Bengaluru-Chennai Expressway: ಬೆಂಗಳೂರು-ಚೆನ್ನೈ ಎಕ್ಸ್‌ಪ್ರೆಸ್‌ವೇ ಯೋಜನೆಗೆ ಎದುರಾಯ್ತು ಹೊಸ ಕಂಟಕ

Bengaluru-Chennai Expressway: ಬೆಂಗಳೂರು-ಚೆನ್ನೈ ಎಕ್ಸ್‌ಪ್ರೆಸ್‌ ವೇ ಇನ್ನೂ ಉದ್ಘಾಟನೆ ಆಗಿಲ್ಲ. ಆದರೂ ಸಹ ಈಗಾಗಲೇ ಕರ್ನಾಟಕ ಭಾಗದಲ್ಲಿ ಸಂಚಾರಕ್ಕೆ ಮುಕ್ತವಾಗಿದೆ. ಆದರೆ ಈ ನಡುವೆಯೇ ಇದೀಗ ಈ ಯೋಜನೆಗೆ ಹೊಸ ಕಾನೂನು ಸಂಕಷ್ಟ ಎದುರಾಗಿದೆ. ಸಂಪೂರ್ಣ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ.

ಗ್ರೀನ್‌ಫೀಲ್ಡ್ ಯೋಜನೆಯಡಿಯಲ್ಲಿ ನಿರ್ಮಾಣವಾಗುತ್ತಿರುವ ಬೆಂಗಳೂರು-ಚೆನ್ನೈ ಎಕ್ಸ್‌ಪ್ರೆಸ್‌ವೇ ಕಾಮಗಾರಿಯು ತಮಿಳುನಾಡು ಭಾಗದಲ್ಲಿ ಹೊಸ ಕಾನೂನು ಸಂಕಷ್ಟಕ್ಕೆ ಒಳಗಾಗಿದೆ. ಈ ಯೋಜನೆಗೆ ಸಂಬಂಧಿಸಿದ ಹೆಚ್ಚಿನ ಭಾಗಗಳು ಪೂರ್ಣಗೊಳ್ಳುವ ಹಂತದಲ್ಲಿದ್ದರೂ, ಈ ಕಾನೂನು ಸಮಸ್ಯೆಯಿಂದಾಗಿ ಪೂರ್ಣಗೊಳಿಸುವಿಕೆಗೆ ತೊಡಕಾಗಿದೆ. ಸಂಸತ್ತಿನಲ್ಲಿ ಬೆಂಗಳೂರು ಸೆಂಟ್ರಲ್ ಲೋಕಸಭಾ ಕ್ಷೇತ್ರದ ಸಂಸದ ಪಿ.ಸಿ. ಮೋಹನ್ ಅವರು ಕೇಳಿದ ಪ್ರಶ್ನೆಗೆ ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಅವರು ನೀಡಿದ ಉತ್ತರದಿಂದ ಈ ವಿಷಯ ಬೆಳಕಿಗೆ ಬಂದಿದೆ.

Bengaluru-Chennai Expressway Faces Legal Hurdle in Tamil Nadu Karnataka Stretch Ready NHAI Update

ಕಾಮಗಾರಿ ವಿಳಂಬಕ್ಕೆ ಪ್ರಮುಖ ಕಾರಣಗಳು

* ತಮಿಳುನಾಡಿನ ಅರಕ್ಕೋಣಂ ಮತ್ತು ಕಾಂಚೀಪುರಂ ಭಾಗದ ಕಾಮಗಾರಿಯು ಕೇವಲ ಶೇಕಡ 53ರಷ್ಟು ಮಾತ್ರ ಪೂರ್ಣಗೊಂಡಿದ್ದು, ಪ್ರಸ್ತುತ ಸಂಪೂರ್ಣ ಸ್ಥಗಿತಗೊಂಡಿದೆ.

* ಆರ್ಥಿಕ ಸಂಕಷ್ಟದ ನೆಪವೊಡ್ಡಿ ಕಾಮಗಾರಿ ವಹಿಸಿಕೊಂಡಿದ್ದ ಗುತ್ತಿಗೆ ಸಂಸ್ಥೆಯು ಮೇ 2025ರಲ್ಲಿ ಕೆಲಸವನ್ನು ಅರ್ಧಕ್ಕೆ ಸ್ಥಗಿತಗೊಳಿಸಿತ್ತು.

