Electronic city Flyover: ಆಂಬ್ಯುಲೆನ್ಸ್‌ಗೆ ದಾರಿ ಬಿಟ್ಟ ಕಾರು ಸಿನಿಮೀಯ ರೀತಿ ಪಲ್ಟಿ, ವಿಡಿಯೋ ವೈರಲ್
ಬೆಂಗಳೂರು, ಆಗಸ್ಟ್ 20: ರಸ್ತೆ, ಫ್ಲೈಓವರ್‌ಗಳಲ್ಲಿ ಸಂಚರಿಸುವಾಗ ಆಂಬ್ಯುಲೆನ್ಸ್ ನಂತರ ತುರ್ತು ವಾಹನಗಳಿಗೆ ಜಾಗ ಕೊಡುವುದು ಕರ್ತವ್ಯವಾಗಿರುತ್ತದೆ. ಇದೇ ರೀತಿ ಸೈರನ್ ಹಾಕಿಕೊಂಡು ತುರ್ತಾಗಿ ಬರುತ್ತಿದ್ದ ಆಂಬ್ಯುಲೆನ್ಸ್‌ಗೆ ದಾರಿ ಬಿಡಲು ಮುಂದಾದ ಕಾರೊಂದು ಬುಡಮೇಲಾಗಿ ಉರಳಿದ ಘಟನೆ ಬೆಂಗಳೂರಿನ ಫ್ಲೈಓವರ್ ಮೇಲೆ ಸೋಮವಾರ ನಡೆದಿದೆ.
ಉದ್ಯಾನ ನಗರಿ ಬೆಂಗಳೂರಿನ ಅತೀ ಉದ್ದನೆಯ ಮೇಲ್ಸೇತುವೆ (ಫ್ಲೈ ಓವರ್) ಎನ್ನಲಾಗುವ ಎಲೆಕ್ಟ್ರಾನಿಕ್ ಸಿಟಿ ಫ್ಲೈ ಒವರ್‌ನಲ್ಲಿ ಮೇಲೆ ಈ ದುರ್ಘಟನೆ ನಡೆದಿದೆ. ಹಿಂದಿನಿಂದ ಸೈರನ್ ಹಾಕಿಕೊಂಡು ವೇಗವಾಗಿ ಆಂಬುಲೆನ್ಸ್‌ಗೆ ಬರುತ್ತಿತ್ತು. ಈ ವೇಳೆ ಆ ಆಂಬುಲೆನ್ಸ್‌ಗೆ ದಾರಿ ಬಿಡಲು ಮುಂದಾದ ಕಾರು ಚಾಲಕನೊಬ್ಬ ಕಾರನ್ನು ತುಸು ಎಡಕ್ಕೆ ತಿರುಗಿಸಿದ್ದಾರೆ. ನೋಡ ನೋಡುತ್ತಿದ್ದಂತೆ ಕಾರು ಪಲ್ಪಿಯಾಗಿದೆ.

ಮುಂದೆ ಫ್ಲೈಓವರ್ ಮೇಲೆ ಕಾರು ಚಲಿಸುತ್ತಿತ್ತು. ಹಿಂದಿನಿಂದ ಆಂಬ್ಯುಲೆನ್ಸ್ ವೇಗವಾಗಿ ಆಗಮಿಸಿದ್ದನ್ನು ಮುಂದಿದ್ದ ಕಾರಿನ ಚಾಲಕ ಗಮನಿಸಿದ್ದಾನೆ. ಕೂಡಲೇ ದಾರಿ ಬಿಡಲು ಮುಂದಾದಾಗ ಕಾರು ಫ್ಲೈಓವರ್ ಎಡ ತಡೆಗೋಡೆಗೆ ಏರಿದ ಕಾರು ಮುಗುಚಿ ರಸ್ತೆ ಮಧ್ಯೆ ಉರಳಿ ಬಿದ್ದಿದೆ. ನೋಡು ನೋಡುತ್ತಿದ್ದಂತೆ ಘಟನೆ ಸಂಭವಿಸಿದ್ದು, ಕೆಲ ಹೊತ್ತು ಈ ಫ್ಲೈಓವರ್ ಮಾರ್ಗದ ಸವಾರರು ಆತಂಕಗೊಂಡರು.
