ಬೆಂಗಳೂರು-ಚೆನ್ನೈ ಎಕ್ಸ್‌ಪ್ರೆಸ್‌ವೇನಿಂದ ಕರ್ನಾಟಕದ ಯಾವೆಲ್ಲಾ ಭಾಗಗಳಿಗೆ ಹೆಚ್ಚು ಅನುಕೂಲ?
Bengaluru-Chennai Expressway: ಬಹುನಿರೀಕ್ಷಿತ ಬೆಂಗಳೂರು-ಚೆನ್ನೈ ಎಕ್ಸ್‌ಪ್ರೆಸ್ ವೇ ಉದ್ಘಾಟನೆ ಹಂತದಲ್ಲಿದೆ. ಇದರಿಂದ ಕರ್ನಾಟಕದ ಬಹುತೇಕ ಹಲವು ಭಾಗಹಳಲ್ಲಿ ಆಸ್ತಿ ದರ ಸೇರಿದಂತೆ ಇನ್ನೂ ಬಹುತೇಕ ಪ್ರಯೋಜನೆಗಳಿವೆ. ಹಾಗಾದ್ರೆ ರಾಜ್ಯದ ಯಾವೆಲ್ಲಾ ಭಾಗಗಳಲ್ಲಿ ಭೂಮಿಗೆ ಭಾರೀ ಬೇಡಿಕೆ ಬಂದಿಗೆ ಎನ್ನುವ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ.
ಈಗಾಗಲೇ ರಾಜ್ಯದಲ್ಲಿ ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್ ವೇ ಲೋಕಾರ್ಪಣೆಗೊಂದು ಇಲ್ಲಿ ವಾಹನ ಸಂಚಾರ ಕೂಡ ಮಾಡುತ್ತಿವೆ. ಈ ಎಕ್ಸ್‌ಪ್ರೆಸ್ ಆದಾಗಿನಿಂದ ಈ ಭಾಗದ ಭೂಮಿಗೆ ಚಿನ್ನದ ಬೆಲೆ ಬಂದಂತಾಗಿದೆ. ಅಲ್ಲದೆ, ಆರ್ಥಿಕತೆ ಉತ್ತೇಜನದಿಂದ ಇಲ್ಲಿನ ಅಕ್ಕಪಕ್ಕದ ಹಳ್ಳಿಗಳು ಸಹ ಅಭಿವೃದ್ಧಿಯತ್ತ ಸಾಗುತ್ತಿವೆ.

ಮತ್ತೊಂದೆಡೆ ಇದೀಗ ಬಹುನಿರೀಕ್ಷಿತ ಬೆಂಗಳೂರು-ಚೆನ್ನೈ ಎಕ್ಸ್‌ಪ್ರೆಸ್ ವೇ ಕೂಡ ಶೀಘ್ರದಲ್ಲೇ ಉದ್ಘಾನೆಯಾಗಲಿದೆ. ಈಗಾಗಲೇ ಕರ್ನಾಟಕ ಭಾಗದಲ್ಲಿ ಸಂಪೂರ್ಣವಾಗಿ ಮುಕ್ತಾಯಗೊಂಡಿದ್ದು, ವಾಹನಗಳು ಕೂಡ ಸಂಚಾರ ಮಾಡುತ್ತಿವೆ. ಇತ್ತೀಚೆಗಷ್ಟೇ ಟೋಲ್ ಶುಲ್ಕ ಕೂಡ ನಿಗದಿ ಮಾಡಲಾಗಿದ್ದು, ಪ್ರಾಧಿಕಾರದ ಒಪ್ಪಿಗೆ ಸೂಚಿಸಿದ ಬಳಿಕ ಜಾರಿ ಮಾಡಲಾಗುತ್ತದೆ ಎಂದು ತಿಳಿದುಬಂದಿದೆ.
ಈ ಎಕ್ಸ್‌ಪ್ರೆಸ್‌ವೇನಿಂದ ಕರ್ನಾಟಕ ಭಾಗದಲ್ಲಿ ಕೈಗಾರಿಕೆ, ಪ್ರವಾಸೋದ್ಯಮ ಸೇರಿದಂತೆ ಆರ್ಥಿಕತೆಗೆ ಸಂಬಂಧಿಸಿದಂತೆ ಹಲವು ಅಭಿವೃದ್ಧಿ ಕಾರ್ಯಗಳು ಆಗಲಿವೆ. ಈಗಾಗಲೇ ಈ ಭಾಗದ ಭೂಮಿ ಬೆಲೆ ಕೂಡ ದುಪ್ಪಟ್ಟಾಗಿದ್ದು, ಆಸ್ತಿದಾರರಿಗೆ ಬಂಪರ್ ಲಾಟರಿ ಹೊಡೆದಂತಾಗಿದೆ. ಲೋಕಾರ್ಪಣೆಯಾದ್ರೆ, ಮತ್ತಷ್ಟು ಹೆಚ್ಚಾಗುವುದರಲ್ಲಿ ಆಶ್ಚರ್ಯವಿಲ್ಲ.