ಈ ಹಿನ್ನೆಲೆಯಲ್ಲಿ ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (NHAI)ವು ಗುತ್ತಿಗೆಯನ್ನು ರದ್ದುಗೊಳಿಸುವ ಕ್ರಮ ಕೈಗೊಂಡಿತ್ತು. ಆದರೆ ಗುತ್ತಿಗೆದಾರರು ಕೋರ್ಟ್ ಮೆಟ್ಟಿಲೇರಿದ್ದರಿಂದ ಮದ್ರಾಸ್ ಹೈಕೋರ್ಟ್ ಗುತ್ತಿಗೆ ರದ್ದತಿಗೆ ಯಥಾಸ್ಥಿತಿ ಕಾಯ್ದುಕೊಳ್ಳುವಂತೆ ಆದೇಶಿಸಿದೆ. ಪ್ರಸ್ತುತ ಈ ವಿಷಯವು ನ್ಯಾಯಾಲಯದ ಪರಿಶೀಲನೆಯಲ್ಲಿದ್ದು, ಹೊಸ ಗುತ್ತಿಗೆದಾರರನ್ನು ನೇಮಿಸುವ ಪ್ರಕ್ರಿಯೆಯನ್ನು ಸಾಲ ನೀಡಿದ ಬ್ಯಾಂಕುಗಳು ಕೈಗೆತ್ತಿಕೊಂಡಿವೆ ಎಂದು ತಿಳಿದುಬಂದಿದೆ.

ಎಕ್ಸ್‌ಪ್ರೆಸ್‌ವೇ ಕಾಮಗಾರಿ ವಿಳಂಬಕ್ಕೆ ಇತರೆ ಕಾರಣಗಳು

ಕಾನೂನು ಸಮಸ್ಯೆ ಜೊತೆಗೆ ತಮಿಳುನಾಡು ಭಾಗದಲ್ಲಿ ಹೈ-ಟೆಂಷನ್ ವಿದ್ಯುತ್ ಲೈನ್‌ಗಳು ಹಾಗೂ ಪವರ್ ಗ್ರಿಡ್ ಟವರ್‌ಗಳನ್ನು ಸ್ಥಳಾಂತರಿಸುವ ಕಾರ್ಯ ವಿಳಂಬವಾಗಿದೆ. ತಮಿಳುನಾಡು ಟ್ರಾನ್ಸ್‌ಮಿಷನ್ ಕಾರ್ಪೊರೇಷನ್ ಲಿಮಿಟೆಡ್‌ನಿಂದ ಲೈನ್ ಕ್ಲೋಸರ್ ಅನುಮೋದನೆ ಸಿಗದಿರುವುದು ಇದಕ್ಕೆ ಮುಖ್ಯ ಕಾರಣವಾಗಿದ್ದು, ಈ ಸಮಸ್ಯೆಯನ್ನು ಶೀಘ್ರವಾಗಿ ಬಗೆಹರಿಸಲು ತಮಿಳುನಾಡು ಸರ್ಕಾರದೊಂದಿಗೆ ನಿರಂತರ ಮಾತುಕತೆ ನಡೆಸಲಾಗುತ್ತಿದೆ ಎಂದು ಸಚಿವರು ತಿಳಿಸಿದ್ದಾರೆ.

ವಿವಿಧ ರಾಜ್ಯಗಳಲ್ಲಿ ಪ್ರಸ್ತುತ ಕಾಮಗಾರಿ ಸ್ಥಿತಿ

* ಕರ್ನಾಟಕದ ವ್ಯಾಪ್ತಿಗೆ ಬರುವ ಮೂರೂ ಹಂತದ ಕಾಮಗಾರಿಗಳಾದ ಬೆಂಗಳೂರು-ಮಾಲೂರು, ಮಾಲೂರು-ಬಂಗಾರಪೇಟೆ ಮತ್ತು ಬಂಗಾರಪೇಟೆ-ಬೇತಮಂಗಲ ಭಾಗಗಳಲ್ಲಿ ಈಗಾಗಲೇ ಶೇಕಡ 100ರಷ್ಟು ಸಂಪೂರ್ಣಗೊಂಡಿದೆ. ಅಲ್ಲದೆ, ವಾಹನ ಸಂಚಾರಕ್ಕೂ ಕೂಡ ಮುಕ್ತವಾಗಿದೆ.

