್ತಿತ್ತು,' ತಿಳಿಸಿದ್ದಾರೆ. ಇದೀಗ ಕರ್ನಾಟಕದ ಭಾಗದ ಬೆಂಗಳೂರು-ಚೆನ್ನೈ ಎಕ್ಸ್‌ಪ್ರೆಸ್‌ವೇ ವಾಹನ ಸವಾರರಿಗೆ ಟೋಲ್ ಶುಲ್ಕ ಹೆಚ್ಚಳದ ಬರೆ ಎಳೆದಂತಾಗಿದ್ದು, ಪ್ರಾಧಿಕಾರದ ಈ ನಿರ್ಧಾರದ ವಿರುದ್ಧ ಅಸಮಾಧಾನಗಳು ವ್ಯಕ್ತವಾಗಿವೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+