ಕರ್ನಾಟಕ ಭಾಗಗದಲ್ಲಿ ಈಗಾಗಲೇ ಕಾಮಗಾರಿ ಸಂಪೂರ್ಣವಾಗಿ ಮುಗಿದು ವಾಹಗಳು ಸಂಚಾರ ಮಾಡುತ್ತಿವೆ. ಇನ್ನುಳಿದಂತೆ ಆಂಧ್ರಪ್ರದೇಶ, ತಮಿಳುನಾಡು ಭಾಗದಲ್ಲಿ ಕಾಮಗಾರಿ ಪೂರ್ಣಗೊಳ್ಳದ ಕಾರಣ ಉದ್ಘಾಟನೆ ದಿನಾಂಕ ಮುಂದೂಡಿಕೆ ಆಗುತ್ತಲೇ ಬರುತ್ತಿದೆ. ಇದೀಗ ಶೀಘ್ರದಲ್ಲೇ ಲೋಕಾರ್ಪಣೆಯಾಗಲಿದೆ ಎನ್ನುವ ಮಾಹಿತಿಯೂ ಲಭ್ಯವಾಗಿದೆ.
ಬೆಂಗಳೂರು-ಚೆನ್ನೈ ಎಕ್ಸ್‌ಪ್ರೆಸ್‌ವೇ ಎಂಟು ಪಥದ ಪ್ರಮುಖ ಹೆದ್ದಾರಿ ಯೋಜನೆ ಆಗಿದ್ದು, ಇದು ಬೆಂಗಳೂರು ಮತ್ತು ಚೆನ್ನೈ ನಗರಗಳ ನಡುವಿನ ಪ್ರಯಾಣದ ಸಮಯವನ್ನು 5-6 ಗಂಟೆಗಳಿಂದ 2.15 ಗಂಟೆಗಳಿಗೆ ಇಳಿಕೆ ಮಾಡಲಿದೆ. 262 ಕಿಲೋ ಮೀಟರ್ ಉದ್ದದ ಈ ಹೆದ್ದಾರಿಯು ಕರ್ನಾಟಕ, ಆಂಧ್ರಪ್ರದೇಶ ಮತ್ತು ತಮಿಳುನಾಡು ಮೂರು ರಾಜ್ಯಗಳ ಮೂಲಕ ಹಾದುಹೋಗುತ್ತದೆ. ಇದು ದಕ್ಷಿಣ ಭಾರತದ ಅತಿ ದೊಡ್ಡ ಎಕ್ಸ್‌ಪ್ರೆಸ್‌ವೇಗಳಲ್ಲಿ ಒಂದಾಗಿದೆ.
ಕರ್ನಾಟಕದಲ್ಲಿ ಹೊಸಕೋಟೆಯಿಂದ ಆಂಧ್ರಪ್ರದೇಶದ ಗಡಿಯವರೆಗೆ 71 ಕಿಲೋ ಮೀಟರ್ ರಸ್ತೆ ಈಗಾಗಲೇ ಸಂಚಾರಕ್ಕೆ ಮುಕ್ತವಾಗಿದೆ. ಈ ಹೆದ್ದಾರಿ ಪೂರ್ಣಗೊಂಡ ಬಳಿಕ ಬೆಂಗಳೂರು ಮತ್ತು ಚೆನ್ನೈ ನಡುವಿನ ಪ್ರಯಾಣದ ಸಮಯ ಕೇವಲ 2.15 ಗಂಟೆಗಳಿಗೆ ಇಳಿಕೆ ಆಗಲಿದೆ ಎಂದು ಅಂದಾಜಿಸಲಾಗಿದೆ.
ಈ ಭಾಗಗಳಲ್ಲಿ ಭೂಮಿಗೆ ಭಾರೀ ಬೇಡಿಕೆ: ಕರ್ನಾಟಕದ ಮೂರು ಹಂತಗಳಲ್ಲಿ ಕಾಮಗಾರಿ ಯೋಜನೆಯನ್ನು ಮಾಡಲಾಗಿದ್ದು, ಈ ಭಾಗಗಳಲ್ಲಿ ಈಗಾಗಲೇ ಭೂಮಿ ಬೆಲೆ ಗಗನಕ್ಕೆ ಏರಿಬಿಟ್ಟಿದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಏರಿಕೆ ಆಗುವುದರಲ್ಲಿ ಆಶ್ಚರ್ಯವಿಲ್ಲ. ಅದರಲ್ಲೂ ಬೆಂಗಳೂರು, ಕೋಲಾರ ಭಾಗಳಲ್ಲಿ ಈಗಾಗಲೇ ಭೂಮಿ ಬೆಲೆ ಗಗನಕ್ಕೇರಿದೆ. ಆದರೂ ಕೂಡ ಇಲ್ಲಿಯೇ ಉದ್ಯಮಿಗಳು ಸೇರಿದಂತೆ ಬಹುತೇಕರು ಭೂಮಿ ಕೊಂಡುಕೊಳ್ಳಲು ಮುಂದಾಗುತ್ತಿದ್ದಾರೆ.