ಸಿನಿಮೀಯ ರೀತಿಯಲ್ಲಿ ಕಾರು ಪಲ್ಟಿ: ವಿಡಿಯೋ ವೈರಲ್
ಇದೆಲ್ಲ ಘಟನೆಯು ಕಾರು ಮತ್ತು ಆಂಬ್ಯುಲೆನ್ಸ್ ಗಳಿಗಿಂತ ಮುಂದೆ ಹೊರಟಿದ್ದ ಕಾರಿನಿಂದ ಮಾಡಲಾದ ವಿಡಿಯೋದಲ್ಲಿ ಸೆರೆಯಾಗಿದೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಸಿನಿಮೀಯ ರೀತಿಯಲ್ಲಿ ಘಟನೆ ನಡೆದಿದೆ. ಅದೃಷ್ಟವಶಾತ್ ಕಾರು ಫ್ಲೈಓವರ್ ಮೇಲಿನ ರಸ್ತೆಯಲ್ಲಿಯೇ ಬಿದ್ದಿದೆ. ಒಂದು ವೇಳೆ ಕಾರು ಪ್ಲೈಓವರ್ ಕಳಗೆ ಬಿದ್ದಿದ್ದರೆ ದೊಡ್ಡ ದುರಂತವೇ ಸಂಭವಿಸಿ ಬಿಡುತ್ತಿತ್ತು.
ಅಲ್ಲದೇ ನಾಲ್ಕಾರು ಜೀವಗಳ ಹಾನಿಯು ಸಂಭವಿಸುವ ಸಾಧ್ಯತೆ ಇತ್ತು ಎಂದು ಸ್ಥಳದಲ್ಲಿದ್ದವರು ತಿಳಿಸಿದ್ದಾರೆ. ಘಟನೆ ಸೋಮವಾರ ಸಂಜೆ 5.30 ಗಂಟೆಗೆ ನಡೆದಿದೆ. ಅದೃಷ್ಟವಶಾತ್ ಅಪಘಾತದಲ್ಲಿ ಕಾರಿನಲ್ಲಿದ್ದವರಿಗಾಗಲಿ, ಇಲ್ಲವೇ ಕಾರಿನ ಹಿಂದೆ ಮುಂದೆ ಬರುತ್ತಿದ್ದ ಸವಾರರಿಗಾಗಲಿ ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ. ಸಣ್ಣ ಪುಟ್ಟ ಗಾಯಗಳಾಗಿವೆ. ಗಾಯಾಳುಗಳನ್ನು ಬೇರೆ ಆಂಬುಲೆನ್ಸ್ ಕರೆಸಿ ಅಲ್ಲಿಂದ ಆಸ್ಪತ್ರೆಗೆ ಕರೆದೊಯ್ಯಲಾಯಿತು.
Accident on Electronic City flyover bridge #Bengaluru
— Nabila Jamal (@nabilajamal_) August 20, 2024
Car wanted to give space to speeding ambulance but was tossed after crashing into a slow moving Yulu bike
Motorcycle caused the accident? Cuz ambulances are allowed to be rash? pic.twitter.com/Uex42uq5Wo
ಕೆಲಹೊತ್ತು ಸಂಚಾರ ದಟ್ಟಣೆ
ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆ ಸ್ಥಳಗೆ ಎಲೆಕ್ಟ್ರಾನಿಕ್ ಸಿಟಿ ಸಂಚಾರ ಪೊಲೀಸರು ದೌಡಾಯಿಸಿದ್ದು, ಪರಿಶೀಲಿಸಿದ್ದಾರೆ. ಮೇಲ್ಸೇತುವೆ ಮೇಲೆ ಕಾರು ಉರುಳಿ ಬಿದ್ದ ಪರಿಣಾಮ ಕೆಲ ಹೊತ್ತು ಸಂಚಾರ ದಟ್ಟಣೆ ಉಂಟಾಯಿತು. ನಿಧಾನಗತಿಯ ಸಂಚಾರ ಕಂಡು ಬಂತು. ನಂತರ ಘಟನಾ ಸ್ಥಳದಲ್ಲಿ ಬ್ಯಾರಿಕೇಡ್ ಅಳವಡಿಸಲಾಯಿತು. ಕಾರನ್ನು ರಸ್ತೆ ಬದಿಗೆ ತಳ್ಳಿ ಬೇರೆಯ ವಾಹನಗಳ ಸಂಚಾರಕ್ಕೆ ಅನುವು ಮಾಡಿಕೊಡಲಾಯಿತು.












Click it and Unblock the Notifications