* ಆಂಧ್ರಪ್ರದೇಶ ಭಾಗದಲ್ಲಿ ಬಹುತೇಕ ಕಾಮಗಾರಿ ಮುಕ್ತಾಯವಾಗಿದ್ದು, ಕೆಲವೆಡೆ ಮಾತ್ರ ಇನ್ನೂ ಪ್ರಗತಿಯಲ್ಲಿದೆ. ಬೇತಮಂಗಲ-ಬೈರೆಡ್ಡಿಪಲ್ಲಿ ಹಾಗೂ ಬಂಗಾರುಪಾಳ್ಯಂ-ಗುಡಿಪಾಲ ಭಾಗಗಳಲ್ಲಿ ಕೆಲಸ ಪೂರ್ಣಗೊಂಡಿದೆ. ಬಾಕಿ ಇರುವ ಬೈರೆಡ್ಡಿಪಲ್ಲಿ-ಬಂಗಾರುಪಾಳ್ಯಂ ಹಂತವು 93% ಪೂರ್ಣಗೊಂಡಿದ್ದು, ಅಕ್ಟೋಬರ್ 30, 2026ರ ವೇಳೆಗೆ ಮುಗಿಯುವ ನಿರೀಕ್ಷೆಯಿದೆ.

ತಮಿಳುನಾರಿನಲ್ಲಿ ಕಾಮಗಾರಿ ಬಾಕಿ

* ಗುಡಿಪಾಲ-ವಾಲಾಜಾಪೇಟ್ (99% ಪೂರ್ಣ) - ಆಗಸ್ಟ್ 31, 2026ರ ಒಳಗೆ ಮುಕ್ತಾಯ.

* ವಾಲಾಜಾಪೇಟ್-ಅರಕ್ಕೋಣಂ (98% ಪೂರ್ಣ) - ಆಗಸ್ಟ್ 31, 2026ರೊಳಗೆ ಪೂರ್ಣಗೊಳ್ಳುವ ಗುರಿ.

* ಕಾಂಚೀಪುರಂ-ಶ್ರೀಪೆರುಂಬುದೂರ್ (90% ಪೂರ್ಣ) - ಅಕ್ಟೋಬರ್ 31, 2026ರ ವೇಳೆಗೆ ಮುಕ್ತಾಯಗೊಳ್ಳಲಿದೆ.

ಬೆಂಗಳೂರು ಮತ್ತು ಚೆನ್ನೈ ನಡುವಿನ ಪ್ರಯಾಣದ ಸಮಯವನ್ನು ಅರ್ಧಕ್ಕಿಂತ ಕಡಿಮೆ ಮಾಡುವ ನಿರೀಕ್ಷೆಯಿರುವ ಈ ಎಕ್ಸ್‌ಪ್ರೆಸ್‌ವೇ ಯೋಜನೆಯನ್ನು ಶೇಕಡ 100ರಷ್ಟು ಕೇಂದ್ರ ಸರ್ಕಾರದ ಅನುದಾನದಲ್ಲಿ ಅನುಷ್ಠಾನಗೊಳಿಸಲಾಗುತ್ತಿದೆ ಎಂದು ಸಚಿವ ನಿತಿನ್ ಗಡ್ಕರಿ ಅವರು ಸ್ಪಷ್ಟಪಡಿಸಿದ್ದಾರೆ. ಒಟ್ಟಿನಲ್ಲಿ ಹೇಳುವುದಾದರೆ ಈಗಾಗಲೇ ಕರ್ನಾಟಕದಲ್ಲಿ ಪೂರ್ಣಗೊಂಡಿದ್ದು, ಇನ್ನೆರಡು ರಾಜ್ಯಗಳಲ್ಲಿ ಮಾತ್ರ ಬಾಕಿ ಉಳಿದಿದೆ. ಇದು ನಿಗದಿಯ ದಿನಾಂಕದಂದೇ ಪೂರ್ಣಗೊಳ್ಳಲಿದೆಯೇ ಎಂದು ಕಾದುನೋಡಬೇಕಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+