ರಾಜ್ಯದಲ್ಲಿ ಮೂರು ಹಂತಗಳಲ್ಲಿ ನಿರ್ಮಾಣ
1. ಹೊಸಕೋಟೆ-ಮಾಲೂರು: 27.1 ಕಿಲೋ ಮೀಟರ್
2. ಮಾಲೂರು-ಬಂಗಾರಪೇಟೆ: 27.1 ಕಿಲೋ ಮೀಟರ್
3: ಬಂಗಾರಪೇಟೆ-ಬೇತಮಂಗಲ: 17.5 ಕಿಲೋ ಮೀಟರ್
ಎಕ್ಸ್‌ಪ್ರೆಸ್ ವೇ ವಿವರ
* ಹೆದ್ದಾರಿ ಉದ್ದ: 262 ಕಿಲೋ ಮೀಟರ್
* ಯಾವೆಲ್ಲಾ ರಾಜ್ಯಗಳ ಮೇಲೆ ಹಾದುಹೋಗಲಿದೆ?: ಕರ್ನಾಟಕ, ಆಂಧ್ರಪ್ರದೇಶ ಮತ್ತು ತಮಿಳುನಾಡು
* ಕರ್ನಾಟಕದಲ್ಲಿ ಭಾಗ: ಹೊಸಕೋಟೆಯಿಂದ ಗಡಿ ಭಾಗದವರೆಗೆ 71 ಕಿ.ಮೀಟರ್
* ಪೂರ್ಣಗೊಂಡ ಬಳಿಕ ಪ್ರಯಾಣದ ಸಮಯ: 2.15 ಗಂಟೆಗಳಿಗೆ ಇಳಿಕೆ
* ವೇಗದ ಮಿತಿ: ಗಂಟೆಗೆ ಗರಿಷ್ಠ 120 ಕಿ.ಮೀ. ನಿಗದಿ
* ವೆಚ್ಚ: ಸುಮಾರು 18,000 ಕೋಟಿ ರೂಪಾಯಿ
ಎಲ್ಲೆಲ್ಲಿ ಸಂಚಾರಕ್ಕೆ ಮುಕ್ತ?: ಕರ್ನಾಟಕದಲ್ಲಿ ಹೊಸಕೋಟೆಯಿಂದ ಆಂಧ್ರಪ್ರದೇಶದ ಗಡಿಯವರೆಗೆ 71 ಕಿ.ಮೀ ಸಂಚಾರಕ್ಕೆ ಮುಕ್ತವಾಗಿದೆ. ಆಂಧ್ರಪ್ರದೇಶ ಮತ್ತು ತಮಿಳುನಾಡು ರಾಜ್ಯಗಳಲ್ಲಿ ಹೆದ್ದಾರಿ ನಿರ್ಮಾಣ ಕಾರ್ಯ ಪ್ರಗತಿಯಲ್ಲಿದೆ. ಸಂಪೂರ್ಣ ಹೆದ್ದಾರಿ ಈ ವರ್ಷದ ಅಂತ್ಯದ ವೇಳೆಗೆ ಸಂಚಾರಕ್ಕೆ ಮುಕ್ತವಾಗುವ ನಿರೀಕ್ಷೆಯಿದೆ.
ಪ್ರಯೋಜನಗಳು
* ಆರ್ಥಿಕ ಚಟುವಟಿಕೆಗಳ ಉತ್ತೇಜನ
* ಬೆಂಗಳೂರು ಮತ್ತು ಚೆನ್ನೈ ನಡುವಿನ ಸಂಚಾರ ದಟ್ಟಣೆ ಕಡಿಮೆ
* ಎರಡು ಪ್ರಮುಖ ನಗರಗಳ ನಡುವಿನ ಪ್ರಯಾಣದ ಸಮಯ 2.5 ರಿಂದ 3 ಗಂಟೆಗಳಿಗೆ ಇಳಿಕೆ .
* ಪ್ರಾದೇಶಿಕ ಆರ್ಥಿಕ ಅಭಿವೃದ್ಧಿಯನ್ನು ಹೆಚ್ಚಿಸುತ್ತದೆ ಮತ್ತು ರಾಜ್ಯಗಳ ನಡುವಿನ ವ್ಯಾಪಾರವನ್ನು ಸುಗಮಗೊಳಿಸುತ್ತದೆ.
* ಕಾರಿಡಾರ್‌ನಲ್ಲಿ ರಿಯಲ್ ಎಸ್ಟೇಟ್ ಅಭಿವೃದ್ಧಿಯನ್ನು ಹೆಚ್ಚಿಸುವ ನಿರೀಕ್ಷೆಯಿದೆ.












Click it and Unblock the Notifications